ನೀವು ವಯಸ್ಸಾದವರಂತೆ ಕಾಣಿಸಲು ಈ ಕೆಟ್ಟ ಜೀವನಶೈಲಿಯೇ ಕಾರಣ
ಯಕೃತ್ತಿನ ತಜ್ಞ ಡಾ. ಸೌರಭ್ ಸೇಥಿ ಅವರು ವೇಗವಾಗಿ ವಯಸ್ಸಾಗಲು ಕಾರಣವೇನು ಎಂಬ ಬಗ್ಗೆ ಇಲ್ಲಿ ತಿಳಿಸಿದ್ದಾರೆ. ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡಿದ್ರೆ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಚಿಕ್ಕ ವಯಸ್ಸಿನವರು ಕೂಡ 35-45 ವರ್ಷ ವಯಸ್ಸಿನಂತೆ ಕಾಣುತ್ತಾರೆ. ಇದಕ್ಕೆ ದಿನನಿತ್ಯ ಜೀವನಶೈಲಿ ಕೂಡ ಒಂದು ಕಾರಣವಾಗಿದೆ. ಡಾ. ಸೌರಭ್ ಸೇಥಿ ಹೇಳಿರುವ ಈ ಸಲಹೆಗಳನ್ನು ಪಾಲಿಸಿದ್ರೆ ಖಂಡಿತ ಈ ಸಮಸ್ಯೆಯಿಂದ ಹೊರ ಬರಬಹುದು.

ವಯಸ್ಸ ಹೆಚ್ಚಾಗಲು ಪ್ರತಿದಿನ ಸೇವನೆ ಮಾಡುವ ಆಹಾರಗಳೆ ಕಾರಣ ಎಂಬುದನ್ನು ನಂಬಲು ಸಾಧ್ಯವಿಲ್ಲ. ಆದರೆ ಇದು ನಿಜ. ಯಕೃತ್ತಿನ ತಜ್ಞ ಡಾ. ಸೌರಭ್ ಸೇಥಿ ಇತ್ತೀಚೆಗೆ ಕೆಲವು ಜೀವನಶೈಲಿ (Lifestyle) ಆಯ್ಕೆಗಳು ವಯಸ್ಸಾದಂತೆ ಕಾರಣವಂತೆ ಮಾಡುತ್ತದೆ, ಅದು ಹೇಗೆ ಎಂದು ಹೇಳಿದ್ದಾರೆ. ನೀವು ಏನು ತಿನ್ನುತ್ತೀರಿ ಎಂಬುದರಿಂದ ಹಿಡಿದು, ನೀವು ಒತ್ತಡವನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದರವರೆಗೆ ಈ ಅಂಶಗಳು ನೀವು ಎಷ್ಟು ವಯಸ್ಸಾದವರಂತೆ ಕಾಣುತ್ತೀರಿ ಎಂಬುದನ್ನು ಹೇಳುತ್ತದೆ. ಇದು ದೀರ್ಘಾವಧಿಯ ಆರೋಗ್ಯದ ಮೇಲೆ ಕೂಡ ದೊಡ್ಡ ಪರಿಣಾಮವನ್ನು ಉಂಟು ಮಾಡುತ್ತದೆ.
ಡಾ. ಸೇಥಿ ವೇಗವಾಗಿ ವಯಸ್ಸಾಗುವಂತೆ ಮಾಡುವ ಆರು ಅಭ್ಯಾಸಗಳನ್ನು ವಿವರಿಸಿದ್ದಾರೆ:
ಧೂಮಪಾನ: ಡಾ. ಸೇಥಿ ಅವರ ಪ್ರಕಾರ, ವಯಸ್ಸಾದ ಪ್ರಕ್ರಿಯೆಯನ್ನು ವೇಗಗೊಳಿಸುವ ವಿಷಯದಲ್ಲಿ ಧೂಮಪಾನವು ಅತ್ಯಂತ ಹಾನಿಕಾರಕ ಅಭ್ಯಾಸಗಳಲ್ಲಿ ಒಂದಾಗಿದೆ. ಇದು ಚರ್ಮದ ಸ್ಥಿತಿಸ್ಥಾಪಕತ್ವಕ್ಕೆ ಹಾನಿ ಮಾಡುತ್ತದೆ. ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ ಹಾಗೂ ಚರ್ಮದ ಸುಕ್ಕುಗಳು ಮತ್ತು ಮಂದ ಚರ್ಮಕ್ಕೆ ಕಾರಣವಾಗುತ್ತದೆ. ಇದು ಯಕೃತ್ತು ಸೇರಿದಂತೆ ಒಟ್ಟಾರೆ ಅಂಗಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ.
ಮದ್ಯ ಸೇವನೆ: ಅತಿಯಾದ ಮದ್ಯ ಸೇವನೆ ಮಾಡುವುದು ವಯಸ್ಸದವರಂತೆ ಕಾಣಿಸುವ ಲಕ್ಷಣಗಳನ್ನು ಸೂಚಿಸುತ್ತದೆ. ಮದ್ಯಪಾನವು ಚರ್ಮವನ್ನು ನಿರ್ಜಲೀಕರಣಗೊಳಿಸುತ್ತದೆ, ಉರಿಯೂತವನ್ನು ಉಂಟುಮಾಡುತ್ತದೆ. ಕುಡಿತ ಅತಿಯಾದರೆ ಸ್ವಲ್ಪ ಸಮಯದ ನಂತರ ಯಕೃತ್ತಿನ ಕಾರ್ಯವನ್ನು ಹಾನಿಗೊಳಿಸುತ್ತದೆ.
ಸೂರ್ಯನ ಕಿರಣಗಳಿಂದ ರಕ್ಷಣೆ: ವಿಟಮಿನ್ ಡಿ ಹಾಗೂ ಸಾಮಾನ್ಯ ಯೋಗಕ್ಷೇಮಕ್ಕೆ ಸೂರ್ಯನ ಬೆಳಕು ಅತ್ಯಗತ್ಯವಾದರೂ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಸೂರ್ಯ ಕಿರಣವನ್ನು ತಪ್ಪಿಸುವುದು ಒಳ್ಳೆಯದು ಏಕೆಂದರೆ ಇದು ಚರ್ಮದ ವಯಸ್ಸಾಗುವಿಕೆ ವೇಗಗೊಳ್ಳುತ್ತದೆ. . ಸನ್‌ಸ್ಕ್ರೀನ್ ಬಳಸದಿದ್ದರೆ ಅಥವಾ ಟೋಪಿಗಳಂತಹ ರಕ್ಷಣಾತ್ಮಕ ಉಡುಪುಗಳನ್ನು ಧರಿಸದಿದ್ದರೆ ಸೂರ್ಯನ ಕಲೆಗಳು, ಸೂಕ್ಷ್ಮ ರೇಖೆಗಳು ವಯಸ್ಸಿನ ವೇಗವನ್ನು ಹೆಚ್ಚಿಸುತ್ತದೆ.
ದೀರ್ಘಕಾಲದ ನಿರ್ಜಲೀಕರಣ: ಸರಿಯಾದ ಜಲಸಂಚಯನ ಅಂದರೆ ನೀರು ಹೆಚ್ಚಾಗಿ ಕುಡಿಯದಿದ್ದರೆ ಈ ಸಮಸ್ಯೆಗಳು ಬರಬಹುದು. ಸಾಕಷ್ಟು ನೀರು ಸೇವಿಸದಿರುವುದು ಚರ್ಮವು ಒಣಗಲು, ಕುಗ್ಗಲು ಮತ್ತು ಒಟ್ಟಾರೆಯಾಗಿ ದಣಿದಂತೆ ಕಾಣಲು ಕಾರಣವಾಗಬಹುದು.
ಸಂಸ್ಕರಿಸಿದ ಆಹಾರಗಳು ಮತ್ತು ಸಕ್ಕರೆ ಸೇವನೆ: ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರಗಳಿಂದ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುವುದಲ್ಲದೆ, ಚರ್ಮದ ಸಮಸ್ಯೆಗಳು ಮತ್ತು ಉರಿಯೂತಕ್ಕೂ ಕಾರಣವಾಗುತ್ತದೆ. ಇದು ಜೋತು ಬೀಳುವಿಕೆ ಮತ್ತು ಸುಕ್ಕುಗಳಂತಹ ಅಕಾಲಿಕ ವಯಸ್ಸಾದ ಸೂಚನೆಗಳು ಗೊಚರಿಸುತ್ತದೆ.
ಒತ್ತಡ: ಒತ್ತಡವು ವಯಸ್ಸಾಗುವಿಕೆಗೆ ದೊಡ್ಡ ಕೊಡುಗೆಯಾಗಿದೆ. ದೀರ್ಘಕಾಲದ ಒತ್ತಡವು ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸುತ್ತದೆ, ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮುಖದ ಮೇಲೆ ಕಲೆ ಅಥವಾ ಕಣ್ಣಿನ ಕೆಳಭಾಗದಲ್ಲಿ ಕಪ್ಪಾದ ಕಲೆಗಳು ಎದ್ದು ಕಾಣಿಸುತ್ತದೆ. ಒತ್ತಡವನ್ನು ನಿರ್ವಹಿಸಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸಲು “ಭ್ರಮರಿ ಪ್ರಾಣಾಯಾಮ” ಮಾಡುವುದು ಒಳ್ಳೆಯದು ಎಂದು ಹೇಳಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:11 pm, Sat, 21 June 25