AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸುವ ಅಂಶವೇ ಬಹಿರಂಗ ಪಡಿಸುತ್ತೆ ನಿಮ್ಮ ವ್ಯಕ್ತಿತ್ವ

ಮನೋವಿಜ್ಞಾನವನ್ನು ಆಧರಿಸಿರುವ ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಈ ಚಿತ್ರಗಳು ಮೆದುಳಿಗೆ ವ್ಯಾಯಾಮವನ್ನು ನೀಡುವುದರ ಜೊತೆಗೆ ನಮ್ಮ ವ್ಯಕ್ತಿತ್ವವನ್ನು ಸಹ ಬಹಿರಂಗಪಡಿಸುತ್ತವೆ. ಇದೀಗ ಅಂತಹದ್ದೇ ಚಿತ್ರವೊಂದು ವೈರಲ್‌ ಆಗಿದ್ದು, ಪೆಂಗ್ವಿನ್‌ ಅಥವಾ ಜ್ವಾಲೆ ಆ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು ಎಂಬುದರ ಮೇಲೆ ನೀವು ವಿಶಾಲ ಹೃದಯದವರೇ ಎಂಬುದನ್ನು ಪರೀಕ್ಷಿಸಿ.

Personality Test: ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸುವ ಅಂಶವೇ ಬಹಿರಂಗ ಪಡಿಸುತ್ತೆ ನಿಮ್ಮ ವ್ಯಕ್ತಿತ್ವ
ವ್ಯಕ್ತಿತ್ವ ಪರೀಕ್ಷೆImage Credit source: Google
ಮಾಲಾಶ್ರೀ ಅಂಚನ್​
|

Updated on: Jun 21, 2025 | 6:30 PM

Share

ಸಾಮಾನ್ಯವಾಗಿ ನಮ್ಮ ನಡವಳಿಕೆಯ ಆಧಾರದ ಮೇಲೆ ಜನ ನಮ್ಮ ವ್ಯಕ್ತಿತ್ವವನ್ನು (Personality) ಅಳೆಯುತ್ತಾರೆ. ಇದರ ಹೊರತಾಗಿ ಸಂಖ್ಯಾಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರಗಳ ಮೂಲಕ ನಮ್ಮ ನಿಗೂಢ ಸ್ವಭಾವವನ್ನು ನಾವು ತಿಳಿಯಬಹುದು. ಇದರ ಹೊರತಾಗಿ ವ್ಯಕ್ತಿತ್ವ ಪರೀಕ್ಷೆಯ ಮೂಲಕವೂ ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ನಾವೇ ಪರೀಕ್ಷೆ ಮಾಡಬಹುದು. ಇಂತಹ ಸಾಕಷ್ಟು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಚಿತ್ರ ಹರಿದಾಡುತ್ತಿದ್ದು, ಪೆಂಗ್ವಿನ್‌ ಅಥವಾ ಜ್ವಾಲೆ (Penguin or  Flame) ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನಿಮಗೆ ಮೊದಲು ಯಾವ ಅಂಶ ಕಾಣಿಸಿತು ಎಂಬುದರ ಮೇಲೆ ನೀವು ವಿಶಾಲ ಹೃದಯದವರೇ, ಸಹೃದಯಿಯೇ ಎಂಬುದನ್ನು ಪರೀಕ್ಷಿಸಿ.

ನಿಮ್ಮ ವ್ಯಕ್ತಿತ್ವವನ್ನು ತಿಳಿಸುವ ಚಿತ್ರವಿದು:

ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಪೆಂಗ್ವಿನ್‌ ಮತ್ತು ಜ್ವಾಲೆ ಈ ಎರಡು ಅಂಶಗಳಿದ್ದು, ಇವೆರಡರಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು ಎಂಬುದರ ಮೇಲೆ ನೀವು ವಿಶಾಲ ಹೃದಯದವರೇ ಅಥವಾ ಜೀವನದ ಬಗ್ಗೆ ದೊಡ್ಡ ಕನಸು ಕಾಣುವವರೇ ಎಂಬುದನ್ನು ಪರೀಕ್ಷಿಸಿ.

ಮೊದಲು ಜ್ವಾಲೆಯನ್ನು ನೋಡಿದರೆ: ಈ ಚಿತ್ರದಲ್ಲಿ ನೀವು ಮೊದಲು ಜ್ವಾಲೆಯನ್ನು ನೋಡಿದರೆ, ನೀವು ವಿಶಾಲ ಹೃದಯದವರೆಂದು ಅರ್ಥ. ನೀವು ತುಂಬಾನೇ ಸಹಾನುಭೂತಿಯ ವ್ಯಕ್ತಿತ್ವದವರಾಗಿದ್ದು, ನೀವು ನಿಮ್ಮವರ ಬಗ್ಗೆ ತುಂಬಾನೇ ಕಾಳಜಿ ವಹಿಸುತ್ತೀರಿ. ನೀವು ಇತರರ ಆಸೆ ಕನಸುಗಳಿಗೆ ಬೆಂಬಲವಾಗಿ ನಿಲ್ಲುವ ಮೂಲಕ ನಿಮ್ಮ ಸ್ವಂತ ಕನಸು, ಆಸೆಗಳನ್ನು ಮರೆಯುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಕನಸುಗಳಿಗೆ ರೆಕ್ಕೆ ಕಟ್ಟಲು ಮರೆಯಬೇಡಿ. ನೀವು ತುಂಬಾ ಉದಾರಿಯಾಗಿದ್ದರೂ, ಎಲ್ಲರೊಂದಿಗೂ ಆರೋಗ್ಯಕರ ಗಡಿಯನ್ನು ಕಾಪಾಡಿಕೊಳ್ಳಲು ಮರೆಯದಿರಿ. ಒಟ್ಟಾರೆಯಾಗಿ ವಿಶಾಲ ಹೃದಯದವರಾದ ನೀವು ನಿಮ್ಮ ಸ್ವಂತ ಅಗತ್ಯಗಳಿಗಿಂತ ಇತರರ ಅಗತ್ಯಗಳಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತೀರಿ. ಇತರರನ್ನು ಖುಷಿ ಪಡಿಸಲು ನಿಮ್ಮ ಸಂತೋಷವನ್ನೇ ಬೇಕಾದರೂ ನೀವು ತ್ಯಾಗ ಮಾಡುತ್ತೀರಿ.

ಇದನ್ನೂ ಓದಿ
Image
ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೇ ಹೇಳುತ್ತೆ ನಿಮ್ಮ ಗುಣ ಸ್ವಭಾವ
Image
ನೀವು ಎಂತಹ ವ್ಯಕ್ತಿ ಎಂಬುದನ್ನು ನಿಮ್ಮ ಬೆರಳಿನ ಆಕಾರದ ಮೂಲಕ ತಿಳಿಯಿರಿ
Image
ಚಿತ್ರ ನೋಡಿ, ನೀವು ಹೇಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ ತಿಳಿಯಿರಿ
Image
ನೀವು ನಿರ್ಧಾರ ತೆಗೆದುಕೊಳ್ಳುವ ರೀತಿಯನ್ನು ವಿವರಿಸುವ ಚಿತ್ರವಿದು

ಇದನ್ನೂ ಓದಿ: ನೀವು ಸೇಡು ತೀರಿಸಿಕೊಳ್ಳುವವರೇ; ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೇ ಹೇಳುತ್ತೆ ನಿಮ್ಮ ಗುಣ ಸ್ವಭಾವ

ನೀವು ಪೆಂಗ್ವಿನ್‌ ನೋಡಿದರೆ: ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನೀವು ಮೊದಲು ಪೆಂಗ್ವಿನ್‌ ನೋಡಿದರೆ, ನೀವು ನಿಮ್ಮ ಜೀವನದ ಬಗ್ಗೆ ದೊಡ್ಡ ಕನಸನ್ನು ಹೊಂದಿರುವವರು ಎಂದರ್ಥ. ನೀವು ಭವಿಷ್ಯದ ಬಗ್ಗೆ ಆಳವಾಗಿ ಯೋಚಿಸುವವರಾಗಿರುತ್ತೀರಿ. ಚಿಂತನಶೀಲರು ಮತ್ತು ಬುದ್ಧಿವಂತರಾದ ನೀವು ನಿಮ್ಮ ಸ್ವಂತಿಕೆಯ ಮೂಲಕವೇ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿವ ವ್ಯಕ್ತಿಯಾಗಿರುತ್ತೀರಿ.  ಆದರೆ ಕೆಲವೊಮ್ಮೆ ನೀವು ನಿಮ್ಮ ಅತಿಯಾದ ಆಲೋಚನೆಯಲ್ಲಿ ಕಳೆದು ಹೋಗುತ್ತೀರಿ. ಹಾಗಾಗಿ ಈ ಬಗ್ಗೆ ಸ್ವಲ್ಪ ಎಚ್ಚರವಿರಲಿ. ಒಟ್ಟಾರೆಯಾಗಿ ನೀವು ಜೀವನದ ಬಗ್ಗೆ ಯಾವಾಗಲೂ ದೊಡ್ಡ ಕನಸನ್ನು ಕಾಣುವವರು.‌ ಜೊತೆಗೆ  ಆ ಕನಸನ್ನು ಪೂರೈಸಲು ಶ್ರಮಿಸುವವರಾಗಿರುತ್ತೀರಿ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ