ಬೊಜ್ಜಿನಿಂದ ಯಾವ ರೀತಿಯ ತೊಂದರೆಯಾಗುತ್ತೆ ಗೊತ್ತಾ? ಈ ಬಗ್ಗೆ ಜಾಗೃತಿ ಮೂಡಿಸಿದ ಏಮ್ಸ್
ಪ್ರಧಾನಿ ಅವರು ಬೊಜ್ಜಿನ ವಿರುದ್ಧ ಹೋರಾಡಲು ಮತ್ತು ಎಣ್ಣೆ ಅಂಶವಿರುವ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಲು ಕರೆ ನೀಡಿದ್ದು ಸಮತೋಲಿತ ಆಹಾರದ ಮಹತ್ವ ಮತ್ತು ವ್ಯಾಯಾಮದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದಿದ್ದರು. ಫಿಟ್ ಇಂಡಿಯಾ ಆಂದೋಲನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು ಬಾಲಿವುಡ್ ನಟ, ನಟಿಯರು, ವೈದ್ಯರು, ಸೆಲೆಬ್ರಿಟಿಗಳು ಬೆಂಬಲ ಸೂಚಿಸಿದ್ದರು ಇದೀಗ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಸ್ಥೂಲಕಾಯತೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪತ್ರಿಕಾ ಪ್ರಕಟಣೆ ನೀಡಿದ್ದು ಬೊಜ್ಜಿನ ದುಷ್ಪರಿಣಾಮಗಳನ್ನು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಡೆಹ್ರಾಡೂನ್‌ನಲ್ಲಿ ನಡೆದ 38ನೇ ರಾಷ್ಟ್ರೀಯ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಬೊಜ್ಜಿನ ವಿರುದ್ಧ ಹೋರಾಡಲು ಮತ್ತು ಎಣ್ಣೆ ಅಂಶವಿರುವ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಲು ಕರೆ ನೀಡಿದ್ದು ಸಮತೋಲಿತ ಆಹಾರದ ಮಹತ್ವ ಮತ್ತು ವ್ಯಾಯಾಮದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದಿದ್ದರು. ಫಿಟ್ ಇಂಡಿಯಾ ಆಂದೋಲನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದುಬಾಲಿವುಡ್ ನಟ, ನಟಿಯರು, ವೈದ್ಯರು, ಸೆಲೆಬ್ರಿಟಿಗಳು ಬೆಂಬಲ ಸೂಚಿಸಿದ್ದರು ಇದೀಗ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಸ್ಥೂಲಕಾಯತೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪತ್ರಿಕಾ ಪ್ರಕಟಣೆ ನೀಡಿದ್ದು ಬೊಜ್ಜಿನ ದುಷ್ಪರಿಣಾಮಗಳನ್ನು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಆಹಾರದಲ್ಲಿ ಅನಾರೋಗ್ಯಕರ ಕೊಬ್ಬು ಮತ್ತು ಎಣ್ಣೆಯನ್ನು ಕಡಿಮೆ ಮಾಡುವುದರ ಬಗ್ಗೆ ಒತ್ತಿ ಹೇಳಿದ್ದರು. ದೈನಂದಿನ ಎಣ್ಣೆ ಸೇವನೆಯನ್ನು 10% ಕಡಿಮೆ ಮಾಡುವ ಕುರಿತು ಅವರು ಸಲಹೆಯನ್ನು ನೀಡಿದ್ದರು. ಈ ಮನವಿಯನ್ನು ಮತ್ತಷ್ಟು ಬಲಪಡಿಸಲು ಏಮ್ಸ್ ಸಂಸ್ಥೆ ಭಾರತದಲ್ಲಿ ಹೆಚ್ಚುತ್ತಿರುವ ಬೊಜ್ಜಿನ ಹೊರೆಯಿಂದ ಪರಿಹಾರ ನೀಡುವುದಕ್ಕಾಗಿ ಅಲ್ಲಿನ ನಿರ್ದೇಶಕರು ಮತ್ತು ತಜ್ಞರ ವಿಶೇಷ ಸಮಿತಿ ಜಾಗೃತಿ ಮತ್ತು ಜೀವನಶೈಲಿಯ ಮಹತ್ವದ ಬಗ್ಗೆ ಮಾಹಿತಿ ನೀಡಿದ್ದು, ಏಮ್ಸ್ ನಿರ್ದೇಶಕ ಪ್ರೊ. ಎಂ. ಶ್ರೀನಿವಾಸ್ ಮಾತನಾಡಿ, ಆಹಾರದಲ್ಲಿ ತೈಲ ಕಡಿಮೆ ಮಾಡುವುದರ ಜೊತೆಗೆ ಉತ್ತಮ ಪೌಷ್ಠಿಕಾಂಶದ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಸ್ಥೂಲಕಾಯತೆಯಿಂದ ಮುಕ್ತಿ ಪಡೆಯಬಹುದು. ಜೊತೆಗೆ ಆರೋಗ್ಯಕರ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯ ಕುರಿತು ಸರಿಯಾದ ಮಾಹಿತಿ ಪಡೆದುಕೊಳ್ಳುವುದು ಕೂಡ ಮುಖ್ಯವಾಗುತ್ತದೆ ಇದನ್ನು ಏಮ್ಸ್ ತಜ್ಞರು ಮಾಡುತ್ತಾರೆ ಎಂದಿದ್ದಾರೆ.
Experts from AIIMS Delhi addressed the media, emphasizing the urgent need for dietary awareness and lifestyle changes to combat rising obesity in India. Key insights on BMI, waist-to-height ratio, mindful eating and yoga were shared to prevent an obesity epidemic in India. pic.twitter.com/V7qegQno35
— AIIMS, New Delhi (@aiims_newdelhi) February 8, 2025
ಹೃದ್ರೋಗ ವಿಭಾಗದ ಮುಖ್ಯಸ್ಥ ಮತ್ತು ಪ್ರೊಫೆಸರ್ ಡಾ. ರಾಜೀವ್ ನಾರಂಗ್ ಸ್ಥೂಲಕಾಯತೆಯ ಕುರಿತು ಹಲವಾರು ಮಾಹಿತಿ ಹಂಚಿಕೊಂಡಿದ್ದು ಇದಕ್ಕೆ ಚಿಕಿತ್ಸೆ ನೀಡಬಹುದು. ಆದರೆ ಅದರ ಜೊತೆಗೆ ಜನರು ತಮ್ಮ ಸೊಂಟದ ಸುತ್ತಳತೆಯನ್ನು ಮೇಲ್ವಿಚಾರಣೆ ಮಾಡುತ್ತಿರಬೇಕು. ಇದು ಕಿಬ್ಬೊಟ್ಟೆಯ ಬೊಜ್ಜನ್ನು ನಿಭಾಯಿಸಲು ಸಹಕಾರಿಯಾಗಿದೆ. ಇಲ್ಲವಾದಲ್ಲಿ ಇದು ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದಿದ್ದಾರೆ.
ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಡಾ. ನಿತೀಶ್ ನಾಯಕ್ ಅವರು ಬೊಜ್ಜಿನ ಸಮಸ್ಯೆ ಉಂಟಾಗುವ ಮೊದಲೇ ಆರಂಭಿಕ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಇದು ಹೃದ್ರೋಗ ಮತ್ತು ಮಧುಮೇಹದಂತಹ ತೀವ್ರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಅನಾರೋಗ್ಯಕರ ಆಹಾರಗಳನ್ನು ಆಯ್ಕೆ ಮಾಡಬಾರದು ಎಂದಿದ್ದಾರೆ. ಜೊತೆಗೆ ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ನಂದಕುಮಾರ್ ಅವರು ಒತ್ತಡ ಮತ್ತು ಬೊಜ್ಜಿನ ನಡುವಿನ ಸಂಬಂಧವನ್ನು ವಿವರಿಸಿದ್ದು ಬೊಜ್ಜು, ತೂಕ ಹೆಚ್ಚಳಕ್ಕೆ ಆಕ್ಸಿಡೇಟಿವ್ ಒತ್ತಡ ಮತ್ತು ಹಾರ್ಮೋನುಗಳ ಅಸಮತೋಲನ ಕಾರಣವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಅಧಿಕ ಕೊಲೆಸ್ಟ್ರಾಲ್ ಹೃದಯದ ಆರೋಗ್ಯಕ್ಕೆ ಅಪಾಯಕಾರಿ
ಡಾ. ರೀಮಾ ದಾದಾ ಅವರು ಬೊಜ್ಜು ನಿರ್ವಹಣೆಗೆ ಯೋಗ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿದ್ದು, ಆಕ್ಸಿಡೇಟಿವ್ ಒತ್ತಡವನ್ನು ನಿಯಂತ್ರಿಸುವ ಮೂಲಕ, ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಪ್ರತಿದಿನ ಕನಿಷ್ಠ 30 ನಿಮಿಷಗಳ ಯೋಗ.ಆಹಾರ ಜಾಗೃತಿ, ಜೀವನಶೈಲಿಯಲ್ಲಿ ಬದಲಾವಣೆ ಮಾಡುವುದು ಅನಿವಾರ್ಯ ಎಂದಿದ್ದಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




