Exam Anxiety: ಪರೀಕ್ಷೆಯ ಭಯ ಮತ್ತು ಮಕ್ಕಳ ಮಾನಸಿಕ ಆರೋಗ್ಯ; ಮನೋವೈದ್ಯರು ನೀಡಿರುವ ಸಲಹೆ ಇಲ್ಲಿದೆ
ಪರೀಕ್ಷೆ ಸಮೀಪಿಸುತ್ತಿದ್ದಂತೆ ಮಕ್ಕಳಲ್ಲಿ ಭಯ ಮತ್ತು ಆತಂಕ ಸಾಮಾನ್ಯ. ಈ ಲೇಖನದಲ್ಲಿ ಮನೋವೈದ್ಯರಾದ ಡಾ. ಪ್ರಸನ್ನ ಫುಟಾನೆ ಅವರು ಪರೀಕ್ಷಾ ಒತ್ತಡ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ವಿವರಿಸಿದ್ದಾರೆ. ಪೋಷಕರು ಮಕ್ಕಳಿಗೆ ಬೆಂಬಲ ನೀಡುವುದು ಮತ್ತು ಅತಿಯಾದ ಒತ್ತಡವನ್ನು ತಪ್ಪಿಸಲು ಕೆಲವು ಸಲಹೆಗಳನ್ನೂ ಇಲ್ಲಿ ನೀಡಲಾಗಿದೆ.

ಪರೀಕ್ಷೆ ಸಮೀಪಿಸುತ್ತಿದ್ದಂತೆ ಮಕ್ಕಳಲ್ಲಿ ಭಯ, ಆತಂಕ ಶುರುವಾಗೋದು ಸಾಮಾನ್ಯ. ಆದರೆ ಈ ಸಮಸ್ಯೆಯನ್ನು ನಿರ್ಲಕ್ಷ್ಯಿಸಬಾರದು, ಮಕ್ಕಳಿಗೆ ಬೆಂಬಲವಾಗಿ ನಿಲುವುದು ಪೋಷಕರ ಕರ್ತವ್ಯ ಎಂದು ಮನೋವೈದ್ಯರು ಸಲಹೆ ನೀಡುತ್ತಾರೆ. ಪರೀಕ್ಷೆಯ ಭಯ ಮಕ್ಕಳಲ್ಲಿ ಏಕಾಗ್ರತೆಯ ತೊಂದರೆ, ಕಿರಿಕಿರಿ, ನಿದ್ರಾಹೀನತೆ ಮತ್ತು ಹೃದಯ ಬಡಿತ, ಬೆವರುವುದು, ಉಸಿರಾಟದ ತೊಂದರೆ ಮತ್ತು ಕೈಗಳು ನಡುಗುವಿಕೆಯಂತಹ ಹಲವು ಸಮಸ್ಯೆಯನ್ನುಂಟು ಮಾಡುತ್ತದೆ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ನಿಮ್ಮ ಮಕ್ಕಳು ಕಲಿಕೆಯಲ್ಲಿ ಹಿಂದಿದ್ದರೂ ಕೂಡ ಪರೀಕ್ಷೆಯ ಸಮಯದಲ್ಲಿ ಹೆಚ್ಚಿನ ಒತ್ತಡವನ್ನು ನೀಡಬೇಡಿ ಎಂದು ಪುಣೆಯ ಸಲಹಾ ಮನೋವೈದ್ಯರಾದ ಡಾ. ಪ್ರಸನ್ನ ಫುಟಾನೆ ಎಚ್ಚರಿಸುತ್ತಾರೆ.
ಪರೀಕ್ಷಾ ಆತಂಕವನ್ನು ನಿರ್ವಹಿಸಲು ಸಲಹೆಗಳು ಇಲ್ಲಿವೆ:
ಸಮಯ ಮೀಸಲಿಡಿ:
ನೀವು ಅಧ್ಯಯನ ವೇಳಾಪಟ್ಟಿಯನ್ನು ಹೊಂದಿಸಿಕೊಳ್ಳಬೇಕು. ನಿರ್ದಿಷ್ಟವಾಗಿ ಹೇಳುವುದಾದರೆ, ನೀವು ಪ್ರತಿಯೊಂದು ವಿಷಯಕ್ಕೂ ಎಷ್ಟು ಸಮಯವನ್ನು ಮೀಸಲಿಡಲು ಬಯಸುತ್ತೀರಿ ಎಂಬುದನ್ನು ನಿರ್ಧರಿಸಿ ಅದಕ್ಕೆ ಅನುಗುಣವಾಗಿ ಅಧ್ಯಯನ ಮಾಡಬೇಕು. ನಿರ್ದಿಷ್ಟವಾಗಿ ಹೇಳುವುದಾದರೆ, ಪ್ರತಿಯೊಂದು ವಿಷಯವನ್ನು ಪರಿಷ್ಕರಿಸಲು ನೀವು ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕು.‘
ಯೋಗ ಧ್ಯಾನ:
ಮೈಂಡ್‌ಫುಲ್‌ನೆಸ್ ಮತ್ತು ಆಳವಾದ ಉಸಿರಾಟದಂತಹ ಧ್ಯಾನ ತಂತ್ರಗಳನ್ನು ಅಭ್ಯಾಸ ಮಾಡುವುದರಿಂದ ಆತಂಕವನ್ನು ನಿವಾರಿಸಬಹುದು. ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ನಿಮ್ಮ ಆತಂಕವನ್ನು ದೂರವಾಗಿಸಲು ಯೋಗ ಧ್ಯಾನ ಮಾಡಿ.
ತಡರಾತ್ರಿ ಓದುವ ಅಭ್ಯಾಸ ಬೇಡ:
ಪರೀಕ್ಷೆಯ ಭಯದಿಂದ ಕೆಲವರು ತಡರಾತ್ರಿಯವರೆಗೆ ಎಚ್ಚರವಾಗಿದ್ದು ಅಧ್ಯಯನ ಮಾಡುತ್ತಾರೆ. ಆದರೆ ದಿನದಲ್ಲಿ 8ಗಂಟೆಗಳ ಕಾಲ ನಿದ್ದೆ ಮಾಡಲೇ ಬೇಕು. ನಿದ್ದೆ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ತುಂಬಾ ಮುಖ್ಯ ಎಂದು ಮನೋವೈದ್ಯರು ಎಚ್ಚರಿಸುತ್ತಾರೆ. ತಡರಾತ್ರಿ ಎದ್ದು ಓದುವುದಕ್ಕಿಂತ ಬೆಳಿಗ್ಗೆ ಬೇಗನೆ ಎದ್ದು ಅಧ್ಯಯನ ಮಾಡುವುದು ಉತ್ತಮ. ನೀವು ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳಲು, ನಿಮ್ಮ ದೇಹಕ್ಕೆ ಸಾಕಷ್ಟು ನಿದ್ರೆ ಒದಗಿಸಬೇಕು. ಅಲ್ಲದೆ, ಅಧ್ಯಯನ ಮಾಡುವಾಗ ಪ್ರತಿ ಅರ್ಧಗಂಟೆಗೊಮ್ಮೆ ವಿರಾಮ ತೆಗೆದುಕೊಳ್ಳುವುದರಿಂದ ನಿಮ್ಮ ಮನಸ್ಸು ಶಾಂತವಾಗುತ್ತದೆ ಮತ್ತು ನೀವು ಓದಿದ್ದನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: SSLC ಬಳಿಕ ಮುಂದೇನು?; ‘ಯಾರದ್ದೋ ಒತ್ತಡಕ್ಕೆ ಮಣಿಯದಿರಿ, ನಿಮ್ಮ ಭವಿಷ್ಯ ನಿಮ್ಮ ಆಯ್ಕೆ’
ಪರೀಕ್ಷೆ ಬರೆಯುವ ಮುನ್ನ ಮುನ್ನೆಚ್ಚರಿಕೆಗಳು:
- ಪರೀಕ್ಷೆ ಬರೆಯುವಾಗ ನೀವು ಸುಲಭವಾದ ಪ್ರಶ್ನೆಗಳೊಂದಿಗೆ ಪ್ರಾರಂಭಿಸಿ.
- ಪರಿಕಲ್ಪನೆಗಳನ್ನು ಮನನ ಮಾಡಿಕೊಳ್ಳುವ ಬದಲು ಅವುಗಳನ್ನು ಅರ್ಥಮಾಡಿಕೊಂಡು ಓದುವುದು ಉತ್ತಮ.
- ಕಳೆದ ವರ್ಷದ ಪತ್ರಿಕೆಗಳನ್ನು ಪರಿಷ್ಕರಿಸಿ. ಯಾಕೆಂದರೆ ಅದರಲ್ಲಿರುವ ಪ್ರಶ್ನೆಗಳೇ ಮತ್ತೆ ಬರುವ ಸಾಧ್ಯತೆ ಹೆಚ್ಚಿರುತ್ತದೆ.
- ನೀವು ನಿಮ್ಮ ಮನಸ್ಸನ್ನು ಶಾಂತವಾಗಿಟ್ಟುಕೊಂಡು ಕಾಲಕಾಲಕ್ಕೆ ಅದನ್ನು ಪುನರಾವರ್ತಿಸಬೇಕು.
ಪೋಷಕರ ಪಾತ್ರ:
- ನಿಮ್ಮ ಮಕ್ಕಳು ಅಧಿಕ ಅಂಕ ಪಡೆಯಲೆ ಎಂದು ಅವರ ಮೇಲೆ ಹೆಚ್ಚಿನ ಒತ್ತಡ ಹೇರಬೇಡಿ.
- ಮಕ್ಕಳ ಕಲಿಕೆಯ ಸಮಯದಲ್ಲಿ ನೀವೂ ಕೂಡ ಒಂದು ಪುಸ್ತಕ ಹಿಡಿದು ಅವರೊಂದಿಗೆ ಕುಳಿತುಕೊಳ್ಳಿ. ಮೊಬೈಲ್, ಟವಿ ನೋಡಬೇಡಿ.
- ನಿರಂತರ ಅಧ್ಯಯನ ಬೇಡ. ಸ್ವಲ್ಪ ವಿರಾಮ ತೆಗೆದುಕೊಂಡು ಅವರೊಂದಿಗೆ ಖಷಿಯಿಂದ ಮಾತಾಡಿ.
- ಪರೀಕ್ಷೆಗೆ ಸಮೀಪಿಸುತ್ತಿದ್ದಂತೆ ಓದುವ ಬದಲು, ಪ್ರತಿದಿನ ಅಧ್ಯಯನ ಮಾಡಲು ಮಕ್ಕಳಿಗೆ ಸಮಯ ನಿಗದಿಪಡಿಸಿ.
ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:46 pm, Sun, 9 February 25