ಫಿಟ್ನೆಸ್, ಅತಿಯಾದ ಮದ್ಯಪಾನ ಕಿಡ್ನಿ ಸಮಸ್ಯೆಗೆ ಕಾರಣವಾ? ತಜ್ಞರು ಹೇಳುವುದೇನು?
ಹೆಚ್ಚುತ್ತಿರುವ ಫಿಟ್‌ನೆಸ್ ಕ್ರೇಜ್, ಅತಿಯಾದ ಡಯಟ್ ಮತ್ತು ವ್ಯಾಯಾಮದಿಂದಾಗಿ ಮೂತ್ರಪಿಂಡದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸ್ಲಿಮ್ ಆಗುವ ಹಠದಿಂದ ಅನೇಕ ಯುವಕರು ಆರೋಗ್ಯವನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ. ಅತಿಯಾದ ಮದ್ಯಪಾನ ಮತ್ತು ಮಾತ್ರೆಗಳ ಸೇವನೆಯು ಕೂಡ ಮೂತ್ರಪಿಂಡಗಳಿಗೆ ಹಾನಿಕಾರಕ. ಸಮತೋಲಿತ ಆಹಾರ, ಸಾಕಷ್ಟು ನೀರು ಮತ್ತು ನಿಯಮಿತ ವೈದ್ಯಕೀಯ ತಪಾಸಣೆ ಮೂಲಕ ಮೂತ್ರಪಿಂಡ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಬೆಂಗಳೂರು, ಮಾರ್ಚ್ 13: ಫಿಟ್ ಆಗಿ ಇರ್ಬೇಕು, ಖಡಕ್ ಆಗಿ ಕಾಣಿಸ್ಬೇಕು ಅಂತಾ ಅದೆಷ್ಟೋ ಯುವಕರು ಪ್ರತಿದಿನ ಜಿಮ್ಗೆ (gym) ಹೋಗ್ತಾರೆ. ಬೆವರು ಸುರಿಸುತ್ತಾರೆ. ಕೊಂಚ ಪ್ಯಾಟ್ ಕಾಣಿಸಿದರು ಸಾಕು ಊಟ, ತಿಂಡಿ ಬಿಟ್ಟು ಸ್ಲೀಮ್ ಆಗೋದಕ್ಕೆ ಟ್ರೈ ಮಾಡ್ತಾರೆ. ಇದು ಯಾವುದು ವರ್ಕೌಔಟ್ (Workout) ಆಗ್ದೆ ಹೋದ್ರೆ ಫುಲ್ ಟೆನ್ಷನ್ನಲ್ಲಿ ಫಾಸ್ಟಿಂಗ್ ಪ್ಲಾನ್ ಮಾಡ್ತಾರೆ. ಆದರೆ ಇತ್ತಿಚ್ಚಿನ ದಿನಗಳಲ್ಲಿ ಹೊಸ ಹೊಸ ಡಯಟ್ ಪ್ಲಾನ್ ಹಾಗೂ ಅತಿಯಾದ ಕುಡಿತದಿಂದ ಕಿಡ್ನಿ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.
ಆರೋಗ್ಯದ ಬಗ್ಗೆ ನಿರ್ಲಕ್ಷ್ಯದಿಂದ ಕಿಡ್ನಿ ಸಮಸ್ಯೆ
ಸ್ಲಿಮ್ ಟ್ರಿಮ್ ಬ್ಯೂಟಿಪುಲ್ ಆಗಿ ಕಾಣಿಸಿಕೊಳ್ಳಬೇಕು ಅನ್ನೋದು ಈಗ ಟ್ರೆಂಡ್ ಆಗಿ ಬಿಟ್ಟಿದೆ. ಅದರಲ್ಲೂ ಮಾಡಲಿಂಗ್ ನಟ – ನಟಿಯರಿಗೆ ಇದು ತುಸು ಹೆಚ್ಚಾಗಿಯೇ ಇದ್ದು ಕೊಂಚ ಫಿಟ್ ಇಲ್ಲ, ತುಸು ದಪ್ಪಾ ಆದ್ರೂ ಅತಿಯಾದ ಮದ್ಯಪಾನ ಸೇವನೆಯಿಂದ ಹೊಟ್ಟೆ ಮುಂದೆ ಬಂದ್ರು ಕಷ್ಟ. ಫುಲ್ ಟೆನ್ಷನ್ ಆಗಿ ಬಿಡುತ್ತಾರೆ. ಔಟ್ ಲುಕ್ ಫಸ್ಟ್ ಎವರೆಥಿಂಗ್ ಇಸ್ ನೆಕ್ಸ್ಟ್ ಅನ್ನೊ ಸ್ಥಿತಿ ತಲುಪಿದ್ದು ಎಷ್ಟೋ ಹುಡಗ, ಹುಡಗಿಯರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯದಿಂದ ಕಿಡ್ನಿ ಸಮಸ್ಯೆಗೆ ತುತ್ತಾಗತ್ತಿದ್ದಾರೆ. ಹೀಗಾಗಿ ವಿಕ್ಟೋರಿಯಾ ವೈದ್ಯರು ಜಾಗೃತಿಗೆ ಮುಂದಾಗಿದ್ದಾರೆ.
ಇದನ್ನೂ ಓದಿ: BiVACOR Heart: ವೈದ್ಯಕೀಯ ಇತಿಹಾಸದಲ್ಲಿ ಮತ್ತೊಂದು ಪವಾಡ! ಕೃತಕ ಹೃದಯದಿಂದ 100 ದಿನಗಳ ಕಾಲ ಬದುಕುಳಿದ ವ್ಯಕ್ತಿ
ಪ್ರತಿ ವರ್ಷ ಮಾರ್ಚ್ 13ರಂದು ಅಂತಾರಾಷ್ಟ್ರೀಯ ಕಿಡ್ನಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನಲೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ನೆಫ್ರೋ ಆ್ಯಂಡ್ ಯೂರಾಲಾಜಿ ಸಂಸ್ಥೆ ವಾಕಥಾನ್ ಆಯೋಜಿಸಿತ್ತು. ಜನರಿಗೆ ಕಿಡ್ನಿ ಬಗ್ಗೆ ಅರಿವು ಮೂಡಿಸುವ ಕೆಲಸವನ್ನ ವೈದ್ಯರು ಮಾಡಿದರು. ಸುಮಾರು ಐದು ಕಿಲೋ ಮೀಟರ್ ವಾಕಥಾನ್ ಮೂಲಕ ಜನರಿಗೆ ಕಿಡ್ನಿ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಇತ್ತಿಚ್ಚಿಗೆ ಜನರು ಸಣ್ಣಪುಟ್ಟ ನೋವುಗಳಿಗೂ ಮಾತ್ರೆಗಳ ಮೊರೆ ಹೋಗುತ್ತಿದ್ದಾರೆ. ತಲೆನೋವು, ಮೈಕೈ ನೋವು, ಕೆಮ್ಮು ಅಂದ್ರು ಮುಷ್ಟಿಯಷ್ಟು ಮಾತ್ರೆಗಳನ್ನ ನಂಗ್ತಾರೆ. ಇದು ಕಿಡ್ನಿ ಆರೋಗ್ಯದ ಮೇಲೆ ವ್ಯತಿರಿಕ್ತ ಸಮಸ್ಯೆಗೆ ಕಾರಣವಾಗಿದೆ. ತೂಕ ಇಳಿಸಿಕೊಳ್ಳಲು, ಆಹಾರ ಪದ್ಧತಿ ಬದಲಾವಣೆ ಅತಿಯಾದ ವ್ಯಾಯಾಮ ಮತ್ತು ಕೆಲವೊಮ್ಮೆ ಸಣ್ಣಪುಟ್ಟ ಸಮಸ್ಯೆಗಳಿಗೆ ನೋವುಗಳಿಗೂ ಅತಿಯಾದ ಮಾತ್ರೆಗಳ ಸೇವನೆ ಮೂತ್ರಪಿಂಡಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಅತಿಯಾದ ಪೇನ್ ಕಿಲ್ಲರ್ ಟ್ಯಾಬ್ಲೆಟ್ ಜನರ ಜೀವ ತೆಗೆಯುತ್ತಿದೆ. ಹೀಗಾಗಿ ಜನರು ಕಿಡ್ನಿ ಆರೋಗ್ಯದ ಬಗ್ಗೆಯೂ ಎಚ್ಚರಿಕೆ ವಹಿಸಬೇಕಿದೆ ಅಂತಿದ್ದಾರೆ ಆಡಳಿತ ಅಧಿಕಾರಿ, ನಿರ್ದೇಶಕ ಆಶಾ ಫರ್ವಿನ್.
ಕಿಡ್ನಿಗಳ ವೈಫಲ್ಯಕ್ಕೆ ಕಾರಣಗಳು ಏನು?
ಮಧುಮೇಹ, ಅಧಿಕ ರಕ್ತದೊತ್ತಡ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, ರಕ್ತದ ನಷ್ಟ, ಸ್ವಯಂ ನಿರೋಧಕ ಔಷಧಿಗಳ ಅಡ್ಡಪರಿಣಾಮಗಳು, ಅತಿಯಾದ ಮದ್ಯಪಾನ, ಅತಿಯಾದ ಡೈಯಟ್, ಮೂತ್ರನಾಳದ ತೊಂದರೆ.
ಕಿಡ್ನಿಗಳನ್ನ ಕಾಪಾಡಿಕೊಳ್ಳುವುದು ಹೇಗೆ?
- ಸಮತೋಲಿತ ಆಹಾರವನ್ನು ತೆಗೆದುಕೊಳ್ಳುವುದು
- ತೂಕ ಇಳಿಸಿಕೊಳ್ಳಲು, ಕ್ರ್ಯಾಶ್ ಡಯಟ್‌ಗಳನ್ನು ತಪ್ಪಿಸಿ
- ಸಾಕಷ್ಟು ನೀರು ಕುಡಿಯಿರಿ
- ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸಲು ದಿನವಿಡಿ ಕನಿಷ್ಠ 8-10 ಗ್ಲಾಸ್ ನೀರು ಕುಡಿಯಿರಿ.
- ತೂಕ ಇಳಿಸುವ ಔಷಧಿಗಳನ್ನು ತಪ್ಪಿಸಿ
- ವೈದ್ಯರನ್ನು ಸಂಪರ್ಕಿಸದೆ ಯಾವುದೇ ತೂಕ ಇಳಿಸುವ ಔಷಧಿಯನ್ನು ತೆಗೆದುಕೊಳ್ಳಬೇಡಿ.
- ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಿ
ಇದನ್ನೂ ಓದಿ: Summer Health Tips: ಬೇಸಿಗೆಯಲ್ಲಿ ಮಗುವಿನ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಸರಳ ಸಲಹೆ
ಒಟ್ಟಿನಲ್ಲಿ ಯುವತಿಯರಾಗಲಿ, ಯುವಕರಾಗಲಿ ತಮ್ಮನ್ನು ಫಿಟ್ ಆಗಿಟ್ಟುಕೊಳ್ಳುವುದು ಮುಖ್ಯ. ಆದರೆ ದೇಹದ ಸೌಂದರ್ಯಕ್ಕೆ ಜೀವ ಜೀವನವನ್ನೆ ರಿಸ್ಕ್ ಗೆ ತಂದಿಡುವ ಮುನ್ನ ಎಚ್ಚರಿಕೆ ವಹಿಸಿಬೇಕಿದೆ. ಜೀವನ ಶೈಲಿ, ಆಹಾರ ಕ್ರಮದಿಂದಲೇ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಬರುತ್ತಿದ್ದು, ಅದರಲ್ಲೂ ನೀವು ಸೇವನೆ ಮಾಡುವ ಕೆಲವು ಆಹಾರಗಳು, ಅಭ್ಯಾಸಗಳು ಕಿಡ್ನಿಗೂ ಹಾನಿ ಉಂಟು ಮಾಡುತ್ತಿದ್ದು ಎಚ್ಚರವಹಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.