ನೀವು ಆರೋಗ್ಯವಾಗಿದ್ದೀರಿ ಎಂದು ಬೆಳಗಿನಜಾವದ ಈ ಸೂಚನೆಗಳಿಂದ ತಿಳಿಯಬಹುದು
ವಾಕಿಂಗ್, ವ್ಯಾಯಾಮ, ಧ್ಯಾನ, ಯೋಗ ಹೀಗೆ ನಾನಾ ರೀತಿಯ ದೈಹಿಕ ಚಟುವಟಿಕೆಗಳನ್ನು ನಡೆಸುತ್ತೇವೆ. ಅದರಿಂದ ಲಾಭಗಳನ್ನು ಪಡೆಯುತ್ತೇವೆ. ಆದರೆ ಎಂದಾದರೂ ನನ್ನ ದೇಹ ಆರೋಗ್ಯವಾಗಿ ಇದೆಯೋ? ಇಲ್ಲವೋ? ಎಂದು ಯೋಚನೆ ಮಾಡಿದ್ದೀರಾ? ಪ್ರತಿನಿತ್ಯ ನಮ್ಮನ್ನು ನಾವು ಸರಿಯಾಗಿ ವೀಕ್ಷಿಸಿದಲ್ಲಿ ಅಥವಾ ನಮ್ಮ ದೇಹ ನೀಡುವ ಸೂಚನೆಗಳಿಂದಲೇ ನಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಬಹುದು. ಹಾಗಾದರೆ ಯಾವ ರೀತಿಯ ಲಕ್ಷಣಗಳು ನಮ್ಮ ಆರೋಗ್ಯದ ಭವಿಷ್ಯ ಹೇಳುತ್ತವೆ ಎಂಬುದನ್ನು ತಿಳಿದುಕೊಳ್ಳಿ.

ಇತ್ತೀಚಿನ ದಿನಗಳಲ್ಲಿ ನಾವು ನಮ್ಮ ಆರೋಗ್ಯ (health) ಕಾಪಾಡಿಕೊಳ್ಳಲು ಹಲವಾರು ರೀತಿಯಲ್ಲಿ ಪ್ರಯತ್ನ ಪಡುತ್ತಿದ್ದೇವೆ. ಆದರೆ ನಮ್ಮ ಆರೋಗ್ಯ ಹೇಗಿದೆ? ನಮಗೆ ಯಾವ ರೀತಿಯ ಸಮಸ್ಯೆಗಳು ಇರಬಹುದು ಎಂಬುದರ ಬಗ್ಗೆ ಯಾರು ಕೂಡ ಯೋಚಿಸುವುದಿಲ್ಲ. ವಾಕಿಂಗ್ (walking), ವ್ಯಾಯಾಮ (exercise), ಧ್ಯಾನ (meditation), ಯೋಗ ಹೀಗೆ ನಾನಾ ರೀತಿಯ ದೈಹಿಕ ಚಟುವಟಿಕೆಗಳನ್ನು ನಡೆಸುತ್ತೇವೆ. ಅದರಿಂದ ಲಾಭಗಳನ್ನು ಪಡೆಯುತ್ತೇವೆ. ಆದರೆ ಎಂದಾದರೂ ನನ್ನ ದೇಹ ಆರೋಗ್ಯವಾಗಿ ಇದೆಯೋ? ಇಲ್ಲವೋ? ಎಂದು ಯೋಚನೆ ಮಾಡಿದ್ದೀರಾ? ಪ್ರತಿನಿತ್ಯ ನಮ್ಮನ್ನು ನಾವು ಸರಿಯಾಗಿ ವೀಕ್ಷಿಸಿದಲ್ಲಿ ಅಥವಾ ನಮ್ಮ ದೇಹ ನೀಡುವ ಸೂಚನೆಗಳಿಂದಲೇ ನಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಬಹುದು. ಹಾಗಾದರೆ ಯಾವ ರೀತಿಯ ಲಕ್ಷಣಗಳು ನಮ್ಮ ಆರೋಗ್ಯದ ಭವಿಷ್ಯ ಹೇಳುತ್ತವೆ ಎಂಬುದನ್ನು ತಿಳಿದುಕೊಳ್ಳಿ.
ಸಾಮಾನ್ಯವಾಗಿ ಪ್ರತಿನಿತ್ಯ ಬೆಳಗಿನ ಜಾವದಲ್ಲಿ ನಮ್ಮಲ್ಲಿ ಕಂಡು ಬರುವ ಸೂಚನೆಗಳಿಂದ ನಾವು ಆರೋಗ್ಯವಾಗಿ ಇದ್ದಿವೋ ಅಥವಾ ಇಲ್ಲವೋ ಎಂಬುದನ್ನು ತಿಳಿಯಬಹುದು. ಈ ಬಗ್ಗೆ ಜ್ಞಾನೇಶ ಕುಮಾರಸ್ವಾಮಿ ಎನ್ನುವವರು ತಮ್ಮ ಇನ್ಸ್ಟಾ ಖಾತೆಯಲ್ಲಿ (fit_with_gnani) ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು ಅವರ ಪ್ರಕಾರ, ಬೆಳಿಗ್ಗೆ ನಮ್ಮ ದೇಹದಲ್ಲಿ ಕಂಡು ಬರುವಂತಹ ಸೂಚನೆಗಳಿಂದ ನಮ್ಮ ಆರೋಗ್ಯವನ್ನು ನಿರ್ಧರಿಸಬಹುದು. ಅವು ಯಾವುದೆಂದರೆ;
View this post on Instagram
*ನಾಲಿಗೆ ಮೇಲೆ ಬಿಳಿ ಪದರವಿಲ್ಲದೆ ಗುಲಾಬಿ ಬಣ್ಣದಲ್ಲಿರುವುದು ಆರೋಗ್ಯವಾಗಿರುವುದರ ಸೂಚನೆಯಾಗಿದೆ.
*ಯಾವ ರೀತಿಯ ಮೈಕೈ ನೋವಿಲ್ಲದೆಯೇ ಫ್ರೆಶ್ ಆಗಿ ಏಳುವುದು. ಜೊತೆಗೆ ಆಯಾಸ, ಸುಸ್ತು ಇಲ್ಲದಿರುವುದು.
*ಪುರುಷರಲ್ಲಿ ನಿಮಿರುವಿಕೆ ಇರುವುದು.
*ಬಾಯಿ ವಾಸನೆ ಇಲ್ಲದಿರುವುದು ಅಥವಾ ಕಡಿಮೆ ವಾಸನೆ ಇರುವುದು.
*ಮೂಗು ಕಟ್ಟುವಿಕೆ ಇಲ್ಲದಿರುವುದು.
*ಹೊಟ್ಟೆ ಉಬ್ಬರ ಇಲ್ಲದಿರುವುದು.
*ಮುಖದ ಊತ ಇಲ್ಲದಿರುವುದು.
*ಬೆಳಿಗ್ಗೆ ಏಳುವಾಗ ಸ್ವಲ್ಪ ಹಸಿವು ಉಂಟಾಗುವುದು.
*ರಾತ್ರಿ ಸಮಯದಲ್ಲಿ ಬಿದ್ದಂತಹ ಕನಸನ್ನು ನೆನಪಿಸಿಕೊಳ್ಳಲು ಸಾಧ್ಯವಾಗುವುದು
*ಬೆಳಿಗ್ಗೆ ಎದ್ದ ತಕ್ಷಣ ಉತ್ಸಾಹದಿಂದ ಇರುವುದು.
*ಮೂತ್ರ ಮತ್ತು ಮಲ ವಿಸರ್ಜನೆಗೆ ಅರ್ಜೆಂಟ್ ಆಗುವುದು.
ಇದನ್ನೂ ಓದಿ: ನಿಮ್ಮ ಮಕ್ಕಳಿಗೆ ಬಾಟಲ್ ಹಾಲು ಕೊಡುವುದನ್ನು ಈಗಲೇ ನಿಲ್ಲಿಸಿ
ಬೆಳಿಗ್ಗೆ ಕಂಡು ಬರುವ ಈ ಸೂಚನೆ ನೀವು ಆರೋಗ್ಯವಾಗಿದ್ದೀರಿ ಎಂಬುದನ್ನು ಸೂಚಿಸುತ್ತದೆ. ನಿಮಗೂ ಈ ರೀತಿಯ ಲಕ್ಷಣಗಳು ಕಂಡು ಬರುತ್ತಿದ್ದರೆ ನೀವು ಆರೋಗ್ಯವಾಗಿದ್ದೀರಿ ಎಂದರ್ಥ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ