Sign In

By signing in or creating an account, you agree with Associated Broadcasting Company's Terms & Conditions and Privacy Policy.

BiVACOR Heart: ವೈದ್ಯಕೀಯ ಇತಿಹಾಸದಲ್ಲಿ ಮತ್ತೊಂದು ಪವಾಡ! ಕೃತಕ ಹೃದಯದಿಂದ 100 ದಿನಗಳ ಕಾಲ ಬದುಕುಳಿದ ವ್ಯಕ್ತಿ

ಹೃದಯ ದಾನಿಗಾಗಿ ಕಾಯುತ್ತಿದ್ದ ಆಸ್ಟ್ರೇಲಿಯಾದ 40 ವರ್ಷದ ರೋಗಿಗೆ ವೈದ್ಯರು ಕೃತಕ ಟೈಟಾನಿಯಂ ಹೃದಯವನ್ನು ಅಳವಡಿಸಿದ್ದಾರೆ. ಕೃತಕ ಹೃದಯ ಅಳವಡಿಸಿಕೊಂಡ ರೋಗಿ 100 ದಿನಗಳ ಕಾಲ ಯಶಸ್ವಿಯಾಗಿ ಬದುಕುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾನೆ. ಆ ಮೂಲಕ ಈ ತಂತ್ರಜ್ಞಾನದಿಂದ ದೀರ್ಘಕಾಲ ಬದುಕಿದ ವ್ಯಕ್ತಿ ಎಂದು ಎನಿಸಿಕೊಂಡಿದ್ದಾನೆ. ಇದು ಒಂದು ರೀತಿಯ ಪವಾಡ ಎಂದರೆ ತಪ್ಪಾಗಲಾರದು. ಹಾಗಾದರೆ ಕೃತಕ ಟೈಟಾನಿಯಂ ಹೃದಯ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಿ.

BiVACOR Heart: ವೈದ್ಯಕೀಯ ಇತಿಹಾಸದಲ್ಲಿ ಮತ್ತೊಂದು ಪವಾಡ! ಕೃತಕ ಹೃದಯದಿಂದ 100 ದಿನಗಳ ಕಾಲ ಬದುಕುಳಿದ ವ್ಯಕ್ತಿ
BiVACOR Heart
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 13, 2025 | 3:37 PM

ವೈದ್ಯಕೀಯ ಇತಿಹಾಸದಲ್ಲಿ ಮತ್ತೊಂದು ಪವಾಡ ನಡೆದಿದೆ. ಕೃತಕ ಹೃದಯ(Artificial heart) ಅಳವಡಿಸಿದಂತಹ ವ್ಯಕ್ತಿ 100 ದಿನಗಳ ಕಾಲ ಆರೋಗ್ಯವಾಗಿ ಬದುಕುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾನೆ. ಆಸ್ಟ್ರೇಲಿಯಾದ 40 ವರ್ಷದ ರೋಗಿಯು, ಹೃದಯ (heart) ನೀಡುವಂತಹ ದಾನಿ (Donor) ಗಾಗಿ ಕಾಯುತ್ತಿದ್ದರಿಂದ ವೈದ್ಯರು ಆತನಿಗೆ ಕೃತಕ ಟೈಟಾನಿಯಂ ಹೃದಯವನ್ನು ಅಳವಡಿಸಿದ್ದಾರೆ. ಅಚ್ಚರಿ ಎಂಬಂತೆ ಆತ 100 ದಿನಗಳ ಕಾಲ ಬದುಕಿದ್ದು, ಆ ಮೂಲಕ ಈ ತಂತ್ರಜ್ಞಾನದಿಂದ ದೀರ್ಘಕಾಲ ಬದುಕಿದ ವ್ಯಕ್ತಿ ಎಂದು ಎನಿಸಿಕೊಂಡಿದ್ದಾನೆ. ಕಳೆದ ವರ್ಷ ನವೆಂಬರ್ ನಲ್ಲಿ ಸಿಡ್ನಿಯ ಸೇಂಟ್ ವಿನ್ಸೆಂಟ್ ಆಸ್ಪತ್ರೆಯಲ್ಲಿ ವೈದ್ಯರು ರೋಗಿಗೆ ಕೃತಕ ಟೈಟಾನಿಯಂ ಹೃದಯವನ್ನು ಅಳವಡಿಸಿದ್ದರು. ಆ ಬಳಿಕ ಆತ ಆರೋಗ್ಯವಾಗಿ ದಿನ ಕಳೆದಿದ್ದು ಸರಿಸುಮಾರು ಮೂರು ತಿಂಗಳು ಈ ಕೃತಕ ಹೃದಯ ಅಳವಡಿಸಿಕೊಂಡು ತನ್ನ ಜೀವ ಉಳಿಸಿಕೊಂಡಿದ್ದಾನೆ. ಇದು ಒಂದು ರೀತಿಯ ಪವಾಡ ಎಂದರೆ ತಪ್ಪಾಗಲಾರದು. ಹಾಗಾದರೆ ಕೃತಕ ಟೈಟಾನಿಯಂ ಹೃದಯ (artificial titanium heart) ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಕೃತಕ ಟೈಟಾನಿಯಂ ಹೃದಯ ಅಳವಡಿಸಿಕೊಂಡಿದ್ದ ರೋಗಿಗೆ 100 ದಿನಗಳ ಬಳಿಕ ಅಂದರೆ ಈ ತಿಂಗಳ ಆರಂಭದಲ್ಲಿ ಹೃದಯ ನೀಡಲು ದಾನಿಗಳು ಸಿಕ್ಕಿದ್ದರಿಂದ ವೈದ್ಯರು ರೋಗಿಗೆ ಮುಂದಿನ ಚಿಕಿತ್ಸೆ ನೀಡಿದ್ದಾರೆ. ತೀವ್ರ ಹೃದಯ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿ ಪ್ರಸ್ತುತ ಇದೀಗ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಮೊನಾಶ್ ವಿಶ್ವವಿದ್ಯಾಲಯದ ಸೇಂಟ್ ವಿನ್ಸೆಂಟ್ ಆಸ್ಪತ್ರೆ ಮತ್ತು ಸಾಧನದ ಹಿಂದಿನ ಯುಎಸ್-ಆಸ್ಟ್ರೇಲಿಯಾ ಕಂಪನಿ ಬ್ವಾಲ್ಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸಾಮಾನ್ಯವಾಗಿ ಹೃದಯ ವೈಫಲ್ಯದಿಂದ ಬಳಲುತ್ತಿರುವವರಿಗೆ ಕೃತಕ ಹೃದಯವು ದೀರ್ಘಕಾಲೀನ ಆಯ್ಕೆಯಾಗಿದ್ದು, ವ್ಯಕ್ತಿಯ ಜೀವವನ್ನು ಮತ್ತಷ್ಟು ಸಮಯ ಉಳಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ಆದರೆ ಈ ಕೃತಕ ಟೈಟಾನಿಯಂ ಹೃದಯ ಇನ್ನೂ ಪ್ರಾಯೋಗಿಕ ಹಂತದಲ್ಲಿದ್ದು, ಸಾಮಾನ್ಯ ಬಳಕೆಗೆ ಬರಲು ಅನುಮೋದಿಸಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆಸ್ಟ್ರೇಲಿಯಾದ ಬಯೋ-ಎಂಜಿನಿಯರ್ ಡೇನಿಯಲ್ ಟಿಮ್ಸ್ ಬೈವಾಕೋರ್ (ಕೃತಕ ಹೃದಯ) ಸ್ಥಾಪಕ, ಅವರ ತಂದೆ ಹೃದ್ರೋಗದಿಂದ ನಿಧನರಾದ ಬಳಿಕ ಈ ಸಾಧನವನ್ನು ಕಂಡುಹಿಡಿದಿದ್ದಾರೆ. ಅವರು ಈ ಬಗ್ಗೆ ಸಂತೋಷ ವ್ಯಕ್ತ ಪಡಿಸಿದ್ದು “ನಾನು ತಯಾರಿಸಿದ ಸಾಧನದಿಂದ ರೋಗಿಯೊಬ್ಬರು 100 ದಿನಗಳ ಕಾಲ ಬದುಕುಳಿದಿದ್ದಾರೆ. ಇದರಿಂದ ನಮ್ಮ ದಶಕಗಳ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿದೆ. ನಮ್ಮ ಕೃತಕ ಹೃದಯದ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ರೋಗಿ ಮತ್ತು ಅವರ ಕುಟುಂಬಕ್ಕೆ ನಮ್ಮ ತಂಡದಿಂದ ಧನ್ಯವಾದ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ
Image
ಸಿಹಿತಿಂಡಿ ತಿಂದ ಮೇಲೆ ನೀರು ಕುಡಿಯುತ್ತೀರಾ? ಇದನ್ನು ತಪ್ಪದೆ ಓದಿ
Image
ಪ್ರಯಾಣ ಮಾಡುವಾಗ ಕಾರಿನಲ್ಲಿ ಇಟ್ಟಿರುವ ನೀರನ್ನು ಕುಡಿಯುವಾಗ ಎಚ್ಚರ!
Image
ಜನ ತಂಬಾಕು ಬಿಡಲು ಕಷ್ಟವಾಗುತ್ತೆ ಎನ್ನಲು ಕಾರಣವೇನು?
Image
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಎಚ್ಚರಿಕೆ ಸುದ್ದಿ

ಕೃತಕ ಟೈಟಾನಿಯಂ ಹೃದಯ (ಬೈವಾಕೋರ್) ಹೇಗೆ ಕೆಲಸ ಮಾಡುತ್ತದೆ?

ಬೈವಾಕೋರ್ ಎಂದರೆ ಕೃತಕ ಹೃದಯ (ಟಿಎಎಚ್). ಇದು ಕಾಂತಗಳಿಂದ ಇರಿಸಲಾದ ಲೆವಿಟೆಡ್ ರೋಟರ್ ಆಗಿದೆ. ಹೆಸರೇ ಸೂಚಿಸುವಂತೆ, ಇದನ್ನು ಟೈಟಾನಿಯಂನಿಂದ ನಿರ್ಮಿಸಲಾಗಿದೆ. ಅಲ್ಲದೆ ಇದು ದೇಹ ಮತ್ತು ಶ್ವಾಸಕೋಶಗಳಿಗೆ ರಕ್ತವನ್ನು ಪಂಪ್ ಮಾಡುತ್ತದೆ. ಜೊತೆಗೆ ಜಠರಗಳ ಕಾರ್ಯವನ್ನು ಮಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವಾದ್ಯಂತ ಪ್ರತಿವರ್ಷ 18 ಮಿಲಿಯನ್ ಜನರು ಹೃದಯರಕ್ತನಾಳದ ಕಾಯಿಲೆಗಳಿಂದ ಸಾಯುತ್ತಾರೆ. ಆದರೆ ಈ ರೀತಿಯ ಸಾಧನಗಳಿಂದ ಇಂತಹ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದಾಗಿದೆ. ದಾನಿಗಳಿಗಾಗಿ ಕಾಯುತ್ತಿರುವ ವ್ಯಕ್ತಿಯ ಜೀವ ಉಳಿಸಲು ಈ ಸಾಧನ ಬಳಸುವುದು ಇದರ ಮುಖ್ಯ ಉದ್ದೇಶವಾಗಿದೆ. ಯುಎಸ್ ಆರೋಗ್ಯ ಇಲಾಖೆಯ ಪ್ರಕಾರ, 2024 ರಲ್ಲಿ ಸುಮಾರು 3,500 ಜನರು ಹೃದಯ ಕಸಿಗೆ ಒಳಗಾಗಿದ್ದು, ಮುಂದಿನ ದಶಕದಲ್ಲಿ ದಾನಿ ಹೃದಯಕ್ಕಾಗಿ ಕಾಯಲು ಸಾಧ್ಯವಾಗದ ಅಥವಾ ದಾನಿ ಹೃದಯ, ಲಭ್ಯವಿಲ್ಲದ ರೋಗಿಗಳಿಗೆ ಕೃತಕ ಹೃದಯವು ಬದಲಿಯಾಗುವುದು ನಮ್ಮ ಉದ್ದೇಶವಾಗಿದೆ ಎಂದು ಡಾ. ಹೊವಾರ್ಡ್ ಹೇಳಿದ್ದಾರೆ.

ಇದನ್ನೂ ಓದಿ: ಹೃದಯಾಘಾತ , ಪಾರ್ಶ್ವವಾಯುವಿಗೆ ಹೊಸ ಲಸಿಕೆ ಕಂಡುಹಿಡಿದ ಚೀನಾ

ಯುನೈಟೆಡ್ ಸ್ಟೇಟ್ಸ್ನ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಆರಂಭಿಕ ಕಾರ್ಯಸಾಧ್ಯತಾ ಅಧ್ಯಯನದಲ್ಲಿ ಈ ಸಾಧನವನ್ನು ಈಗಾಗಲೇ ಪರೀಕ್ಷಿಸಲಾಗಿದೆ. ಇದರ ಭಾಗವಾಗಿ, ಐದು ರೋಗಿಗಳಿಗೆ ಈ ಸಾಧನವನ್ನು ಯಶಸ್ವಿಯಾಗಿ ಅಳವಡಿಸಲಾಗಿದ್ದು ಮೊದಲನೆಯದು ಕಳೆದ ಜುಲೈನಲ್ಲಿ, ಅಂತಿಮ ಹಂತದ ಹೃದಯ ವೈಫಲ್ಯದಿಂದ ಬಳಲುತ್ತಿರುವ 58 ವರ್ಷದ ವ್ಯಕ್ತಿಗೆ ಟೆಕ್ಸಾಸ್ ವೈದ್ಯಕೀಯ ಕೇಂದ್ರದಲ್ಲಿ ನಡೆದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅಳವಡಿಸಲಾಯಿತು. ಆ ವ್ಯಕ್ತಿಗೆ ದಾನಿ ಲಭ್ಯವಾಗುವವರೆಗೂ ಅದು ಆತನನ್ನು ಎಂಟು ದಿನಗಳ ವರೆಗೆ ಜೀವಂತವಾಗಿರಿಸಿತ್ತು. ಈ ಅಧ್ಯಯನಕ್ಕಾಗಿ ಇನ್ನೂ ನಾಲ್ಕು ರೋಗಿಗಳಿಗೆ ಅಳವಡಿಸಬೇಕಾಗಿದ್ದು, ಅದರ ಜೊತೆಗೆ ಈ ಪ್ರಯೋಗವನ್ನು ಮತ್ತೆ 15 ರೋಗಿಗಳಿಗೆ ಅಳವಡಿಸಿ ಫಲಿತಾಂಶ ನಿರೀಕ್ಷಿಸಬೇಕಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು