ಮೂಢ ನಂಬಿಕೆಯ ಪರಮಾವಧಿ; ರಸ್ತೆಯಲ್ಲಿ ಹೋಗುವಾಗ ಅಡ್ಡ ಬಂದ ಬೆಕ್ಕನ್ನೇ ಜೀವಂತವಾಗಿ ಸುಟ್ಟು ಹಾಕಿದ ಮಹಿಳೆ
ಈಗಂತೂ ಮೂಕ ಪ್ರಾಣಿಗಳ ಮೇಲೆ ಮಾನವನ ದಬ್ಬಾಳಿಕೆ ಹೆಚ್ಚಾಗಿದ್ದು, ಮನುಷ್ಯರಿಂದ ಪಮೂಕ ಜೀವಿಗಳ ಮೇಲಾಗುತ್ತಿರುವ ಕೌರ್ಯದ ಸುದ್ದಿಗಳು ಪ್ರತಿನಿತ್ಯ ಕೇಳಿ ಬರುತ್ತಲೇ ಇರುತ್ತವೆ. ಇಲ್ಲೊಂದು ಅಂತಹದ್ದೇ ಆಘಾತಕಾರಿ ಘಟನೆ ನಡೆದಿದ್ದು, ಮಹಿಳೆಯೊಬ್ಬಳು ಸ್ನೇಹಿತರ ಜೊತೆ ಸೇರಿ ಜೀವಂತವಾಗಿ ಬೆಕ್ಕನ್ನು ಸುಟ್ಟು ಹಾಕಿದ್ದಾಳೆ. ದಾರಿಯಲ್ಲಿ ಹೋಗುವಾಗ ಬೆಕ್ಕು ಅಡ್ಡ ಬಂತೆಂದು, ಕೋಪದಲ್ಲಿ ಆ ಮೂಕ ಪ್ರಾಣಿಯನ್ನೇ ಬಲಿ ಪಡೆದಿದ್ದಾಳೆ. ಈ ಸುದ್ದಿ ಇದೀಗ ಭಾರಿ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶ, ಮಾ. 11: ಯಾವುದಾದರೂ ಕೆಲಸಕ್ಕೆ ಹೋಗುವಾಗ ದಾರಿಯಲ್ಲಿ ಬೆಕ್ಕು (Cat) ಅಡ್ಡ ಬಂದರೆ ಅದನ್ನು ಹೆಚ್ಚಿನವರು ಅಶುಭವೆಂದು ಪರಿಗಣಿಸುತ್ತಾರೆ. ಇಂದಿಗೂ ಕೂಡಾ ಈ ಮೂಢ ನಂಬಿಕೆ (superstition) ಅಸ್ತಿತ್ವದಲ್ಲಿದೆ. ಇದೇ ಕಾರಣಕ್ಕೊ ಏನೋ ಇಲ್ಲೊಬ್ಬಳು ಮಹಿಳೆ ದಾರಿಗೆ ಅಡ್ಡ ಬಂದ ಬೆಕ್ಕನ್ನೇ ಜೀವಂತವಾಗಿ ಸುಟ್ಟು ಹಾಕಿದ್ದಾಳೆ. ಹೌದು ಆಕೆ ಬೈಕ್‌ನಲ್ಲಿ ಸ್ನೇಹಿತರ ಜೊತೆ ಹೋಗುತ್ತಿರುವ ವೇಳೆ ಬೆಕ್ಕೊಂದು ಅಡ್ಡ ಬಂದಿದ್ದು, ಈ ಕೋಪಕ್ಕೆ ಬೆಕ್ಕನ್ನು ಹಿಡಿದು ಜೀವಂತವಾಗಿ ಸುಟ್ಟು ಹಾಕಿದ್ದಾಳೆ. ಈ ಸಂಬಂಧಿ ವಿಡಿಯೋವೊಂದು ವೈರಲ್ ಆದ ಬಳಿಕ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದು, ಈ ಅಮಾನವೀಯ ಕೃತ್ಯದ ಸುದ್ದಿ ಇದೀಗ ಎಲ್ಲೆಡೆ ವೈರಲ್ ಆಗುತ್ತುದೆ.
ಈ ಅಮಾನವೀಯ ಕೃತ್ಯ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿದ್ದು, ಓರ್ವ ಮಹಿಳೆ ತನ್ನ ಸ್ನೇಹಿತರ ಜೊತೆ ಸೇರಿ ಬೆಕ್ಕನ್ನು ಜೀವಂತವಾಗಿ ಸುಟ್ಟು ಹಾಕಿದ್ದಾಳೆ. ಆಕೆ ಸ್ನೇಹಿತರ ಜೊತೆ ಹೋಗುತ್ತಿರುವ ದಾರಿಯಲ್ಲಿ ಬೆಕ್ಕು ಅಡ್ಡ ಬಂದಿದ್ದು, ಇದರಿಂದ ಕೋಪಗೊಂಡ ಈ ಸ್ನೇಹಿತರ ಗುಂಪು ಬೆಕ್ಕನ್ನು ಬೆನ್ನಟ್ಟಿ ಹಿಡಿದು, ಮೂಕ ಪ್ರಾಣಿಗೆ ಮನ ಬಂದಂತೆ ಥಳಿಸಿ ನಂತರ ಅದಕ್ಕೆ ಪೆಟ್ರೋಲ್ ಹಾಕಿ ಜೀವಂತವಾಗಿ ಸುಟ್ಟು ಹಾಕಿದ್ದಾರೆ. ಇವರ ಈ ಅಮಾನವೀಯ ಕೃತ್ಯವನ್ನು ಯಾರೋ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದು, ಈ ದೃಶ್ಯ ವೈರಲ್ ಆದ ತಕ್ಷಣ, ಪೊಲೀಸರು ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
View this post on Instagram
ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ದೆಹಲಿಯ ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ ಈ ಬಗ್ಗೆ ದೂರು ಬಂದಿದ್ದು, ಬಂದಂತಹ ಮೇಲ್ ಆಧಾರದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದಾರೆ.
ಆರೋಪಿಗಳ ಹುಡುಕಾಟದಲ್ಲಿ ಪೊಲೀಸರು:
ಅರಣ್ಯ ಇಲಾಖೆ ಮತ್ತು ಪೊಲೀಸರ ಜಂಟಿ ತಂಡವು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಇದನ್ನು ಗಂಭೀರ ಅಪರಾಧವೆಂದು ಪರಿಗಣಿಸಲಾಗಿದ್ದು, ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಸೆಕ್ಷನ್ 9, 39 ಮತ್ತು 51 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಅಪರಾಧಿಗಳೆಂದು ಸಾಬೀತಾದರೆ ಅವರಿಗೆ ಮೂರು ವರ್ಷಗಳ ವರೆಗೆ ಜೈಲು ಶಿಕ್ಷೆ ಆಗಬಹುದು ಮತ್ತು 1 ಲಕ್ಷ ದಂಡ ವಿಧಿಸಬಹುದು.
ಇದನ್ನೂ ಓದಿ: ಮುಂದಿನ ಜನ್ಮದಲ್ಲಿ ಸಿಗೋಣ… ವರನಿಗೆ ಮೆಸೇಜ್ ಮಾಡಿ ಮದುವೆ ಹಿಂದಿನ ದಿನ ನಾಪತ್ತೆಯಾದ ವಧು
ಇಂಡಿಯಾ ಟುಡೇ ಪ್ರಕಾರ, ಈ ಪ್ರಕರಣ ಭೋಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ದೆಹಲಿಯ ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋಗೆ ವೀಡಿಯೊ ಜೊತೆಗೆ ಇಮೇಲ್ ದೂರು ಬಂದ ನಂತರ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿರುವುದರಿಂದ ಪೊಲೀಸರು ಬೆಕ್ಕನ್ನು ಸುಟ್ಟು ಹಾಕಿದಂತಹ ವಿಡಿಯೋ ಫೂಟೇಜ್ ಅನ್ನು ಹಂಚಿಕೊಳ್ಳಲು ನಿರಾಕರಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ