Viral Video: ಕ್ರಿಕೆಟ್ನಲ್ಲಿ ಪಾಕ್ ಎದುರು ಭಾರತದ ಜಯವನ್ನು ಸಂಭ್ರಮಿಸುತ್ತಾ ಮದುವೆಯಾದ ಜೋಡಿ
ನವಜೋಡಿಯೊಂದು ಕ್ರಿಕೆಟ್ನಲ್ಲಿ ಪಾಕ್ ಎದುರು ಭಾರತ ಜಯ ಗಳಿಸಿರುವ ಪಂದ್ಯವನ್ನು ವೀಕ್ಷಿಸುತ್ತಾ ಸಂಭ್ರಮಿಸುತ್ತಾ ಸಪ್ತಪದಿ ತುಳಿದಿದ್ದು ಎಲ್ಲೆಡೆ ವೈರಲ್ ಆಗಿದೆ. ಕ್ರಿಕೆಟ್ ಎಂದರೆ ಎಲ್ಲರಿಗೂ ಇಷ್ಟ ಅದರಲ್ಲೂ ಭಾರತ-ಪಾಕಿಸ್ತಾನ ಮ್ಯಾಚ್ ಎಂದರೆ ಮಿಸ್ ಮಾಡಿಕೊಳ್ಳುವುದುಂಟೇ, ಇವರ ಮದುವೆಯ ದಿನವೇ ಪಂದ್ಯವಿದ್ದ ಕಾರಣ ಮ್ಯಾಚ್ ಮಿಸ್ ಮಾಡಿಕೊಳ್ಳಲು ಬಯಸದ ಜೋಡಿ ಮದುವೆಯ ವೇದಿಕೆ ಮೇಲೆಯೇ ಪರದೆಯನ್ನು ಅಳವಡಿಸಿ ಪಂದ್ಯ ವೀಕ್ಷಿಸಿದ್ದರು.

ಗುಜರಾತ್, ಫೆಬ್ರವರಿ 27: ಕ್ರಿಕೆಟ್ ಎಂದರೆ ಮೂಗುಮುರಿಯುವವರಿಗಿಂತ ಕಳ್ಳರಳಿಸುವವರೇ ಹೆಚ್ಚು, ಕೆಲವರಿಗೆ ಊಟ, ತಿಂಡಿ, ನಿದ್ದೆಯಾದರೂ ಬಿಟ್ಟು ಕ್ರಿಕೆಟ್ ನೋಡುವ ಹುಚ್ಚಿರುತ್ತದೆ. ಹಾಗೆಯೇ ನವಜೋಡಿಯೊಂದು ಕ್ರಿಕೆಟ್ನಲ್ಲಿ ಪಾಕ್ ಎದುರು ಭಾರತ ಜಯ ಗಳಿಸಿರುವ ಪಂದ್ಯವನ್ನು ವೀಕ್ಷಿಸುತ್ತಾ ಸಂಭ್ರಮಿಸುತ್ತಾ ಸಪ್ತಪದಿ ತುಳಿದಿದ್ದು ಎಲ್ಲೆಡೆ ವೈರಲ್ ಆಗಿದೆ. ಈ ಘಟನೆ ಗುಜರಾತ್ನಲ್ಲಿ ನಡೆದಿದೆ.
ಕ್ರಿಕೆಟ್ ಎಂದರೆ ಎಲ್ಲರಿಗೂ ಇಷ್ಟ ಅದರಲ್ಲೂ ಭಾರತ-ಪಾಕಿಸ್ತಾನ ಮ್ಯಾಚ್ ಎಂದರೆ ಮಿಸ್ ಮಾಡಿಕೊಳ್ಳುವುದುಂಟೇ, ಇವರ ಮದುವೆಯ ದಿನವೇ ಪಂದ್ಯವಿದ್ದ ಕಾರಣ ಮ್ಯಾಚ್ ಮಿಸ್ ಮಾಡಿಕೊಳ್ಳಲು ಬಯಸದ ಜೋಡಿ ಮದುವೆಯ ವೇದಿಕೆ ಮೇಲೆಯೇ ಪರದೆಯನ್ನು ಅಳವಡಿಸಿ ಪಂದ್ಯ ವೀಕ್ಷಿಸಿದ್ದರು.
ಇತ್ತೀಚೆಗೆ ನಡೆದ ಭಾರತ-ಪಾಕಿಸ್ತಾನ ಪಂದ್ಯವನ್ನು ಸುಮಾರು 65 ಕೋಟಿ ಜನರು ಆನ್‌ಲೈನ್‌ನಲ್ಲಿ ವೀಕ್ಷಿಸಿದ್ದಾರೆ. ಭಾರತ-ಪಾಕಿಸ್ತಾನ ಪಂದ್ಯವನ್ನು ಮದುವೆ ಮಂಟಪದಲ್ಲಿ ದೊಡ್ಡ ಪರದೆಯ ಮೇಲೆ ತೋರಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
ಮತ್ತಷ್ಟು ಓದಿ: ಎಮ್ಮೆ ಖರೀದಿಸಲು ಸಾಮೂಹಿಕ ವಿವಾಹ ಸಮಾರಂಭದಲ್ಲಿ ಎರಡನೇ ಮದುವೆಯಾಗಲು ಹೋಗಿ ಅತ್ತೆ-ಮಾವನ ಕೈಗೆ ಸಿಕ್ಕಿ ಬಿದ್ದ ಮಹಿಳೆ
ಅದರ ನಂತರ ಮದುವೆಗೆ ಬಂದಿದ್ದ ಅತಿಥಿಗಳು ಆಚರಣೆಗಳನ್ನು ಬಿಟ್ಟು ಪಂದ್ಯವನ್ನು ಆನಂದಿಸುತ್ತಿರುವುದು ಕಂಡುಬಂದಿತು. ಅಚ್ಚರಿಯ ವಿಷಯವೆಂದರೆ ಇಡೀ ಬಾರಾತ್ ಪರದೆಯ ಮುಂದೆ ಜಮಾಯಿಸಿದ್ದು, ವಧು-ವರರು ಸಹ ಆಚರಣೆಗಳ ಬದಲಿಗೆ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಅನ್ನು ಆನಂದಿಸುತ್ತಿದ್ದಾರೆ.
यह रहा वीडियो शादी के बीच मे मैच देखना जरुरी समझा। pic.twitter.com/prv9v3KQil
— sarita (@sarita_5M) February 24, 2025
ಪರಿಸ್ಥಿತಿ ಹೇಗಿದೆ ಎಂದರೆ ಮದುವೆಯಾಗುತ್ತಿರುವ ವಧು-ವರನ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ ಮತ್ತು ದಂಪತಿ ಸಹ ಇದರಿಂದ ತಲೆಕೆಡಿಸಿಕೊಳ್ಳುವುದಿಲ್ಲ. ಅಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸುತ್ತಿದ್ದಂತೆ ಇಲ್ಲಿ ವರ ವಧುವಿನ ಕುತ್ತಿಗೆಗೆ ಮಾಂಗಲ್ಯಧಾರಣೆ ಮಾಡಿದ್ದಾನೆ.
ಈ ವೀಡಿಯೊವನ್ನು ವಿವಿಧ ವೇದಿಕೆಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದ್ದು, ಇದನ್ನು ಇಲ್ಲಿಯವರೆಗೆ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ, ಆದರೆ ಅನೇಕ ಜನರು ವೀಡಿಯೊವನ್ನು ಇಷ್ಟಪಟ್ಟಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




