ಜೀವಕ್ಕೆ ಕುತ್ತು ತಂದ ಡಯಟ್; ಸ್ಲಿಮ್ ಆಗಿ ಕಾಣಲು ತೂಕ ಇಳಿಸಿಕೊಳ್ಳುವ ಭರದಲ್ಲಿ ಯುವತಿಯ ಪ್ರಾಣವೇ ಹೋಯ್ತು
ಈ ಡಿಜಿಟಲ್ ಯುಗದಲ್ಲಿ ಜನ ಎಲ್ಲದಕ್ಕೂ ಗೂಗಲ್, ಯುಟ್ಯೂಟ್ ಅಂತೆಲ್ಲಾ ಆನ್‌ಲೈನ್‌ನಲ್ಲಿಯೇ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಬ್ಬಳು ಯುವತಿ ತೂಕ ಇಳಿಸಿಕೊಳ್ಳುವ ಭರದಲ್ಲಿ ಯುಟ್ಯೂಬ್ ನೋಡಿ ಡಯಟ್ ಫಾಲೋ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಅನೋರೆಕ್ಸಿಯಾ ನರ್ವೋಸಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಆಕೆ ತೂಕ ಹೆಚ್ಚಾಗೋ ಭಯದಲ್ಲಿ ಡಯಟ್ ಫಾಲೋ ಮಾಡಲು ಹೋಗಿ ಸಾವನ್ನಪ್ಪಿದ್ದಾಳೆ.

ಕೇರಳ, ಮಾ. 11: ಇತ್ತೀಚಿನ ದಿನಗಳಲ್ಲಿ ಯುವ ಜನರು ಸ್ಲಿಮ್ (Slim) ಹಾಗೂ ಫಿಟ್ (Fit) ಆಗಿ ಕಾಣಲು ಹಲವಾರು ಸರ್ಕಸ್‌ಗಳನ್ನು ಮಾಡುತ್ತಿರುತ್ತಾರೆ. ಕೆಲವರು ಜಿಮ್‌ಗೆ ವ್ಯಾಯಾಮಾ, ಕಸರತ್ತುಗಳನ್ನು ಮಾಡಿದ್ರೆ, ಕೆಲವರು ತಜ್ಞರ ಸಲಹೆಯ ಮೇರೆಗೆ ಡಯಟ್ (Diet) ಫಾಲೋ ಮಾಡ್ತಾರೆ. ಇನ್ನೂ ಈಗಂತೂ ಹೆಚ್ಚಿನವರು ಸುಮ್ನೆ ಖರ್ಚು ಯಾಕೆ ಎನ್ನುತ್ತಾ ಆನ್‌ಲೈನ್‌ನಲ್ಲಿ ಸಿಕ್ಕ ಸಿಕ್ಕ ಮಾಹಿತಿಯನ್ನು ನಂಬಿ ಡಯಟ್ ಫಾಲೋ ಮಾಡ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬಳು 18 ವರ್ಷ ವಯಸ್ಸಿನ ಯುವತಿ ಯುಟ್ಯೂಬ್ ನೋಡಿ ಡಯಟ್ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಅನೋರೆಕ್ಸಿಯಾ ನರ್ವೋಸಾ (Anorexia Nervosa) ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಆಕೆ ತೂಕ ಹೆಚ್ಚಾಗೋ ಭಯದಲ್ಲಿ ಡಯಟ್ ಫಾಲೋ ಮಾಡಲು ಹೋಗಿ ಸಾವನ್ನಪ್ಪಿದ್ದಾಳೆ.
ಕೇರಳದಲ್ಲಿ ಈ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದ್ದು, ಇಲ್ಲಿನ ತಲಶ್ಶೇರಿಯ ಶ್ರೀನಂದಾ ಎಂಬ 18 ವರ್ಷದ ಹುಡುಗಿ ಯುಟ್ಯೂಬ್ ನೋಡಿ ಡಯಟ್ ಫಾಲೋ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಅನೋರೆಕ್ಸಿಯಾ ನರ್ವೋಸಾ ಎಂಬ ಅಸ್ವಸ್ಥತೆಯಿಂದ ಬಳಲುತ್ತಿದ್ದ ಆಕೆ ತೂಕ ಹೆಚ್ಚಾಗೋ ಭಯಕ್ಕೆ ಕಳೆದ ಹಲವು ತಿಂಗಳುಗಳಿಂದ ಸರಿಯಾಗಿ ಊಟ ತಿನ್ನದೆ ಸ್ಟ್ರಿಕ್ಟ್ ದಯಟ್ ಫಾಲೋ ಮಾಡಿ ಪ್ರಾಣ ಕಳೆದುಕೊಂಡಿದ್ದಾಳೆ.
ವೈದ್ಯರ ಪ್ರಕಾರ, ಶ್ರೀನಂದಾ ಕಳೆದ 5-6 ತಿಂಗಳುಗಳಿಂದ ಈ ಕಾಯಿಲೆಯಿಂದ ಬಳಲುತ್ತಿದ್ದು, ಆಕೆ ಹಲವಾರು ತಿಂಗಳುಗಳಿಂದ ಏನನ್ನೂ ತಿನ್ನುತ್ತಿರಲಿಲ್ಲ ಮತ್ತು ಈ ವಿಷಯವನ್ನು ಆಕೆ ತನ್ನ ಕುಟುಂಬ ಸದಸ್ಯರಿಂದಲೂ ಮುಚ್ಚಿಟ್ಟಿದ್ದಳು. ತೂಕ ಹೆಚ್ಚಾಗೋ ಭಯಕ್ಕೆ ಆಕೆ ಯುಟ್ಯೂಬ್ ನೋಡಿ ಡಯಟ್ ಮಾಡುತ್ತಿದ್ದಳು ಮತ್ತು ಆಕೆ ಯಾವ ಆಹಾರವನ್ನು ಸೇವನೆ ಮಾಡದೆ ಬರೀ ಬಿಸಿ ನೀರನ್ನು ಮಾತ್ರ ಸೇವನೆ ಮಾಡುತ್ತಿದ್ದಳು.
ನಂತರ ಆಕೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆ ತಂದಿದ್ದು, ವೈದ್ಯರು ಆ ಹುಡುಗಿಗೆ ಸಾಕಷ್ಟು ಆಹಾರವನ್ನು ನೀಡುವಂತೆ ಮತ್ತು ಮನೋವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು. ಆದರೆ ಎರಡು ವಾರಗಳ ಹಿಂದೆ ಇದ್ದಕ್ಕಿದ್ದಂತೆ ಶ್ರೀನಂದಾಳ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಯಿತು ಮತ್ತು ಆಕೆಗೆ ಉಸಿರಾಟದ ತೊಂದರೆಯೂ ಶುರುವಾಯಿತು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಆಕೆಯ ತೂಕ ಕೇವಲ 24 ಕೆಜಿ ಯಷ್ಟಿತ್ತು. ಐಸಿಯುನಲ್ಲಿ ಆಕೆಗೆ ಚಿಕಿತ್ಸೆ ನೀಡಿದರೂ, ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ.
ಇದನ್ನೂ ಓದಿ: ಫ್ಲಾಪ್ ಆದ ಮಾರ್ಕೆಟಿಂಗ್ ತಂತ್ರ; ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಬಟ್ಟೆ ಮಾರಲು ಹೋದವನ ಕೈಗೆ ಸಿಕ್ಕಿದ್ದು ಬರೀ ಚಿಪ್ಪು
ಏನಿದು ಅನೋರೆಕ್ಸಿಯಾ ನರ್ವೋಸಾ:
ಅನೋರೆಕ್ಸಿಯಾ ನರ್ವೋಸಾ ಒಂದು ಗಂಭೀರವಾದ ಅಸ್ವಸ್ಥತೆಯಾಗಿದ್ದು, ಈ ಕಾಯಿಲೆಗೆ ತುತ್ತಾದವರು ದೇಹ ತೂಕ ಹೆಚ್ಚಾಗುತ್ತೆ ಎಂಬ ತೀವ್ರ ಭಯವನ್ನು ಹೊಂದಿರುತ್ತಾರೆ. ಮತ್ತು ಇವರುಗಳು ಇದೇ ಭಯದಲ್ಲಿ ತೂಕ ಇಳಿಸಿಕೊಳ್ಳುವ ಗೀಳಿಲಿಂದ ಸರಿಯಾಗಿ ಆಹಾರ ಸೇವನೆ ಕೂಡಾ ಮಾಡುವುದಿಲ್ಲ. ಈ ಕಾಯಿಲೆ ತೂಕ ನಷ್ಟ, ಹೃದಯ ಸಂಬಂಧಿ ಕಾಯಿಲೆ ಮತ್ತು ಅಂಗಾಂಗ ವೈಫಲ್ಯ ಸೇರಿದಂತೆ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ