Left-Handers: ಎಡಗೈ ಹೆಚ್ಚಾಗಿ ಬಳಸುವವರಿಗೆ ರೋಗಗಳ ಅಪಾಯ ಹೆಚ್ಚು; ಸಂಶೋಧನೆಯಿಂದ ಬಹಿರಂಗ
ಜರ್ನಲ್ ಆಫ್ ಪಬ್ಲಿಕ್ ಹೆಲ್ತ್ ನಲ್ಲಿ ಪ್ರಕಟವಾದ ಅಧ್ಯಯನವು ಇತರರಿಗೆ ಹೋಲಿಸಿದರೆ ಎಡಗೈ ಬಳಸುವ ಜನರು ಕೆಲವು ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಾಗಿ ಹೊಂದಿದ್ದಾರೆ ಎಂದು ಬಹಿರಂಗಪಡಿಸಿದೆ. ಇದಕ್ಕೆ ಸ್ಪಷ್ಟ ಕಾರಣ ತಿಳಿದಿಲ್ಲವಾದರೂ ಸಂಶೋಧಕರು ಎಡಗೈಯನ್ನು ಹೆಚ್ಚಾಗಿ ಬಳಕೆ ಮಾಡುವ ಜನರಲ್ಲಿ ರೋಗಗಳ ಸಂಭವ ಹೆಚ್ಚು ಎಂದು ಕಂಡುಕೊಂಡಿದ್ದಾರೆ. ಆದರೆ ಇದು ಕಂಡುಬರಲು ಅನೇಕ ಕಾರಣಗಳಿರಬಹುದು. ಆನುವಂಶಿಕ ಕಾರಣ, ಅಂದರೆ ಆನುವಂಶಿಕ ಸಮಸ್ಯೆ. ಜೊತೆಗೆ ಇದು ಮೆದುಳಿನ ಸಂಪರ್ಕ ಮತ್ತು ಪರಿಸರದ ಅಂಶಗಳಿಂದಾಗಿಯೂ ಇರಬಹುದು. ಹಾಗಾದರೆ ಇವರಲ್ಲಿ ಹೆಚ್ಚಾಗಿ ಕಂಡು ಬರುವ ಸಮಸ್ಯೆಗಳು ಯಾವವು? ಇಲ್ಲಿದೆ ಮಾಹಿತಿ.
ಮನುಷ್ಯನಿಗೆ ಎರಡು ಕೈಗಳಿರುತ್ತವೆ. ಅದರಲ್ಲಿ ಒಂದು ಪ್ರಾಥಮಿಕ ಮತ್ತೊಂದು ದ್ವಿತೀಯಕ. ಅಂದರೆ ವ್ಯಕ್ತಿ ಯಾವಾಗಲೂ ಒಂದು ಕೈಯಿಂದ ಹೆಚ್ಚು ಕೆಲಸವನ್ನು ಮಾಡುತ್ತಾನೆ. ಜನಸಂಖ್ಯೆಯ ಬಹುಪಾಲು ಜನರು ಹೆಚ್ಚಾಗಿ ಬಲಗೈ ಬಳಸುತ್ತಾರೆ. ಎಡಗೈಯನ್ನು ಮಿತವಾಗಿ ಬಳಸುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದ ಜನಸಂಖ್ಯೆಯ ಕೇವಲ 10 ಪ್ರತಿಶತದಷ್ಟು ಜನರು ಮಾತ್ರ ತಮ್ಮ ಎಡಗೈಯನ್ನು ಬರೆಯಲು, ತಿನ್ನಲು ಮತ್ತು ಇತರ ಕಾರ್ಯಗಳಿಗೆ ಬಳಸುತ್ತಾರೆ. 90 ರಷ್ಟು ಜನರು ಬಲಗೈಯನ್ನು ಬಳಸುತ್ತಾರೆ. ಇದಕ್ಕೆ ಪೂರಕವಾಗಿ ಇತ್ತೀಚೆಗೆ ಒಂದು ಅಧ್ಯಯನ ನಡೆಸಲಾಗಿದ್ದು ಎಡಗೈಯನ್ನು ಹೆಚ್ಚಾಗಿ ಬಳಸುವವರ ಮೇಲೆ ಈ ಸಂಶೋಧನೆಯನ್ನು ನಡೆಸಲಾಗಿದೆ. ಇದರ ಫಲಿತಾಂಶದ ಪ್ರಕಾರ ಎಲ್ಲಾ ಕೆಲಸಗಳಿಗೂ ಎಡಗೈ ಒಳಸುವ ವ್ಯಕ್ತಿಗಳು ಹೆಚ್ಚು ರೋಗಗಳಿಗೆ ತುತ್ತಾಗುವ ಅಪಾಯವಿದೆ ಎಂದು ತೋರಿಸಿದೆ.
ಜರ್ನಲ್ ಆಫ್ ಪಬ್ಲಿಕ್ ಹೆಲ್ತ್ ನಲ್ಲಿ ಪ್ರಕಟವಾದ ಅಧ್ಯಯನವು ಇತರರಿಗೆ ಹೋಲಿಸಿದರೆ ಎಡಗೈ ಬಳಸುವ ಜನರು ಕೆಲವು ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಾಗಿ ಹೊಂದಿದ್ದಾರೆ ಎಂದು ಬಹಿರಂಗಪಡಿಸಿದೆ. ಇದಕ್ಕೆ ಸ್ಪಷ್ಟ ಕಾರಣ ತಿಳಿದಿಲ್ಲವಾದರೂ ಸಂಶೋಧಕರು ಎಡಗೈಯನ್ನು ಹೆಚ್ಚಾಗಿ ಬಳಕೆ ಮಾಡುವ ಜನರಲ್ಲಿ ರೋಗಗಳ ಸಂಭವ ಹೆಚ್ಚು ಎಂದು ಕಂಡುಕೊಂಡಿದ್ದಾರೆ. ಆದರೆ ಇದು ಕಂಡುಬರಲು ಅನೇಕ ಕಾರಣಗಳಿರಬಹುದು. ಆನುವಂಶಿಕ ಕಾರಣ, ಅಂದರೆ ಆನುವಂಶಿಕ ಸಮಸ್ಯೆ. ಜೊತೆಗೆ ಇದು ಮೆದುಳಿನ ಸಂಪರ್ಕ ಮತ್ತು ಪರಿಸರದ ಅಂಶಗಳಿಂದಾಗಿಯೂ ಇರಬಹುದು. ಹಾಗಾದರೆ ಇವರಲ್ಲಿ ಹೆಚ್ಚಾಗಿ ಕಂಡು ಬರುವ ಸಮಸ್ಯೆಗಳು ಯಾವವು? ಇಲ್ಲಿದೆ ಮಾಹಿತಿ.
ಸ್ತನ ಕ್ಯಾನ್ಸರ್ ಬರುವ ಅಪಾಯ ಹೆಚ್ಚು;
ಬಲಗೈಯಿಂದ ಕೆಲಸ ಮಾಡುವ ಮಹಿಳೆಯರಿಗಿಂತ ಎಡಗೈಯಿಂದ ಕೆಲಸ ಮಾಡುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವ ಅಪಾಯ ಹೆಚ್ಚು ಎಂದು ಸಂಶೋಧನೆ ತೋರಿಸಿ ಕೊಟ್ಟಿದೆ. ಗರ್ಭಾವಸ್ಥೆಯಲ್ಲಿ ಈಸ್ಟ್ರೊಜೆನ್ ನ ಅತಿಯಾದ ಬಿಡುಗಡೆಯಿಂದಾಗಿ ಎಡಗೈ ಬಳಕೆ ಮಾಡುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವ ಹೆಚ್ಚಿನ ಅಪಾಯವಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಮಾನಸಿಕ ಅಸ್ವಸ್ಥತೆ (ಸ್ಕಿಜೋಫ್ರೇನಿಯಾ);
ಎಡಗೈ ಬಳಕೆ ಮಾಡುವವರಲ್ಲಿ ಸ್ಕಿಜೋಫ್ರೇನಿಯಾದಿಂದ (ತೀವ್ರ ಮಾನಸಿಕ ಅಸ್ವಸ್ಥತೆ) ಬಳಲುವ ಸಾಧ್ಯತೆ ಹೆಚ್ಚು ಎಂದು ಈ ಅಧ್ಯಯನದಿಂದ ಸ್ಪಷ್ಟವಾಗಿದೆ. 2019 ಮತ್ತು 2022 ರಲ್ಲಿ ಮತ್ತು 2024 ರಲ್ಲಿ, ಈ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿವೆ. ಅದಲ್ಲದೆ ಸ್ಕಿಜೋಫ್ರೇನಿಯಾ ಎಡಗೈ ಬಳಕೆ ಮಾಡುವ ಜನರಲ್ಲಿ ಹೆಚ್ಚಾಗಿ ಕಂಡು ಬಂದಿದೆ. ಭ್ರಮೆ, ವಿಪರೀತ ಆಲೋಚನೆ, ನಡವಳಿಕೆಗೆ ಮಿಶ್ರ ಪ್ರತಿಕ್ರಿಯೆ ಸ್ಕಿಜೋಫ್ರೇನಿಯಾದ ಮುಖ್ಯ ಲಕ್ಷಣಗಳಾಗಿವೆ.
ಮಾನಸಿಕ ಸಮಸ್ಯೆಗಳು;
ಇದಲ್ಲದೆ, ಎಡಗೈ ಬಳಕೆ ಮಾಡುವ ವ್ಯಕ್ತಿಗಳಲ್ಲಿ ಹಲವಾರು ರೀತಿಯ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಅಪಾಯ ಕಂಡುಬಂದಿದೆ. ಬಲಗೈ ಬಳಸುವವರಿಗೆ ಹೋಲಿಸಿದರೆ ಮಾನಸಿಕ ಬದಲಾವಣೆಗಳು, ಆತಂಕ, ಭಯ, ಕಿರಿಕಿರಿ, ವಿಶ್ರಾಂತಿಯ ಕೊರತೆ, ಆಘಾತದ ನಂತರದ ಒತ್ತಡದ ಅಸ್ವಸ್ಥತೆ ಇವರಲ್ಲಿ ಹೆಚ್ಚಾಗಿದೆ. ಒಟ್ಟಾರೆಯಾಗಿ, ಎಡಗೈ ವ್ಯಕ್ತಿಗಳಲ್ಲಿ ಆತಂಕ ಹೆಚ್ಚು ಎಂದು ಸಾಬೀತಾಗಿದೆ.
ಇದನ್ನೂ ಓದಿ: ಶಾಲೆಗಳಲ್ಲಿ ಮಕ್ಕಳ ರೋಗ ಹರಡುವಿಕೆ ತಡೆಗಟ್ಟಲು ಏನು ಮಾಡಬೇಕು?
ನರವೈಜ್ಞಾನಿಕ ಅಸ್ವಸ್ಥತೆಗಳು;
ಅಂತೆಯೇ, ಇತರ ಅನೇಕ ನರವೈಜ್ಞಾನಿಕ ಕಾಯಿಲೆಗಳು ಕೂಡ ಎಡಗೈ ಬಳಸುವ ಜನರಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಇವುಗಳಲ್ಲಿ ಗಮನದ ಕೊರತೆ, ಹೈಪರ್ಆಕ್ಟಿವಿಟಿ ಅಸ್ವಸ್ಥತೆ, ಆಟಿಸಂ ಮತ್ತು ಡಿಸ್ಪ್ರಾಕ್ಸಿಯಾ ಸೇರಿವೆ. ಈ ಸಂಶೋಧನೆಯಿಂದ ಎಡಗೈ ಬಳಕೆ ಮಾಡುವ ಮಕ್ಕಳು ಡಿಸ್ಲೆಕ್ಸಿಯಾ ಹೊಂದಿರುವ ಸಾಧ್ಯತೆ ಹೆಚ್ಚು ಎಂಬುದಕ್ಕೆ ಪುರಾವೆಗಳು ಲಭ್ಯವಾಗಿದೆ.
ಹೃದಯಕ್ಕೆ ಸಂಬಂಧಿಸಿದ ರೋಗಗಳು;
18 ರಿಂದ 50 ವರ್ಷದೊಳಗಿನ ಒಟ್ಟು 379 ವ್ಯಕ್ತಿಗಳನ್ನು ಸಂಶೋಧನೆಗಾಗಿ ಆಯ್ಕೆ ಮಾಡಲಾಗಿದೆ. ಅವರ ಮೇಲೆ ಅನೇಕ ರೀತಿಯ ಸಂಶೋಧನೆಗಳನ್ನು ನಡೆಸಲಾಗಿದೆ. ಅದರ ಫಲಿತಾಂಶಗಳು ಎಡಗೈ ಜನರಿಗೆ ಹೃದ್ರೋಗದ ಅಪಾಯ ಹೆಚ್ಚು ಎಂಬುದನ್ನು ತೋರಿಸಿದೆ. ಬಲಗೈಯಿಂದ ಕೆಲಸ ಮಾಡುವವರಿಗಿಂತ ಎಡಗೈಯಿಂದ ಕೆಲಸ ಮಾಡುವ ಜನರು ಸರಾಸರಿ 9 ವರ್ಷ ಮುಂಚಿತವಾಗಿ ಸಾಯುತ್ತಾರೆ ಎಂದು ವರದಿಯೊಂದು ಬಹಿರಂಗ ಪಡಿಸಿದೆ. ಆದರೆ, ಸಂಶೋಧಕರು ಈ ರೋಗಗಳು ಮತ್ತು ಎಡಗೈ ನಡುವೆ ಯಾವುದೇ ನೇರ ಸಂಬಂಧವನ್ನು ಕಂಡುಹಿಡಿದಿಲ್ಲ ಆದರೆ ಈ ಸಂಶೋಧನೆ ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ