AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಬೈಲ್‌ನಲ್ಲಿ ಮಾತಾಡ್ತಾ ಮಗುವನ್ನು ಪಾರ್ಕ್‌ನಲ್ಲಿಯೇ ಬಿಟ್ಟು ಹೋದ ತಾಯಿ; ಇದು ಸ್ಕ್ರಿಪ್ಟೆಡ್ಡಾ?

ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆಗೂ ಬಹುತೇಕ ಎಲ್ಲರೂ ಮೊಬೈಲ್‌ ಚಟಕ್ಕೆ ಬಿದ್ದಿದ್ದಾರೆ. ಹೀಗೆ ಹೆಚ್ಚು ಕಾಲ ಮೊಬೈಲ್‌ನಲ್ಲಿ ಮುಳುಗಿ ಎಡವಟ್ಟುಗಳನ್ನು ಮಾಡಿಕೊಂಡವರು ಹಲವರಿದ್ದಾರೆ. ಅದೇ ರೀತಿ ಇಲ್ಲೊಬ್ಬಳು ಮಹಿಳೆ ಮೊಬೈಲ್‌ನಲ್ಲಿ ಮಾತಾಡ್ತಾ ಮೈ ಮರೆತು ಪಾರ್ಕ್‌ನಲ್ಲಿಯೇ ತನ್ನ ಮಗುವನ್ನು ಬಿಟ್ಟು ಹೋಗಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದ್ದು, ಇದು ಸ್ಕ್ರಿಪ್ಟೆಡ್‌ ವಿಡಿಯೋ ಸ್ವಾಮಿ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಮೊಬೈಲ್‌ನಲ್ಲಿ ಮಾತಾಡ್ತಾ ಮಗುವನ್ನು ಪಾರ್ಕ್‌ನಲ್ಲಿಯೇ ಬಿಟ್ಟು ಹೋದ ತಾಯಿ; ಇದು ಸ್ಕ್ರಿಪ್ಟೆಡ್ಡಾ?
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Mar 11, 2025 | 12:31 PM

Share

ಈ ಇಂಟರ್ನೆಟ್‌ ಯುಗದಲ್ಲಿ ಮೊಬೈಲ್‌ ಫೋನ್‌ (Mobile Phone) ಎನ್ನುವುದು ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದ್ದು, ಹೆಚ್ಚಿನವರು ಈ ಸ್ಮಾರ್ಟ್‌ ಫೋನ್‌ಗಳಿಗೆ ದಾಸರಾಗಿ ಬಿಟ್ಟಿದ್ದಾರೆ. ಹೀಗೆ ಮೊಬೈಲ್‌ (Mobile) ನಲ್ಲಿ ಮುಳುಗಿ ಮೈ ಮರೆತು ಆದಂತಹ ಒಂದಷ್ಟು ಎಡವಟ್ಟು, ನಿರ್ಲಕ್ಷ್ಯದ ಘಟನೆಗಳ ಕೇಳಿರುತ್ತೀರಿ ಅಲ್ವಾ. ಅಂತಹದ್ದೇ ಎಡವಟ್ಟೊಂದು ಇದೀಗ ನಡೆದಿದ್ದು, ಓರ್ವ ತಾಯಿ (Mother) ಫೋನಿನಲ್ಲಿ ಮಾತನಾಡುತ್ತಾ ಮೈ ಮರೆತು ತನ್ನ ಮಗುವನ್ನು (Baby) ಪಾರ್ಕ್‌ನಲ್ಲಿಯೇ ಬಿಟ್ಟು ಹೋಗಿದ್ದಾಳೆ. ನಂತರ ಯಾರೋ ಬಂದು ಮಗುವನ್ನು ಆಕೆಯ ಕೈಗೊಪ್ಪಿಸಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋವೊಂದು ಇದೀಗ ವೈರಲ್‌ ಆಗಿದೆ. ವೈರಲ್‌ ದೃಶ್ಯವನ್ನು ಕಂಡು ಇದು ಸ್ಕ್ರಿಪ್ಟೆಡ್‌ ವಿಡಿಯೋ ಸ್ವಾಮಿ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ತಾಯಿಯೊಬ್ಬಳು ಫೋನಿನಲ್ಲಿ ಮಾತನಾಡುತ್ತಾ ಮಗುವನ್ನು ಪಾರ್ಕ್‌ನಲ್ಲಿಯೇ ಮರೆತು ಬಿಟ್ಟು ಹೋದಂತಹ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ತಾಯಿ ಫೋನಿನಲ್ಲಿ ಮಾತಾಡ್ತಾ ಮಗುವನ್ನು ಬಿಟ್ಟು ಸೀದಾ ಹೋಗಿದ್ದು, ನಂತರ ಓರ್ವ ಪುರುಷ ಮಗುವನ್ನು ತಂದು ತಾಯಿಯ ಕೈಗೆ ಒಪ್ಪಿಸಿದ್ದಾರೆ. ಹಲವು ಜನ ದೃಶ್ಯವನ್ನು ಕಂಡು ಏನಪ್ಪಾ ತಾಯಿಗೆ ಒಂಚೂರು ಜವಬ್ದಾರಿ ಬೇಡ್ವಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೂ ಸೋಷಿಯಲ್‌ ಮೀಡಿಯಾ ಬಳಕೆದಾರರೊಬ್ಬರು ಇದು ನಿಜ ಘಟನೆಯಲ್ಲ ಬದಲಿಗೆ ಇದೊಂದು ಸ್ಕ್ರಿಪ್ಟೆಡ್‌ ವಿಡಿಯೋ ಮತ್ತು ಸೀರಿಯಲ್‌ ಶೂಟಿಂಗ್‌ ದೃಶ್ಯವಾಗಿದೆ ಎಂದು ಕ್ಲಾರಿಟಿ ಕೊಟ್ಟಿದ್ದಾರೆ.

ಇದನ್ನೂ ಓದಿ
Image
ಹೊಟ್ಟೆ ಎಷ್ಟೇ ದಪ್ಪವಿದ್ದರೂ ಕರಗಿಸಲು ಇಲ್ಲಿದೆ ಸರಳ ಉಪಾಯ
Image
ಈ ಒಣಹಣ್ಣನ್ನು ನೆನೆಸಿಟ್ಟು ತಿಂದರೆ ತೂಕ ಇಳಿಯೋದು ಗ್ಯಾರಂಟಿ
Image
ನೀರು ಕುಡಿದರೆ ತೂಕ ಕಡಿಮೆ ಆಗುತ್ತಾ? ತಜ್ಞರು ಹೇಳುವುದೇನು?
Image
ಮಕ್ಕಳಲ್ಲಿ ‘ಬೊಜ್ಜು’ ಬರುಲು ಪೋಷಕರೇ ಕಾರಣ, ಅದು ಹೇಗೆ?

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ವಿಡಿಯೋವನ್ನು gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದ್ದು, “ತಾಯಿ ತನ್ನ ಮಗುವನ್ನು ಪಾರ್ಕ್‌ನಲ್ಲಿಯೇ ಮರೆತು ಬಿಟ್ಟು ಹೋಗಿದ್ದಾಳೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ತನ್ನ ಮಗುವನ್ನು ಪಾರ್ಕ್‌ನಲ್ಲಿಯೇ ಬಿಟ್ಟು ಮೊಬೈಲ್‌ನಲ್ಲಿ ಮಾತನಾಡುತ್ತಾ ಸೀದಾ ಹೋಗುತ್ತಿರುವ ದೃಶ್ಯವನ್ನು ಕಾಣಬಹುದು. ಅವರ ಹಿಂದೆಯೇ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ಓಡೋಡಿ ಬಂದ ವ್ಯಕ್ತಿಯೊಬ್ಬರು ಮಗುವನ್ನು ತಾಯಿಯ ಕೈಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಮೂಢ ನಂಬಿಕೆಯ ಪರಮಾವಧಿ; ರಸ್ತೆಯಲ್ಲಿ ಹೋಗುವಾಗ ಅಡ್ಡ ಬಂದ ಬೆಕ್ಕನ್ನೇ ಜೀವಂತವಾಗಿ ಸುಟ್ಟು ಹಾಕಿದ ಮಹಿಳೆ

ಮಾರ್ಚ್‌ 10 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈಗಂತೂ ಇಡೀ ಜಗತ್ತೇ ಫೋನಿಗೆ ದಾಸರಾಗಿ ಬಿಟ್ಟಿದೆʼ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅಲ್ಲಿ ಅಷ್ಟೊಂದು ಜನ ನೆರೆದಿದ್ದಾರೆ, ಬಹುಶಃ ಇದು ಶೂಟಿಂಗ್‌ ದೃಶ್ಯ ಇರ್ಬೇಕುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಸ್ಕ್ರಿಪ್ಟೆಡ್‌ ವಿಡಿಯೋದಂತೆ ಕಾಣುತ್ತದೆʼ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ