Alcohol: ಇದ್ದಕ್ಕಿದ್ದಂತೆ ಮದ್ಯಪಾನ ಮಾಡುವುದನ್ನು ನಿಲ್ಲಿಸಿದರೆ ಏನಾಗುತ್ತೆ ಗೊತ್ತಾ?
ನೀವು ಇದ್ದಕ್ಕಿದ್ದಂತೆ ಮದ್ಯಪಾನ ಮಾಡುವುದನ್ನು ನಿಲ್ಲಿಸಿದರೆ, ಕೆಲವರಲ್ಲಿ ಗಂಭೀರ ಸಮಸ್ಯೆಗಳು ಉಂಟಾಗಬಹುದು. ಕೆಲವರಿಗೆ ಉದ್ವಿಗ್ನತೆ ಮತ್ತು ದಣಿವು ಹೆಚ್ಚಾಗಬಹುದು. ವರ್ಷಗಳ ಕಾಲ ಮದ್ಯಪಾನ ಮಾಡುವುದನ್ನು ನಿಲ್ಲಿಸಿದಲ್ಲಿ ನಿಮಗೆ ಮಾನಸಿಕ ಸಮಸ್ಯೆಗಳು ಉಂಟಾಗುವ ಅಪಾಯವಿದೆ ಎಂದು ವೈದ್ಯರು ಹೇಳುತ್ತಾರೆ. ತಜ್ಞರು ಹೇಳುವ ಪ್ರಕಾರ, ಇದ್ದಕ್ಕಿದ್ದಂತೆ ಆಲ್ಕೋಹಾಲ್ ಸೇವನೆ ಮಾಡುವುದನ್ನು ನಿಲ್ಲಿಸಿದರೆ ದೇಹಕ್ಕೆ ತೊಂದರೆಗಳಾಗುತ್ತವೆ. ಹಾಗಾದರೆ ಇದರಿಂದಾಗುವ ಸಮಸ್ಯೆಗಳೇನು ತಿಳಿದುಕೊಳ್ಳಿ.

ಅತಿಯಾದ ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದು ತಿಳಿದಿರುವ ವಿಚಾರ. ಆದರೂ ಹೆಚ್ಚಿನವರಿಗೆ ಮದ್ಯಪಾನ ಬಿಡುವುದಕ್ಕೆ ಸಾಧ್ಯವಾಗುವುದಿಲ್ಲ. ನೀವು ಪ್ರತಿನಿತ್ಯ ಕುಡಿಯದಿದ್ದರೂ, ಒಂದೆರಡು ಬಾರಿ ಆಲ್ಕೋಹಾಲ್ ಸೇವಿಸಿದರೂ, ಅವು ದೇಹಕ್ಕೆ ಹೋಗಿ ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಪ್ರತಿದಿನ ಮದ್ಯಪಾನ ಮಾಡುವವರು ಒಮ್ಮೆಲೇ ಅದನ್ನು ನಿಲ್ಲಿಸಿದರೆ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು. ತಜ್ಞರು ಹೇಳುವ ಪ್ರಕಾರ, ಇದ್ದಕ್ಕಿದ್ದಂತೆ ಆಲ್ಕೋಹಾಲ್ ಸೇವನೆ ಮಾಡುವುದನ್ನು ನಿಲ್ಲಿಸಿದರೆ ದೇಹಕ್ಕೆ ತೊಂದರೆಗಳಾಗುತ್ತವೆ. ಹಾಗಾದರೆ ಇದರಿಂದಾಗುವ ಸಮಸ್ಯೆಗಳೇನು ತಿಳಿದುಕೊಳ್ಳಿ.
ಮಾನಸಿಕ ಸಮಸ್ಯೆಗಳು ಉಂಟಾಗಬಹುದು
ನೀವು ಇದ್ದಕ್ಕಿದ್ದಂತೆ ಮದ್ಯಪಾನ ಮಾಡುವುದನ್ನು ನಿಲ್ಲಿಸಿದರೆ, ಕೆಲವರಲ್ಲಿ ಗಂಭೀರ ಸಮಸ್ಯೆಗಳು ಉಂಟಾಗಬಹುದು. ಕೆಲವರಿಗೆ ಉದ್ವಿಗ್ನತೆ ಮತ್ತು ದಣಿವು ಹೆಚ್ಚಾಗಬಹುದು. ವರ್ಷಗಳ ಕಾಲ ಮದ್ಯಪಾನ ಮಾಡುವುದನ್ನು ನಿಲ್ಲಿಸಿದಲ್ಲಿ ನಿಮಗೆ ಮಾನಸಿಕ ಸಮಸ್ಯೆಗಳು ಕಂಡುಬರುವ ಅಪಾಯವಿದೆ ಎಂದು ವೈದ್ಯರು ಹೇಳುತ್ತಾರೆ. ಅದರಲ್ಲಿಯೂ ಮದ್ಯಪಾನ ಮಾಡುವುದನ್ನು ನಿಲ್ಲಿಸಿದವರ ಹಲವರ ಕಿವಿಗಳಲ್ಲಿ ದೊಡ್ಡ ಶಬ್ದಗಳು ಕೇಳಿಬರುವ ಅನುಭವಾಗುತ್ತದೆ. ಅಷ್ಟೇ ಅಲ್ಲ, ಯಾರೋ ಅವರನ್ನು ಕರೆಯುತ್ತಿರುವಂತೆ ಭಾಸವಾಗುತ್ತದೆ. ಇದು ಸರಳವಾಗಿ ಹೇಳುವುದಾದರೆ ಒಂದು ರೀತಿಯ ಸಿಂಡ್ರೋಮ್ ಆಗಿದ್ದು ವ್ಯಸನದಿಂದ ಹೊರಬಂದಾಗ ಕಂಡು ಬರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಕೋಮಾಗೆ ಹೋಗಬಹುದು
ಹಲವು ವರ್ಷಗಳಿಂದ ಮದ್ಯಪಾನ ಮಾಡುತ್ತಿರುವ ವ್ಯಕ್ತಿ ಒಂದಲ್ಲ ಒಂದು ಕಾರಣಕ್ಕೆ ಅದನ್ನು ನಿಲ್ಲಿಸಿದರೆ ಮೂರು ದಿನಗಳಲ್ಲಿ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೋಪ, ಮುಂದೆ ಏನಿದೆ ಎಂದು ತಿಳಿಯದ ಪರಿಸ್ಥಿತಿ, ಮಾತನಾಡುವಾಗ ಅಥವಾ ಕೆಲಸ ಮಾಡುವಾಗ ಗೊಂದಲಕ್ಕೆ ಒಳಗಾಗುವುದು ಜೊತೆಗೆ ಕೆಲವೊಮ್ಮೆ ಕೋಮಾಗೆ ಹೋಗುವ ಅಪಾಯವೂ ಇದೆ. ಕೆಲವರಂತೂ ಸರಿಯಾಗಿ ಆಹಾರ ಸೇವನೆ ಮಾಡದೆಯೇ ಹಗಲು, ರಾತ್ರಿ ಮದ್ಯಪಾನ ಮಾಡುತ್ತಾರೆ. ಅಂತಹ ಜನರು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುತ್ತಾರೆ. ಅಂತವರು ಹಠಾತ್ ಆಲ್ಕೋಹಾಲ್ ಸೇವನೆಯನ್ನು ನಿಲ್ಲಿಸುವುದರಿಂದ ಮಾನಸಿಕ ಸಮಸ್ಯೆಗಳು ಹೆಚ್ಚಾಗಿ ನರವೈಜ್ಞಾನಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಹಂತದಲ್ಲಿ ವ್ಯಕ್ತಿ ಎಲ್ಲವನ್ನೂ ಮರೆತುಬಿಡುವ ಅಪಾಯ ಹೆಚ್ಚಾಗಿರುತ್ತದೆ.
ಇದನ್ನೂ ಓದಿ: ಬಾಯಿ ಹುಣ್ಣನ್ನು ಹಗುರವಾಗಿ ತೆಗೆದುಕೊಳ್ಳಬೇಡಿ? ಇದು ಅಪಾಯಕಾರಿ ಕಾಯಿಲೆಗಳ ಲಕ್ಷಣ
ಆಲ್ಕೋಹಾಲ್ ಸೇವನೆಯನ್ನು ನಿಲ್ಲಿಸಲು ಬಯಸುವವರು ಅದನ್ನು ಕ್ರಮೇಣ ಕಡಿಮೆ ಮಾಡಬೇಕು. ಒಂದು ತಿಂಗಳಲ್ಲಿ ಇಷ್ಟು ಬಾರಿ ಅಥವಾ ವಾರಕ್ಕೆ ಒಂದು ಬಾರಿ ಹೀಗೆ ಕುಡಿಯುವುದನ್ನು ಕಡಿಮೆ ಮಾಡಿ. ಬಳಿಕ ಅದನ್ನು ಪೂರ್ತಿಯಾಗಿ ನಿಲ್ಲಿಸಬೇಕು. ಅದರ ಬದಲು ಒಮ್ಮೆಲೇ ಮಧ್ಯ ಕುಡಿಯುವುದನ್ನು ನಿಲ್ಲಿಸಿದರೆ ಒಳ್ಳೆಯದಕ್ಕಿಂತ ಅಪಾಯವೇ ಹೆಚ್ಚಾಗುತ್ತದೆ. ಹಾಗಾಗಿ ದೇಹದ ಮೇಲೆ ಯಾವುದೇ ರೀತಿಯ ಅಡ್ಡಪರಿಣಾಮಗಳು ಉಂಟಾಗುವುದನ್ನು ತಡೆಯಲು ಆಲ್ಕೋಹಾಲ್ ಸೇವನೆಯನ್ನು ಕ್ರಮೇಣ ಕಡಿಮೆ ಮಾಡಿ ಎಂದು ವೈದ್ಯರು ಹೇಳುತ್ತಾರೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ