Health Tips: ದಿನದಲ್ಲಿ ಹಲವು ಬಾರಿ ಮಲ ವಿಸರ್ಜನೆಯಾಗಲು ಕಾರಣವೇನು?
ನೀವು ಊಟ ಮಾಡಿದ ತಕ್ಷಣ ಮಲ ವಿಸರ್ಜನೆ ಮಾಡುತ್ತೀರಾ? ನೀವು ಆಗಾಗ ಮಲವಿಸರ್ಜನೆ ಮಾಡಲು ಕಾರಣವೇನು ಎಂದು ತಿಳಿದಿದೆಯೇ? ಊಟ ಮಾಡಿದ ತಕ್ಷಣ ಮಲವಿಸರ್ಜನೆ ಮಾಡುವುದು ಸಾಮಾನ್ಯವಾಗಿ ಗ್ಯಾಸ್ಟ್ರೋಕೊಲಿಕ್ ರಿಫ್ಲೆಕ್ಸ್‌ನ ಪರಿಣಾಮವಾಗಿದೆ. ಇದು ನಿಮ್ಮ ಹೊಟ್ಟೆಗೆ ಪ್ರವೇಶಿಸುವ ಆಹಾರಕ್ಕೆ ಸಾಮಾನ್ಯ ದೈಹಿಕ ಪ್ರತಿಕ್ರಿಯೆಯಾಗಿದೆ. ಬಹುತೇಕ ಎಲ್ಲರೂ ಕೆಲವೊಮ್ಮೆ ಗ್ಯಾಸ್ಟ್ರೋಕೊಲಿಕ್ ರಿಫ್ಲೆಕ್ಸ್‌ನ ಕೆಲವು ಪರಿಣಾಮಗಳನ್ನು ಅನುಭವಿಸುತ್ತಾರೆ. ಇದಕ್ಕೆ ಕೆಲವು ಆಹಾರದ ಅಲರ್ಜಿಗಳು, ಅಸಹಿಷ್ಣುತೆ ಮತ್ತು ಒತ್ತಡವೂ ಸೇರಿವೆ.

ಬೆಂಗಳೂರು, ಏಪ್ರಿಲ್ 10: ಜೀರ್ಣಕ್ರಿಯೆಯು (Digestion) ಪ್ರತಿಯೊಬ್ಬ ವ್ಯಕ್ತಿಯ ಆಂತರಿಕ ವ್ಯವಸ್ಥೆಯನ್ನು ಅವಲಂಬಿಸಿರುತ್ತದೆ, ಅನೇಕ ಜನರು ಊಟ ಮುಗಿಸಿದ ತಕ್ಷಣ ಮಲವಿಸರ್ಜನೆ (Poop) ಮಾಡುತ್ತಾರೆ. ಇದು ಒಮ್ಮೊಮ್ಮೆ ಸರಿಯಾಗಿದ್ದರೂ, ಪದೇಪದೆ ಇದೇ ವಿಧಾನ ಮುಂದುವರೆದರೆ ಅಥವಾ ದಿನವೂ ಹೀಗೆಯೇ ಸಂಭವಿಸಿದರೆ ನೀವು ಅತಿಯಾಗಿ ಸಕ್ರಿಯವಾಗಿರುವ ಗ್ಯಾಸ್ಟ್ರೋಕೊಲಿಕ್ ರಿಫ್ಲೆಕ್ಸ್ ಅನ್ನು ಹೊಂದಿರಬಹುದು ಎಂದರ್ಥ. ಇದು ತಿನ್ನುವುದಕ್ಕೆ ನೈಸರ್ಗಿಕ ಪ್ರತಿವರ್ತನ ಕ್ರಿಯೆಯಾಗಿದೆ. ವೈದ್ಯರ ಪ್ರಕಾರ, ನೀವು ಎಲ್ಲಾ ಸಮಯದಲ್ಲೂ ತಿಂದ ತಕ್ಷಣ ಟಾಯ್ಲೆಟ್ಗೆ ಹೋಗಬೇಕೆನ್ನುವ ಅನುಭವ ಉಂಟಾದರೆ ಅದು ನಿಮ್ಮ ಜೀರ್ಣಕ್ರಿಯೆಯು ಅತಿವೇಗದ್ದು ಎಂದರ್ಥವಲ್ಲ. ಅದು ನಿಮ್ಮ ದೇಹವು ನೀಡುವ ನೈಸರ್ಗಿಕ ಪ್ರತಿಕ್ರಿಯೆಯಾಗಿದೆ ಎಂದರ್ಥ.
ಪದೇ ಪದೇ ಮಲವಿಸರ್ಜನೆ ಮಾಡುವುದರಿಂದ ನೀವು ಸಾಮಾನ್ಯವಾಗಿ ಮಾಡುವುದಕ್ಕಿಂತ ಹೆಚ್ಚಾಗಿ ಮಲವಿಸರ್ಜನೆ ಮಾಡುತ್ತೀರಿ ಎಂದರ್ಥ. ನೀವು ದಿನವೂ ಮಲವಿಸರ್ಜನೆ ಮಾಡುತ್ತಿರುವುದರಲ್ಲಿ ಹಠಾತ್ ವ್ಯತ್ಯಾಸವನ್ನು ನೀವು ಗಮನಿಸಿದರೆ ನಿಮ್ಮ ಕರುಳಿನೊಳಗೆ ಏನೋ ಬದಲಾಗಿದೆ ಎಂದರ್ಥ.ಪದೇಪದೆ ಮಲ ವಿಸರ್ಜನೆಯಾಗುವುದಕ್ಕೆ ಅತಿಸಾರ ಅಥವಾ ಭೇದಿ ಮಾತ್ರ ಕಾರಣವಲ್ಲ. ಬೇರೆ ಸಮಸ್ಯೆಯಿಂದಲೂ ಈ ರೀತಿ ಆಗಬಹುದು.
ಇದನ್ನೂ ಓದಿ: ಆರೋಗ್ಯವಾಗಿರಲು ದಿನಕ್ಕೆ ಎಷ್ಟು ಬಾರಿ ಮಲವಿಸರ್ಜನೆ ಮಾಡಬೇಕು? ಅಧ್ಯಯನ ಹೇಳಿದ್ದೇನು?
ದಿನಕ್ಕೆ ಒಂದರಿಂದ 3 ಬಾರಿ ಮಲವಿಸರ್ಜನೆಯಾಗುವುದು ಸಾಮಾನ್ಯ. ಒಬ್ಬೊಬ್ಬರ ದೇಹ ಪ್ರಕೃತಿಯ ಆಧಾರದ ಮೇಲೆ ಅವರ ಜೀರ್ಣಕ್ರಿಯೆಯ ವೇಗವೂ ಬದಲಾಗುತ್ತದೆ. ಪದೇಪದೆ ಮಲವಿಸರ್ಜನೆಯಾಗಲು ನಿಮ್ಮ ಕರುಳಿನ ಆರೋಗ್ಯ, ಚಟುವಟಿಕೆಯ ಮಟ್ಟಗಳು, ಆಹಾರ ಪದ್ಧತಿಗಳು, ಒತ್ತಡ, ಔಷಧಿಗಳು, ಓವರ್-ದಿ-ಕೌಂಟರ್ (OTC) ಸಪ್ಲಿಮೆಂಟ್ಸ್ ಮುಂತಾದವು ಕಾರಣ. ಈ ಸಮಸ್ಯೆ ಪುನರಾವರ್ತಿವಾದರೆ ವೈದ್ಯರನ್ನು ಕಾಣುವುದು ಉತ್ತಮ.
ಗ್ಯಾಸ್ಟ್ರೋಕೊಲಿಕ್ ರಿಫ್ಲೆಕ್ಸ್ ಎಂದರೇನು?:
ಗ್ಯಾಸ್ಟ್ರೋಕೊಲಿಕ್ ರಿಫ್ಲೆಕ್ಸ್ ಒಂದು ಶಾರೀರಿಕ ಪ್ರತಿವರ್ತನವಾಗಿದ್ದು, ಊಟದ ನಂತರ ನಿಮ್ಮ ಕೆಳ ಜಠರಗರುಳಿನ ಪ್ರದೇಶದಲ್ಲಿ ಚಲನೆಯನ್ನು ಉತ್ತೇಜಿಸುತ್ತದೆ. ಇದನ್ನು ರೋಗ ಅಥವಾ ವೈದ್ಯಕೀಯ ಸ್ಥಿತಿ ಎಂದು ವರ್ಗೀಕರಿಸಲಾಗದಿದ್ದರೂ ಅದರ ಬದಲಿಗೆ ನಿಮ್ಮ ದೇಹವು ಆಹಾರವನ್ನು ತಿಂದ ನಂತರ ಹೆಚ್ಚಿನ ಆಹಾರಕ್ಕಾಗಿ ಸ್ಥಳಾವಕಾಶ ಕಲ್ಪಿಸಲು ಸಹಾಯ ಮಾಡುವ ಸಾಮಾನ್ಯ ಪ್ರತಿಕ್ರಿಯೆಯಾಗಿದೆ. ತಜ್ಞರ ಪ್ರಕಾರ, ಗ್ಯಾಸ್ಟ್ರೋಕೊಲಿಕ್ ರಿಫ್ಲೆಕ್ಸ್ ಹೊಟ್ಟೆಯ ಸೆಳೆತ ಮತ್ತು ನೋವು, ಕರುಳಿನ ತುರ್ತು ಅಥವಾ ತೀವ್ರ ಅತಿಸಾರದ ಲಕ್ಷಣಗಳೊಂದಿಗೆ ವಯಸ್ಕರ ಮೇಲೆ ಪರಿಣಾಮ ಬೀರುತ್ತದೆ. ಆಹಾರವು ನಿಮ್ಮ ಹೊಟ್ಟೆಗೆ ಸೇರಿದಾಗ ಮತ್ತು ನಿಮ್ಮ ದೇಹವು ಕೆಲವು ಹಾರ್ಮೋನುಗಳನ್ನು ಬಿಡುಗಡೆ ಮಾಡಿದಾಗ ನೀವು ಈ ಲಕ್ಷಣಗಳನ್ನು ಪಡೆಯಬಹುದು.
ಇದನ್ನೂ ಓದಿ: Constipation: 2 ವರ್ಷದ ಮಗುವಿನಲ್ಲೂ ಹೆಚ್ಚುತ್ತಿದೆ ಮಲಬದ್ಧತೆ; ಕಾರಣವೇನು? ಪರಿಹಾರವೇನು?
ಗ್ಯಾಸ್ಟ್ರೋಕೊಲಿಕ್ ರಿಫ್ಲೆಕ್ಸ್‌ಗೆ ಕಾರಣವೇನು?:
IBSನಂತಹ ಕೆಲವು ಜೀರ್ಣಕಾರಿ ಸಮಸ್ಯೆಗಳು
ಆತಂಕ
ಸೆಲಿಯಾಕ್ ಕಾಯಿಲೆ
ಜಿಡ್ಡಿನ ಮತ್ತು ಸಂಸ್ಕರಿಸಿದ ಆಹಾರಗಳು
ಆಹಾರ ಅಲರ್ಜಿಗಳು
ಉರಿಯೂತದ ಕರುಳಿನ ಕಾಯಿಲೆ
ಕೃತಕ ಸಿಹಿಕಾರಕಗಳು ಮತ್ತು ಇತರ ವಿರೇಚಕಗಳ ಅತಿಯಾದ ಸೇವನೆ
ಆಹಾರಜನ್ಯ ಬ್ಯಾಕ್ಟೀರಿಯಾ ಮತ್ತು ಪರಾವಲಂಬಿಗಳು
ವೈರಲ್ ಸೋಂಕು
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ