ಕ್ಯಾಬೇಜ್ ಗೋಬಿಗೆ 50 ರೂ., ಹೂಕೋಸು ಗೋಬಿಗೆ 70 ರೂ.; ವೈರಲ್ ಆಯ್ತು ಬೆಂಗಳೂರಿನ ರೆಸ್ಟೋರೆಂಟ್ ಮೆನು
ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಜನ ತಾವು ಕಂಡ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಅದೇ ಇಲ್ಲೊಬ್ರು ಬಳಕೆದಾರರು ರೆಡ್ಡಿಟ್‌ನಲ್ಲಿ ಬೆಂಗಳೂರಿನ ರೆಸ್ಟೋರೆಂಟ್ ಒಂದರ ಮೆನುವಿನ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಮೆನುವಿನಲ್ಲಿ ಎಲೆಕೋಸು (ಕ್ಯಾಬೇಜ್) ಗೋಬಿಗೆ 50 ರೂ, ಹೂಕೋಸು (ಕ್ವಾಲಿಫ್ಲವರ್) ಗೋಬಿಗೆ 70 ರೂ. ಬರೆದಿದ್ದು, ಈ ವಿಚಿತ್ರ ಮೆನುವನ್ನು ಕಂಡು ಜನ ಫುಲ್ ಕನ್ಫ್ಯೂಸ್ ಆಗಿದ್ದಾರೆ.

ಚೈನೀಸ್ ಖಾದ್ಯವಾದ ಗೋಬಿ ಮಂಚೂರಿಯನ್ ಎಂದರೆ ಬಹುತೇಕ ಎಲ್ಲರಿಗೂ ಬಲು ಇಷ್ಟ. ಸಾಮಾನ್ಯವಾಗಿ ಹೂಕೋಸು ಮತ್ತು ಎಲೆಕೋಸು ಈ ಎರಡು ತರಕಾರಿಗಳಿಂದಲೂ ಗೋಬಿ ತಯಾರಿಸುತ್ತಾರೆ. ಅದ್ರಲ್ಲಿ ಹೆಚ್ಚಿನವರು ಹೂಕೋಸು ಗೋಬಿಯನ್ನೇ ಇಷ್ಟಪಡುತ್ತಾರೆ. ಇದೀಗ ಇಲ್ಲೊಂದು ಗೋಬಿ ಮಂಚೂರಿಯನ್‌ಗೆ ಸಂಬಂಧಿಸಿದ ಪೋಸ್ಟ್ ವೈರಲ್ ಆಗುತ್ತಿದ್ದು, ರೆಸ್ಟೋರೆಂಟ್ ಒಂದರ ಮೆನುವಿನಲ್ಲಿ ಎಲೆಕೋಸು (ಕ್ಯಾಬೇಜ್) ಗೋಬಿಗೆ 50 ರೂ, ಹೂಕೋಸು (ಕ್ವಾಲಿಫ್ಲವರ್) ಗೋಬಿಗೆ 70 ರೂ. ಎಂದು ಬರೆಯಲಾಗಿದೆ. ಈ ಮೆನುವನ್ನು ಕಂಡು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ಬೆಂಗಳೂರಿನ ರೆಸ್ಟೋರೆಂಟ್ ಒಂದರ ಮೆನು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೌದು ಆ ಮೆನುವಿನಲ್ಲಿ 50 ರೂ. ಗೆ ಕ್ಯಾಬೇಜ್ ಗೋಬಿ ಹಾಗೂ 70 ರೂ. ಗೆ ಕ್ವಾಲಿಫ್ಲವರ್ ಗೋಬಿ ಎಂದು ಬರೆಯಲಾಗಿದೆ.
Short-health9486 ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಈ ಕುರಿತ ಪೋಸ್ಟ್ ಒಂದನ್ನು ಶೇರ್ ಮಾಡಲಾಗಿದ್ದು, “ಹೂಕೋಸು ಗೋಬಿ ಎಂದರೇನು? ಕೆಆರ್ ಮಾರುಕಟ್ಟೆ ಪ್ರದೇಶದಲ್ಲಿ ರಸ್ತೆ ಬದಿ ಬ್ರೊಕೊಲಿ ಮಾರಾಟ ಮಾಡುತ್ತಿರುವುದನ್ನು ನೋಡಿದೆ, ಮುಂದಿನ ದಿನ ಅದರಿಂದಲೂ ಗೋಬಿ ತಯಾರಾಗಬಹುದು” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
ವೈರಲ್ ಆಗುತ್ತಿರುವ ಫೋಟೋದಲ್ಲಿ ಎಲೆಕೋಸು (ಕ್ಯಾಬೇಜ್) ಗೋಬಿಗೆ 50 ರೂ, ಹೂಕೋಸು (ಕ್ವಾಲಿಫ್ಲವರ್) ಗೋಬಿಗೆ 70 ರೂ. ಎಂದು ಮೆನುವಿನಲ್ಲಿ ಬರೆದಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಮರಿಮೊಮ್ಮಗಳ ಜೊತೆ ಮಕ್ಕಳಂತೆ ಆಟವಾಡಿದ ಮುತ್ತಾತ; ಹೃದಯಸ್ಪರ್ಶಿ ವಿಡಿಯೋ ವೈರಲ್
ಐದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹೆಚ್ಚಾಗಿ ರಸ್ತೆ ಬದಿಗಳಲ್ಲಿ ಕ್ಯಾಬೇಜ್ ಗೋಬಿ ಸಿಗುತ್ತದೆ, ರೆಸ್ಟೋರೆಂಟ್‌ಗಳಲ್ಲಿ ಹೂಕೋಸು ಗೋಬಿ ಬಡಿಸುತ್ತಾರೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದೊಂಥರ ಚಾಯ್ ಮತ್ತು ಟೀಯ ಅನುಭವದಂತಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹೌದು ಗೋಬಿಯನ್ನು ಹೂಕೋಸು, ಎಲೆಕೋಸು ಎರಡರಿಂದಲೂ ತಯಾರಿಸಲಾಗುತ್ತದೆʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ