Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಸ್ತುಗಳನ್ನು ಮುಟ್ಟಿದ ತಕ್ಷಣ ಕೈ ತೊಳೆಯುವುದನ್ನು ಮರೆಯಬೇಡಿ

ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಕೆಲವು ಸರಳ ಅಭ್ಯಾಸಗಳ ಜೊತೆಗೆ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಅನೇಕ ರೋಗಗಳನ್ನು ತಡೆಯಬಹುದು. ನೀವು ಯಾವುದಾದರೂ ವಸ್ತುಗಳನ್ನು ಮುಟ್ಟಿದ ತಕ್ಷಣ ಕೈ ತೊಳೆಯುವ ಅಭ್ಯಾಸ ಬೆಳೆಸಿಕೊಳ್ಳುವ ಮೂಲಕ ಆರೋಗ್ಯ ಸಮಸ್ಯೆಗಳಿಂದ ರಕ್ಷಣೆ ಪಡೆಯಬಹುದು. ಜೊತೆಗೆ ಇಂತಹ ಅಭ್ಯಾಸಗಳನ್ನು ಪ್ರತಿಯೊಬ್ಬರೂ ಕೂಡ ಅಳವಡಿಸಿಕೊಳ್ಳಬೇಕು ಆಗ ಮಾತ್ರ ನಿಮ್ಮ ಪೂರ್ತಿ ಕುಟುಂಬ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಹಾಗಾದರೆ ಯಾವ ರೀತಿಯ ವಸ್ತುಗಳಿಂದ ವೈರೆಸ್ ಹರಡುತ್ತದೆ? ಯಾವ ವಸ್ತುಗಳನ್ನು ಮುಟ್ಟಿದಾಗ ಕೈ ತೊಳೆಯಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಿ.

ಈ ವಸ್ತುಗಳನ್ನು ಮುಟ್ಟಿದ ತಕ್ಷಣ ಕೈ ತೊಳೆಯುವುದನ್ನು ಮರೆಯಬೇಡಿ
ಸಾಂದರ್ಭಿಕ ಚಿತ್ರ Image Credit source: Getty Images
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 07, 2025 | 4:49 PM

ನಾವು ಪ್ರತಿನಿತ್ಯ ಹಲವಾರು ವಸ್ತುಗಳನ್ನು ಸ್ಪರ್ಶಿಸುತ್ತೇವೆ. ಅದು ಸ್ವಾಭಾವಿಕ. ಆದರೆ ಕೆಲವು ವಸ್ತುಗಳಲ್ಲಿ ಲಕ್ಷಾಂತರ ವೈರಸ್ (Virus) ಗಳಿರಬಹುದು. ಹಾಗಾಗಿ ವೈದ್ಯರು ಯಾವುದೇ ವಸ್ತುಗಳನ್ನು ಮುಟ್ಟಿದಾಗಲೂ ಕೈ ತೊಳೆಯುವ ಅಭ್ಯಾಸ ಮಾಡಿಕೊಳ್ಳಿ ಎನುತ್ತಾರೆ. ಇಲ್ಲವಾದಲ್ಲಿ ಪದೇ ಪದೇ ಅನಾರೋಗ್ಯ ಸಮಸ್ಯೆ ನಮ್ಮನ್ನು ಕಾಡುತ್ತದೆ. ಇದು ಕೆಲವು ಅಧ್ಯಯನಗಳಿಂದಲೂ ಬಹಿರಂಗಗೊಂಡಿದ್ದು ನಾವು ತಿಳಿದೋ ತಿಳಿಯದೆಯೋ ಮುಟ್ಟುವ ಕೆಲವು ವಸ್ತುಗಳು ನಮ್ಮ ಆರೋಗ್ಯವನ್ನು ಹಾಳು ಮಾಡಬಹುದು. ಅಚ್ಚರಿಯ ವಿಷಯವೆಂದರೆ, ಇತ್ತೀಚಿಗೆ ನ್ಯೂಯಾರ್ಕ್ ನಲ್ಲಿ ನಡೆದ ಒಂದು ಸಂಶೋಧನೆಯಲ್ಲಿ, ವಿಜ್ಞಾನಿಗಳು ಕರೆನ್ಸಿ (Currency) ನೋಟುಗಳಲ್ಲಿ ಸಾವಿರಾರು ಕೀಟಾಣುಗಳು ಮತ್ತು ವೈರಸ್ಗಳಿವೆ ಎಂಬುದನ್ನು ಕಂಡುಹಿಡಿದಿದ್ದು ಅನೇಕ ರೀತಿಯ ರೋಗಗಳು ಒಬ್ಬರಿಂದ ಒಬ್ಬರಿಗೆ ಹರಡಲು ಇದು ಮುಖ್ಯ ಕಾರಣವಾಗಿದೆ ಎಂದಿದ್ದಾರೆ. ಇದಕ್ಕೆ ಪೂರಕವೆಂಬಂತೆ 2017 ರಲ್ಲಿ ಪ್ರಕಟವಾದ ಸಾಂಕ್ರಾಮಿಕ ರೋಗಗಳ ಅಧ್ಯಯನವೂ ಕೂಡ ಕೈ ಸ್ವಚ್ಛವಾಗಿದ್ದರೆ ಕರುಳಿನ ಕಾಯಿಲೆಗಳು ಬರುವ ಅಪಾಯವೂ ಕಡಿಮೆಯಾಗುತ್ತದೆ ಎಂದಿದೆ. ಹಾಗಾದರೆ ವೈದ್ಯರ ಪ್ರಕಾರ, ಯಾವ ವಸ್ತುಗಳನ್ನು ಮುಟ್ಟಿದಾಗ ಮರೆಯದೆಯೇ ಕೈ ತೊಳೆಯಬೇಕು ಎಂಬುದನ್ನು ತಿಳಿದುಕೊಳ್ಳಿ.

ಕರೆನ್ಸಿ ನೋಟುಗಳು

ದುಡ್ಡು ಇಷ್ಟಪಡದಿರುವ ಮನುಷ್ಯನೇ ಇಲ್ಲ. ನೋಟುಗಳನ್ನು ಲೆಕ್ಕ ಹಾಕಿ ಕೂಡಿಡುವುದು ಎಲ್ಲರೂ ಇಷ್ಟ ಪಟ್ಟು ಮಾಡುವ ಕೆಲಸ. ಅದರಲ್ಲಿಯೂ ಇಂದಿನ ಡಿಜಿಟಲ್ ಯುಗದಲ್ಲಿ, ಆನ್ಲೈನ್ ಪಾವತಿಗಳು ವ್ಯಾಪಕವಾಗಿ ಹೆಚ್ಚಿದ್ದರೂ ಕೂಡ, ನಗದು ವಹಿವಾಟುಗಳು ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಆದರೆ ನೋಟುಗಳಿಂದಲೂ ಆರೋಗ್ಯ ಹಾಳಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು. ಸಾಮಾನ್ಯವಾಗಿ ನೋಟುಗಳು ಒಬ್ಬರ ಕೈಯಿಂದ ಮತ್ತೊಬ್ಬರಿಗೆ ಹೋಗುತ್ತಲೇ ಇರುತ್ತದೆ. ಆದರೆ ಈ ರೀತಿ ಆಗುವಾಗ ಅವುಗಳಲ್ಲಿ ಕೀಟಾಣುಗಳು ಮತ್ತು ವೈರಸ್ ಗಳು ಕಂಡುಬರಬಹುದು. ನ್ಯೂಯಾರ್ಕ್ ಬ್ಯಾಂಕ್ ಒಂದರಲ್ಲಿ ನಡೆಸಿದ ಸಂಶೋಧನೆಯಲ್ಲಿ ಕರೆನ್ಸಿ ನೋಟುಗಳಲ್ಲಿ ವೈರಸ್ಗಳು, ಬ್ಯಾಕ್ಟೀರಿಯಾ ಮತ್ತು ಪ್ರಾಣಿಗಳ ಡಿಎನ್ಎ ಕೂಡ ಕಂಡುಬಂದಿದೆ. ಹಾಗಾಗಿ ನೋಟುಗಳನ್ನು ಮುಟ್ಟಿದ ನಂತರವೂ ಕೂಡ ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆಯುವುದು ನಿಮ್ಮ ಆರೋಗ್ಯವನ್ನು ರಕ್ಷಿಸಲು ಅತ್ಯಗತ್ಯವಾಗಿದೆ.

ಹೋಟೆಲ್ ಗಳಲ್ಲಿರುವ ಮೆನು ಕಾರ್ಡ್ ಗಳು

ರೆಸ್ಟೋರೆಂಟ್ ಅಥವಾ ಹೋಟೆಲ್ ಗಳಲ್ಲಿನ ಮೆನು ಕಾರ್ಡ್ ಗಳನ್ನು ಅನೇಕರು ಮುಟ್ಟುತ್ತಾರೆ. ಹಾಗಾಗಿ ಇದರಿಂದಲೂ ರೋಗಾಣುಗಳು ನಮ್ಮ ದೇಹ ಸೇರಬಹುದು. ಅರಿಜೋನಾ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯ ಪ್ರಕಾರ, ರೆಸ್ಟೋರೆಂಟ್ ಮೆನು ಕಾರ್ಡ್ ಗಳಲ್ಲಿ ಸುಮಾರು 185,000 ರೀತಿಯ ಬ್ಯಾಕ್ಟೀರಿಯಾಗಳಿರುತ್ತವೆ. ಇವುಗಳನ್ನು ಸ್ಪರ್ಶಿಸಿದ ನಂತರ ನೀವು ನಿಮ್ಮ ಕೈಗಳನ್ನು ತೊಳೆಯದಿದ್ದರೆ, ಆಹಾರ ಸೇವಿಸುವಾಗ ಇದು ದೇಹವನ್ನು ಪ್ರವೇಶಿಸುವ ಅಪಾಯವಿರುತ್ತದೆ. ಅದಕ್ಕಾಗಿಯೇ ನೀವು ರೆಸ್ಟೋರೆಂಟ್ ಮೆನುಗಳನ್ನು ಮುಟ್ಟಿದ ತಕ್ಷಣ ಅಥವಾ ಆಹಾರವನ್ನು ತಿನ್ನುವ ಮೊದಲು ನಿಮ್ಮ ಕೈಗಳನ್ನು ತೊಳೆಯುವುದು ಬಹಳ ಮುಖ್ಯ.

ಇದನ್ನೂ ಓದಿ
Image
ಪ್ರೋಟೀನ್ ಹೆಚ್ಚಾದರೆ ಮೂತ್ರಪಿಂಡಕ್ಕೆ ಹಾನಿ
Image
ಕಣ್ಣಿಗೆ ಧೂಳು, ಕಸ ಬಿದ್ದರೆ ಹೀಗೆ ಮಾಡಿ
Image
ಬೇಸಿಗೆಯಲ್ಲಿ ಸ್ನಾನಕ್ಕೆ ಬಿಸಿ ನೀರನ್ನೇ ಆಯ್ಕೆ ಮಾಡಿಕೊಳ್ತೀರಾ?
Image
ನೀವು ಆರೋಗ್ಯವಾಗಿದ್ದೀರಿ ಎಂದು ಬೆಳಗಿನಜಾವದ ಈ ಸೂಚನೆಗಳಿಂದ ತಿಳಿಯಬಹುದು

ಆಸ್ಪತ್ರೆಯಲ್ಲಿನ ವಸ್ತುಗಳು

ಸಾಮಾನ್ಯವಾಗಿ ಪ್ರತಿದಿನ ಅನೇಕ ರೀತಿಯ ರೋಗಿಗಳು ಆಸ್ಪತ್ರೆಗಳಿಗೆ ಬರುತ್ತಾರೆ. ಅಲ್ಲಿನ ವಸ್ತುಗಳನ್ನು ಮುಟ್ಟಿರುತ್ತಾರೆ ಹಾಗಾಗಿ ಆಸ್ಪತ್ರೆಗಳ ಒಳಗೆ ಅನೇಕ ವೈರಸ್ಗಳು ಮತ್ತು ಕೀಟಾಣುಗಳ ಇರುವ ಸಾಧ್ಯತೆ ಇರುತ್ತದೆ. ಹಾಗಾಗಿ ಆಸ್ಪತ್ರೆಯ ಬೆಂಚುಗಳು, ಡೋರ್ ಹ್ಯಾಂಡಲ್ ಗಳು, ಎಕ್ಸ್-ರೇ ಯಂತ್ರಗಳು, ಬಯೋಮೆಟ್ರಿಕ್ ಪ್ಯಾಡ್ ಗಳು ಮುಂತಾದ ವಸ್ತುಗಳನ್ನು ಮುಟ್ಟಿದ ತಕ್ಷಣ ಕೈಗಳನ್ನು ತೊಳೆಯುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು.

ಇದನ್ನೂ ಓದಿ: ಮಾವಿನ ಹಣ್ಣಲ್ಲ, ಹೂವುಗಳನ್ನು ಎಂದಾದರೂ ಸೇವನೆ ಮಾಡಿದ್ದೀರಾ? ಇದರಿಂದ ಸಿಗುವ ಉಪಯೋಗವೇನು ತಿಳಿದುಕೊಳ್ಳಿ

ಬಸ್, ರೈಲು, ಮೆಟ್ರೋಗಳಲ್ಲಿ ವಸ್ತುಗಳು

ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಹಾಗಾಗಿ ಬಸ್ಸು, ರೈಲು, ಮೆಟ್ರೋ ಗಳಲ್ಲಿನ ಹ್ಯಾಂಡಲ್ , ಆಸನ, ಬಾಗಿಲಿನ ಹಿಡಿತಗಳನ್ನು ಅನೇಕರು ಸ್ಪರ್ಶಿಸುತ್ತಾರೆ. ಇದನ್ನು ನಾವು ಮುಟ್ಟುವುದರಿಂದ ರೋಗಾಣುಗಳು ಹರಡಬಹುದು. ಇದಕ್ಕೆ ಪೂರಕವೆಂಬಂತೆ, ಕೊಲಂಬಿಯಾ ವಿಶ್ವವಿದ್ಯಾಲಯ ಈ ಬಗ್ಗೆ ಒಂದು ಸಂಶೋಧನೆ ನಡೆಸಿದ್ದು ಅದರ ಪ್ರಕಾರ, ಅನೇಕ ರೋಗಾಣುಗಳು ಪ್ರಯಾಣಿಕರ ಕೈಗಳಿಂದ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಬಸ್ ಹ್ಯಾಂಡಲ್ ಗಳು ಮತ್ತು ಮೆಟ್ರೋ ಗೇಟ್ ಗಳನ್ನು ಸ್ಪರ್ಶಿಸಿದ ತಕ್ಷಣ ಕೈಗಳನ್ನು ತೊಳೆಯುವುದು ಅಥವಾ ಸ್ಯಾನಿಟೈಸರ್ ಬಳಕೆ ಮಾಡುವುದು ಬಹಳ ಮುಖ್ಯ.

ಪೆನ್ನು, ಪೆನ್ಸಿಲ್ ಗಳು

ವಾಲ್ ಸ್ಟ್ರೀಟ್ ಜರ್ನಲ್ ಅಧ್ಯಯನದ ಪ್ರಕಾರ, ಕಚೇರಿ ಅಥವಾ ಇನ್ನಿತರ ಆಫೀಸ್ ಗಳಲ್ಲಿ ಒಂದು ಪೆನ್ನನ್ನು ಹಲವಾರು ಜನ ಬಳಕೆ ಮಾಡುತ್ತಾರೆ. ಈ ರೀತಿ ಬಳಕೆಯಾಗುವ ಪೆನ್ ಟಾಯ್ಲೆಟ್ ಸೀಟ್ ಗಿಂತ 10 ಪಟ್ಟು ಹೆಚ್ಚು ಕೀಟಾಣುಗಳನ್ನು ಹೊಂದಿರುತ್ತದೆ. ಹಾಗಾಗಿ ಕಚೇರಿ, ಬ್ಯಾಂಕ್ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪೆನ್ನುಗಳನ್ನು ಬಳಸುವಾಗ ವಿಶೇಷ ಕಾಳಜಿ ವಹಿಸಬೇಕು. ಬೇರೊಬ್ಬರ ಪೆನ್ ಬಳಸಿದ ತಕ್ಷಣ ಕೈಗಳನ್ನು ತೊಳೆಯುವುದು ಬಹಳ ಉತ್ತಮ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ