AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಣ್ಣುಮಕ್ಕಳಿಗೆ ಎಡಭಾಗದಲ್ಲಿ ಏಕೆ ಮೂಗು ಚುಚ್ಚುತ್ತಾರೆ ಗೊತ್ತಾ? ಇದರ ಹಿಂದಿದೆ ವೈಜ್ಞಾನಿಕ ಕಾರಣ

ಭಾರತೀಯರಿಗೆ ಮೂಗು ಚುಚ್ಚುವುದು ವಿವಾಹ ಸಂಪ್ರದಾಯದ ಒಂದು ಪ್ರಮುಖ ಆಚರಣೆ ಅಥವಾ ಭಾಗ. ಪ್ರಾಚೀನ ಕಾಲದಲ್ಲಿ, ಪುರುಷರು ಮತ್ತು ಮಹಿಳೆಯರು ಇಬ್ಬರೂ ಕೂಡ ತಮ್ಮ ಕಿವಿಗಳನ್ನು ಚುಚ್ಚಿಕೊಳ್ಳುತ್ತಿದ್ದರು. ಮಾತ್ರವಲ್ಲ ಮಹಿಳೆಯರು ಮೂಗು ಚುಚ್ಚಿಕೊಳ್ಳುತ್ತಿದ್ದರು. ಮೂಗು ಚುಚ್ಚಿ ಮೂಗುತಿ ಹಾಕುವುದು ಮಹಿಳೆಯರ ಅಂದ ಹೆಚ್ಚಿಸುವುದಕ್ಕಲ್ಲ. ಇದರ ಹಿಂದೆ ಮಹತ್ತರ ಕಾರಣವಿದೆ. ಹೌದು, ಈ ರೀತಿ ಮೂಗು, ಕಿವಿ ಚುಚ್ಚುವುದರ ಹಿಂದೆ ಕಾರಣವಿದೆ. ಹಾಗಾದರೆ ಏನದು? ಯಾಕೆ ಎಡಭಾಗದಲ್ಲಿ ಮೂಗುತಿ ಹಾಕಬೇಕು ಎಂಬುದನ್ನು ತಿಳಿದುಕೊಳ್ಳಿ.

ಹೆಣ್ಣುಮಕ್ಕಳಿಗೆ ಎಡಭಾಗದಲ್ಲಿ ಏಕೆ ಮೂಗು ಚುಚ್ಚುತ್ತಾರೆ ಗೊತ್ತಾ? ಇದರ ಹಿಂದಿದೆ ವೈಜ್ಞಾನಿಕ ಕಾರಣ
ಸಾಂದರ್ಭಿಕ ಚಿತ್ರImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jun 28, 2025 | 3:00 PM

Share

ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಂತಹ ಅದೆಷ್ಟೋ ಸಂಪ್ರದಾಯಗಳ ಹಿಂದೆ ಅನೇಕ ಕಾರಣಗಳಿರುತ್ತವೆ. ಅದರಲ್ಲಿಯೂ ನಮ್ಮವರು ಅನುಸರಿಸಿಕೊಂಡು ಬಂದಂತಹ ಸಂಪ್ರದಾಯ ಮತ್ತು ಸಂಸ್ಕೃತಿ (culture) ನಮ್ಮ ದೇಶದ ಪರಂಪರೆಯನ್ನು ಬಿಂಬಿಸುತ್ತದೆ. ನೀವು ನೋಡಿರಬಹುದು ಹಿಂದಿನವರು ಅಂದರೆ ನಮ್ಮ ಪೂರ್ವಜರು ಕಿವಿ ಅಥವಾ ಮೂಗು ಚುಚ್ಚಿಕೊಳ್ಳುವ ಅಭ್ಯಾಸವನ್ನು ಕಡ್ಡಾಯಗೊಳಿಸಿದ್ದರು. ಅದರಲ್ಲಿಯೂ ಪ್ರಾಚೀನ ಕಾಲದಲ್ಲಿ, ಪುರುಷರು ಮತ್ತು ಮಹಿಳೆಯರು ಇಬ್ಬರೂ ಕೂಡ ತಮ್ಮ ಕಿವಿಗಳನ್ನು ಚುಚ್ಚಿಕೊಳ್ಳುತ್ತಿದ್ದರು. ಮಾತ್ರವಲ್ಲ, ಮಹಿಳೆಯರು ಮೂಗು ಚುಚ್ಚಿಕೊಳ್ಳುತ್ತಿದ್ದರು. ಆದರೆ ಇದು ಕೇವಲ ಸೌಂದರ್ಯ (beauty) ಅಥವಾ ಸಂಪ್ರದಾಯಕ್ಕಾಗಿ ಮಾಡಿದ್ದಲ್ಲ ಎಂದರೆ ನೀವು ನಂಬುತ್ತೀರಾ? ಹೌದು. ಈ ರೀತಿ ಮೂಗು, ಕಿವಿ ಚುಚ್ಚುವುದರ ಹಿಂದೆ ಕಾರಣವಿದೆ. ಅದರಲ್ಲಿಯೂ ಹೆಣ್ಣಿಗೆ ಮೂಗು ಚುಚ್ಚಿ (Nose Piercing For Girls) ಮುಗೂತಿ ಹಾಕುವುದಕ್ಕೆ ವೈಜ್ಞಾನಿಕ ಕಾರಣವಿದೆ. ಹಾಗಾದರೆ ಏನದು? ಯಾಕೆ ಎಡಭಾಗದಲ್ಲಿ ಮೂಗುತಿ ಹಾಕಬೇಕು ಎಂಬುದನ್ನು ತಿಳಿದುಕೊಳ್ಳಿ.

ಮೂಗುತಿ ಮಹಿಳೆಯರ ಆರೋಗ್ಯ ಕಾಪಾಡುತ್ತೆ!

ಮೂಗು ಚುಚ್ಚಿಸುವುದು, ಬಿಡುವುದು ಆಕೆಯ ನಿರ್ಧಾರ. ಆದರೆ ಹಿಂದಿನವರು ಅದನ್ನು ಕಡ್ಡಾಯಗೊಳಿಸಿದ್ದರು. ಕೆಲವು ಜನಾಂಗದಲ್ಲಿ ಮೂಗು ಚುಚ್ಚಿಕೊಳ್ಳದಿರುವ ಹೆಣ್ಣು ಮಕ್ಕಳಿಗೆ ಮದುವೆಯನ್ನು ನಿಷೇಧಿಸಲಾಗಿತ್ತು. ಬಳಿಕ ಈ ಪದ್ಧತಿ ಕಡಿಮೆಯಾಗುತ್ತಾ ಬಂತು. ಬಳಿಕ ರೀತಿಯ ಆಚರಣೆಗಳನ್ನು ಪಾಲಿಸುವವರ ಸಂಖ್ಯೆ ಕಡಿಮೆಯಾಯಿತು. ಇಷ್ಟ ಇರುವವರು ಅಥವಾ ಮನೆಯಲ್ಲಿ ಚುಚ್ಚಿಸಿಕೊಳ್ಳಬೇಕು ಎಂಬ ಸಂಪ್ರದಾಯವಿದ್ದವರು ಮುಗೂತಿ ಹಾಕಿಕೊಳ್ಳುತ್ತಿದ್ದರು. ಆದರೆ ಇತ್ತೀಚಿಗೆ ಇದೊಂದು ಟ್ರೆಂಡ್ ಆಗಿ ಬದಲಾಯಿತು. ಪ್ರತಿಯೊಬ್ಬ ಮಹಿಳೆಯೂ ಮೂಗು ಚುಚ್ಚಿಕೊಳ್ಳುವುದಕ್ಕೆ ಆರಂಭಿಸಿದರು. ಕೆಲವರಂತು ಸಿನಿಮಾಗಳನ್ನು ನೋಡಿ ಪ್ರೇರಿತರಾಗಿ, ಮೂಗಿನ ಎರಡು ಕಡೆ ಮುಗೂತಿ ಹಾಕುವುದಕ್ಕೆ ಆರಂಭ ಮಾಡಿದರು. ಅಲಂಕಾರಿಕ ದೃಷ್ಟಿಕೋನದಿಂದ ನೋಡುವುದಾದರೆ ಇದು ಹೆಣ್ಣಿನ ಸೌಂದರ್ಯವನ್ನು ಇಮ್ಮಡಿಗೊಳಿಸುವುದರಲ್ಲಿ ಸಂಶಯವಿಲ್ಲ. ಆದರೆ ಇದು ಅಂದ ಹೆಚ್ಚಿಸುವುದಕ್ಕೆ ಮಾತ್ರವಲ್ಲ ಬದಲಾಗಿ ಈ ಆಭರಣಗಳು ಮಹಿಳೆಯರ ಆರೋಗ್ಯ ಕಾಪಾಡುತ್ತವೆ.

ಮೂಗು ಚುಚ್ಚುವುದರಿಂದ ಸಿಗುತ್ತೆ ಆರೋಗ್ಯ ಪ್ರಯೋಜನ;

ಕೆಲವು ಕಡೆಗಳಲ್ಲಿ ಮದುವೆಯಾದ ಹೆಂಗಸರು ಇದನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಇದೊಂದು ವಿವಾಹಿತರ ಸಂಕೇತ ಅದಲ್ಲದೆ ಮೂಗುತಿ ಧರಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಕೆಲವು ನಂಬಿಕೆಗಳ ಪ್ರಕಾರ, ಮೂಗು ಚುಚ್ಚುವುದು ಪಾರ್ವತಿ ದೇವಿಯನ್ನು ಗೌರವಿಸುವ ಒಂದು ಮಾರ್ಗವಾಗಿದೆ. ಇದನ್ನು ಹದಿನಾರು ಅಲಂಕಾರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಮೂಗು ಅಥವಾ ಕಿವಿಗಳನ್ನು ಚುಚ್ಚಿಕೊಳ್ಳುವುದನ್ನು ಅಲಂಕಾರದ ಒಂದು ರೂಪವೆಂದು ನಾವು ಪರಿಗಣಿಸಬಹುದು, ಆದರೆ ಅದರ ಹಿಂದೆ ವೈಜ್ಞಾನಿಕ ಕಾರಣವಿದೆ. ವಾಸ್ತವವಾಗಿ, ಮೂಗು ಚುಚ್ಚುವುದರಿಂದ ಮಹಿಳೆಯರಿಗೆ ಮುಟ್ಟಿನ ನೋವಿನಿಂದ ಪರಿಹಾರ ಸಿಗುತ್ತದೆ ಎಂದು ವೇದಗಳು ಮತ್ತು ಧರ್ಮಗ್ರಂಥಗಳಲ್ಲಿ ಬರೆಯಲಾಗಿದೆ. ಹೆಚ್ಚುವರಿಯಾಗಿ, ಹೆರಿಗೆಯ ಸಮಯದಲ್ಲಿ ಮಗುವಿಗೆ ಜನ್ಮ ನೀಡುವುದು ಸಹ ತುಂಬಾ ಸುಲಭವಾಗುತ್ತದೆ ಇದು ಆ ನೋವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಈ ಬಗ್ಗೆ ನಡೆದ ಕೆಲವು ಸಂಶೋಧನಗೆಳು ಕೂಡ ಇದಕ್ಕೆ ಪೂರಕವಾಗಿದೆ. ಮಾತ್ರವಲ್ಲ ಇದು ಮೈಗ್ರೇನ್ ನೋವಿನಿಂದ ಕೂಡ ಪರಿಹಾರ ನೀಡುತ್ತದೆ.

ಇದನ್ನೂ ಓದಿ
Image
ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಲಕ್ಷಣಗಳು ಹೇಗಿರುತ್ತೆ ಗೊತ್ತಾ?
Image
ಎಸಿಯಲ್ಲಿ ಗಂಟೆಗಟ್ಟಲೆ ಸಮಯ ಕಳೆಯುವವರಿಗೆ ಈ ಸಮಸ್ಯೆ ತಪ್ಪಿದ್ದಲ್ಲ
Image
ರಾತ್ರಿ ಈ ರೀತಿ ಲಕ್ಷಣ ಕಂಡು ಬರುವುದು ಕಿಡ್ನಿ ಫೇಲ್ಯೂರ್ ಆಗುವ ಮುನ್ಸೂಚನೆ

ಇದನ್ನೂ ಓದಿ: Daily Devotional: ಹೆಣ್ಣು ಮಕ್ಕಳು ಮೂಗು ಚುಚ್ಚಿಸಿಕೊಳ್ಳುವುದರಿಂದ ಏನೆಲ್ಲಾ ಲಾಭ

ಹೆಣ್ಣಿಗೆ ಮೂಗಿನ ಎಡಭಾಗದಲ್ಲಿಯೇ ಏಕೆ ಮೂಗು ಚುಚ್ಚಿಸಬೇಕು?

ಸಾಮಾನ್ಯವಾಗಿ ಕೆಲವರಿಗೆ ಈ ಪ್ರಶ್ನೆ ಉದ್ಭವ ಆಗಬಹುದು. ಹುಡುಗಿಯರು ಯಾಕೆ ಮೂಗಿನ ಎಡಭಾಗದಲ್ಲಿಯೇ ಮೂಗುತಿ ಹಾಕುತ್ತಾರೆ? ನೀವು ಎಂದಾದರೂ ಇದರ ಬಗ್ಗೆ ಯೋಚಿಸಿದ್ದೀರಾ? ವಾಸ್ತವದಲ್ಲಿ, ಮೂಗಿನ ಎಡಭಾಗವು ಕೆಲವು ಸಂತಾನೋತ್ಪತ್ತಿ ಅಂಗಗಳಿಗೆ ಸಂಬಂಧಿಸಿದೆ. ಈ ಭಾಗದಲ್ಲಿ ಚುಚ್ಚುವುದರಿಂದ ಹೆರಿಗೆ ನೋವು ಗಮನಾರ್ಹವಾಗಿ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಎಡಭಾಗದಲ್ಲಿಯೇ ಚುಚ್ಚುವುದರಿಂದ ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ ಎಂದು ಕೆಲವರು ಹೇಳುತ್ತಾರೆ. ಮೂಗು ಅಥವಾ ಕಿವಿಗಳನ್ನು ಬಾಲ್ಯದಿಂದ ಪ್ರೌಢಾವಸ್ಥೆಯವರೆಗೆ ಯಾವುದೇ ವಯಸ್ಸಿನಲ್ಲಿಯೂ ಚುಚ್ಚಬಹುದು. ಇದು ದೇಹದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ