Sign In

By signing in or creating an account, you agree with Associated Broadcasting Company's Terms & Conditions and Privacy Policy.

Urine Color Alert: ಮೂತ್ರದ ಬಣ್ಣದಿಂದ ನಿಮಗಿರುವ ಆರೋಗ್ಯ ಸಮಸ್ಯೆಯನ್ನು ತಿಳಿಯಬಹುದು

ಸಾಮಾನ್ಯವಾಗಿ ಜ್ವರ ಬಂದಾಗ ಅಥವಾ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗೆ ನಾನಾ ರೀತಿಯ ಔಷಧಿಗಳನ್ನು ಬಳಸಿದಾಗ ಮೂತ್ರವು ತಕ್ಷಣ ಹಳದಿ ಬಣ್ಣಕ್ಕೆ ತಿರುಗುತ್ತದೆ. ಕೆಲವೊಮ್ಮೆ ನಾವು ತಿನ್ನುವ ಆಹಾರ ಅವಲಂಬಿಸಿ ಬಣ್ಣವೂ ಬದಲಾಗುತ್ತದೆ. ಇದು ಸಾಮಾನ್ಯ ವಿಷಯ. ಆದರೆ ಕೆಲವು ಸಂದರ್ಭಗಳಲ್ಲಿ, ಮೂತ್ರದ ಬಣ್ಣವು ಕೆಂಪು, ಬಿಳಿ ಮತ್ತು ಗಾಢ ಹಳದಿ ಬಣ್ಣಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ರೀತಿ ಕಂಡು ಬಂದರೆ ಅವುಗಳಿಗೆ ಬಲವಾದ ಕಾರಣಗಳಿವೆ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಮೂತ್ರ ಯಾವ ಬಣ್ಣದಲ್ಲಿದ್ದರೆ ಒಳ್ಳೆಯದು? ಮೂತ್ರ ಗಾಢ ಹಳದಿ, ಕೆಂಪು ಬಣ್ಣಕ್ಕೆ ತಿರುಗಿದರೆ ಅದರ ಅರ್ಥವೇನು ತಿಳಿದುಕೊಳ್ಳಿ.

Urine Color Alert: ಮೂತ್ರದ ಬಣ್ಣದಿಂದ ನಿಮಗಿರುವ ಆರೋಗ್ಯ ಸಮಸ್ಯೆಯನ್ನು ತಿಳಿಯಬಹುದು
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 11, 2025 | 10:33 AM

ನಮ್ಮ ಆರೋಗ್ಯ( Health) ಹೇಗಿದೆ ಎಂಬುದನ್ನು ನಾವು ಹಲವು ರೀತಿಯಲ್ಲಿ ತಿಳಿದುಕೊಳ್ಳಬಹುದು. ನಮಗೆ ಇರುವ ಆರೋಗ್ಯ ಸಮಸ್ಯೆಯನ್ನು ತಿಳಿಯಲು ದೇಹ ಹಲವಾರು ರೀತಿಯ ಮುನ್ಸೂಚನೆಗಳನ್ನು ನೀಡುತ್ತದೆ. ಅದರಲ್ಲಿ ಮೂತ್ರವು((Urine) ಒಂದು. ಸಾಮಾನ್ಯವಾಗಿ ಇದು, ನಮ್ಮ ದೇಹದ ಕಾರ್ಯನಿರ್ವಹಣೆ ಮತ್ತು ಬಹಳಷ್ಟು ಆರೋಗ್ಯ ಸಮಸ್ಯೆಗಳ ಬಗ್ಗೆ ಬಹಿರಂಗಪಡಿಸುತ್ತದೆ. ಬಾಯಿಯ ಮೂಲಕ ಸೇವಿಸುವ ಪ್ರತಿಯೊಂದು ಆಹಾರದಲ್ಲಿರುವ ವಿಷವನ್ನು ಹೊರಹಾಕುವುದು ಮೂತ್ರಪಿಂಡ(Kidney) ಗಳ ಜವಾಬ್ದಾರಿಯಾಗಿದೆ. ಅದಕ್ಕಾಗಿಯೇ ಮೂತ್ರಪಿಂಡದ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು. ಕಿಡ್ನಿಗೆ ಹಾನಿಯಾದರೆ, ಅದರಿಂದ ಹೊರಬರುವುದು ಸುಲಭವಲ್ಲ. ಹಾಗಾಗಿ ನಮ್ಮ ಮೂತ್ರದ ಬಣ್ಣ(Urine Color) ವನ್ನು ಅವಲಂಬಿಸಿ ಮೂತ್ರಪಿಂಡಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ನಾವು ಗುರುತಿಸಬಹುದು ಎಂದು ವೈದ್ಯರು ಹೇಳುತ್ತಾರೆ. ವ್ಯಕ್ತಿ ಅನಾರೋಗ್ಯಕ್ಕೆ ಒಳಗಾದರೆ, ತಕ್ಷಣ ಮೂತ್ರದ ಬಣ್ಣದಲ್ಲಿ ಬದಲಾವಣೆ ಕಂಡುಬರುತ್ತದೆ. ಆದರೆ ಅದನ್ನು ತಿಳಿಯುವುದು ಹೇಗೆ? ಮೂತ್ರ ಯಾವ ಬಣ್ಣದಲ್ಲಿದ್ದರೆ ಒಳ್ಳೆಯದು? ಮೂತ್ರ ಗಾಢ ಹಳದಿ, ಕೆಂಪು ಬಣ್ಣಕ್ಕೆ ತಿರುಗಿದರೆ ಅದರ ಅರ್ಥವೇನು ತಿಳಿದುಕೊಳ್ಳಿ.

ಸಾಮಾನ್ಯವಾಗಿ ಜ್ವರ ಬಂದಾಗ ಅಥವಾ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗೆ ನಾನಾ ರೀತಿಯ ಔಷಧಿಗಳನ್ನು ಬಳಸಿದಾಗ ಮೂತ್ರವು ತಕ್ಷಣ ಹಳದಿ ಬಣ್ಣಕ್ಕೆ ತಿರುಗುತ್ತದೆ. ಕೆಲವೊಮ್ಮೆ ನಾವು ತಿನ್ನುವ ಆಹಾರ ಅವಲಂಬಿಸಿ ಬಣ್ಣವೂ ಬದಲಾಗುತ್ತದೆ. ಇದು ಸಾಮಾನ್ಯ ವಿಷಯ. ಆದರೆ ಕೆಲವು ಸಂದರ್ಭಗಳಲ್ಲಿ, ಮೂತ್ರದ ಬಣ್ಣವು ಕೆಂಪು, ಬಿಳಿ ಮತ್ತು ಗಾಢ ಹಳದಿ ಬಣ್ಣಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ರೀತಿ ಕಂಡು ಬಂದರೆ ಅವುಗಳಿಗೆ ಬಲವಾದ ಕಾರಣಗಳಿವೆ ಎಂದು ತಜ್ಞರು ಹೇಳುತ್ತಾರೆ.

ಕೆಂಪು ಬಣ್ಣ

ಕೆಲವೊಮ್ಮೆ ಬೀಟ್ರೂಟ್ ಬಣ್ಣದ ಪದಾರ್ಥಗಳನ್ನು ಸೇವಿಸಿದಾಗ ಮೂತ್ರವು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಆದರೆ ಅದರ ಹೊರತಾಗಿ ಕೆಲವು ಸಂದರ್ಭಗಳಲ್ಲಿ, ಮೂತ್ರ ಕೆಂಪು ಬಣ್ಣದಲ್ಲಿ ಇದ್ದರೆ, ಅವು ನಿಮ್ಮ ಮೂತ್ರಪಿಂಡಗಳ ಅನಾರೋಗ್ಯವನ್ನು ಸೂಚಿಸುತ್ತದೆ. ಕಿಡ್ನಿಗಳಲ್ಲಿ ಕಲ್ಲುಗಳು ಮತ್ತು ಇತರ ಸಮಸ್ಯೆಗಳು ಇದ್ದಾಗ ಮಾತ್ರ ಮೂತ್ರ ರಕ್ತದ ಬಣ್ಣಕ್ಕೆ ತಿರುಗುತ್ತದೆ. ಅದಕ್ಕಾಗಿಯೇ ಈ ರೀತಿ ಕಂಡು ಬಂದಾಗ ಅವುಗಳನ್ನು ಗಂಭೀರ ಆರೋಗ್ಯ ಸಮಸ್ಯೆ ಎಂದು ಪರಿಗಣಿಸಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಇದನ್ನೂ ಓದಿ
Image
ಮಡಕೆಯಲ್ಲಿ ಇಟ್ಟ ಮೊಸರು ಹುಳಿ ಬರದಿರಲು ಕಾರಣವೇನು?
Image
ಎಬಿಸಿ ಜ್ಯೂಸ್ ಕುಡಿಯುವ ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳಿ
Image
ಮಕ್ಕಳಲ್ಲಿ ಅತಿಯಾದ ಬೊಜ್ಜು ನಾನಾ ಸಮಸ್ಯೆಗೆ ಕಾರಣ: ಎಚ್ಚರಿಸಿದ ವರದಿ!
Image
ಬಿಸಿಲಿನಲ್ಲಿ ತಣ್ಣಗಿರುವ ಕಬ್ಬಿನ ರಸ ಕುಡಿಯುವವರು ಈ ವಿಷಯಗಳನ್ನು ಮರೆಯಬೇಡಿ

ಗಾಢ ಹಳದಿ, ಕಿತ್ತಳೆ ಬಣ್ಣ

ಮೂತ್ರದ ನೈಸರ್ಗಿಕ ಬಣ್ಣ ತಿಳಿ ಹಳದಿ. ಆದರೆ ಗಾಢ ಹಳದಿ, ಕಿತ್ತಳೆ ಬಣ್ಣದ ಮೂತ್ರವು ನಿಮ್ಮ ದೇಹಕ್ಕೆ ಹೆಚ್ಚು ನೀರಿನ ಅವಶ್ಯಕತೆ ಇದೆ ಎಂಬುದರ ಸಂಕೇತವಾಗಿದೆ. ಅತಿಯಾದ ಕೆಲಸದ ಒತ್ತಡ, ವ್ಯಾಯಾಮದ ಕೊರತೆ ಮತ್ತು ಬಿಸಿಯಾದ ಸ್ಥಳಗಳಲ್ಲಿ ಹೆಚ್ಚು ಸಮಯ ಕಳೆಯುವುದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಇದನ್ನು ನಿರ್ಲಕ್ಷ್ಯ ಮಾಡಿದರೆ ಮೂತ್ರಪಿಂಡದಲ್ಲಿ ಕಲ್ಲುಗಳು ಕಾಣಿಸಿಕೊಳ್ಳುತ್ತದೆ.

ಹಾಲಿನ ಬಣ್ಣ

ಮೂತ್ರದಲ್ಲಿ ಸೋಂಕು ಇದ್ದಾಗ ಮೂತ್ರವು ಬಿಳಿಯಾಗಿ ಕಾಣುತ್ತದೆ. ಇದು ಬ್ಯಾಕ್ಟೀರಿಯಾ, ಇತರ ಸೋಂಕುಗಳನ್ನು ಸೂಚಿಸುತ್ತದೆ.

ಕಾಫಿ ಬಣ್ಣ

ಮೂತ್ರವು ಕಾಫಿ ಅಥವಾ ಕಂದು ಬಣ್ಣದಲ್ಲಿದ್ದರೆ ಅದು ಯಕೃತ್ತಿನ ಕಾಯಿಲೆಯನ್ನು ಸೂಚಿಸುತ್ತದೆ. ಈ ಸಂದರ್ಭಗಳಲ್ಲಿ ನೀವು ವೈದ್ಯರನ್ನು ಸಂಪರ್ಕಿಸಬೇಕು.

ಇದನ್ನೂ ಓದಿ: ಬೊಜ್ಜಿನ ಸಮಸ್ಯೆಯಿಂದ ಮುಕ್ತಿ ಬೇಕಾದರೆ ಮಾವಿನ ಹಣ್ಣನ್ನು ತಿನ್ನಿ

ಹಸಿರು ಅಥವಾ ನೀಲಿ ಬಣ್ಣ

ಮೂತ್ರ ಹಸಿರು ಬಣ್ಣಕ್ಕೆ ತಿರುಗುವುದು ಬ್ಯಾಕ್ಟೀರಿಯಾದ ಸೋಂಕಿನಿಂದ ಆಗಿರಬಹುದು. ಅಥವಾ ನೀವು ಕೃತಕ ಬಣ್ಣಗಳನ್ನು ಬಳಸುವ ಆಹಾರವನ್ನು ಸೇವಿಸಿದಾಗ ಸಹ, ಮೂತ್ರವು ಹಸಿರು ಅಥವಾ ನೀಲಿ ಬಣ್ಣದಲ್ಲಿರುತ್ತದೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:32 am, Tue, 11 March 25