ಕಟ್ಟಡದ ಮೇಲೆ ಪೈಂಟಿಂಗ್ ಮಾಡುವಾಗಲೇ ಬಂತು ಫಿಟ್ಸ್; ಪ್ರಾಣದ ಹಂಗು ತೊರೆದು ಸ್ನೇಹಿತನ ಜೀವ ಉಳಿಸಿದ ಹೃದಯವಂತ
ಕಷ್ಟದ ಸಮಯದಲ್ಲಿ ಕೈ ಬಿಡದೆ ಜೊತೆಯಾಗಿ ನಿಲ್ಲುವವರೇ ನಿಜವಾದ ಸ್ನೇಹಿತ ಅಂತ ಹೇಳ್ತಾರೆ. ಇಲ್ಲೊಬ್ಬ ವ್ಯಕ್ತಿ ಈ ಮಾತನ್ನು ನಿಜವೆಂದು ಸಾಬೀತುಪಡಿಸಿದ್ದಾನೆ. ಹೌದು ಎತ್ತರದ ಕಟ್ಟಡವೊಂದಕ್ಕೆ ಪೈಂಟಿಂಗ್ ಮಾಡುವ ವೇಳೆ ಪೈಂಟರ್‌ಗೆ ಫಿಟ್ಸ್ ಕಾಣಿಸಿಕೊಂಡಿದೆ. ಆತ ಮೂರ್ಛೆ ತಪ್ಪಿ ಇನ್ನೇನು ಕಟ್ಟಡದಿಂದ ಬೀಳುತ್ತಿದ್ದಂತೆ ತಕ್ಷಣ ಆತನ ಸ್ನೇಹಿತ ಅಲ್ಲಿಗೆ ಬಂದಿದ್ದು, ತನ್ನ ಪ್ರಾಣದ ಹಂಗು ತೊರೆದು ಆತ ಫಿಟ್ಸ್‌ಗೆ ತುತ್ತಾದ ಸ್ನೇಹಿತನ ಜೀವವನ್ನು ಉಳಿಸಿದ್ದಾನೆ. ಈ ದೃಶ್ಯ ಇದೀಗ ಭಾರೀ ವೈರಲ್ ಆಗುತ್ತಿದೆ.

ಖುಷಿ, ಸಂತೋಷದ ಸಮಯದಲ್ಲಿ ಮಾತ್ರವಲ್ಲ, ನಮ್ಮ ಕಷ್ಟದ ಸಮಯದಲ್ಲಿ ನಮಗೆ ಬೆಂಬಲವಾಗಿ, ನಮಗೆ ಜೊತೆಯಾಗಿ ನಿಲ್ಲುವವರೇ ನಿಜವಾದ ಸ್ನೇಹಿತರು ಎಂದು ಹೇಳುತ್ತಾರೆ. ಇಂತಹ ನಿಷ್ಕಲ್ಮಶ ಸ್ನೇಹವನ್ನು ಹೊಂದಿದಂತಹ ಅದೆಷ್ಟೋ ಸ್ನೇಹಿತರ ಕಥೆಗಳನ್ನು ನೀವು ನೋಡಿರುತ್ತೀರಿ ಅಲ್ವಾ. ಇಲ್ಲೊಂದು ಅಂತಹದ್ದೇ ದೃಶ್ಯವೊಂದು ವೈರಲ್ ಆಗುತ್ತಿದ್ದು, ಫಿಟ್ಸ್‌ಗೆ ತುತ್ತಾಗಿ ಮೂರ್ಛೆ ತಪ್ಪಿ ಕಟ್ಟಡದ ಮೇಲಿಂದ ಬೀಳುತ್ತಿದ್ದ ಸ್ನೇಹಿತನ ಪ್ರಾಣವನ್ನು ಉಳಿಸುವ ಮೂಲಕ ಗೆಳೆಯನೊಬ್ಬ ಮಾನವೀಯತೆ ಮೆರೆದಿದ್ದಾನೆ. ಎತ್ತರದ ಕಟ್ಟಡವೊಂದಕ್ಕೆ ಪೈಂಟಿಂಗ್ ಮಾಡುವ ವೇಳೆ ಪೈಂಟರ್‌ಗೆ ಫಿಟ್ಸ್ ಕಾಣಿಸಿಕೊಂಡಿದ್ದು, ತಕ್ಷಣ ಸಮಯ ಪ್ರಜ್ಞೆಯಿಂದ ಆ ವ್ಯಕ್ತಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಸ್ನೇಹಿತನ ಜೀವವನ್ನು ಕಾಪಾಡಿದ್ದಾನೆ. ಈತನ ಮಾನವೀಯ ಕಾರ್ಯಕ್ಕೆ ನೆಟ್ಟಿಗರು ತಲೆ ಬಾಗಿದ್ದಾರೆ.
ಕಟ್ಟಡವೊಂದಕ್ಕೆ ಪೈಂಟಿಂಗ್ ಮಾಡುವ ವೇಳೆ ಫಿಟ್ಸ್‌ಗೆ ತುತ್ತಾಗಿದ್ದು, ಪರಿಣಾಮ ಆತನ ಕಾಲು ಏಣಿಯ ಹಗ್ಗಕ್ಕೆ ಸಿಲುಕಿ ತಲೆ ಕೆಳಗಾಗಿ ನೇತಾಡಿದ್ದಾನೆ. ತಕ್ಷಣ ಆತನ ಸ್ನೇಹಿತ ಅಲ್ಲಿಗೆ ಬಂದು ಆತನನ್ನು ಜೋಪಾನವಾಗಿ ಕೆಳಗಿಳಿಸುವ ಮೂಲಕ ಗೆಳೆಯನ ಪ್ರಾಣವನ್ನು ಕಾಪಾಡಿದ್ದಾನೆ. ಅಷ್ಟಕ್ಕೂ ಈ ಘಟನೆ ಎಲ್ಲಿ ನಡೆದದ್ದು ಎಂಬ ಮಾಹಿತಿ ಲಭ್ಯವಾಗಿಲ್ಲ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Nirob Saha ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಕಟ್ಟಡಕ್ಕೆ ಪೈಂಟಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ಫಿಟ್ಸ್‌ಗೆ ತುತ್ತಾಗಿ ಏಣಿಯ ಹಗ್ಗದಲ್ಲಿ ತಲೆ ಕೆಳಗಾಗಿ ನೇತಾಡುತ್ತಿರುವ ದೃಶ್ಯವನ್ನು ಕಾಣಬಹುದು. ಆ ತಕ್ಷಣ ಅಲ್ಲಿಗೆ ಬಂದ ಆತನ ಸ್ನೇಹಿತ ಏಣಿಯೇರಿ, ಪ್ರಾಣಾಪಾಯದಲ್ಲಿ ಸಿಲುಕಿದ್ದ ಗೆಳೆಯನನ್ನು ಜೋಪಾನವಾಗಿ ಕೆಳಗಿಳಿಸಿ ಅಮೂಲ್ಯ ಜೀವವನ್ನು ಉಳಿಸಿ ಮಾನವೀಯತೆಯನ್ನು ಮೆರೆದಿದ್ದಾನೆ.
ಇದನ್ನೂ ಓದಿ: ಗಡಿಯನ್ನೂ ಮೀರಿದ ಸ್ನೇಹ; ವಿಡಿಯೋ ಕಾಲ್ ಮೂಲಕ ಪಾಕ್ ಸ್ನೇಹಿತೆಯ ಮದುವೆಯಲ್ಲಿ ಭಾಗಿಯಾದ ಭಾರತೀಯ ಯುವತಿ
ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಂತಹ ಮಾನವೀಯ ಗುಣಗಳನ್ನು ಹೊಂದಿರುವ ಜನಗಳು ಕಾಣಸಿಗುವುದೇ ತೀರಾ ವಿರಳʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಗೆಳೆಯನ ಜೀವವನ್ನು ಕಾಪಾಡಿದ ನಿನಗೆ ಧನ್ಯವಾದಗಳು ಸಹೋದರʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಎಂತಹ ಸಹಾಯ ಮನೋಭಾವ ಆತನದ್ದು, ಅವನಿಗೆ ದೇವರು ದೀರ್ಘಾಯುಷ್ಯವನ್ನು ನೀಡಲಿʼ ಎಂದು ಹರಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








