AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಂಪು ನೀರು ಕುಡಿಯುವುದರಿಂದ ದೇಹ ತಂಪಾಗಿರುವುದು ಮಾತ್ರವಲ್ಲ ಈ ಪ್ರಯೋಜನಗಳೂ ಲಭಿಸುತ್ತದೆ‌

ಬೇಸಿಗೆಯಲ್ಲಿ ಶಾಖದ ಹೊಡೆತ ಮತ್ತು ನಿರ್ಜಲೀಕರಣ ಸಾಮಾನ್ಯ. ಈ ಸಮಸ್ಯೆಗಳಿಂದ ದೇಹವನ್ನು ರಕ್ಷಿಸಿಕೊಳ್ಳಲು ಬಹುತೇಕರು ಹೆಚ್ಚಿನ ನೀರಿನಂಶವಿರುವ ಕಾಲೋಚಿತ ಹಣ್ಣುಗಳು ಮತ್ತು ಹಸಿರು ತರಕಾರಿಗಳನ್ನು ಸೇವನೆ ಮಾಡುತ್ತಾರೆ. ಇದರ ಜೊತೆಗೆ ಈ ಬೇಸಿಗೆಯಲ್ಲಿ ಪ್ರತಿನಿತ್ಯ ಸೋಂಪು ನೀರು ಕುಡಿಯಬಹುದು, ಇದು ಬಿಸಿಲಿನ ಶಾಖದಿಂದ ನಿಮ್ಮನ್ನು ರಕ್ಷಿಸುವುದು ಮಾತ್ರವಲ್ಲದೆ, ದೇಹವನ್ನು ತಂಪಾಗಿರಿಸುತ್ತದೆ.

ಸೋಂಪು ನೀರು ಕುಡಿಯುವುದರಿಂದ ದೇಹ ತಂಪಾಗಿರುವುದು ಮಾತ್ರವಲ್ಲ ಈ ಪ್ರಯೋಜನಗಳೂ ಲಭಿಸುತ್ತದೆ‌
ಸೋಂಪು ನೀರು Image Credit source: Pinterest
ಮಾಲಾಶ್ರೀ ಅಂಚನ್​
|

Updated on: Mar 09, 2026 | 6:25 PM

Share

ಬೇಸಿಗೆ ಕಾಲ (summer) ಆರಂಭವಾಗಿದೆ. ಈ ಋತುವಿನಲ್ಲಿ ವಿಪರೀತ ಶಾಖ ಇರುವ ಕಾರಣ ನಿರ್ಜಲೀಕರಣ, ಆಯಾಸ, ದಣಿವು, ದೇಹ ಉರಿ, ಶಾಖದ ಹೊಡೆದ, ಜೀರ್ಣಕಾರಿ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಈ ಸಮಯದಲ್ಲಿ ಆರೋಗ್ಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ದೇಹವನ್ನು ತಂಪಾಗಿಡಲು, ನಿರ್ಜಲೀಕರಣ ಸಮಸ್ಯೆಯನ್ನು ಹೋಗಲಾಡಿಸಲು ಜನ ಎಳನೀರು, ನೀರು, ಕಲ್ಲಂಗಡಿಯಂತಹ ಕಾಲೋಚಿತ ಹಣ್ಣುಗಳನ್ನು ಸೇವನೆ ಮಾಡುತ್ತಾರೆ. ಇದರ ಜೊತೆಗೆ ಈ ಸುಡು ಬೇಸಿಗೆಯಲ್ಲಿ ಸೋಂಪು ನೀರನ್ನೂ ಕುಡಿಯಬಹುದು. ಇದು ದೇಹವನ್ನು ತಂಪಾಗಿಸುವುದರ ಜೊತೆಗೆ ಇನ್ನೂ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅವು ಯಾವುವು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಬೇಸಿಗೆಯಲ್ಲಿ ಸೋಂಪು ನೀರು ಏಕೆ ಕುಡಿಯಬೇಕು?

ಆಯುರ್ವೇದದ ಪ್ರಕಾರ, ಬೇಸಿಗೆಯಲ್ಲಿ, ದೇಹದಲ್ಲಿ ‘ಪಿತ್ತ ದೋಷ’ ಹೆಚ್ಚಾಗುತ್ತದೆ, ಇದು ಶಾಖ, ಉರಿಯೂತ ಮತ್ತು ಆಮ್ಲೀಯತೆಗೆ ಕಾರಣವಾಗಿದೆ. ಸೋಂಪು ತಂಪಾಗಿಸುವ ಗುಣವನ್ನು ಹೊಂದಿದ್ದಿ, ಇದು ಪಿತ್ತವನ್ನು ಸಮತೋಲನಗೊಳಿಸುತ್ತದೆ.  ಹಾಗಾಗಿ ಸುಡು ಬೇಸಿಗೆಯಲ್ಲಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೋಂಪು ನೀರನ್ನು ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಸಮತೋಲನದಲ್ಲಿರುತ್ತದೆ ಮತ್ತು ಶಾಖದ ಹೊಡೆತದ ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಎಂತಹದೇ ಉರಿ ಬಿಸಿಲಿನಲ್ಲೂ ದೇಹ ತಂಪಾಗಿರುತ್ತದೆ.

ಸೋಂಪು ನೀರಿನ ಪ್ರಯೋಜನಗಳೇನು?

ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ: ಬೇಸಿಗೆಯಲ್ಲಿ ಆಮ್ಲೀಯತೆ, ಅನಿಲ, ಮಲಬದ್ಧತೆ ಮತ್ತು ಹೊಟ್ಟೆ ನೋವು ಮುಂತಾದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಸೋಂಪು ನೀರು ಈ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಿದ್ದು, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೊಟ್ಟೆಯನ್ನು ಹಗುರವಾಗಿರಿಸುತ್ತದೆ.

ದೇಹವನ್ನು ತಂಪಾಗಿಸುತ್ತದೆ: ಸೋಂಪು ನೈಸರ್ಗಿಕ ತಂಪಾಗಿಸುವ ಗುಣಗಳನ್ನು ಹೊಂದಿದ್ದು, ಇದರ ನೀರನ್ನು ಕುಡಿಯುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ ಮತ್ತು ಇದು ಶಾಖದ ಹೊಡೆತದಿಂದ ದೇಹವನ್ನು ರಕ್ಷಿಸುತ್ತದೆ. ಹಾಗಾಗಿ ಸುಡು ಬೇಸಿಗೆಯಲ್ಲಿ ಹೊರಗೆ ಹೋಗುವ ಮೊದಲು ಸೋಮಪು ನೀರನ್ನು ಕುಡಿಯಿರಿ.

ಜಲಸಂಚಯನ ಒದಗಿಸುತ್ತದೆ: ನೀರಿಗೆ ಸ್ವಲ್ಪ ಸೋಂಪು ಬೀಜಗಳನ್ನು ಸೇರಿಸುವುದರಿಂದ ಅದರ ರುಚಿ ಹೆಚ್ಚಾಗುತ್ತದೆ, ಅಲ್ಲದೆ ಸೋಂಪು ನೀರು ಜಲಸಂಚಯನವನ್ನು ಉತ್ತೇಜಿಸುತ್ತದೆ. ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು, ಜೀವಕೋಶಗಳ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ದೇಹವನ್ನು ಡಿಟಾಕ್ಸ್ ಮಾಡುತ್ತದೆ: ಸೋಂಪು  ನೀರು  ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಯಕೃತ್ತು ಮತ್ತು ಮೂತ್ರಪಿಂಡಗಳನ್ನು ಶುದ್ಧೀಕರಿಸುತ್ತದೆ, ಇದರಿಂದಾಗಿ ಸ್ಪಷ್ಟ ಮತ್ತು ಹೊಳೆಯುವ ಚರ್ಮವನ್ನು ನೀವು ಪಡೆಯುವಿರಿ.

ಇದನ್ನೂ ಓದಿ: ಬೇಸಿಗೆಯಲ್ಲಿ ದೇಹ ತಂಪಾಗಿರಿಸಲು ಹಣ್ಣುಗಳನ್ನು ಸೇವನೆ ಮಾಡಲೇಬೇಕು

 ತೂಕ ಇಳಿಕೆಗೂ ಪ್ರಯೋಜನಕಾರಿ: ನೀವು ಬೇಗನೆ ತೂಕ ಇಳಿಸಿಕೊಳ್ಳಲು ಬಯಸಿದರೆ, ಬೇಸಿಗೆಯಲ್ಲಿ ನೀವು ಖಂಡಿತವಾಗಿಯೂ ಸೋಂಪು ನೀರನ್ನು ಕುಡಿಯಬೇಕು. ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ನಿಮ್ಮ ಹಸಿವನ್ನು ನಿಯಂತ್ರಿಸುತ್ತದೆ.

ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ: ಸೋಂಪು ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ ಮತ್ತು ಕೂದಲನ್ನು ಬೇರುಗಳಿಂದ ಬಲಪಡಿಸುತ್ತವೆ.

ಸೋಂಪು ನೀರನ್ನು ಹೇಗೆ ತಯಾರಿಸುವುದು?

ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ಒಂದು ಟೀಚಮಚ ಸೋಂಪು ಬೀಜಗಳನ್ನು ನೆನೆಸಿಡಿ. ಬೆಳಿಗ್ಗೆ ನೀರನ್ನು ಸೋಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಬೇಕಾದರೆ, ನೀವು ಅದನ್ನು ಬಿಸಿ ಮಾಡಬಹುದು. ನೀವು ಅದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ನಿಂಬೆಹಣ್ಣನ್ನು ಕೂಡ ಸೇರಿಸಬಹುದು. ಇದಲ್ಲದೆ  ಸೋಂಪು ಕಾಳು ಮತ್ತು ಕಲ್ಲು ಸಕ್ಕರೆಯನ್ನು  ಪುಡಿ ಮಾಡಿ ಇಟ್ಟುಕೊಂಡು ತಣ್ಣೀರಿನಲ್ಲಿ ಬೆರೆಸಿ ಸ್ವಲ್ಪ ನಿಂಬೆ ರಸ ಸೇರಿಸಿ ಕುಡಿಯಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us