ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಎಚ್ಚರಿಕೆ ಸುದ್ದಿ, ನಿಮಗೆ ಈ ರೋಗ ಬರುವುದು ಖಂಡಿತ
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರ ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮಗಳಿವೆ. ವಿಶೇಷವಾಗಿ ನಿದ್ರೆಯ ಕೊರತೆಯು ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಇದು ಶೀತ, ಬ್ರಾಂಕೈಟಿಸ್ ಮತ್ತು ನ್ಯುಮೋನಿಯಾದಂತಹ ಸೋಂಕುಗಳನ್ನು ಉಂಟುಮಾಡುತ್ತದೆ. ಇತ್ತೀಚಿನ ಸಂಶೋಧನೆಯ ಪ್ರಕಾರ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದರಿಂದ ನಿದ್ರಾಹೀನತೆ ಹೆಚ್ಚಾಗುತ್ತದೆ ಮತ್ತು ದೇಹದ ಕಾರ್ಯನಿರ್ವಹಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸಂಶೋಧನೆ ಹೇಳಿದೆ. ಯಾವೆಲ್ಲ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಇಲ್ಲಿ ಹೇಳಲಾಗಿದೆ.

ಯಾರೆಲ್ಲ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತೀರಾ, ಅವರು ಈ ಬಗ್ಗೆ ಗಮನ ನೀಡಲೇಬೇಕು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದರಿಂದ ರೋಗನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಶೀತ ಮತ್ತು ನ್ಯುಮೋನಿಯಾದಂತಹ ಸೋಂಕುಗಳ ಅಪಾಯವೂ ಹೆಚ್ಚಾಗುತ್ತದೆ ಎಂದು ಅಧ್ಯಯನವೊಂದು ಹೇಳಿದೆ. ವಿಶೇಷವಾಗಿ ನಿದ್ರೆಯ ಕೊರತೆಯಿಂದಾಗಿ, ರೋಗನಿರೋಧಕ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರಿಂದಾಗಿ ದೇಹವು ಸಾಮಾನ್ಯ ಸೋಂಕುಗಳ ವಿರುದ್ಧವೂ ಹೋರಾಡಲು ಸಮಾರ್ಥ್ಯ ಇರುವುದಿಲ್ಲ. ನಾರ್ವೇಜಿಯನ್ ಸಂಶೋಧಕರ ಪ್ರಕಾರ, ಸಾಕಷ್ಟು ನಿದ್ರೆಯ ಕೊರತೆಯು ಸೋಂಕುಗಳ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.
ನಿದ್ರೆಯ ಕೊರತೆಯು ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಇದು ಸೈನುಟಿಸ್ ಮತ್ತು ಬ್ರಾಂಕೈಟಿಸ್‌ನಂತಹ ಸಮಸ್ಯೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರ ಆರೋಗ್ಯದ ಮೇಲೆ ಈ ಪರಿಣಾಮಗಳು ಉಂಟಾಗುತ್ತವೆ. ಕ್ರೊನೊಬಯಾಲಜಿ ಇಂಟರ್ನ್ಯಾಷನಲ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ 133 ದಾದಿಯರನ್ನು ಇದಕ್ಕಾಗಿ ಬಳಸಲಾಗಿತ್ತು.
ಅವರಲ್ಲಿ ಹೆಚ್ಚಿನವರು ಮಹಿಳೆಯರು. ಅವರ ಸರಾಸರಿ ವಯಸ್ಸು 41.9 ವರ್ಷಗಳು. ಅವರು ತಮ್ಮ ನಿದ್ರೆಯ ಅವಧಿ, ನಿದ್ರೆಯ ಅವಶ್ಯಕತೆಗಳು ಮತ್ತು ಪಾಳಿಯ ಕೆಲಸದ ವೇಳಾಪಟ್ಟಿಗಳನ್ನು ವಿವರಿಸಿದರು. ಕಳೆದ ಮೂರು ತಿಂಗಳುಗಳಲ್ಲಿ ಅವರು ಎದುರಿಸಿದ ಸೋಂಕುಗಳ ಬಗ್ಗೆಯೂ ವಿವರಿಸಿದ್ದಾರೆ. ನಿದ್ರಾಹೀನತೆಯಿಂದ ಬಳಲುತ್ತಿರುವ ಜನರಿಗೆ ನೆಗಡಿ ಬರುವ ಸಾಧ್ಯತೆ ಶೇಕಡ 33 ರಷ್ಟು ಹೆಚ್ಚು ಎಂದು ಸಂಶೋಧನೆ ಹೇಳಿದೆ. ಮಧ್ಯಮ ನಿದ್ರಾಹೀನತೆ ಇರುವ ಜನರು ನ್ಯುಮೋನಿಯಾದಂತಹ ಗಂಭೀರ ಸೋಂಕುಗಳ ಅಪಾಯವನ್ನು ಶೇಕಡಾ 129 ರಷ್ಟು ಹೆಚ್ಚಿಸಬಹುದು.
ಇದನ್ನೂ ಓದಿ: ಬೇಸಿಗೆಯಲ್ಲಿ ಶೇಂದಿ ಸೇವನೆ ಮಾಡಿದರೆ ಈ ಆರೋಗ್ಯ ಸಮಸ್ಯೆ ಬರುವುದಿಲ್ಲ
ತೀವ್ರ ನಿದ್ರಾಹೀನತೆ ಇರುವವರಿಗೆ ಈ ಅಪಾಯವು ಶೇಕಡಾ 288 ರಷ್ಟು ಹೆಚ್ಚಾಗುತ್ತದೆ. ಇಂತಹ ನಿದ್ರಾಹೀನತೆಯು ದೇಹದ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುವುದಲ್ಲದೆ, ದೇಹದ ಒಟ್ಟಾರೆ ಕಾರ್ಯನಿರ್ವಹಣೆಯನ್ನು ಕುಂಠಿತಗೊಳಿಸುತ್ತದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರು ಇತರರಿಗಿಂತ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ರಾತ್ರಿ ಕೆಲಸವು ಸೋಂಕುಗಳ ಅಪಾಯವನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ಈ ಬಗ್ಗೆ ಹೆಚ್ಚಿನ ಎಚ್ಚರಿಕೆಯನ್ನು ವಹಿಸುವಂತೆ ತಜ್ಞರು ಹೇಳಿದ್ದಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ