Tongue Cleaning: ನಿಮ್ಮ ನಾಲಿಗೆ ನೀಡುವ ಈ ರೀತಿಯ ಸಂದೇಶಗಳನ್ನು ಎಂದಿಗೂ ಕಡೆಗಣಿಸಬೇಡಿ
ನಮ್ಮ ನಾಲಿಗೆ ಕೇವಲ ನಾವು ಸೇವನೆ ಮಾಡುವ ಆಹಾರದ ರುಚಿಯನ್ನು ಗ್ರಹಿಸುವುದು ಮಾತ್ರವಲ್ಲ, ಬದಲಾಗಿ ನಮ್ಮ ಆರೋಗ್ಯ ಸಮಸ್ಯೆಗಳನ್ನು ತಿಳಿಸುವಷ್ಟು ಶಕ್ತಿ ಇರುತ್ತದೆ. ಆರೋಗ್ಯ ಸಮಸ್ಯೆ ಎಂದು ವೈದ್ಯರ ಬಳಿಗೆ ಹೋದಾಗ, ಮೊದಲು ಅವರು ನಿಮ್ಮ ನಾಲಿಗೆಯನ್ನು ಪರೀಕ್ಷಿಸುತ್ತಾರೆ. ಏಕೆಂದರೆ ನಿಮ್ಮ ನಾಲಿಗೆಯ ಬಣ್ಣ, ನೀವು ಯಾವ ರೀತಿಯ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದೀರಿ ಎಂದು ಹೇಳುತ್ತದೆ. ಹಾಗಾದರೆ ನಮ್ಮ ನಾಲಿಗೆ ಸ್ವಚ್ಛವಾಗಿರದಿದ್ದರೆ ಏನಾಗುತ್ತದೆ? ಆರೋಗ್ಯವಂತರ ನಾಲಿಗೆ ಯಾವ ರೀತಿ ಇರಬೇಕು ಎಂಬುದನ್ನು ತಿಳಿದುಕೊಳ್ಳಿ.

ದೇಹ ಆರೋಗ್ಯವಾಗಿರಬೇಕು ಎಂದರೆ ಆಹಾರ (Food) ಸೇವನೆಯ ಜೊತೆಗೆ ನಮ್ಮ ಬಾಯಿ ಸ್ವಚ್ಛವಾಗಿರಬೇಕು. ಏಕೆಂದರೆ ಹಲ್ಲು ಹೇಗೆ ಆಹಾರಗಳನ್ನು ಅಗೆದು ತಿನ್ನುವುದಕ್ಕೆ ಸಹಕಾರಿಯೋ ಹಾಗೆಯೇ ನಮ್ಮ ನಾಲಿಗೆ (Tongue) ಆಹಾರದ ರುಚಿಯನ್ನು ಗಮನಿಸಲು ಸಹಾಯ ಮಾಡುತ್ತದೆ. ನಾಲಿಗೆಯಿಲ್ಲದೆ ಏನನ್ನೂ ಸವಿಯುವುದು ಅಸಾಧ್ಯ. ಆದರೆ ನಾಲಿಗೆಯ ಕಾರ್ಯ ಕೇವಲ ನಾವು ಸೇವನೆ ಮಾಡುವ ಆಹಾರದ ರುಚಿಯನ್ನು ಅನುಭವಿಸುವುದು ಮಾತ್ರವಲ್ಲ, ನಾಲಿಗೆಗೆ ನಮ್ಮ ಆರೋಗ್ಯ (Health) ಸಮಸ್ಯೆಗಳನ್ನು ತಿಳಿಸುವಷ್ಟು ಶಕ್ತಿ ಇರುತ್ತದೆ. ನೀವು ಗಮನಿಸಿರಬಹುದು, ನಿಮಗೆ ಆರೋಗ್ಯ ಸಮಸ್ಯೆ ಎಂದು ವೈದ್ಯರ ಬಳಿಗೆ ಹೋದಾಗ, ಮೊದಲು ಅವರು ನಿಮ್ಮ ನಾಲಿಗೆಯನ್ನು ಪರೀಕ್ಷಿಸುತ್ತಾರೆ. ಏಕೆಂದರೆ ನಿಮ್ಮ ನಾಲಿಗೆಯ ಬಣ್ಣ (Colors) ನೀವು ಯಾವ ರೀತಿಯ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದೀರಿ ಎಂದು ಹೇಳುತ್ತದೆ. ಸಾಮಾನ್ಯವಾಗಿ ನಮ್ಮ ದೇಹ ಆರೋಗ್ಯವಾಗಿರಬೇಕು ಎಂದರೆ ನಮ್ಮ ನಾಲಿಗೆ ಚೆನ್ನಾಗಿರಬೇಕು. ಹಾಗಾದರೆ ನಮ್ಮ ನಾಲಿಗೆ ಸ್ವಚ್ಛವಾಗಿರದಿದ್ದರೆ ಏನಾಗುತ್ತದೆ ತಿಳಿದುಕೊಳ್ಳಿ.
ಸಾಮಾನ್ಯವಾಗಿ ಹೆಚ್ಚಿನ ಬ್ಯಾಕ್ಟೀರಿಯಾಗಳು ಬಾಯಿ ಮತ್ತು ನಾಲಿಗೆಯಲ್ಲಿ ಇರುತ್ತದೆ. ಆದ್ದರಿಂದ, ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ತಪ್ಪಿಸಲು ನಮ್ಮ ಬಾಯಿ ಮತ್ತು ನಾಲಿಗೆಯನ್ನು ಸ್ವಚ್ಛವಾಗಿಡುವುದು ಅವಶ್ಯಕ. ದಂತಕ್ಷಯ ಮತ್ತು ಒಸಡು ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳು ನಾಲಿಗೆಯ ಮೇಲಿರುತ್ತದೆ. ನಾಲಿಗೆಯನ್ನು ಸ್ವಚ್ಛಗೊಳಿಸಿದಾಗ ಮಾತ್ರ ಬ್ಯಾಕ್ಟೀರಿಯಾಗಳು ಹೋಗುತ್ತವೆ. ಹಾಗಾಗಿ ದಂತಕ್ಷಯ ಮತ್ತು ಒಸಡು ರೋಗ ಕಡಿಮೆ ಮಾಡಲು ಮತ್ತು ಅವುಗಳಿಂದ ಉಂಟಾಗುವ ದುರ್ವಾಸನೆಯನ್ನು ತಪ್ಪಿಸಲು ನಾಲಿಗೆ ಚೆನ್ನಾಗಿರಬೇಕು. ಜೊತೆಗೆ ನಾಲಿಗೆಯ ಮೇಲೆ ಜೀವಾಣುಗಳು ಸಂಗ್ರಹವಾಗುತ್ತವೆ. ಆದ್ದರಿಂದ ಪ್ರತಿದಿನ ಅದನ್ನು ಸ್ವಚ್ಛಗೊಳಿಸುವುದು ದೇಹವನ್ನು ನಿರ್ವಿಷಗೊಳಿಸುತ್ತದೆ. ಇನ್ನು ನಾಲಿಗೆ ನೀಡುವ ಸಂದೇಶಗಳೇನು? ಯಾವ ರೀತಿ ಲಕ್ಷಣಗಳು ಕಂಡು ಬಂದಾಗ ವೈದ್ಯರನ್ನು ಸಂಪರ್ಕಿಸಬೇಕು ಎಂಬುದನ್ನು ತಿಳಿದುಕೊಳ್ಳಿ.
ಇದನ್ನೂ ಓದಿ: ಈ ವಸ್ತುಗಳನ್ನು ಮುಟ್ಟಿದ ತಕ್ಷಣ ಕೈ ತೊಳೆಯುವುದನ್ನು ಮರೆಯಬೇಡಿ
- ಕೊಳಕು ನಾಲಿಗೆ ಹೊಟ್ಟೆಯ ಆರೋಗ್ಯವನ್ನು ಕೆಡಿಸುತ್ತದೆ. ನಿಮ್ಮ ನಾಲಿಗೆ ಕಪ್ಪಾಗಿ, ಅದರ ಮೇಲೆ ಬಿಳಿ ಗುಳ್ಳೆಗಳಿದ್ದರೆ, ಇದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಕೆಟ್ಟಿದೆ ಎಂಬುದರ ಸೂಚನೆಯಾಗಿದೆ.
- ನಿಮ್ಮ ನಾಲಿಗೆ ತುಂಬಾ ನಯವಾಗಿದ್ದರೆ ಅದು ಕಬ್ಬಿಣದ ಕೊರತೆಯನ್ನು ಸೂಚಿಸುತ್ತದೆ ಮತ್ತು ನಿಮಗೆ ರಕ್ತಹೀನತೆಯಾಗಿದೆ ಎಂಬುದನ್ನು ಹೇಳುತ್ತದೆ. ಕೆಲವೊಮ್ಮೆ ಈ ರೋಗಲಕ್ಷಣಗಳು ವಿಟಮಿನ್ ಕೊರತೆಯಿಂದ ಉಂಟಾಗುತ್ತವೆ. ಅಂತಹ ಸಂದರ್ಭಗಳಲ್ಲಿ ಸಾಕಷ್ಟು ಪೋಷಕಾಂಶಗಳು ಮತ್ತು ಜೀವಸತ್ವಗಳನ್ನು ಸೇವಿಸುವುದು ಅವಶ್ಯಕ.
- ಕೆಲವರ ನಾಲಿಗೆಯಲ್ಲಿ ಬಿರುಕುಗಳು ಇರುವುದನ್ನು ನೀವು ಅನೇಕ ಬಾರಿ ಗಮನಿಸಿರಬಹುದು. ಇದು ಮೂತ್ರಪಿಂಡದ ಕಾಯಿಲೆ ಮತ್ತು ಮಧುಮೇಹ ಇರುವ ಸೂಚನೆಯಾಗಿರಬಹುದು. ಹಾಗಾಗಿ ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸದೆಯೇ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ