Optical Illusion: ನಿಮ್ಮ ಕಣ್ಣಿಗೊಂದು ಸವಾಲ್; M ಅಕ್ಷರಗಳ ನಡುವೆ ಅಡಗಿರುವ ʼNʼ ನನ್ನು ಹುಡುಕಬಲ್ಲಿರಾ?
ಆಪ್ಟಿಕಲ್ ಇಲ್ಯೂಷನ್ ನಮ್ಮ ಮೆದುಳಿನ ಚುರುಕುತನ ಹಾಗೂ ದೃಷ್ಟಿ ತೀಕ್ಷ್ಣತೆಯನ್ನು ಪರೀಕ್ಷೆ ಮಾಡುವ ಒಂದು ರೀತಿಯ ಮೋಜಿನ ಆಟವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇಂತಹ ಹತ್ತಾರು ಒಗಟಿನ ಆಟಗಳು ಪ್ರತಿನಿತ್ಯ ಹರಿದಾಡುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಒಗಟಿನ ಆಟವೊಂದು ವೈರಲ್ ಆಗಿದ್ದು, ಆ ಚಿತ್ರದಲ್ಲಿ M ಅಕ್ಷರಗಳ ನಡುವೆ ಅಡಗಿ ಕುಳಿತಿರುವ N ಅಕ್ಷರವನ್ನು ಕೇವಲ 5 ಸೆಕೆಂಡುಗಳಲ್ಲಿ ಹುಡುಕಲು ನಿಮಗೆ ಸವಾಲನ್ನು ನೀಡಲಾಗಿದೆ.

ಬುದ್ಧಿವಂತಿಕೆ ಮತ್ತು ದೃಷ್ಟಿ ತೀಕ್ಷ್ಣತೆಯನ್ನು ಪರೀಕ್ಷಿಸುವ ಒಗಟಿನ ಆಟಗಳು ಅಥವಾ ಆಪ್ಟಿಕಲ್ ಇಲ್ಯೂಷನ್ (Optical Illusion) ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಜನಪ್ರಿಯವಾಗುತ್ತಿದೆ. ಈ ಮೋಜಿನ ಆಟಗಳ ಮೂಲಕ ನಮ್ಮ ಕಣ್ಣುಗಳು ಮತ್ತು ಬುದ್ಧಿ ಎಷ್ಟು ಚುರುಕಾಗಿ ಕೆಲಸ ಮಾಡುತ್ತವೆ ಎಂಬುದನ್ನು ತಿಳಿಯಬಹುದು. ಅಂತಹದ್ದೇ ಚಿತ್ರವೊಂದು ಇದೀಗ ವೈರಲ್ ಆಗಿದ್ದು, ಆ ಚಿತ್ರದಲ್ಲಿ M ಅಕ್ಷರಗಳ ನಡುವೆ ಅಡಗಿರುವ ಒಂದು N ಅಕ್ಷರವನ್ನು ಹುಡುಕಲು ಸವಾಲನ್ನು ನೀಡಲಾಗಿದೆ. ನಿಮ್ಮ ಬುದ್ಧಿವಂತಿಕೆಯನ್ನು ಬಳಸಿ ಕೇವಲ 5 ಸೆಕೆಂಡುಗಳಲ್ಲಿ N ಅಕ್ಷರವನ್ನು ಹುಡುಕುವ ಮೂಲಕ ನಿಮ್ಮ ದೃಷ್ಟಿ (Visual Illusion) ತೀಕ್ಷ್ಣವಾಗಿದೆಯೇ ಪರೀಕ್ಷಿಸಿ.
M ಅಕ್ಷರಗಳ ನಡುವೆ ಅಡಗಿರುವ N ಅಕ್ಷರವನ್ನು 5 ಸೆಕೆಂಡುಗಳಲ್ಲಿ ಹುಡುಕಿ:

ಮೇಲಿನ ಚಿತ್ರದಲ್ಲಿ ರಾಶಿ M ಅಕ್ಷರಗಳ ನಡುವೆ N ಅಕ್ಷರವೊಂದಿದ್ದು, ನಿಮ್ಮ ಕಣ್ಣು ಸಖತ್ ಶಾರ್ಪ್, ಹದ್ದಿನ ಕಣ್ಣಿಗಿಂತಲೂ ಶಾರ್ಪ್ ಎಂದಾದರೆ ನೀವು ಬರೀ 5 ಸೆಕೆಂಡುಗಳಲ್ಲಿ M ಅಕ್ಷರಗಳ ನಡುವೆ ಅವಿತಿರುವ N ಅಕ್ಷರವನ್ನು ಹುಡುಕಬೇಕು. ಈ ಚಿತ್ರದಲ್ಲಿ ಮೇಲ್ನೋಟಕ್ಕೆ ಬರೀ M ಅಕ್ಷರಗಳೇ ಕಾಣಿಸುತ್ತವೆ. ಆದರೆ ನೀವು ನಿಮ್ಮ ಗಮನವನ್ನು ಕೇಂದ್ರೀಕರಿಸಿ, ಈ ಒಗಟಿನ ಚಿತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ʼMʼ ಗಳ ನಡುವೆ ಅಡಗಿರುವ ʼNʼ ಅಕ್ಷರವನ್ನು ಸುಲಭವಾಗಿ ಪತ್ತೆ ಹಚ್ಚಬಹುದು.
ಸವಾಲನ್ನು ಸ್ವೀಕರಿಸಲು ಸಿದ್ಧರೇ?
ಈ ಒಗಟಿನ ಚಿತ್ರದಲ್ಲಿ ʼMʼ ಅಕ್ಷರದ ರಾಶಿಯ ನಡುವೆ ʼNʼ ಅಕ್ಷರವೊಂದು ಅಡಗಿದೆ. ನೀವು ಕೇವಲ 5 ಸೆಕೆಂಡುಗಳಲ್ಲಿ ಅದನ್ನು ಪತ್ತೆ ಹಚ್ಚಬೇಕು. ಈ ರೀತಿಯ ದೃಶ್ಯ ಭ್ರಮೆಯ ಒಗಟುಗಳನ್ನು ಪರಿಹರಿಸಬಲ್ಲ ಜನರು ಅತ್ಯುತ್ತಮ ವೀಕ್ಷಣಾ ಕೌಶಲ್ಯವನ್ನು ಹೊಂದಿರುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಹಾಗಿದ್ರೆ ನಿಮ್ಮ ಕಣ್ಣು ಎಷ್ಟು ಶಾರ್ಪ್ ಆಗಿದೆ ಎಂದು ಪರೀಕ್ಷಿಸಲು ಈ ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಿ ಅಲ್ವಾ. ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಮಾತ್ರ ನಿಮಗೆ ʼNʼ ಅಕ್ಷರವನ್ನು ಪತ್ತೆ ಮಾಡಲು ಸಾಧ್ಯ.
ಇದನ್ನೂ ಓದಿ: ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸುವ ಅಂಶವೇ ಬಹಿರಂಗ ಪಡಿಸುತ್ತೆ ನಿಮ್ಮ ವ್ಯಕ್ತಿತ್ವ
ಉತ್ತರ ಇಲ್ಲಿದೆ:
ಎಷ್ಟೇ ಸೂಕ್ಷ್ಮವಾಗಿ ಗಮನಿಸಿದರೂ 5 ಸೆಕೆಂಡುಗಳ ಒಳಗಾಗಿ ಈ ಸವಾಲನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ, ಜೊತೆಗೆ ʼNʼ ಅಕ್ಷರವನ್ನು ಕಂಡು ಹಿಡಿಯಲು ಸಾಧ್ಯವಾಗದೆ ಕಷ್ಟಪಡುತ್ತಿದ್ದೀರಾ? ಚಿಂತೆ ಬೇಡ ಇಲ್ಲಿದೆ ಉತ್ತರ. ಚಿತ್ರದ ಕೊನೆಯ ಎರಡನೇ ಸಾಲಿನ ಕಡೆಗೆ ಕಣ್ಣಾಯಿಸಿದರೆ ನೀವು N ಅಕ್ಷರವನ್ನು ಪತ್ತೆ ಹಚ್ಚಬಹುದು.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








