ಟ್ರಯಲ್ ನೋಡಿದ ಬಟ್ಟೆಗಳನ್ನು ನಾವು ಹಾಕಿಕೊಂಡರೆ ಯಾವ ರೋಗ ಬರುತ್ತೆ ನೋಡಿ
ಶಾಪಿಂಗ್ ಮಾಲ್ ಗಳಲ್ಲಿ ಡ್ರೆಸ್ ಗಳನ್ನು ಸೆಲೆಕ್ಟ್ ಮಾಡಿ ಟ್ರಯಲ್ ಮಾಡಿರುತ್ತೀರಿ, ಆದರೆ ಇಂತಹ ಸಮಯದಲ್ಲಿ ಸ್ವಲ್ಪ ಜಾಗರೂಕರಾಗಿರಿ ಏಕೆಂದರೆ ನಿಮ್ಮ ಹಾಗೆಯೇ ನೀವು ಸೆಲೆಕ್ಟ್ ಮಾಡಿದ ಬಟ್ಟೆಗಳನ್ನು ಬಹಳ ಜನ ಹಾಕಿಕೊಂಡು ನೋಡಿರುತ್ತಾರೆ. ಒಂದು ವೇಳೆ ಅವರಿಗೆ ಯಾವುದಾದರೂ ಸೋಂಕು ಅಥವಾ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಇದ್ದಲ್ಲಿ ಅದು ನಿಮಗೂ ಬರುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಟ್ರಯಲ್ ನೋಡಲೇಬಾರದು ಎಂಬುದಲ್ಲ. ಬದಲಾಗಿ ಬಟ್ಟೆಗಳನ್ನು ಹಾಕಿಕೊಳ್ಳುವಾಗ ಸ್ವಲ್ಪ ಜಾಗೃತೆ ವಹಿಸಬೇಕಾಗುತ್ತದೆ. ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಸಣ್ಣ ಬಟ್ಟೆ ಅಂಗಡಿಗಳಲ್ಲಿಯೂ ಟ್ರಯಲ್ ರೂಮ್ (trial room) ಗಳನ್ನು ಮಾಡಿರುತ್ತಾರೆ. ಇದು ನಮಗೆ ಅನುಕೂಲಕರವಾಗಿದ್ದರೂ ಕೂಡ ಇದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಬರಬಹುದು ಎಂಬುದು ನಿಮಗೆ ತಿಳಿದಿದೆಯೇ? ಹೌದು. ಅದರಲ್ಲಿಯೂ ಈ ಬೇಸಿಗೆ ಕಾಲದಲ್ಲಿ ನಾನಾ ರೀತಿಯ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಒಬ್ಬರಿಂದ ಒಬ್ಬರಿಗೆ ಹರಡಬಹುದಾಗಿದೆ. ಹಾಗಾಗಿ ಬಟ್ಟೆ ಅಂಗಡಿಗೆ ಹೋದಾಗ ಬಟ್ಟೆಗಳನ್ನು ಟ್ರಯಲ್ ಮಾಡುವಾಗ ಹೆಚ್ಚು ಜಾಗೃತೆ ವಹಿಸಬೇಕಾಗುತ್ತದೆ. ಹಾಗದರೆ ಬೇರೆಯವರು ಟ್ರಯಲ್ ನೋಡಿದ ಬಟ್ಟೆಗಳನ್ನು ಮತ್ತೆ ನಾವು ಹಾಕಿ ನೋಡುವುದು ತಪ್ಪೇ? ಇದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಬರಬಹುದು ಎಂಬುದನ್ನು ತಿಳಿದುಕೊಳ್ಳಿ.
ಶಾಪಿಂಗ್ ಮಾಲ್ ಗಳಲ್ಲಿ ಡ್ರೆಸ್ ಗಳನ್ನು ಸೆಲೆಕ್ಟ್ ಮಾಡಿ ಟ್ರಯಲ್ ಮಾಡಿರುತ್ತೀರಿ, ಆದರೆ ಇಂತಹ ಸಮಯದಲ್ಲಿ ಸ್ವಲ್ಪ ಜಾಗರೂಕರಾಗಿರಿ ಏಕೆಂದರೆ ನಿಮ್ಮ ಹಾಗೆಯೇ ನೀವು ಸೆಲೆಕ್ಟ್ ಮಾಡಿದ ಬಟ್ಟೆಗಳನ್ನು ಬಹಳ ಜನ ಹಾಕಿಕೊಂಡು ನೋಡಿರುತ್ತಾರೆ. ಒಂದು ವೇಳೆ ಅವರಿಗೆ ಯಾವುದಾದರೂ ಸೋಂಕು ಅಥವಾ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಇದ್ದಲ್ಲಿ ಅದು ನಿಮಗೂ ಬರುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಟ್ರಯಲ್ ನೋಡಲೇಬಾರದು ಎಂಬುದಲ್ಲ. ಬದಲಾಗಿ ಬಟ್ಟೆಗಳನ್ನು ಹಾಕಿಕೊಳ್ಳುವಾಗ ಸ್ವಲ್ಪ ಜಾಗೃತೆ ವಹಿಸಬೇಕಾಗುತ್ತದೆ. ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಇತರರು ಪರೀಕ್ಷಿಸಿದ ಅಥವಾ ಧರಿಸಿದ ಬಟ್ಟೆಗಳನ್ನು ಪ್ರಯತ್ನಿಸುವ ಮೊದಲು ಕೆಲವು ಸಲಹೆಗಳನ್ನು ಅನುಸರಿಸಿ:
*ಸಾಮಾನ್ಯವಾಗಿ ಟ್ರಯಲ್ ರೂಮ್ ಗಳಲ್ಲಿ ಬಟ್ಟೆ ಬದಲಿಸುವಾಗ ಫುಲ್ ಬನಿಯನ್ಗಳಿಗೆ ಆದ್ಯತೆ ನೀಡಿ.
*ಟವೆಲ್, ಟೋಪಿ ಅಥವಾ ಕೂದಲಿನ ಪರಿಕರಗಳಂತಹ ವೈಯಕ್ತಿಕ ವಸ್ತುಗಳನ್ನು ಟ್ರಯಲ್ ನೋಡುವುದನ್ನು ತಪ್ಪಿಸಿ.
*ಟ್ರಯಲ್ ಮಾಡಿ ಮನೆಗೆ ಬಂದ ತಕ್ಷಣ ಸ್ನಾನ ಮಾಡಿ ಜೊತೆಗೆ ಇನ್ನಿತರ ನೈರ್ಮಲ್ಯಕರ ಅಭ್ಯಾಸವನ್ನು ರೂಢಿಸಿಕೊಳ್ಳಿ.
*ಕೆಲವು ಡ್ರೆಸ್ ಕಂಪನಿಯವರು ಬಟ್ಟೆಗಳಿಗೆ ಕೆಮಿಕಲ್ ಸೇರಿಸಿರುತ್ತಾರೆ. ಹಾಗಾಗಿ ಯಾವುದೇ ಬಟ್ಟೆಯನ್ನು ಖರೀದಿಸಿ ತಂದಾಗ ಅದನ್ನು ಬಿಸಿ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ.
*ಮನೆಗೆ ತಂದ ಬಟ್ಟೆಗಳನ್ನು ಧರಿಸುವ ಮೊದಲು ತೊಳೆಯಿರಿ ಅಥವಾ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಬಳಿಕ ಆ ಬಟ್ಟೆಗಳನ್ನು ಧರಿಸಿರಿ.
ಇದನ್ನೂ ಓದಿ: ನೀರು ಕಡಿಮೆ ಕುಡಿಯುತ್ತೀರಾ? ಕಿಡ್ನಿ ಹಾಳಾಗಬಹುದು ಎಚ್ಚರ
ಬೇರೆಯವರು ಟ್ರಯಲ್ ನೋಡಿದ ಬಟ್ಟೆಗಳನ್ನು ಹಾಕಿಕೊಂಡರೆ ಏನಾಗುತ್ತೆ?
1. ಗುಳ್ಳೆಗಳು: ಬಟ್ಟೆಗಳನ್ನು ಹಲವಾರು ಮಂದಿ ಹಾಕಿ ನೋಡಿರುತ್ತಾರೆ. ಅವರಲ್ಲಿ ಯಾರಿಗಾದರೂ ಮೈಯಲ್ಲಿ ಪದೇ ಪದೇ ಗುಳ್ಳೆಗಳು ಕಂಡು ಬರುತ್ತಿದ್ದರೆ ಅದು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹರಡಬಹುದು. ಏಕೆಂದರೆ ಗುಳ್ಳೆಗಳು ಒಂದು ರೀತಿಯ ಸೋಂಕಾಗಿದ್ದು 72 ಗಂಟೆಗಳ ವರೆಗೆ ಬದುಕಬಲ್ಲದು, ಹಾಗಾಗಿ ಬಟ್ಟೆ ಟ್ರಯಲ್ ನೋಡುವಾಗ ಜಾಗೃತೆ ವಹಿಸಿ.
2. ಹೇನು: ಕಜ್ಜಿ, ಗುಳ್ಳೆಯಂತೆ, ಹೇನುಗಳು ಸಹ ಅಲ್ಪಾವಧಿಯವರೆಗೆ ಬದುಕಬಲ್ಲವು. ಒಬ್ಬರು ಧರಿಸಿದ ಬಟ್ಟೆಗಳನ್ನು, ಅದರಲ್ಲಿಯೂ ಟೋಪಿ ಇನ್ನಿತರ ವಸ್ತುಗಳನ್ನು ಪ್ರಯತ್ನಿಸುವುದು ಹೇನುಗಳ ಸೋಂಕಿಗೆ ಕಾರಣವಾಗಬಹುದು.
3. ರಿಂಗ್ ವರ್ಮ್: ಇದು ಒಂದು ಶಿಲೀಂಧ್ರದ ಸೋಂಕಾಗಿದ್ದು, ಬಟ್ಟೆ ಅಥವಾ ವೈಯಕ್ತಿಕ ವಸ್ತುಗಳ ಸಂಪರ್ಕದಿಂದ ಹರಡಬಹುದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ