Viral: ಮರಿಗೆ ಜನ್ಮ ನೀಡಿದ ಆನೆ; ಹೊಸ ಅತಿಥಿಯನ್ನು ಕಂಡು ಸಂಭ್ರಮಿಸಿದ ಗಜ ಕುಟುಂಬ
ಪ್ರಾಣಿ ಸಾಮ್ರಾಜ್ಯಗಳಿಗೆ ಸಂಬಂಧಿಸಿದ ಕುತೂಹಲಕಾರಿ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಕಾಣಸಿಗುತ್ತಿರುತ್ತವೆ. ಅವುಗಳಲ್ಲಿ ಆನೆಗಳ ವಿಡಿಯೋಗಳು ಬಹಳಷ್ಟು ಜನ ಇಷ್ಟ ಪಡುತ್ತಾರೆ. ಗಜ ಕುಟುಂಬದ ಹೃದಯಸ್ಪರ್ಶಿ ದೃಶ್ಯವೊಂದು ವೈರಲ್ ಆಗಿದ್ದು, ಆನೆಗಳ ಹಿಂಡು ಕುಟುಂಬಕ್ಕೆ ಹೊಸ ಅತಿಥಿಯನ್ನು ಸಂಭ್ರಮದಿಂದ ಸ್ವಾಗತಿಸಿದೆ. ಪ್ರವಾಸಿಗರೆದುರೇ ಆನೆ ಮರಿಗೆ ಜನ್ಮ ನೀಡಿದ್ದು, ಹೊಸ ಅತಿಥಿಯನ್ನು ಕಂಡು ಗಜ ಪಡೆ ಸಂಭ್ರಮಿಸಿದೆ. ಈ ಮುದ್ದಾದ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.

ಬಹಳ ಬುದ್ಧಿವಂತ ಪ್ರಾಣಿಗಳಾಗಿರುವ ಆನೆಗಳು (Elephants) ಮನುಷ್ಯರಂತೆಯೇ ಕುಟುಂಬ ಜೀವನವನ್ನು ನಡೆಸುತ್ತವೆ. ಜೊತೆಗೆ ಭಾವನಾತ್ಮಕ ಜೀವಿಗಳಾದ ಇವುಗಳು ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುತ್ತವೆ. ಯಾವಾಗಲೂ ತಮ್ಮ ಬಳಗದೊಂದಿಗೆ ಒಗ್ಗಟ್ಟಾಗಿರುತ್ತವೆ. ಇನ್ನೂ ಗಜ ಕುಟುಂಬ ತಮ್ಮ ಹಿಂಡಿನಲ್ಲಿರುವ ಮರಿಗಳನ್ನು ಬಹಳ ಜೋಪಾನವಾಗಿ ಕಣ್ಣಲ್ಲಿ ಕಣ್ಣಿಟ್ಟು ಸಲಹುತ್ತವೆ. ಗಜಪಡೆಯ ಈ ಪ್ರೀತಿ, ಕಾಳಜಿ, ಮಮತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತಿರುತ್ತವೆ. ಅಂತಹದ್ದೊಂದು ದೃಶ್ಯ ಇದೀಗ ವೈರಲ್ ಆಗಿದ್ದು, ಆನೆಗಳ ಹಿಂಡೊಂದು ಹೊಸ ಅತಿಥಿಯನ್ನು ಸಂಭ್ರಮದಿಂದ ಸ್ವಾಗತಿಸಿದೆ. ಪ್ರವಾಸಿಗರೆದುರೇ ಆನೆ ಮರಿಗೆ ಜನ್ಮ ನೀಡಿದ್ದು, ಹೊಸ ಅತಿಥಿಯನ್ನು ಕಂಡು ಗಜ ಪಡೆ ಸಂಭ್ರಮಿಸಿದೆ. ಈ ಮುದ್ದಾದ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.
ಎರಡು ಮೂರು ವರ್ಷಗಳ ಹಳೆಯ ವಿಡಿಯೋ ಇದಾಗಿದ್ದು, ಕೀನ್ಯಾದ ಮಸಾಯಿ ಮಾರಾ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣಾನೆಯೊಂದು ತನ್ನ ಮರಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಅಲ್ಲಿದ್ದ ಆನೆಗಳು ಈ ಖುಷಿಯನ್ನು ಸಂಭ್ರಮಿಸಿದ್ದವು. ಈ ಹೃದಯಸ್ಪರ್ಶಿ ದೃಶ್ಯವನ್ನು ಅಲ್ಲಿದ್ದ ಪ್ರವಾಸಿಗರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
No community celebrates the birth of a newborn baby than elephants!🐘🥰. This trumpeting and elation is far beyond angels can sing in heavenly places. What a heart-melting and awe-inspiring sighting? 🐘🐘🐘❤️ pic.twitter.com/94cw1a45UC
— Wildfriends Africa (@WildfriendsUG) March 9, 2025
ಈ ಕುರಿತ ವಿಡಿಯೋವನ್ನು Wildfriends Africa ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಸಾಯಿ ಮಾರಾ ಉದ್ಯಾನವನದಲ್ಲಿ ಆನೆಯೊಂದು ಪ್ರವಾಸಿಗರೆದುರೇ ಮರಿಗೆ ಜನ್ಮ ನೀಡುವಂತಹ ದೃಶ್ಯವನ್ನು ಕಾಣಬಹುದು. ತಾಯಾನೆ ಮುದ್ದಾದ ಮರಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಅಲ್ಲಿಗೆ ಬಂದಂತಹ ಆನೆಗಳ ಹಿಂಡು ತಮ್ಮ ಕುಟುಂಬದ ಹೊಸ ಸದಸ್ಯನನ್ನು ಕಂಡು ಸಂಭ್ರಮಿಸಿವೆ.
ಇದನ್ನೂ ಓದಿ: ಕುಡಿದ ಅಮಲಿನಲ್ಲಿ ಬಸ್ ತಡೆದು ನಿಲ್ಲಿಸಿ ನಡು ರಸ್ತೆಯಲ್ಲಿ ಹೈಡ್ರಾಮಾ ಮಾಡಿದ ಮಹಿಳೆ; ವಿಡಿಯೋ ವೈರಲ್
ಮಾರ್ಚ್ 09 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆಹಾ… ಎಷ್ಟು ಸುಂದರವಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆನೆಗಳು ಯಾವಾಗಲೂ ಕುಟುಂಬಕ್ಕೆ ಹೆಚ್ಚಿನ ಮಹತ್ವ ನೀಡುತ್ತವೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಕಂದನನ್ನು ನೋಡಲು ಕುಟುಂಬಸ್ಥರು ಸೇರಿದ ಈ ಸುಂದರ ಕ್ಷಣವನ್ನು ನೋಡಿ ನಾನು ಭಾವುಕನಾದೆʼ ಎಂದಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ