ಎಬಿಸಿ ಜ್ಯೂಸ್ ಕುಡಿಯುವ ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳಿ
ಉತ್ತಮ ಆರೋಗ್ಯಕ್ಕೆ ಒಳ್ಳೆಯ ಆಹಾರ ಸೇವಿಸುವುದು ಬಹಳ ಮುಖ್ಯ. ನೀವು ಏನು ತಿನ್ನುತ್ತೀರೋ ಅದು ನಿಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಆರೋಗ್ಯ ತಜ್ಞರು ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಆಹಾರದ ಮೂಲಕ ತೆಗೆದುಕೊಳ್ಳಬೇಕು ಎಂದು ಹೇಳುತ್ತಾರೆ. ಅಂತಹ ಆಹಾರಗಳಲ್ಲಿ ಎಬಿಸಿ(ABC) ಜ್ಯೂಸ್ ಕೂಡ ಒಂದು. ಇದರಲ್ಲಿರುವ ಶಕ್ತಿಯುತ ಗುಣದಿಂದಾಗಿ ಇದು ಬಹಳ ಪ್ರಸಿದ್ದಿ ಪಡೆದುಕೊಂಡಿದೆ. ಅದಲ್ಲದೆ ಇವುಗಳಿಂದ ಹಲವು ಉಪಯೋಗಗಳಿವೆ. ಇದನ್ನು ಕುಡಿಯುವ ಮೊದಲು ಇದರಿಂದ ಸಿಗುವ ಆರೋಗ್ಯಕರ ಲಾಭಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು. ನೀವು ಕೂಡ ಇದನ್ನು ಪ್ರತಿನಿತ್ಯ ಸೇವನೆ ಮಾಡುತ್ತೀರಾ? ಹಾಗಾದರೆ ಇದರ ಪ್ರಯೋಜನಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ.

ಒತ್ತಡ ಜೀವನಶೈಲಿ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ನಮ್ಮ ಯೋಗಕ್ಷೇಮ ಕಾಪಾಡಿಕೊಳ್ಳಲು ಒಳ್ಳೆಯ ಆಹಾರ ಸೇವನೆ ಮಾಡುವುದು ಬಹಳ ಮುಖ್ಯವಾಗಿದೆ. ನೀವು ಏನು ತಿನ್ನುತ್ತೀರೋ ಅದು ನಿಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಆರೋಗ್ಯ ತಜ್ಞರು ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಆಹಾರದ ಮೂಲಕ ತೆಗೆದುಕೊಳ್ಳಬೇಕು ಎಂದು ಹೇಳುತ್ತಾರೆ. ಅಂತಹ ಆಹಾರಗಳಲ್ಲಿ ಎಬಿಸಿ(ABC) ಜ್ಯೂಸ್ ಕೂಡ ಒಂದು. ಇದರಲ್ಲಿರುವ ಶಕ್ತಿಯುತ ಗುಣದಿಂದಾಗಿ ಇದು ಬಹಳ ಪ್ರಸಿದ್ದಿ ಪಡೆದುಕೊಂಡಿದೆ. ನಿಮಗೆ ತಿಳಿದಿರುವಂತೆ ಇದನ್ನು ಸೇಬು, ಬೀಟ್ರೂಟ್ ಮತ್ತು ಕ್ಯಾರೆಟ್ಗಳಿಂದ ತಯಾರಿಸಲಾಗುತ್ತದೆ. ಹಾಗಾಗಿ ಇವುಗಳಲ್ಲಿ ಸಾಕಷ್ಟು ಪೋಷಕಾಂಶಗಳು ಅಡಕವಾಗಿರುತ್ತದೆ. ಅದಕ್ಕಾಗಿಯೇ ಇದನ್ನು ಪ್ರತಿನಿತ್ಯ ಸೇವನೆ ಮಾಡಲಾಗುತ್ತದೆ. ದೇಹದ ತೂಕವನ್ನು ನಿಯಂತ್ರಿಸಲು ಇದು ಬಹಳ ಪ್ರಯೋಜನಕಾರಿ ಅದಲ್ಲದೆ ಇವುಗಳಿಂದ ಹಲವು ಉಪಯೋಗಗಳಿವೆ. ಇದನ್ನು ಕುಡಿಯುವ ಮೊದಲು ಇದರಿಂದ ಸಿಗುವ ಆರೋಗ್ಯಕರ ಲಾಭಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು. ನೀವು ಕೂಡ ಇದನ್ನು ಪ್ರತಿನಿತ್ಯ ಸೇವನೆ ಮಾಡುತ್ತೀರಾ? ಇದರ ಪ್ರಯೋಜನಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ.
ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ
ತಜ್ಞರ ಪ್ರಕಾರ, 100 ಮಿಲಿಲೀಟರ್ ಎಬಿಸಿ ರಸ ಸೇವಿಸುವುದರಿಂದ 45- 50 ಕ್ಯಾಲೊರಿಗಳು ಮತ್ತು 10-12 ಗ್ರಾಂ ಕಾರ್ಬೋಹೈಡ್ರೇಟ್ಗಳನ್ನು ಒದಗಿಸಬಹುದು. ಅದಲ್ಲದೆ ಎಬಿಸಿ ರಸವು ಜೀವಸತ್ವಗಳು, ಖನಿಜಗಳು ಮತ್ತು ಪ್ರೋಟೀನ್ ಗಳನ್ನು ಕೂಡ ನೀಡುತ್ತದೆ. ನೀವು ಈ ರಸವನ್ನು ನಿಯಮಿತವಾಗಿ ಕುಡಿಯುವುದರಿಂದ ಹಿಮೋಗ್ಲೋಬಿನ್ ಮಟ್ಟ ಹೆಚ್ಚಾಗುತ್ತದೆ. ದೀರ್ಘಕಾಲದ ರೋಗಗಳು ದೂರವಾಗುತ್ತದೆ. ತಜ್ಞರ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ಈ ರಸವನ್ನು ಕುಡಿಯುವುದರಿಂದ ಹೆಚ್ಚು ಪ್ರಯೋಜನವಿದ್ದು ದೇಹದಲ್ಲಿನ ಎಲ್ಲಾ ವಿಷಕಾರಿ ತ್ಯಾಜ್ಯವನ್ನು ಶುದ್ಧೀಕರಿಸಲು ಇದು ಸಹಾಯ ಮಾಡುತ್ತದೆ.
ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ
ಈ ಜ್ಯೂಸ್ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ತುಂಬಾ ಒಳ್ಳೆಯದು. ಅವುಗಳಲ್ಲಿ ಕಡಿಮೆ ಕ್ಯಾಲೊರಿಗಳಿವೆ. ನೀವು ಈ ರಸವನ್ನು ಕುಡಿದರೆ, ಚರ್ಮವೂ ಕೂಡ ಆರೋಗ್ಯವಾಗಿರುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದನ್ನು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು, ಕರುಳಿನ ಚಲನೆಯನ್ನು ನಿಯಂತ್ರಿಸಲು ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ಇದರಲ್ಲಿರುವ ಕ್ಯಾರೆಟ್ ನಿಮ್ಮ ಕಣ್ಣುಗಳನ್ನು ಆರೋಗ್ಯಕರವಾಗಿರಿಸುತ್ತದೆ.
ಇದನ್ನೂ ಓದಿ: ಎಂದಾದರೂ ದಾಲ್ಚಿನ್ನಿ ಚಹಾ ಟ್ರೈ ಮಾಡಿದ್ದೀರಾ? ಇಲ್ಲವಾದರೆ ಹೀಗೆ ಮಾಡಿ
ಹೃದ್ರೋಗಗಳನ್ನು ತಡೆಯುತ್ತದೆ
ಈ ರಸವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಮಾತ್ರವಲ್ಲ. ಹೃದ್ರೋಗಗಳನ್ನು ತಡೆಯುತ್ತದೆ. ಆದ್ದರಿಂದ ನಿಯಮಿತವಾಗಿ ಕುಡಿಯುವುದರಿಂದ ಅನೇಕ ಅಪಾಯಕಾರಿ ಸಮಸ್ಯೆಗಳನ್ನು ತಡೆಯಬಹುದು. ಇದು ಕಡಿಮೆ ಕ್ಯಾಲೊರಿ ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತದೆ. ಆದ್ದರಿಂದ ತೂಕ ನಷ್ಟಕ್ಕೆ ಇದು ತುಂಬಾ ಉಪಯುಕ್ತವಾಗಿದೆ. ಈ ರಸವು ಫ್ರೀ ರಾಡಿಕಲ್ಗಳ ವಿರುದ್ಧ ಹೋರಾಡುತ್ತದೆ ಮತ್ತು ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಆರೋಗ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ