ಗಡಿಯನ್ನೂ ಮೀರಿದ ಸ್ನೇಹ; ವಿಡಿಯೋ ಕಾಲ್ ಮೂಲಕ ಪಾಕ್ ಸ್ನೇಹಿತೆಯ ಮದುವೆಯಲ್ಲಿ ಭಾಗಿಯಾದ ಭಾರತೀಯ ಯುವತಿ
ಸ್ನೇಹಕ್ಕೆ ಗಡಿ, ಭಾಷೆ, ಜಾತಿ, ಅಂತಸ್ತಿನ ಮಿತಿಯಿಲ್ಲ ಎನ್ನುತ್ತಾರೆ. ಈ ಮಾತನ್ನು ಅದೆಷ್ಟೋ ಸ್ನೇಹಿತರು ನಿಜ ಮಾಡಿದ್ದಾರೆ ಕೂಡಾ. ಇದೀಗ ಇಲ್ಲೊಂದು ಇದಕ್ಕೆ ಮತ್ತೊಂದು ನಿದರ್ಶನದಂತಿರುವ ದೃಶ್ಯ ಹರಿದಾಡುತ್ತಿದ್ದು, ಪಾಕಿಸ್ತಾನ ಮತ್ತು ಭಾರತದ ಸ್ನೇಹಿತೆಯರಿಬ್ಬರ ಗಡಿ ಮೀರಿದ ಸುಂದರ ಸ್ನೇಹವನ್ನು ಕಂಡು ನೆಟ್ಟಿಗರು ಭಾವುಕರಾದ್ದಾರೆ. ಹೌದು ಪಾಕಿಸ್ತಾನಕ್ಕೆ ಹೋಗಲು ಸಾಧ್ಯವಾಗದ ಕಾರಣ ಭಾರತೀಯ ಯುವತಿ ಫೇಸ್ ಟೈಮ್ ಮೂಲಕ ತನ್ನ ಬೆಸ್ಟ್ ಫ್ರೆಂಡ್ ಮದುವೆಗೆ ಹಾಜರಾಗಿದ್ದು, ಈ ದೃಶ್ಯ ಇದೀಗ ಸಖತ್ ವೈರಲ್ ಆಗಿದೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಸುಮಾರಷ್ಟು ರಾಜತಾಂತ್ರಿಕ ಸಮಸ್ಯೆಗಳಿವೆ. ಆದರೆ ಇದ್ಯಾವುದು ಪ್ರೀತಿ ಮತ್ತು ಸ್ನೇಹ ಸಂಬಂಧಕ್ಕೆ ಅಡ್ಡಿಯಾಗಿಲ್ಲ. ಈ ಗಡಿ ಮೀರಿದ ಸ್ನೇಹ ಮತ್ತು ಪ್ರೀತಿಯ ರಿಯಲ್ ಸ್ಟೋರಿಗಳನ್ನು ನೀವು ಕೂಡಾ ನೋಡಿರಬಹುದಲ್ವಾ. ಇದೀಗ ಇಲ್ಲೊಂದು ಈ ನಿಷ್ಕಲ್ಮಶ ಸ್ನೇಹಕ್ಕೆ ಉದಾಹರಣೆಯಂತಿರುವ ದೃಶ್ಯ ವೈರಲ್ ಆಗಿದ್ದು, ಪಾಕ್‌ನಲ್ಲಿರುವ ತನ್ನ ಬೆಸ್ಟ್ ಫ್ರೆಂಡ್ ಮದುವೆಗೆ ಹೋಗಲು ಸಾಧ್ಯವಾಗದ ಕಾರಣ ಭಾರತೀಯ ಯುವತಿಯೊಬ್ಬಳು ಡಿಜಿಟಲ್ ತಂತ್ರಜ್ಞಾನದ ಸಹಾಯದಿಂದ ಫೇಸ್ ಟೈಮ್ ಮೂಲಕ ಸ್ನೇಹಿತೆಯ ಮದುವೆಗೆ ಹಾಜರಾಗಿದ್ದಾಳೆ. ಪಾಕಿಸ್ತಾನ ಮತ್ತು ಭಾರತದ ಸ್ನೇಹಿತೆಯರಿಬ್ಬರ ಗಡಿ ಮೀರಿದ ಸುಂದರ ಸ್ನೇಹವನ್ನು ಕಂಡು ನೆಟ್ಟಿಗರು ಭಾವುಕರಾದ್ದಾರೆ.
ಪಾಕಿಸ್ತಾನಕ್ಕೆ ಹೋಗಿ ಅಲ್ಲಿರುವ ಬೆಸ್ಟ್ ಫ್ರೆಂಡ್ ಮದುವೆಗೆ ಹಾಜರಾಗಲು ಸಾಧ್ಯವಾಗದ ಕಾರಣ ಭಾರತೀಯ ಯುವತಿಯೊಬ್ಬಳು ಫೇಸ್ ಟೈಮ್ ಮೂಲಕ ಮೊಬೈಲ್ ಸ್ಕ್ರೀನ್‌ನಲ್ಲಿಯೇ ತನ್ನ ಸ್ನೇಹಿತೆಯ ಮದುವೆಯ ಸಂಪೂರ್ಣ ದೃಶ್ಯವನ್ನು ವೀಕ್ಷಿಸಿದ್ದಾಳೆ. ಈ ಭಾವನಾತ್ಮಕ ದೃಶ್ಯ ಎಲ್ಲರನ್ನು ಭಾವುಕರನ್ನಾಗಿಸಿದೆ.
ಅನೈಕಾ ಅಹುಜಾ (annaikaahuja) ಎಂಬವರು ಈ ಕುರಿತ ಪೋಸ್ಟ್ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, “ಫೇಸ್ ಟೈಮ್ ಮೂಲಕ ಒತ್ತಾಯ ಪೂರ್ವಕವಾಗಿ ನಾನು ನನ್ನ ಬೆಸ್ಟ್‌ಫ್ರೆಂಡ್ ಮದುವೆಯನ್ನು ವೀಕ್ಷಿಸುತ್ತಿದ್ದೇನೆ ಏಕೆಂದರೆ ನಮ್ಮ ದೇಶಗಳು ಒಟ್ಟಿಗೆ ಇರಲು ಸಾಧ್ಯವಿಲ್ಲವಲ್ಲ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಭಾರತೀಯ ಯುವತಿ ಪಾಕಿಸ್ತಾನದಲ್ಲಿರುವ ತನ್ನ ಬೆಸ್ಟ್ ಫ್ರೆಂಡ್ ಮದುವೆಯನ್ನು ಮೊಬೈಲ್ ಸ್ಕ್ರೀನ್‌ನಲ್ಲಿಯೇ ವೀಕ್ಷಿಸುತ್ತಿರುವ ದೃಶ್ಯವನ್ನು ಕಾಣಬಹುದು. ಜೊತೆಗೆ ಸ್ನೇಹಿತೆಯ ಮದುವೆಯನ್ನು ಕಂಡು ತಾನು ಅಲ್ಲಿರಲು ಸಾಧ್ಯವಾಗಲಿಲ್ಲವಲ್ಲ ಎಂದು ಭಾವುಕಳಾಗಿದ್ದಾಳೆ.
ಇದನ್ನೂ ಓದಿ: ಕ್ಯಾಬೇಜ್ ಗೋಬಿಗೆ 50 ರೂ., ಹೂಕೋಸು ಗೋಬಿಗೆ 70 ರೂ.; ವೈರಲ್ ಆಯ್ತು ಬೆಂಗಳೂರಿನ ರೆಸ್ಟೋರೆಂಟ್ ಮೆನು
ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಮ್ಮ ದೇಶಗಳು ಬೇರ್ಪಡದಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು ಅಲ್ವಾʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼ1947 ರಲ್ಲಿ ದೇಶ ವಿಭಜನೆಯ ಸಮಯದಲ್ಲಿ ಜನ ಹೀಗೆ ಎಷ್ಟು ನೋವು ತಿಂದಿರಬೇಡʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ದೃಶ್ಯವನ್ನು ಕಂಡು ನನ್ನ ಕಣ್ಣಂಚಲಿ ನೀರು ಬಂದಿತುʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ