AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಡಕ್‌ ಲೇಡಿ ಡಿಎಸ್ಪಿ ಮಾತ್ರವಲ್ಲ ಫಿಟ್ನೆಸ್‌ ರಾಣಿಯೂ ಹೌದು; ಬಾಲಿವುಡ್‌ ಬೆಡಗಿಯರನ್ನೇ ಮೀರಿಸುವ ಸುಂದರ ಅಧಿಕಾರಿ ಇವರು

ತಮ್ಮ ಕಠಿಣ ಪರಿಶ್ರಮದಿಂದ UPSC ಪಾಸ್‌ ಆಗಿ ಮಹೋನ್ನತ ಹುದ್ದೆಯನ್ನಲಂಕರಿಸಿದ ಹಲವು ಮಹಿಳಾ ಅಧಿಕಾರಿಗಳಿದ್ಧಾರೆ. ಅವರು ತಮ್ಮ ವೃತ್ತಿ ಮಾತ್ರವಲ್ಲದೆ ತಮ್ಮ ಸೌಂದರ್ಯದ ಕಾರಣದಿಂದಲೂ ಹೆಸರುವಾಸಿಯಾಗಿದ್ದಾರೆ. ಅಂತಹವರಲ್ಲಿ ಲೇಡಿ ಡಿಎಸ್ಪಿ ಪ್ರಿಯಾಂಕಾ ಬಾಜ್‌ಪೈ ಕೂಡಾ ಒಬ್ಬರು. ಯುಪಿಪಿಸಿಎಸ್‌ ಪರೀಕ್ಷೆಯಲ್ಲಿ 6 ನೇ ರ‍್ಯಾಂಕ್‌ ಪಡೆದಿರುವ ಇವರು ಸೌಂದರ್ಯದ ಮಾತ್ರವಲ್ಲದೆ ಬುದ್ಧಿವಂತಿಕೆಯಿಂದಲೂ ಫೇಮಸ್‌ ಆಗಿದ್ದಾರೆ. ಇವರ ಪ್ರಯಾಣ ನಿಜಕ್ಕೂ ನಮಗೆಲ್ಲರಿಗೂ ಸ್ಫೂರ್ತಿ.

ಖಡಕ್‌ ಲೇಡಿ ಡಿಎಸ್ಪಿ ಮಾತ್ರವಲ್ಲ ಫಿಟ್ನೆಸ್‌ ರಾಣಿಯೂ ಹೌದು; ಬಾಲಿವುಡ್‌ ಬೆಡಗಿಯರನ್ನೇ ಮೀರಿಸುವ ಸುಂದರ ಅಧಿಕಾರಿ ಇವರು
ಲೇಡಿ ಡಿಎಸ್ಪಿ ಪ್ರಿಯಾಂಕಾ ಬಾಜ್‌ಪೈ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 25, 2025 | 3:14 PM

Share

ನಮ್ಮ ದೇಶದಲ್ಲಿ ಅನೇಕ ಮಹಿಳೆಯರು ನಾಗರಿಕ ಸೇವಾ ಹುದ್ದೆಯಲ್ಲಿದ್ದಾರೆ. ಅವರು ತಮ್ಮ ಕಠಿಣ ಪರಿಶ್ರಮ, ಕೆಲಸ ಜೊತೆ ಜೊತೆಗೆ ತಮ್ಮ ಸೌಂದರ್ಯದ ಕಾರಣದಿಂದಲೂ ಹೆಸರುವಾಸಿಯಾಗಿದ್ದಾರೆ. ಹೀಗೆ ನಟಿಯರು ಹಾಗೂ ಮಾಡೆಲ್‌ಗಳನ್ನೇ ಮೀರಿಸುವ ಸುಂದರ ಅಧಿಕಾರಿಗಳಿದ್ದಾರೆ. ಅಂತಹವರಲ್ಲಿ ಲೇಡಿ ಡಿಎಸ್ಪಿ ಪ್ರಿಯಾಂಕಾ ಬಾಜ್‌ಪೈ ಕೂಡಾ ಒಬ್ಬರು. ಯುಪಿಪಿಸಿಎಸ್‌ ಪರೀಕ್ಷೆಯಲ್ಲಿ 6 ನೇ ರ್ಯಾಂಕ್‌ ಪಡೆದಿರುವ ಇವರು ತನ್ನ ಸೌಂದರ್ಯ ಮತ್ತು ಬುದ್ಧಿವಂತಿಕೆಯಿಂದ ಸಖತ್‌ ಫೇಮಸ್‌ ಆದವರು. ಇವರ ಪ್ರಯಾಣ ನಿಜಕ್ಕೂ ನಮಗೆಲ್ಲರಿಗೂ ಸ್ಫೂರ್ತಿ.

ಉತ್ತರ ಪ್ರದೇಶ ಸಾರ್ವಜನಿಕ ಸೇವಾ ಆಯೋಗ ಯುಪಿಪಿಸಿಎಸ್ ಯ 2017 ರ ಬ್ಯಾಚ್‌ನ ಟಾಪರ್‌ಗಳಲ್ಲಿ ಒಬ್ಬರಾದ ಡಿಎಸ್‌ಪಿ ಪ್ರಿಯಾಂಕಾ ಬಾಜ್‌ಪೈ, ಅಸಾಧಾರಣ ಶೈಕ್ಷಣಿಕ ಸಾಧನೆಗಳೊಂದಿಗೆ ತಮ್ಮ ಸೌಂದರ್ಯದ ಕಾರಣದಿಂದಲೂ ಹೆಸರುವಾಸಿಯಾಗಿದ್ದಾರೆ. ಲಕ್ನೋ ವಿಶ್ವ ವಿದ್ಯಾಲಯದಿಂದ ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತ್ತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ಇವರು ಚಿನ್ನದ ಪದಕವನ್ನು ಕೂಡಾ ಪಡೆದಿದ್ದಾರೆ.

ಡಿಎಸ್ಪಿ ಪ್ರಿಯಾಂಕಾ ಬಾಜ್ಪೈ ಅವರು ಯುಪಿ ಪಿಸಿಎಸ್ ಪರೀಕ್ಷೆಯಲ್ಲಿ ಎರಡು ಬಾರಿ ಉತ್ತೀರ್ಣರಾಗುವ ಮೂಲಕ ಇತಿಹಾಸ ಸೃಷ್ಟಿಸಿದವರು. ಇದೀಗ ಇವರು ತಮ್ಮ ಬುದ್ಧಿವಂತಿಕೆ, ಸೌಂದರ್ಯದ ಜೊತೆಗೆ ಫಿಟ್ನೆಸ್ ರಾಣಿಯಾಗಿ ಪ್ರಸಿದ್ಧರಾಗಿದ್ದಾರೆ. ಪ್ರಸ್ತುತ ಕನ್ನೌಜ್‌ನಲ್ಲಿ ಡಿಎಸ್‌ಪಿಯಾಗಿ ನೇಮಕಗೊಂಡಿರುವ ಪ್ರಿಯಾಂಕ ಖಡಕ್‌ ಅಧಿಕಾರಿಯಾಗಿ ಹೆಸರುವಾಸಿಯಾಗಿದ್ದಾರೆ.

ವೈರಲ್​​ ಪೋಸ್ಟ್​​​ ಇಲ್ಲಿದೆ ನೋಡಿ:

ಲಕ್ನೋ ನಿವಾಸಿ ಪ್ರಿಯಾಂಕಾ, ಲಕ್ನೋ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕವನ್ನೂ ಪಡೆದಿದ್ದಾರೆ. ಪಿಎಚ್‌ಡಿ ಕೂಡ ಮಾಡಿದ್ದಾರೆ. 2016 ರಲ್ಲಿ, ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿ ಪಿಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು ಅಬಕಾರಿ ಇನ್ಸ್‌ಪೆಕ್ಟರ್‌ ಆಗಿ ನೇಮಕಗೊಂಡರು. ನಂತರ ಅವರು ಇನ್ನೊಂದು ಬಾರಿ ಯುಪಿ ಪಿಸಿಎಸ್‌ ಪರೀಕ್ಷೆ ಬರೆದಿದ್ದು, ಅದರಲ್ಲಿ ಆರನೇ ರ‍್ಯಾಂಕ್ ಪಡೆಯುವ ಮೂಲಕ ಅವರು ಡಿಎಸ್‌ಪಿ (ಉಪ ಪೊಲೀಸ್ ವರಿಷ್ಠಾಧಿಕಾರಿ) ಹುದ್ದೆಗೆ ಆಯ್ಕೆಯಾದರು.

ಇದನ್ನೂ ಓದಿ: 10 ಬಾರಿ ಫೇಲ್‌ ಆದ್ರೂ ಬಿಡದ ಛಲ; 10 ನೇ ತರಗತಿಯಲ್ಲಿ ಶೇ. 44% ಅಂಕ ಗಳಿಸಿದ ಬಾಲಕ ಇಂದು ಐಎಎಸ್‌ ಅಧಿಕಾರಿ

ನಾಗರಿಕ ಸೇವಾ ಪರೀಕ್ಷೆಯ ತಯಾರಿಯ ಸಮಯದಲ್ಲಿ, ಎರಡು ವರ್ಷಗಳ ಸೋಷಿಯಲ್‌ ಮೀಡಿಯಾದಿಂದ ದೂರವಿದ್ದ ಪ್ರಿಯಾಂಕಾ ಇಂದು ಇನ್‌ಸ್ಟಾಗ್ರಾಮ್‌ನಲ್ಲಿ 35 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ ಜೊತೆಗೆ ಸೋಷಿಯಲ್‌ ಮೀಡಿಯಾದಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಹೀಗೆ ಇವರು ಬುದ್ಧಿವಂತಿಕೆ ಮಾತ್ರವಲ್ಲದೆ ಸೌಂದರ್ಯದಿಂದಲೂ ಎಲ್ಲರನ್ನೂ ಮೋಡಿ ಮಾಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:08 pm, Tue, 25 February 25