ಸ್ತನ ಕ್ಯಾನ್ಸರ್ ತಡೆಯಲು ಬೇಸಿಗೆಯಲ್ಲಿ ಸಿಗುವ ಈ ಹಣ್ಣನ್ನು ತಪ್ಪದೆ ಸೇವನೆ ಮಾಡಿ
ತಾಳೆ ಹಣ್ಣುಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿರುತ್ತದೆ. ಜೊತೆಗೆ ದೇಹಕ್ಕೂ ತುಂಬಾ ಒಳ್ಳೆಯದು. ಈ ಹಣ್ಣುಗಳು ಬೇಸಿಗೆಯ ಶಾಖದಿಂದ ನಮ್ಮನ್ನು ರಕ್ಷಿಸುವುದಲ್ಲದೆ ದೇಹಕ್ಕೆ ಅಗತ್ಯವಿರುವ ವಿಟಮಿನ್ ಗಳನ್ನು ನೀಡುತ್ತದೆ. ಇನ್ನು ಈ ಹಣ್ಣಿನಲ್ಲಿ ಸತು ಮತ್ತು ಪೊಟ್ಯಾಸಿಯಮ್ ನಂತಹ ಖನಿಜಗಳಿವೆ. ಹಾಗಾಗಿ ಬೇಸಿಗೆಯಲ್ಲಿ ತಾಳೆ ಹಣ್ಣುಗಳನ್ನು ಆಗಾಗ ಸೇವನೆ ಮಾಡುವುದರಿಂದ ನಿರ್ಜಲೀಕರಣ ಸಮಸ್ಯೆಯನ್ನು ಕೂಡ ತಡೆಯಬಹುದು. ಹಾಗಾದರೆ ಈ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಯಾವ ರೀತಿಯ ಉಪಯೋಗವಿದೆ ಎಂಬುದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

ಬೇಸಿಗೆಯಲ್ಲಿ ಮಾತ್ರ ಲಭ್ಯವಿರುವ ತಾಳೆ ಹಣ್ಣು (Ice Apple) ಅಥವಾ ಐಸ್ ಸೇಬುಗಳನ್ನು ನೀವು ನೋಡಿರಬಹುದು. ಬೇಸಿಗೆ ಬಂದಾಗ, ಈ ಹಣ್ಣುಗಳನ್ನು ಹೆಚ್ಚಾಗಿ ರಸ್ತೆ ಬದಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ತಾಳೆ ಹಣ್ಣುಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿರುತ್ತದೆ. ಜೊತೆಗೆ ದೇಹಕ್ಕೂ ತುಂಬಾ ಒಳ್ಳೆಯದು. ಈ ಹಣ್ಣುಗಳು ಬೇಸಿಗೆಯ ಶಾಖದಿಂದ ನಮ್ಮನ್ನು ರಕ್ಷಿಸುವುದಲ್ಲದೆ ದೇಹಕ್ಕೆ ಅಗತ್ಯವಿರುವ ವಿಟಮಿನ್ ಗಳನ್ನು ನೀಡುತ್ತದೆ. ಇನ್ನು ಈ ಹಣ್ಣಿನಲ್ಲಿ ಸತು ಮತ್ತು ಪೊಟ್ಯಾಸಿಯಮ್ ನಂತಹ ಖನಿಜಗಳಿವೆ. ಹಾಗಾಗಿ ಬೇಸಿಗೆಯಲ್ಲಿ ತಾಳೆ ಹಣ್ಣುಗಳನ್ನು ಆಗಾಗ ಸೇವನೆ ಮಾಡುವುದರಿಂದ ನಿರ್ಜಲೀಕರಣ ಸಮಸ್ಯೆಯನ್ನು ಕೂಡ ತಡೆಯಬಹುದು. ಹಾಗಾದರೆ ಈ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಯಾವ ರೀತಿಯ ಉಪಯೋಗವಿದೆ ಎಂಬುದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.
- ತಾಳೆ ಹಣ್ಣು ಅಥವಾ ಐಸ್ ಸೇಬುಗಳಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಸತು ಮತ್ತು ವಿಟಮಿನ್ ಬಿ ನಂತಹ ಸಾಕಷ್ಟು ಪೋಷಕಾಂಶಗಳಿವೆ. ಇದು ಆರೋಗ್ಯ ಕಾಪಾಡಿಕೊಳ್ಳಲು ವರದಾನವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರಿಗೆ ಸಹ, ತಾಳೆ ಹಣ್ಣುಗಳು ತುಂಬಾ ಒಳ್ಳೆಯದು.
- ಈ ಹಣ್ಣುಗಳ ಸೇವನೆಯಿಂದ ಆಮ್ಲೀಯತೆಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ಜೊತೆಗೆ ಹೃದಯರಕ್ತನಾಳದ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ ಎಂದು ವೈದ್ಯರು ಹೇಳುತ್ತಾರೆ.
- ಆರೋಗ್ಯ ತಜ್ಞರ ಪ್ರಕಾರ, ತಾಳೆ ಹಣ್ಣು ಆಂಥೋಸಯಾನಿನ್ ನಂತಹ ಸ್ತನ ಕ್ಯಾನ್ಸರ್ ಕೋಶಗಳನ್ನು ಅಭಿವೃದ್ಧಿಪಡಿಸುವ ವಿವಿಧ ಗೆಡ್ಡೆಗಳು, ಫೈಟೊಕೆಮಿಕಲ್ ಗಳನ್ನು ತಡೆಯುತ್ತದೆ ಹಾಗಾಗಿ ಮಹಿಳೆಯರು ಈ ಹಣ್ಣುಗಳ ಸೇವನೆ ಮಾಡಬೇಕು.
- ಹಿಮೋಗ್ಲೋಬಿನ್ ಕಡಿಮೆ ಇರುವವರಿಗೆ ಈ ಹಣ್ಣು ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ರಕ್ತಹೀನತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
- ತಾಳೆ ಹಣ್ಣು, ಬೇಸಿಗೆಯಲ್ಲಿ ಉಂಟಾಗುವ ಚರ್ಮದ ಕಾಯಿಲೆಗಳನ್ನು ತಡೆಗಟ್ಟಲು ಬಹಳ ಉಪಯುಕ್ತವಾಗಿವೆ. ಈ ಹಣ್ಣುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಮಲಬದ್ಧತೆ ಮತ್ತು ಅತಿಸಾರ ಸಮಸ್ಯೆ ಇರುವವರಿಗೆ ತುಂಬಾ ಒಳ್ಳೆಯದು.
- ತಾಳೆ ಹಣ್ಣುಗಳ ಸೇವನೆ ಮಾಡುವುದರಿಂದ ಕರುಳಿನಲ್ಲಿನ ಹುಣ್ಣುಗಳನ್ನು ಸಹ ಗುಣಪಡಿಸಬಹುದು. ನಾಲಿಗೆಯ ಮೇಲೆ ಆಗಾಗ ಕಂಡು ಬರುವ ಹುಣ್ಣುಗಳನ್ನು ಕೂಡ ಕಡಿಮೆ ಮಾಡುವ ಶಕ್ತಿ ಈ ಹಣ್ಣಿಗಿದೆ.
- ಬೇಸಿಗೆಯಲ್ಲಿ ಹೆಚ್ಚಾಗಿ ಕಂಡು ಬರುವ ಮೊಡವೆಗಳಿಂದ ಮುಕ್ತಿ ಪಡೆಯುವುದರ ಜೊತೆಗೆ ಕೂದಲು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಹಣ್ಣುಗಳ ಸೇವನೆ ಮಾಡಬಹುದು. ಅಲ್ಲದೆ ತಾಳೆ ಹಣ್ಣುಗಳು ಬಿಸಿಲಿನಿಂದ ಉಂಟಾಗುವ ಬೆವರು ಗುಳ್ಳೆಗಳು ಮತ್ತು ಇತರ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಹಣ್ಣಿನಲ್ಲಿರುವ ನೀರನ್ನು ಚರ್ಮಕ್ಕೆ ಹಚ್ಚಿದರೆ, ಬೆವರು ಬೇಗನೆ ಕಡಿಮೆಯಾಗುತ್ತದೆ.
- ಎದೆಹಾಲುಣಿಸುವ ತಾಯಂದಿರ ಆರೋಗ್ಯಕ್ಕೆ ಈ ಹಣ್ಣು ಬಹಳ ಒಳ್ಳೆಯದು. ಇದಲ್ಲದೆ, ಮಗುವಿಗೂ ಪೋಷಕಾಂಶಗಳು ಚೆನ್ನಾಗಿ ಸಿಗುತ್ತವೆ. ಈ ಹಣ್ಣಿನ ಸೇವನೆಯಿಂದ ಮಹಿಳೆಯರಲ್ಲಿ ಕಂಡು ಬರುವ ಬಿಳಿ ಮುಟ್ಟಿನ ಸಮಸ್ಯೆಯೂ ಕಡಿಮೆಯಾಗುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:48 am, Thu, 20 March 25