AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಲಿಸುತ್ತಿರುವ ಟ್ರೈನಿನಲ್ಲಿ ಡೇಂಜರಸ್‌ ಸ್ಟಂಟ್ ಮಾಡಲು ಹೋಗಿ ಪೇಚಿಗೆ ಸಿಲುಕಿದ ಯುವಕ; ಮುಂದೇನಾಯ್ತು ನೋಡಿ

ಚಲಿಸುತ್ತಿರುವ ರೈಲಿನಲ್ಲಿ ನಿಂತು ಅಧಿಕಪ್ರಸಂಗತನವನ್ನು ಮಾಡ್ಬಾರ್ದು ಎಂದು ಎಷ್ಟೇ ಎಚ್ಚರಿಕೆ ನೀಡಿದರೂ ಕ್ಯಾರೇ ಅನ್ನದೆ ಕೆಲ ಪುಂಡ ಯುವಕರು ಟ್ರೈನ್‌ನಲ್ಲಿ ಡೇಂಜರಸ್‌ ಸ್ಟಂಟ್‌ಗಳನ್ನು ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಸ್ಟಂಟ್‌ ಮಾಡಲು ಪಜೀತಿಗೆ ಸಿಲುಕಿದ್ದು, ಇನ್ನೇನೂ ಟ್ರೈನ್‌ನಿಂದ ಬೀಳುತ್ತಿದ್ದವನನ್ನು ಸಹ ಪ್ರಯಾಣಿಕರು ರಕ್ಷಣೆ ಮಾಡಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದ್ದು, ಯುವಕನ ಹುಚ್ಚಾಟಕ್ಕೆ ನೆಟ್ಟಿಗರು ಫುಲ್‌ ಗರಂ ಆಗಿದ್ದಾರೆ.

ಚಲಿಸುತ್ತಿರುವ ಟ್ರೈನಿನಲ್ಲಿ ಡೇಂಜರಸ್‌ ಸ್ಟಂಟ್ ಮಾಡಲು ಹೋಗಿ ಪೇಚಿಗೆ ಸಿಲುಕಿದ ಯುವಕ; ಮುಂದೇನಾಯ್ತು ನೋಡಿ
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Mar 11, 2025 | 2:09 PM

Share

ಉತ್ತರ ಪ್ರದೇಶ, ಮಾ. 11: ರೈಲು (Train) ಪ್ರಯಾಣದ ವೇಳೆ ಫುಟ್‌ ಬೋರ್ಡ್‌ಗಳಲ್ಲಿ ನಿಂತು ನೇತಾಡುವಂತಹದ್ದು, ತಲೆಯನ್ನು ಕಿಟಕಿಯಿಂದ ಹೊರ ಹಾಕಿ ಕಸರತ್ತುಗಳನ್ನು (Stunt) ಮಾಡುವುದು ತುಂಬಾನೇ ಅಪಾಯಕಾರಿ (Dangerous). ಹೀಗೆ ಹುಚ್ಚಾಟ ಮಾಡಲು ಹೋಗಿ ಅದೆಷ್ಟೋ ಜನ ಸಾವಿಗೀಡಾದ ಘಟನೆಗಳು ನಡೆದಿವೆ. ಇಷ್ಟೆಲ್ಲಾ ಉದಾಹರಣೆಗಳು ಕಣ್ಣ ಮುಂದೆ ಇದ್ದರೂ, ಈ ಬಗ್ಗೆ ಎಚ್ಚರಿಗೆ, ಜಾಗೃತಿ ಮೂಡಿಸಿದರೂ ಕೆಲ ಪುಂಡ ಯುವಕರು ಇದಕ್ಕೆಲ್ಲಾ ಕ್ಯಾರೇ ಅನ್ನದೆ ಸ್ಟಂಟ್‌ಗಳನ್ನು ಮಾಡ್ತಿರ್ತಾರೆ. ಇಂತಹ ಸಾಕಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಕಾಣ ಸಿಗುತ್ತಲೇ ಇರುತ್ತವೆ. ಇದೀಗ ಇಲ್ಲೊಂದು ವಿಡಿಯೋ ವೈರಲ್‌ ಆಗಿದ್ದು, ಯುವಕನೋರ್ವ ಪ್ರಾಣದ ಹಂಗು ತೊರೆದು ಟ್ರೈನ್‌ನಲ್ಲಿ ಸ್ಟಂಟ್‌ (Stunt) ಮಾಡಲು ಹೋಗಿ ಪೇಜಿಗೆ ಸಿಲುಕಿದ್ದಾನೆ. ಅದೃಷ್ಟವಶಾತ್‌ ಸ್ಟಂಟ್‌ ಮಾಡುವಾಗ ರೈಲಿನಿಂದ ಬೀಳುತ್ತಿದ್ದವನನ್ನು ಸಹಪ್ರಯಾಣಿಕರು ರಕ್ಷಣೆ ಮಾಡಿದ್ದು, ಯುವಕನ ಈ ಹುಚ್ಚಾಟಕ್ಕೆ ನೆಟ್ಟಿಗರು ಫುಲ್‌ ಗರಂ ಆಗಿದ್ದಾರೆ.

ಈ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಫರೂಕಾಬಾದ್‌ನಲ್ಲಿ ನಡೆದಿದ್ದು, ಚಲಿಸುತ್ತಿರುವ ರೈಲಿನಲ್ಲಿ ಅಪಾಯಕಾರಿ ಸಾಹಸ ಮಾಡಲು ಹೋಗಿ ಯುವಕನೋರ್ವ ಪೇಚಿಗೆ ಸಿಲುಕಿದ್ದಾನೆ. ರೈಲಿನಿಂದ ಕೆಳಗೆ ಬೀಳುತ್ತಿದ್ದವನನ್ನು ಹಾಗೋ ಹೀಗೋ ಪ್ರಯಾಣಿಕರು ರಕ್ಷಣೆ ಮಾಡಿದ್ದಾರೆ. ಕಾಸ್ಗಂಜ್-ಕಾನ್ಪುರ ರೈಲಿನಲ್ಲಿ ಯುವಕ ಸ್ಟಂಟ್‌ ಮಾಡಲು ಹೋಗಿದ್ದು, ಸಾವಿನಂಚಿನಲ್ಲಿದ್ದ ಈತನನ್ನು ರೈಲಿನೊಳಗಿದ್ದ ಪ್ರಯಾಣಿಕರು ರಕ್ಷಣೆ ಮಾಡಿದ್ದಾರೆ. ಈ ದೃಶ್ಯ ವೈರಲ್‌ ಆಗುತ್ತಿದ್ದಂತೆ ಯುವಕನ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

A young guy fell from a moving train while performing a stunt for a Reel later people saved him somehow, Kasganj to Kanpur byu/TheDoodleBug_ inindianrailways

gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಯುವಕನೊಬ್ಬ ಚಲಿಸುತ್ತಿರುವ ರೈಲಿನಲ್ಲಿ ಪ್ರಾಣ ಉಳಿಸಿಕೊಳ್ಳಲು ಒದ್ದಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಸ್ಟಂಟ್‌ ಮಾಡುವ ವೇಳೆ ಆತನಿಗೆ ಬ್ಯಾಲೆನ್ಸ್‌ ತಪ್ಪಿದ್ದು, ಇನ್ನೇನೂ ಬಿದ್ದೇ ಹೋಗುತ್ತಿದ್ದ ಆ ಯುವಕನನ್ನು ಸಹ ಪ್ರಯಾಣಿಕರು ಗಟ್ಟಿಯಾಗಿ ಹಿಡಿದಿಟ್ಟುಕೊಂಡು, ಬಳಿಕ ಹಾಗೋ ಹೀಗೋ ಟ್ರೈನ್‌ ನಿಲ್ಲಿಸಿ ಆತನ ಪ್ರಾಣವನ್ನು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: ಮೊಬೈಲ್‌ನಲ್ಲಿ ಮಾತಾಡ್ತಾ ಮಗುವನ್ನು ಪಾರ್ಕ್‌ನಲ್ಲಿಯೇ ಬಿಟ್ಟು ಹೋದ ತಾಯಿ

ಮಾರ್ಚ್‌ 10 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.3 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಜನಗಳು ಏಕೆ ಹೀಗೆ ಹುಚ್ಚಾಟ ಮೆರಿತಾರೆ ಅನ್ನೋದೆ ಗೊತ್ತಾಗಲ್ಲʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆತನಿಗೆ ಪ್ರಾಣಕ್ಕಿಂತ ರೀಲ್ಸ್‌ ಹೆಚ್ಚಾಯಿತೇʼ ಎಂದು ಕಿಡಿ ಕಾರಿದ್ದಾರೆ. ಇನ್ನೊಬ್ಬ ಬಳಕೆದಾರರು ʼರೀಲ್ಸ್‌ಗಾಗಿ ಪ್ರಾಣವನ್ನು ಪಣಕ್ಕಿಡುವುದು ಎಷ್ಟು ಸರಿʼ ಎಂದು ಕೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

989699, 989659, 989476, 989395

ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ