ಗಂಡ-ಹೆಂಡ್ತಿ ನಡುವೆ ಏಜ್ ಗ್ಯಾಪ್ ಎಷ್ಟಿರಬೇಕು? ದಾಂಪತ್ಯ ಜೀವನದಲ್ಲಿ ನಿಜಕ್ಕೂ ವಯಸ್ಸಿನ ಅಂತರ ಮುಖ್ಯವೇ?
ಪ್ರೀತಿ ಕುರುಡು ಹಾಗಾಗಿ ಪ್ರೀತಿಗೆ ವಯಸ್ಸು, ಧರ್ಮ, ಜಾತಿ ಅಡ್ಡಿ ಆಗೋಲ್ಲ ಎಂದು ಹೇಳ್ತಾರೆ. ಆದ್ರೆ ಮದುವೆ ಅನ್ನೋ ವಿಷಯಕ್ಕೆ ಬಂದಾಗ ನಮ್ಮ ಸಮಾಜದಲ್ಲಿ ಈ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹೌದು ಮದುವೆ ಆಗುವ ಹುಡುಗನ ವಯಸ್ಸು ಹುಡುಗಿಗಿಂತ ಹೆಚ್ಚಿರಲೇಬೇಕು ಎಂದು ಹಿರಿಯರು ಹೇಳುತ್ತಾರೆ. ಆದ್ರೆ ನಿಜಕ್ಕೂ ದಾಂಪತ್ಯ ಜೀವನದಲ್ಲಿ ವಯಸ್ಸಿನ ಅಂತರ ಮುಖ್ಯವೇ? ಸುಖ ಸಂಸಾರಕ್ಕೆ ಗಂಡ-ಹೆಂಡ್ತಿ ನಡುವೆ ಏಜ್ ಗ್ಯಾಪ್ ಎಷ್ಟಿದ್ದರೆ ಸೂಕ್ತ ಎಂಬ ಮಾಹಿತಿಯನ್ನು ತಿಳಿಯಿರಿ.

ಪ್ರೀತಿಗೆ ಜಾತಿ, ಧರ್ಮ, ಅಂತಸ್ತಿನ ಯಾವುದೇ ಮಿತಿಗಳಿಲ್ಲ ಮತ್ತು ಪ್ರೀತಿಗೆ ವಯಸ್ಸು ಅಡ್ಡಿಯಾಗಲ್ಲ ಎಂದು ಹಲವರು ಹೇಳುತ್ತಾರೆ. ಆದರೆ ಮದುವೆಯ (Marriage) ವಿಷಯಕ್ಕೆ ಬಂದಾಗ, ಗಂಡು-ಹೆಣ್ಣಿನ ಜಾತಕ ಹೊಂದಾಣಿಕೆ ಬಹು ಮುಖ್ಯ ಪಾತ್ರವನ್ನು ವಹಿಸುವಂತೆ ವಯಸ್ಸು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಹೌದು ಮದುವೆಯಾಗುವ ಗಂಡಿನ ವಯಸ್ಸು ಹೆಣ್ಣಿಗಿಂತ ಹೆಚ್ಚಿರಲೇಬೇಕು ಎಂದು ಹೇಳ್ತಾರೆ. ಆದ್ರೆ ಕೆಲವರು ತಮಗಿಂತ ವಯಸ್ಸಿನಲ್ಲಿ ಹಿರಿಯಳಾದ ಹೆಣ್ಣನ್ನು ಮದುವೆಯಾಗುತ್ತಾರೆ. ಕೆಲ ಮಹಿಳೆಯರು ತಮಗಿಂತ 15-20 ವರ್ಷ ಹಿರಿಯ ವ್ಯಕ್ತಿಯನ್ನು ವಿವಾಹ ಆಗ್ತಾರೆ. ಹೀಗಿರುವಾಗ ಗಂಡ-ಹೆಂಡ್ತಿಯ ನಡುವೆ ವಯಸ್ಸಿನ ಅಂತರ ನಿಜವಾಗಿಯೂ (Age Gap Between Couple) ಅಗತ್ಯವಿದೆಯೇ? ವಯಸ್ಸಿನ ಅಂತರ ಅಷ್ಟೂ ಮುಖ್ಯ ಪಾತ್ರ ವಹಿಸಿದರೆ, ದಂಪತಿಗಳ ನಡುವೆ ಏಜ್ ಗ್ಯಾಪ್ ಎಷ್ಟಿದ್ದರೆ ಒಳ್ಳೆಯದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಗಂಡ-ಹೆಂಡ್ತಿಯ ನಡುವೆ ವಯಸ್ಸಿನ ಅಂತರ ಮುಖ್ಯವೇ?
ಪ್ರೇಮ ವಿವಾಹಗಳಲ್ಲಿ ಜೋಡಿಗಳು ವಯಸ್ಸಿನ ಅಂತರವನ್ನು ಅಷ್ಟಾಗಿ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಅವರು ವಯಸ್ಸು ಮುಖ್ಯ ಅಲ್ಲ, ದಂಪತಿಗಳ ನಡುವೆ ಮುಖ್ಯವಾಗಿ ಬೇಕಾದದ್ದು, ಪ್ರೀತಿ, ನಂಬಿಕೆ, ವಿಶ್ವಾಸ ಎಂದು ಹೇಳ್ತಾರೆ. ಹೀಗಿದ್ರೂ ಕೂಡಾ ಅನೇಕರು ವಯಸ್ಸಿನ ಅಂತರ ಮುಖ್ಯ. ಗಂಡನ ವಯಸ್ಸು ಹೆಂಡ್ತಿಗಿಂತ ಹೆಚ್ಚಿರಬೇಕು, ದಂಪತಿಗಳ ನಡುವೆ ಕನಿಷ್ಠ 3 ರಿಂದ 5 ವರ್ಷಗಳ ಏಜ್ ಗ್ಯಾಪ್ ಇರಬೇಕು ಎಂದು ಹೇಳ್ತಾರೆ. ಆದರೆ ತನಗಿಂತ ವಯಸ್ಸಿನಲ್ಲಿ ಹಿರಿಯವಳನ್ನು ಮದುವೆಯಾಗಿ, ತನಗಿಂತ 10-15 ವರ್ಷ ಹಿರಿಯ ವ್ಯಕ್ತಿಯನ್ನು ಮದುವೆಯಾಗಿ ಸಂತೋಷವಾಗಿ ದಾಂಪತ್ಯ ಜೀವನವನ್ನು ನಡೆಸುತ್ತಿರುವವರು ಹಲವರಿದ್ದಾರೆ. ಉದಾಹರಣೆಗೆ, ಬಾಲಿವುಡ್ ನಟರಾದ ಶಾಹಿದ್ ಕಪೂರ್ ಮತ್ತು ಮಾಡೆಲ್ ಮೀರಾ ರಜಪೂತ್ ನಡುವೆ ಸುಮಾರು 15 ವರ್ಷಗಳ ವಯಸ್ಸಿನ ಅಂತರವಿದೆ. ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕನ್ ಗಾಯಕ ನಿಕೊ ಜೋನ್ಸ್ ಕೂಡ ಸುಮಾರು 10 ವರ್ಷಗಳ ವಯಸ್ಸಿನ ಅಂತರವಿದೆ. ಹೀಗಿದ್ರೂ ಇವರು ಸುಖ ದಾಂಪತ್ಯವನ್ನು ನಡೆಸುತ್ತಿದ್ದಾರೆ. ಹಾಗಾಗಿ ಪತಿ ಪತ್ನಿಯರ ನಡುವೆ ಪರಸ್ಪರ ಗೌರವ ಮತ್ತು ತಿಳುವಳಿಕೆ, ನಂಬಿಕೆ, ಪ್ರೀತಿ, ಪ್ರಬುದ್ಧತೆ ಇರುವುದು ಬಹು ಮುಖ್ಯವಾಗಿದೆ.
ಗಂಡ-ಹೆಂಡತಿಯ ನಡುವೆ ವಯಸ್ಸಿನ ಅಂತರ ಎಷ್ಟಿರಬೇಕು?
ಗಂಡ ಹೆಂಡತಿ ನಡುವೆ 5 ರಿಂದ 7 ವರ್ಷಗಳ ವಯಸ್ಸಿನ ಅಂತರ ಇರಬೇಕು ಎಂದು ತಜ್ಞರು ಹೇಳುತ್ತಾರೆ. ಹುಡುಗಿಯರು ಹುಡುಗರಿಗಿಂತ ಮೊದಲೇ ಪ್ರಬುದ್ಧರಾಗುತ್ತಾರೆ. ಹುಡುಗಿಯರಲ್ಲಿ ಹಾರ್ಮೋನುಗಳ ಬದಲಾವಣೆ 7 ರಿಂದ 13 ವರ್ಷ ವಯಸ್ಸಿನಲ್ಲಿ ಪ್ರಾರಂಭವಾಗುತ್ತವೆ, ಆದರೆ ಹುಡುಗರಲ್ಲಿ ಈ ಬದಲಾವಣೆಗಳು 9 ರಿಂದ 15 ವರ್ಷ ವಯಸ್ಸಿನ ನಡುವೆ ಸಂಭವಿಸುತ್ತವೆ. ವೈದ್ಯಕೀಯ ವಿಜ್ಞಾನದ ಪ್ರಕಾರ, ಮಾನಸಿಕ ಮತ್ತು ದೈಹಿಕ ಬದಲಾವಣೆಗಳು ಮಹಿಳೆಯರ ದೇಹದಲ್ಲಿ ಆರಂಭಿಕ ಹಂತದಲ್ಲಿಯೇ ಕಂಡುಬರುತ್ತವೆ, ಆದರೆ ಪುರುಷರಲ್ಲಿ ಈ ಬದಲಾವಣೆಗಳು ನಂತರ ಸಂಭವಿಸುತ್ತವೆ. ಆದ್ದರಿಂದ ಪ್ರಬುದ್ಧತೆಯ ದೃಷ್ಟಿಯಿಂದ ಮಹಿಳೆಯರು ತಮಗಿಂತ ದೊಡ್ಡ ವಯಸ್ಸಿನ ಪುರುಷನನ್ನೇ ಮದುವೆಯಾಗಬೇಕು.
ಇದನ್ನೂ ಓದಿ: ಟ್ರೆಂಡ್ ಆಗುತ್ತಿದೆ ಹಾಟ್‌ವೈಫಿಂಗ್, ಇದು ದೈಹಿಕ ಸಂಪರ್ಕದ ಹೊಸ ಪ್ರವೃತ್ತಿ
ಈ ಬಗ್ಗೆ ಚಾಣಕ್ಯ ನೀತಿಯಲ್ಲಿ ಏನು ಹೇಳಲಾಗಿದೆ?
ಚಾಣಕ್ಯರ ನೀತಿಶಾಸ್ತ್ರದ ಪ್ರಕಾರ, ಗಂಡ ಮತ್ತು ಹೆಂಡತಿಯ ನಡುವೆ 3 ರಿಂದ 5 ವರ್ಷಗಳ ವಯಸ್ಸಿನ ಅಂತರವಿರುವುದು ಒಳ್ಳೆಯದು. ಸಣ್ಣ ವಯಸ್ಸಿನ ಅಂತರವಿದ್ದರೆ, ಇಬ್ಬರ ನಡುವೆ ಉತ್ತಮ ತಿಳುವಳಿಕೆ ಇರುತ್ತದೆ. ಅವರು ಒಂದೇ ರೀತಿಯ ಆಸಕ್ತಿಗಳು, ಆಲೋಚನೆಗಳು ಮತ್ತು ಜೀವನಶೈಲಿಯನ್ನು ಹೊಂದಿರುತ್ತಾರೆ. ಆದರೆ ಗಂಡ ಹೆಂಡತಿಯ ನಡುವೆ ದೊಡ್ಡ ಮಟ್ಟದ ವಯಸ್ಸಿನ ಅಂತರವಿದ್ದರೆ, ಆಲೋಚನೆಗಳಲ್ಲಿನ ವ್ಯತ್ಯಾಸಗಳು ಮತ್ತು ಜೀವನದ ವಿಭಿನ್ನ ದೃಷ್ಟಿಕೋನಗಳಿಂದಾಗಿ ಇಬ್ಬರ ನಡುವೆ ಮನಸ್ತಾಪಗಳು ಉಂಟಾಗುವ ಸಾಧ್ಯತೆ ಇರುತ್ತದೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








