ಮೂತ್ರದಲ್ಲಿ ರಕ್ತ ಬರುತ್ತಾ? ಮೂಲವ್ಯಾಧಿ ಇದ್ಯಾ? ಚಿಂತೆ ಬೇಡ! ಬೆಳಿಗ್ಗೆ ಎದ್ದು ಈ ತರಕಾರಿಯ ಜ್ಯೂಸ್ ಕುಡಿಯಿರಿ
ಪ್ರತಿದಿನ ಬೆಳಿಗ್ಗೆ ಒಂದು ಲೋಟ ಬಿಳಿ ಕುಂಬಳಕಾಯಿ ರಸ ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೆಳಿಗ್ಗೆ ಕಾಫಿ ಅಥವಾ ಟೀ ಕುಡಿಯುವುದಕ್ಕಿಂತಲೂ ನೈಸರ್ಗಿಕವಾಗಿ ಸಿಗುವ ಈ ತರಕಾರಿಯ ರಸವನ್ನು ಬಳಸುವುದರಿಂದ ದೇಹಕ್ಕೆ ಬಹಳ ಪ್ರಯೋಜನಕಾರಿಯಾಗಿರುತ್ತದೆ. ಇದು ಒಂದು ಸಣ್ಣ ಅಭ್ಯಾಸವಾದರೂ ಕೂಡ ಇದರಿಂದ ಸಿಗುವ ಫಲಿತಾಂಶ ಮಾತ್ರ ನೀವು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಇದು ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದ್ದು ನೀವು ಕೂಡ ಇದನ್ನು ಕುಡಿಯಬಹುದು. ಇನ್ನೇಕೆ ತಡ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಂಡು ದಿನನಿತ್ಯ ಸೇವನೆ ಮಾಡಿ.

ಬಿಳಿ ಕುಂಬಳಕಾಯಿ (Ash Gourd) ಅಥವಾ ಬೂದುಗುಂಬಳದ ಬಗ್ಗೆ ನೀವು ಕೇಳಿರಬಹುದು. ಈ ತರಕಾರಿ ಕೆಲವರಿಗೆ ಇಷ್ಟವಾಗಬಹುದು ಅಥವಾ ಆಗದೆಯೂ ಇರಬಹುದು. ಆದರೆ ಇದರಲ್ಲಿರುವ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿರುವುದರಿಂದ ಇವುಗಳನ್ನು ನಿಯಮಿತವಾಗಿ ಸೇವನೆ ಮಾಡುವುದು ತುಂಬಾ ಒಳ್ಳೆಯದು. ಇವು ನಮ್ಮ ನರಗಳಿಗೆ ಶಕ್ತಿಯನ್ನು ಒದಗಿಸುತ್ತವೆ. ಮೆದುಳನ್ನು ಶಾಂತವಾಗಿಡಲು ಸಹಾಯ ಮಾಡುತ್ತವೆ. ಅದರಲ್ಲಿಯೂ ಬೆಳಗ್ಗಿನ ಸಮಯದಲ್ಲಿ ಇದರಿಂದ ತಯಾರಿಸಿದ ರಸವನ್ನು (Ash Gourd Juice) ಕುಡಿಯುವುದರಿಂದ ಮತ್ತಷ್ಟು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಹಾಗಾಗಿಯೇ ಇದರಿಂದ ಜ್ಯೂಸ್ ಮಾಡಿ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಇದು ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದ್ದು ನೀವು ಕೂಡ ಇದನ್ನು ಕುಡಿಯಬಹುದು. ಇನ್ನೇಕೆ ತಡ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಂಡು ದಿನನಿತ್ಯ ಸೇವನೆ ಮಾಡಿ.
ಬೂದುಗುಂಬಳ ನೋಡಿ ಮೂಗು ಮುರಿಯುವವರ ನಡುವೆ ನಮ್ಮಲ್ಲಿಯೇ ಸಿಗುವ ಈ ಪೌಷ್ಟಿಕಾಂಶ ಭರಿತವಾದ ತರಕಾರಿಯನ್ನು ಸೇವನೆ ಮಾಡುವುದು ಒಳ್ಳೆಯ ಅಭ್ಯಾಸ. ಎಲ್ಲಿಯೋ ಸಿಗುವ ಹಣ್ಣು ತರಕಾರಿಗಳಿಗೆ ದುಡ್ಡು ವ್ಯಯಿಸುವ ಬದಲು ನಮ್ಮ ರೈತರು ಬೆಳೆಯುವ ಈ ತರಕಾರಿಯನ್ನು ಸೇವನೆ ಮಾಡಿ. ಇದು ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ. ದಿನವಿಡೀ ಆತಂಕವಿಲ್ಲದೆ ಇರುವುದಕ್ಕೆ ಸಹಾಯ ಮಾಡುತ್ತದೆ. ಜೊತೆಗೆ ದೇಹವನ್ನು ತಂಪಾಗಿರಿಸುತ್ತದೆ. ಅದಲ್ಲದೆ ಈ ತರಕಾರಿಯ ರಸ ಮೂತ್ರಪಿಂಡಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಮೂತ್ರದಲ್ಲಿ ಕಂಡು ಬರುವ ಸೋಂಕು, ಮೂತ್ರದಲ್ಲಿ ರಕ್ತ ಬರುವುದು ಮತ್ತು ಮೂಲವ್ಯಾಧಿಯಿಂದ ರಕ್ತಸ್ರಾವದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಬಿಳಿ ಕುಂಬಳಕಾಯಿ ಅಥವಾ ಬೂದುಗುಂಬಳ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ?
- ಬೂದುಗುಂಬಳದಲ್ಲಿ ವಿಟಮಿನ್ ಬಿ, ಸಿ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕ, ಫೈಬರ್, ಕಬ್ಬಿಣ ಮತ್ತು ನೀರಿನಾಂಶದಿಂದ ಸಮೃದ್ಧವಾಗಿದೆ. ಇವೆಲ್ಲವೂ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳಾಗಿವೆ.
- ಹುಣ್ಣುಗಳಿಂದ ಬಳಲುತ್ತಿರುವವರು ಬೆಳಿಗ್ಗೆ ಬಿಳಿ ಕುಂಬಳಕಾಯಿ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯುವುದರಿಂದ ಆಂತರಿಕವಾಗಿ ಕಂಡು ಬರುವ ಗಾಯಗಳು ಬೇಗನೆ ಗುಣವಾಗುತ್ತವೆ.
- ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ತುಂಬಾ ಪ್ರಯೋಜನಕಾರಿ. ಪ್ರತಿದಿನ ಬೆಳಿಗ್ಗೆ ಈ ರಸವನ್ನು ಕುಡಿಯುವುದರಿಂದ ದೇಹದಿಂದ ಹೆಚ್ಚುವರಿ ನೀರನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
- ಇದು ಹೊಟ್ಟೆಯಿಂದ ಹುಳುಗಳನ್ನು ಹೊರಹಾಕುತ್ತದೆ ಮತ್ತು ಹೊಸ ಸೋಂಕುಗಳು ಬರದಂತೆ ತಡೆಯುತ್ತದೆ.
- ದೇಹದಲ್ಲಿ ಹೆಚ್ಚಿನ ಉಷ್ಣತೆ ಇರುವವರಿಗೆ ಇದು ತುಂಬಾ ಒಳ್ಳೆಯದು. ಈ ರಸವನ್ನು ಕುಡಿಯುವುದರಿಂದ ದೇಹವು ತಂಪಾಗುತ್ತದೆ, ತೇವಾಂಶದಿಂದ ಕೂಡಿರುತ್ತದೆ.
- ಬಿಳಿ ಕುಂಬಳಕಾಯಿ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಬೆಳಿಗ್ಗೆ ಮತ್ತು ಸಂಜೆ ಕುಡಿಯುವುದರಿಂದ ರಕ್ತ ಶುದ್ಧವಾಗುತ್ತದೆ. ಇದು ದೇಹದೊಳಗಿನ ಅಂಗಗಳಿಗೆ ಸಹಾಯ ಮಾಡುತ್ತದೆ.
- ಬೂದುಗುಂಬಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ.
- ಪ್ರತಿದಿನ ಬೆಳಿಗ್ಗೆ ಒಂದು ಲೋಟ ಬಿಳಿ ಕುಂಬಳಕಾಯಿ ರಸವನ್ನು ಕುಡಿಯುವುದು ನಮ್ಮ ದೇಹ ಮತ್ತು ಮನಸ್ಸಿಗೆ ತುಂಬಾ ಒಳ್ಳೆಯದು. ಇದು ಒಂದು ಸಣ್ಣ ಅಭ್ಯಾಸವಾದರೂ ಕೂಡ ಇದರಿಂದ ಸಿಗುವ ಫಲಿತಾಂಶ ಮಾತ್ರ ನೀವು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







