AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಂಸಕ್ಕೆ ಪರ್ಯಾಯ ಹಲಸಿನ ಗುಜ್ಜೆ, ಸೆಲೆಬ್ರಿಟಿಗಳಿಗೂ ಇದುವೇ ಬೇಕು

ಆರೋಗ್ಯಕ್ಕೆ ಒಳ್ಳೆಯದು ಈ ಹಲಸಿನ ಗುಜ್ಜೆ, ಆದರೆ ಇದನ್ನು ಈ ಆರೋಗ್ಯ ಸಮಸ್ಯೆ ಇರುವವರು ತಿನ್ನಬಾರದು. ಆದರೆ ಇದನ್ನು ತಿನ್ನುವ ಮೊದಲು ತಜ್ಞರ ಸಲಹೆ ಪಡೆಯುವುದು ಉತ್ತಮ. ಹಲಸಿನ ಗುಜ್ಜೆಯಿಂದ ಯಾವೆಲ್ಲ ಆರೋಗ್ಯ ಪ್ರಯೋಜಗಳಿದೆ ಎಂಬುದನ್ನು ಇಲ್ಲಿ ನೋಡಬಹುದು. ಹಲಸಿನ ಗುಜ್ಜೆಗಳನ್ನು ಶಾಹಿದ್ ಕಪೂರ್ ಮತ್ತು ಅನುಷ್ಕಾ ಶರ್ಮಾ ಅವರಂತಹ ಸೆಲೆಬ್ರಿಟಿಗಳಿಗೆ ಇಷ್ಟ ಹಾಗೂ ಅವರು ಕೂಡ ಇದನ್ನು ಬಳಸುತ್ತಾರೆ.

ಮಾಂಸಕ್ಕೆ ಪರ್ಯಾಯ ಹಲಸಿನ ಗುಜ್ಜೆ, ಸೆಲೆಬ್ರಿಟಿಗಳಿಗೂ ಇದುವೇ ಬೇಕು
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on:Jun 18, 2025 | 6:04 PM

Share

ಹಲಸಿನ ಗುಜ್ಜೆ (Jackfruit pulp) ತಿನ್ನಲು ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಇದನ್ನು ಬಳಸುತ್ತಾರೆ. ಈ ಹಣ್ಣನ್ನು ಹೆಚ್ಚಾಗಿ ಭಾರತ ಹಾಗೂ ದಕ್ಷಿಣ ಏಷ್ಯಾದ ಇತರ ದೇಶಗಳಲ್ಲಿ ಬೆಳೆಯುತ್ತಾರೆ. ಮತ್ತು ಇದು ಅಲ್ಲಿಯವರ ಆಹಾರ ಕೂಡ ಆಗಿದೆ. ಇನ್ನು ಕರ್ನಾಟಕದ ದಕ್ಷಿಣ ಭಾಗಗಳಲ್ಲಿ ಈ ಸಮಯದಲ್ಲಿ ಅಂದರೆ ಮಳೆಗಾಲದಲ್ಲಿ ಇದನ್ನು ಅಡುಗೆಗೆ ಬಳಸುತ್ತಾರೆ. ಇನ್ನು ಅನೇಕ ಕಡೆ ಹಲಸಿನ ಮೇಳಗಳು ಕೂಡ ನಡೆಯುತ್ತದೆ. ವಿಭಿನ್ನ ರೀತಿಯ ಹಾಗೂ ತಳಿಯ ಹಲಸಿನ ಹಣ್ಣುಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಈ ಸಮಯದಲ್ಲಿ ಹೆಚ್ಚಿನ ಕಡೆ ಹಲಸಿನ ಹಣ್ಣು ಅಥವಾ ಕಾಯಿ, ಗುಜ್ಜೆಗಳನ್ನು ಬೆಳೆಯುತ್ತಾರೆ. ಈ ಹಲಸಿನ ಗುಜ್ಜೆಯಲ್ಲಿ ಯಾವ ರೀತಿಯ ಆರೋಗ್ಯ ಪ್ರಯೋಜನಗಳು ಇದೆ ಎಂಬುದನ್ನು ಮೊದಲು ನೋಡಬೇಕು. ಇದರಲ್ಲಿ ಫೈಬರ್, ಬೀಟಾ-ಕ್ಯಾರೋಟಿನ್ ಮತ್ತು ಮ್ಯಾಂಗನೀಸ್ ಅಧಿಕವಾಗಿದ್ದು, ಉತ್ಕರ್ಷಣ ನಿರೋಧಕ, ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ವಿರೋಧಿ, ಕ್ಯಾನ್ಸರ್ ವಿರೋಧಿ, ಶಿಲೀಂಧ್ರ ವಿರೋಧಿ, ಆಂಟಿನಿಯೋಪ್ಲಾಸ್ಟಿಕ್ ಮತ್ತು ಹೆಚ್ಚು ಆರೋಗ್ಯಕರ ಗುಣಗಳನ್ನು ಹೊಂದಿದೆ. ಈ ಬಗ್ಗೆ ಹಾರ್ವರ್ಡ್ ಗೆಜೆಟ್‌ ಒಂದು ವರದಿಯನ್ನು ಹಂಚಿಕೊಂಡಿದೆ.

ಇನ್ನು ಈ ಹಲಸಿನ ಗುಜ್ಜೆಗಳನ್ನು ಶಾಹಿದ್ ಕಪೂರ್ ಮತ್ತು ಅನುಷ್ಕಾ ಶರ್ಮಾ ಅವರಂತಹ ಸೆಲೆಬ್ರಿಟಿಗಳಿಗೆ ಆಹಾರ ಕ್ರಮದಲ್ಲಿ ಸೇರಿಸಿಕೊಂಡಿದ್ದಾರೆ. ಪೌಷ್ಟಿಕತಜ್ಞ ರಯಾನ್ ಫರ್ನಾಂಡೊ  ಈ ಆಹಾರದಲ್ಲಿ ಈ ಹಲಸಿನ ಗುಜ್ಜೆಯನ್ನು ಸೇರಿಸಿಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ. ಈ ಬಗ್ಗೆ ರಯಾನ್ ಫರ್ನಾಂಡೊ ಅವರು ತಮ್ಮ ಇನ್‌ಸ್ಟಾಗ್ರಾಮ್​​​ನನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಸೇವನೆಯನ್ನು ಮಾಡುವುದು ಉತ್ತಮ ಆದರೆ ಕೆಲವರು ಇದನ್ನು ಸೇವನೆ ಮಾಡಬಾರದು.

ಇದನ್ನೂ ಓದಿ
Image
ಚಿತ್ರ ನೋಡಿ, ನೀವು ಹೇಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ ತಿಳಿಯಿರಿ
Image
ನೀವು ನಿರ್ಧಾರ ತೆಗೆದುಕೊಳ್ಳುವ ರೀತಿಯನ್ನು ವಿವರಿಸುವ ಚಿತ್ರವಿದು
Image
ಈ ಚಿತ್ರ ನೋಡಿ ನಿಮ್ಮ ನಿಗೂಢ ಗುಣ ಸ್ವಭಾವವನ್ನು ಪರೀಕ್ಷಿಸಿ
Image
ನೀವು ಹಠಮಾರಿ ಸ್ವಭಾವದವರೇ ಎಂಬುದನ್ನು ತಿಳಿಸುವ ಚಿತ್ರವಿದು

ತೇವಾಂಶ ಮತ್ತು ತಂಪಾಗಿಸುವ ಗುಣ

ಹಲಸಿನ ಗುಜ್ಜೆಯಲ್ಲಿ ನೀರು, ನಾರು ಮತ್ತು ಪೊಟ್ಯಾಸಿಯಮ್ ನಿಂದ ತುಂಬಿರುತ್ತವೆ. ಬೇಸಿಗೆಯಲ್ಲಿ ನಮ್ಮ ದೇಹವು ಬಯಸುವ ಮೂರು ವಿಷಯಗಳು ಇವು ಎಂದು ರಯಾನ್ ಫರ್ನಾಂಡೊ ಹೇಳುತ್ತಾರೆ. ಇದು ನಮ್ಮನ್ನು ತೇವಾಂಶ, ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ ಮತ್ತು ನೈಸರ್ಗಿಕವಾಗಿ ದೇಹವನ್ನು ತಂಪಾಗಿಸುತ್ತದೆ. ಇದನ್ನು ಮಿತವಾಗಿ ಸೇವನೆ ಮಾಡಿದಾಗ ದೇಹದಲ್ಲಿ ಕಡಿಮೆ ಗ್ಲೈಸೆಮಿಕ್ ಸೂಚಿ (gastrointestinal) ಹೊಂದಿರುತ್ತದೆ. ಕಡಿಮೆ ಗ್ಲೈಸೆಮಿಕ್​​ನಿಂದ ಆಹಾರಗಳು ಜೀರ್ಣವಾಗುತ್ತವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಸಮತೋಲನವನ್ನು ತರುತ್ತದೆ. ತೂಕ ನಷ್ಟಕ್ಕೆ ಮತ್ತು ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ವಿಡಿಯೋ ಇಲ್ಲಿದೆ ನೊಡಿ:

ಯಾರು ತಿನ್ನಬಾರದು?

ಹಲಸಿನ ಹಣ್ಣು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಮಧುಮೇಹಿ  ಇದನ್ನು ತಿನ್ನಬಾರದು. ತಿನ್ನುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಮೂತ್ರಪಿಂಡದ ಸಮಸ್ಯೆಗಳಿದ್ದರೆ ಅಥವಾ ಕಡಿಮೆ ಪೊಟ್ಯಾಸಿಯಮ್ ಇದ್ದರೆ ಇದನ್ನು  ಸೇವನೆ ಮಾಡಬಾರದು.

ಇದನ್ನೂ ಓದಿ: ನಿಮ್ಮ ಬೆರಳಿನ ಆಕಾರವೇ ಹೇಳುತ್ತೆ ನಿಮ್ಮ ರಹಸ್ಯ ವ್ಯಕ್ತಿತ್ವ ಹೇಗಿದೆಯೆಂದು

ಹಲಸಿನ ಹಣ್ಣು ಎಷ್ಟು ತಿನ್ನಬೇಕು?

ದಿನಕ್ಕೆ ಒಂದು ಕಪ್​​ ಮಾತ್ರ ಸಾಕು, ಅತಿಯಾದ ಹಲಸಿನ ಹಣ್ಣಿನ ಸೇವನೆಯು ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಇದನ್ನು ನಿಮ್ಮ ಸಲಾಡ್, ಸ್ಮೂಥಿಗಳು ಅಥವಾ ತಿಂಡಿಗಳಲ್ಲಿ ಸೇರಿಸಿ ತಾಜಾವಾಗಿ ಸೇವಿಸಬಹುದು. ಉತ್ತಮ ಜೀರ್ಣಕ್ರಿಯೆಗಾಗಿ ಬೆಳಿಗ್ಗೆ ಅಥವಾ ಮಧ್ಯಾಹ್ನದ ಊಟದ ಸಮಯದಲ್ಲಿ ಇದನ್ನು ಸೇವಿಸುವುದು ಉತ್ತಮ.

ಆರೋಗ್ಯಕರ ಹಲಸಿನ ಹಣ್ಣಿನ ಪಾಕವಿಧಾನ

ಹಲಸಿನ ಹಣ್ಣಿನ ಸಲಾಡ್: ಹಸಿ ಹಲಸಿನ ಹಣ್ಣನ್ನು ಹೋಳುಗಳಾಗಿ ಕತ್ತರಿಸಿ, ಅದಕ್ಕೆ ಕತ್ತರಿಸಿದ ಸೌತೆಕಾಯಿ, ಟೊಮ್ಯಾಟೊ, ಈರುಳ್ಳಿ, ನಿಂಬೆ ರಸ ಮತ್ತು ಒಂದು ಚಿಟಿಕೆ ಚಾಟ್ ಮಸಾಲಾ ಸೇರಿಸಿ. ಜತೆಗೆ ಹುರಿದ ಕಡಲೆಕಾಯಿಯನ್ನು ಸೇರಿಸಿ ಮತ್ತು ಕೊತ್ತಂಬರಿ ಸೊಪ್ಪನ್ನು ಕೂಡ ಸೇರಿಸಬಹುದು. ಇದರ ಸಲಾಡ್ ಉಲ್ಲಾಸಕರ, ಹಗುರ ಮತ್ತು ಬೇಸಿಗೆಯ ತಿಂಡಿಗೆ ಸೂಕ್ತವಾಗಿದೆ.

ಹಲಸಿನ ಹಣ್ಣಿನ ಸ್ಮೂಥಿ: ಹಲಸಿನ ಹಣ್ಣಿನ ತುಂಡುಗಳನ್ನು ತಣ್ಣಗಾದ ಮೊಸರು, ಸ್ವಲ್ಪ ಹಾಲು, ಜೇನುತುಪ್ಪ ಮತ್ತು ಏಲಕ್ಕಿ ಪುಡಿಯೊಂದಿಗೆ ಮಿಶ್ರಣ ಮಾಡಿ. ಈ ಕ್ರೀಮಿ ಸ್ಮೂಥಿಯು ಉತ್ತಮ ಉಪಹಾರ ಪಾನೀಯವಾಗಿದ್ದು, ಪೋಷಕಾಂಶಗಳು ಮತ್ತು ನೈಸರ್ಗಿಕ ಮಾಧುರ್ಯದಿಂದ ತುಂಬಿರುತ್ತದೆ. ಹೆಚ್ಚುವರಿ ಫೈಬರ್‌ಗಾಗಿ ನೀವು ಸ್ವಲ್ಪ ಓಟ್ಸ್ ಕೂಡ ಮಿಶ್ರಣ ಮಾಡಬಹುದು.

ಹಲಸಿನ ಹಿಟ್ಟು: ಹಲಸಿನ ಬೀಜಗಳನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿಮಾಡಿ ಹಿಟ್ಟು ತಯಾರಿಸಿ. ಈ ಪೌಷ್ಟಿಕ ಹಿಟ್ಟಿನಲ್ಲಿ ಸ್ವಲ್ಪವನ್ನು ಗೋಧಿ ಹಿಟ್ಟಿನೊಂದಿಗೆ ಬೆರೆಸಿ ಚಪಾತಿ ತಯಾರಿಸಿ ಅಥವಾ ದೋಸೆ ಹಿಟ್ಟಿನೊಂದಿಗೆ ಬೆರೆಸಿ. ಇದು ಪ್ರೋಟೀನ್ ಮತ್ತು ಬಿ ಜೀವಸತ್ವಗಳಿಂದ ಸಮೃದ್ಧವಾಗಿದೆ.

ಹಲಸಿನ ಹಣ್ಣು ಪನಿಯಾರಮ್‌: ಹಲಸಿನ ಹಣ್ಣಿನ ತಿರುಳನ್ನು ರಾಗಿ, ತುರಿದ ತೆಂಗಿನಕಾಯಿ, ಬೆಲ್ಲ, ಏಲಕ್ಕಿ ಪುಡಿ ಮತ್ತು ಉಪ್ಪಿ ಬೆರೆಸಿ ಮಿಶ್ರಣ ಮಾಡಬೇಕು. ಒಂದು ಪ್ಯಾನ್‌ಗೆ ಇವುಗಳನ್ನು ಹಾಕಿ ಗೋಲ್ಡನ್ ಬ್ರೌನ್ ಬರುವವರೆಗೆ ಹುರಿಯಿರಿ. ನಂತರ ಇದನ್ನು ಬಿಸಿ ಹಾರುವವರೆಗೆ ಕಾದು ಸೇವನೆ ಮಾಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:03 pm, Wed, 18 June 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ