ಆಟೋ ಚಾಲಕನ ಜೊತೆ ರಿಕ್ಷಾದಲ್ಲಿ ಮುದ್ದು ಶ್ವಾನದ ಸಿಟಿ ರೌಂಡ್ಸ್; ಹೇಗಿದೆ ನೋಡಿ ಕ್ಯೂಟ್ ಫೋಟೋ
ಸಾಮಾನ್ಯವಾಗಿ ಪುಟ್ಟ ಮಕ್ಕಳು ತಂದೆಯ ವಾಹನದಲ್ಲಿ ಕುಳಿತು ರೌಂಡ್ಸ್ ಹೋಗಲು ಇಷ್ಟ ಪಡ್ತಾರೆ. ಜೊತೆಗೆ ಹಠನೂ ಮಾಡ್ತಾರೆ. ಅದೇ ರೀತಿ ಇಲ್ಲೊಂದು ನಾಯಿಗೂ ತನ್ನ ಮಾಲೀಕನ ಜೊತೆ ಆಟೋದಲ್ಲಿ ಕುಳಿತು ಸಿಟಿ ಸುತ್ತುವುದೆಂದರೆ ಬಲು ಇಷ್ಟವಂತೆ. ಹೌದು ಪ್ರತಿನಿತ್ಯ ಈ ಶ್ವಾನ ತನ್ನ ಮಾಲೀಕನ ಜೊತೆ ಕುಳಿತು ಆಟೋದಲ್ಲಿ ಬೆಂಗಳೂರು ಸುತ್ತುವ ಅಭ್ಯಾಸವನ್ನು ಮಾಡಿಕೊಂಡಿದ್ದು, ಈ ಮುದ್ದು ಶ್ವಾನದ ಸ್ಟೋರಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನಿಯತ್ತಿಗೆ ಇನ್ನೊಂದು ಹೆಸರಾಗಿರುವ ನಾಯಿಯನ್ನು ಮನುಷ್ಯನ ಉತ್ತಮ ಸ್ನೇಹಿತ ಅಂತಾನೂ ಹೇಳ್ತಾರೆ. ಹೆಚ್ಚಿನವರು ನಾಯಿಗಳನ್ನು ಮಕ್ಕಳು, ಫ್ರೆಂಡ್ಸ್ ಅಂತೆ ನೋಡಿಕೊಳ್ಳುತ್ತಾರೆ. ಶ್ವಾನಗಳೂ ಅಷ್ಟೇ ಮಾಲೀಕರೊಂದಿಗೆ ಸ್ನೇಹ ಪೂರ್ವಕವಾಗಿ ವರ್ತಿಸುತ್ತವೆ. ಅದರಲ್ಲೂ ಕೆಲ ನಾಯಿಗಳು ತಮ್ಮ ಮಾಲೀಕ ಎಲ್ಲಿ ಹೋದ್ರೂ ಅವರ ಹಿಂದೆಯೇ ಹೋಗುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತವೆ. ಅದೇ ರೀತಿ ಇಲ್ಲೊಂದು ಶ್ವಾನ ಕೂಡಾ ಮನೆಯಲ್ಲಿ ಇರೋದು ಬಿಟ್ಟು ಆಟೋದಲ್ಲಿ ದುಡಿಯಲು ಹೋಗುವ ಮಾಲೀಕನ ಜೊತೆಗೆಯೇ ಇರುವ ಅಭ್ಯಾಸವನ್ನು ರೂಢಿಸಿಕೊಂಡಿದೆ. ಹೌದು ಪ್ರತಿನಿತ್ಯ ಈ ಶ್ವಾನ ತನ್ನ ಮಾಲೀಕನ ಜೊತೆ ಆಟೋದಲ್ಲಿ ಸಿಟಿ ಸುತ್ತುತ್ತಿದ್ದು, ಈ ಕುರಿತ ಪೋಸ್ಟ್ ಒಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ಕಥೆಗಳು ಮನಸ್ಸನ್ನು ಗೆಲ್ಲುತ್ತವೆ. ಇದೀಗ ಅಂತಹದ್ದೇ ಶ್ವಾನದ ಕಥೆಯೊಂದು ನೆಟ್ಟಿಗರ ಮನ ಗೆದ್ದಿದೆ. ಜಾಕಿ ಹೆಸರಿನ ಶ್ವಾನವೊಂದು ತಾನು 4 ದಿನದ ಮರಿಯಾಗಿದ್ದಾಗಿನಿಂದಲೇ ತನ್ನ ಮಾಲೀಕನ ಜೊತೆ ಆಟೋದಲ್ಲಿ ಬೆಂಗಳೂರು ಸಿಟಿ ಸುತ್ತುವ ಅಭ್ಯಾಸವನ್ನು ರೂಢಿಸಿಕೊಂಡಿದ್ದು, ಪ್ರಯಾಣಿಕರೊಬ್ಬರು ಜಾಕಿಯ ಈ ಹೃದಯಸ್ಪರ್ಶಿ ಕಥೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವೈರಲ್ ಫೋಟೋ ಇಲ್ಲಿದೆ ನೋಡಿ:
my auto wale bhaiyya has his dog( name is Jackie ) with him in the auto; this kid has been with him from when he was 4 days old and now they travel together everywhere🥺
Does this call for a @PeakBangalore moment?? pic.twitter.com/Cre4g6Cd5S
— damn she coool (@damnyanti) February 22, 2025
ದಮ್ಯಂತಿ (damnyanti) ಎಂಬವರು ಆಟೋದಲ್ಲಿ ಚಾಲಕನ ಜೊತೆ ಕುಳಿತಿರುವ ಜಾಕಿಯ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, “ನಾನು ಪ್ರಯಾಣಿಸುತ್ತಿದ್ದ ಆಟೋ ಅಣ್ಣ, ಅವರ ನಾಯಿಯನ್ನು ಕೂಡಾ ಜೊತೆಗೆ ಕೂರಿಸಿಕೊಂಡಿದ್ದರು. ಆ ಶ್ವಾನದ ಹೆಸರು ಜಾಕಿ, ಅದು ತಾನು 4 ದಿನಗಳ ಮಗುವಿದ್ದಾಗಿನಿಂದಲೂ ಆಟೋ ಚಾಲಕನ ಜೊತೆ ಪ್ರಯಾಣಿಸುತ್ತಿದೆಯಂತೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ಫೋಟೋದಲ್ಲಿ ಜಾಕಿ ಆಟೋದ ಮುಂಭಾಗದಲ್ಲಿ ತನ್ನ ಮಾಲೀಕನ ಜೊತೆ ಸೈಲೆಂಟ್ ಆಗಿ ಕುಳಿತು ತನ್ನ ಪ್ರಯಾಣವನ್ನು ಆನಂದಿಸುತ್ತಿರುವ ಮುದ್ದಾದ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಕಟ್ಟಡದ ಮೇಲೆ ಪೈಂಟಿಂಗ್ ಮಾಡುವಾಗಲೇ ಬಂತು ಫಿಟ್ಸ್; ಪ್ರಾಣದ ಹಂಗು ತೊರೆದು ಸ್ನೇಹಿತನ ಜೀವ ಉಳಿಸಿದ ಹೃದಯವಂತ
ಫೆಬ್ರವರಿ 22 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 48 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಾನು ಕೂಡಾ ಇದೇ ಆಟೋದಲ್ಲಿ ಪ್ರಯಾಣಿಸಿದ್ದೆ, ಜಾಕಿಯನ್ನು ಕೂಡಾ ಭೇಟಿಯಾಗಿದ್ದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ಪೀಕ್ ಅಲ್ಲ ಕ್ಯೂಟ್ ಬೆಂಗಳೂರು ಕ್ಷಣʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಯ್ಯಯ್ಯೋ ಈ ದೃಶ್ಯ ಅದೆಷ್ಟು ಮುದ್ದಾಗಿದೆʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




