Palm wine: ಬೇಸಿಗೆಯಲ್ಲಿ ಶೇಂದಿ ಸೇವನೆ ಮಾಡಿದರೆ ಈ ಆರೋಗ್ಯ ಸಮಸ್ಯೆ ಬರುವುದಿಲ್ಲ
ಬೇಸಿಗೆಯಲ್ಲಿ ಶೇಂದಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಕೆಲವು ಭಾಗದಲ್ಲಿ ಸಮಾರಂಭಗಳಲ್ಲಿಯೂ ಇದನ್ನು ಕುಡಿಯಲು ನೀಡಲಾಗುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರೂ ಇದನ್ನು ಕುಡಿಯುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಬೇಸಿಗೆಯಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ. ಸಾಮಾನ್ಯವಾಗಿ ಕಳಿ, ದೇಹಕ್ಕೆ ತಂಪನ್ನು ನೀಡುವುದಲ್ಲದೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಹಾಗಾದರೆ ಬೇಸಿಗೆಯಲ್ಲಿ ಕಳಿ ಕುಡಿದರೆ ಯಾವ ರೀತಿಯ ಉಪಯೋಗವಿದೆ? ಆರೋಗ್ಯಕ್ಕೆ ಹೇಗೆ ಪೂರಕ ಎಂಬುದನ್ನು ತಿಳಿದುಕೊಳ್ಳಿ.

ಕಳಿ(Palm wine) ಅಥವಾ ಶೇಂದಿ(Shendi) ಅಥವಾ ಕಳ್ಳು(neera) ಎಂಬ ಹೆಸರನ್ನು ಎಲ್ಲರೂ ಕೇಳಿರುತ್ತಾರೆ. ಉತ್ತರ ಭಾರತದಲ್ಲಿ ಇದನ್ನು ನೀರಾ(neera) ಎನ್ನುತ್ತಾರೆ. ಈ ಬಗ್ಗೆ ಹಳ್ಳಿ ಜನರಿಗೆ ಹೆಚ್ಚಾಗಿ ತಿಳಿದಿರುತ್ತದೆ. ವಿವಿಧ ಹೆಸರುಗಳಿಂದ ಕರೆಯಲ್ಪಡುವ ಈ ಸೇಂದಿ ಅಥವಾ ಶೇಂದಿ ತಾಳೆ ಜಾತಿಗೆ ಸೇರಿದ ವಿವಿಧ ಮರಗಳಾದ ತಾಳೆ(palm trees), ಈಚಲು(palmyra), ತೆಂಗಿನ ಮರ(coconut palms) ಗಳಿಂದ ತೆಗೆಯಲಾಗುತ್ತದೆ. ಹಲವರು ಇದನ್ನು ಬೆಳಿಗ್ಗೆ ಮತ್ತು ಸಂಜೆ ಇಷ್ಟಪಟ್ಟು ಕುಡಿಯುತ್ತಾರೆ. ಕೆಲವು ಭಾಗದಲ್ಲಿ ಸಮಾರಂಭಗಳಲ್ಲಿಯೂ ಇದನ್ನು ಕುಡಿಯಲು ನೀಡಲಾಗುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರೂ ಇದನ್ನು ಕುಡಿಯುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಎಲ್ಲಕ್ಕಿಂತ ಮುಖ್ಯವಾಗಿ, ಬೇಸಿಗೆಯಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ. ಸಾಮಾನ್ಯವಾಗಿ ಕಳಿ, ದೇಹಕ್ಕೆ ತಂಪನ್ನು ನೀಡುವುದಲ್ಲದೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಆದರೆ ಕೆಲವರು ಇದನ್ನು ಆಲ್ಕೋಹಾಲ್(Alcohol) ಎಂದು ತಿಳಿದು ಕುಡಿಯಲು ಹೆದರುತ್ತಾರೆ. ನಿಜವಾಗಿಯೂ ಕಳಿ ಕುಡಿಯುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ ಎಂದು ತಜ್ಞರು ಕೂಡ ಹೇಳುತ್ತಾರೆ. ಹಾಗಾದರೆ ಬೇಸಿಗೆಯಲ್ಲಿ ಕಳಿ ಕುಡಿದರೆ ಯಾವ ರೀತಿಯ ಉಪಯೋಗವಿದೆ? ಆರೋಗ್ಯಕ್ಕೆ ಹೇಗೆ ಪೂರಕ ಎಂಬುದನ್ನು ತಿಳಿದುಕೊಳ್ಳಿ.
ಕಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇತ್ತೀಚಿನ ದಿನಗಳಲ್ಲಿ ಅದರ ಹೆಸರಿನಲ್ಲಿ ಅನೇಕ ರೀತಿಯ ಕಲಬೆರಕೆಗಳು ನಡೆಯುತ್ತಿದೆ. ಇದರ ಹೊರತಾಗಿ ತಾಜಾ ಮರದಿಂದ ತೆಗೆದ ಕಳಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಏಕೆಂದರೆ ಇದು ಅನೇಕ ರೀತಿಯ ಔಷಧೀಯ ಗುಣಗಳನ್ನು ಹೊಂದಿದೆ. ಇದರಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ವಿಟಮಿನ್ ಸಿ, ಬಿ, ಕಬ್ಬಿಣ ಮತ್ತು ಪ್ರೋಟೀನ್ಗಳಿಂದ ಸಮೃದ್ಧವಾಗಿದ್ದು ಇದರ ಸೇವನೆಯಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಆಗುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮುಖ ಪಾತ್ರ ವಹಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಕ್ಯಾನ್ಸರ್ ತಡೆಯುವ ಶಕ್ತಿ ಇದೆ
ದೇಹವನ್ನು ಹೈಡ್ರೀಕರಿಸುವುದರ ಹೊರತಾಗಿ, ಇದು ಕ್ಯಾನ್ಸರ್ ತಡೆಯಲು ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ ತಾಜಾ ಸೇಂದಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಆಗಿರುವ ವಿಟಮಿನ್ ಬಿ2 ಇದೆ. ಕ್ಯಾನ್ಸರ್ ಉಂಟುಮಾಡುವ ಫ್ರೀ ರಾಡಿಕಲ್ ವಿರುದ್ಧ ಹೋರಾಡಲು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕಾಗಿಯೇ ಇದನ್ನು ಅನೇಕ ದೇಶಗಳಲ್ಲಿ ಕ್ಯಾನ್ಸರ್ ವಿರೋಧಿ ಔಷಧವಾಗಿಯೂ ಬಳಸಲಾಗುತ್ತದೆ. ಅಲ್ಲದೆ ಅತಿಸಾರ ಮತ್ತು ಟೈಫಾಯಿಡ್ನಂತಹ ಕಾಯಿಲೆಗಳಿಗೆ ಪ್ರತಿಜೀವಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಆಹಾರದ ಜೀರ್ಣಕ್ರಿಯೆ, ಮಲಬದ್ಧತೆ, ಹುಣ್ಣು, ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ಕಳಿ ಕುಡಿಯುವುದರಿಂದ ಹೊಟ್ಟೆ ಸ್ವಚ್ಛವಾಗುವುದಲ್ಲದೆ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿ ಎಂದು ತಜ್ಞರು ಹೇಳುತ್ತಾರೆ.
ಹೃದ್ರೋಗದ ಅಪಾಯ ಕಡಿಮೆಯಾಗುತ್ತೆ
ಶೇಂದಿಯಲ್ಲಿ ವಿಟಮಿನ್ ಸಿ ಮತ್ತು ಥಯಾಮಿನ್ ಸಮೃದ್ಧವಾಗಿದೆ. ಇವು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿಯೇ ಅನೇಕ ಜನರು ತಮ್ಮ ದೃಷ್ಟಿ ಸುಧಾರಿಸಲು ತಾಜಾ ಶೇಂದಿ ಅಥವಾ ಸೇಂದಿಯನ್ನು ಕುಡಿಯುತ್ತಾರೆ. ಮಿತವಾಗಿ ಕಳ್ಳು ಕುಡಿಯುವುದರಿಂದ ಹೃದ್ರೋಗದ ಅಪಾಯ ಕಡಿಮೆಯಾಗುತ್ತದೆ. ಏಕೆಂದರೆ ಇದರಲ್ಲಿರುವ ಪೊಟ್ಯಾಶಿಯಂ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಕಳ್ಳು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ಆದರೆ ಇದನ್ನು ಅತಿಯಾಗಿ ಸೇವನೆ ಮಾಡಬಾರದು ಎಂದು ವೈದ್ಯರು ಹೇಳುತ್ತಾರೆ.
ಇದನ್ನೂ ಓದಿ: ಆಹಾರದಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳು ಸೇರದಂತೆ ತಡೆಯಲು ಈ ರೀತಿ ಮಾಡಿ
ಗರ್ಭಿಣಿಯರ ಆರೋಗ್ಯಕ್ಕೂ ಒಳ್ಳೆಯದು;
ಸಾಮಾನ್ಯವಾಗಿ ದಕ್ಷಿಣ ಕನ್ನಡ ಭಾಗದಲ್ಲಿ ಸೀಮಂತ ಮಾಡುವಾಗ ಗರ್ಭಿಣಿಯರಿಗೆ ಇದನ್ನು ಕುಡಿಯಲು ಕೊಡುತ್ತಾರೆ. ಇದು ಹುಟ್ಟುವ ಮಗುವಿನ ಆರೋಗ್ಯಕ್ಕೆ ಒಳ್ಳೆಯದು ಜೊತೆಗೆ ತುಂಬು ಗರ್ಭಿಣಿಯ ಆರೋಗ್ಯಕ್ಕೂ ಒಳ್ಳೆಯದಾಗಿದೆ. ಅಲ್ಲದೆ ದೈವ ಕೋಲ ನಡೆಯುವ ಸಂದರ್ಭಗಳಲ್ಲಿ ಇದನ್ನು ನೈವೇದ್ಯ ಮಾಡಿ ಸಣ್ಣ ಮಕ್ಕಳಿಗೆ ಅದರಲ್ಲಿಯೂ ಆರೋಗ್ಯ ಸಮಸ್ಯೆಗಳಿರುವ ಮಕ್ಕಳಿಗೆ ಕುಡಿಯಲು ನೀಡುತ್ತಾರೆ. ಇದರಿಂದ ರೋಗ ಬಾಧೆಗಳಿಂದ ಮುಕ್ತಿ ಸಿಗುವುದಲ್ಲದೆ ದೇಹದ ಆರೋಗ್ಯ ಚೆನ್ನಾಗಿರುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ