ನೀರು ಕುಡಿದರೆ ತೂಕ ಕಡಿಮೆಯಾಗುತ್ತೆ! ಹೇಗೆ ಎಂದು ತಿಳಿದುಕೊಳ್ಳಿ
ನಮ್ಮ ದೇಶದಲ್ಲಿ ಜಗತ್ತಿನಲ್ಲಿ ಇಬ್ಬರಲ್ಲಿ ಒಬ್ಬರು ತೂಕ ಹೆಚ್ಚಳದಿಂದ ಬಳಲುತ್ತಿದ್ದಾರೆ ಎಂದು ವರದಿಗಳಿಂದ ಬಹಿರಂಗವಾಗಿದೆ. ಹೀಗಿರುವಾಗ ತೂಕ ಕಡಿಮೆ ಮಾಡಿಕೊಳ್ಳುವುದರ ಜೊತೆಗೆ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದು ಬಹಳ ಅನಿವಾರ್ಯವಾಗಿದೆ. ಹಾಗಾಗಿ ಆರೋಗ್ಯಕರ ಆಹಾರ ಸೇವನೆಯಿಂದ ಹಿಡಿದು ಉತ್ತಮ ಜೀವನಶೈಲಿಯನ್ನು ಅನುಸರಿಸುವುದರ ವರೆಗೆ ನಮ್ಮ ಆರೋಗ್ಯಕರ ದಿನಚರಿಯನ್ನು ರೂಢಿಸಿಕೊಳ್ಳಬೇಕಾಗಿದೆ. ಹಾಗಾದರೆ ತೂಕ ಕಡಿಮೆ ಮಾಡಿಕೊಳ್ಳಲು ಸುಲಭದ ದಾರಿ ಯಾವುದು? ಏನು ಮಾಡಿದರೆ ಆರೋಗ್ಯಕರ ತೂಕ ನಮ್ಮದಾಗುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ.

ತೂಕ ಹೆಚ್ಚಾಗಲು ಹಲವು ಕಾರಣಗಳಿವೆ. ಕೆಟ್ಟ ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿ ಮಾಡಿಕೊಂಡತಹ ಅನೇಕ ಬದಲಾವಣೆಗಳಿಂದಾಗಿ ಜನರಲ್ಲಿ ಸಾಮಾನ್ಯವಾಗಿ ತೂಕ ಹೆಚ್ಚಾಗುತ್ತದೆ. ನಮ್ಮ ದೇಶದಲ್ಲಿ ಜಗತ್ತಿನಲ್ಲಿ ಇಬ್ಬರಲ್ಲಿ ಒಬ್ಬರು ತೂಕ ಹೆಚ್ಚಳದಿಂದ ಬಳಲುತ್ತಿದ್ದಾರೆ ಎಂದು ವರದಿಗಳಿಂದ ಬಹಿರಂಗವಾಗಿದೆ. ಹೀಗಿರುವಾಗ ತೂಕ ಕಡಿಮೆ ಮಾಡಿಕೊಳ್ಳುವುದರ ಜೊತೆಗೆ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದು ಬಹಳ ಅನಿವಾರ್ಯವಾಗಿದೆ. ಹಾಗಾಗಿ ಆರೋಗ್ಯಕರ ಆಹಾರ ಸೇವನೆಯಿಂದ ಹಿಡಿದು ಉತ್ತಮ ಜೀವನಶೈಲಿಯನ್ನು ಅನುಸರಿಸುವುದರ ವರೆಗೆ ನಮ್ಮ ಆರೋಗ್ಯಕರ ದಿನಚರಿಯನ್ನು ರೂಢಿಸಿಕೊಳ್ಳಬೇಕಾಗಿದೆ. ಹಾಗಾದರೆ ತೂಕ ಕಡಿಮೆ ಮಾಡಿಕೊಳ್ಳಲು ಸುಲಭದ ದಾರಿ ಯಾವುದು? ಏನು ಮಾಡಿದರೆ ಆರೋಗ್ಯಕರ ತೂಕ ನಮ್ಮದಾಗುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ.
ಸಾಮಾನ್ಯವಾಗಿ ತೂಕ ನಷ್ಟದ ವಿಷಯಕ್ಕೆ ಬಂದಾಗ, ಸರಿಯಾದ ಆಹಾರ ಸೇವನೆ ಮಾಡುವುದರ ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡುವುದು ಅತ್ಯ ಅವಶ್ಯಕ. ತೂಕ ಇಳಿಸಿಕೊಳ್ಳುವುದು ಸುಲಭವಲ್ಲ. ಆದರೆ ಕೆಲವು ಅನಾರೋಗ್ಯಕರ ಅಭ್ಯಾಸಗಳನ್ನು ಬದಲಾಯಿಸುವ ಮೂಲಕ ತೂಕ ನಷ್ಟವನ್ನು ಸುಲಭಗೊಳಿಸಬಹುದು. ಇದಕ್ಕೆ ಪೂರಕವೆಂಬಂತೆ, ತೂಕ ಇಳಿಸಿಕೊಳ್ಳಲು ನೀರು ತುಂಬಾ ಸಹಾಯ ಮಾಡುತ್ತದೆ ಎಂದು ಹಾರ್ವರ್ಡ್ ಅಧ್ಯಯನದಿಂದ ತಿಳಿದು ಬಂದಿದೆ. ಈ ವರದಿಯ ಪ್ರಕಾರ, ನಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ನೀರು ತುಂಬಾ ಪ್ರಯೋಜನಕಾರಿ. ವಾಸ್ತವದಲ್ಲಿ ಸಾಕಷ್ಟು ನೀರು ಕುಡಿಯುವುದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಜಂಕ್ ಫುಡ್ ನ ಸೇವನೆ ಮಾಡಬೇಕು ಎನ್ನುವ ಬಯಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸರಿಯಾದ ಪ್ರಮಾಣದ ನೀರನ್ನು ಕುಡಿಯುವುದು ಜೀರ್ಣಕ್ರಿಯೆ ಮತ್ತು ಒಟ್ಟಾರೆ ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ಯಾವ ರೀತಿಯ ನೀರನ್ನು ಕುಡಿಯಬೇಕು?
ತೂಕ ಇಳಿಸಿಕೊಳ್ಳಲು ನೀರು ಸರಿಯಾದ ತಾಪಮಾನದಲ್ಲಿರುವುದು ಬಹಳ ಮುಖ್ಯ. ಇಂತಹ ಸಂದರ್ಭಗಳಲ್ಲಿ ತಣ್ಣೀರು ಕುಡಿಯುವುದು ತುಂಬಾ ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ. ವಾಸ್ತವವಾಗಿ ನಮ್ಮ ದೇಹವು ತಣ್ಣೀರನ್ನು ಸಾಮಾನ್ಯ ದೇಹದ ತಾಪಮಾನಕ್ಕೆ ತರಲು ಶಕ್ತಿಯನ್ನು ಬಳಸುತ್ತದೆ. ಇದು ಹೆಚ್ಚುವರಿ ಕ್ಯಾಲೊರಿಗಳನ್ನು ಸುಡುತ್ತದೆ. ಇದು ಚಯಾಪಚಯ ಕ್ರಿಯೆಯ ಮಟ್ಟವನ್ನು ಹೆಚ್ಚಿಸುತ್ತದೆ. ಈ ಎರಡು ಅಂಶಗಳು ಒಟ್ಟಾಗಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಯಾವಾಗ ನೀರು ಕುಡಿಯಬೇಕು?
ತಜ್ಞರು ಹೇಳುವ ಪ್ರಕಾರ ನೀರು ಕುಡಿಯಲು ಸರಿಯಾದ ಸಮಯವಿಲ್ಲ. ಬಾಯಾರಿಕೆಯಾದಾಗಲೆಲ್ಲಾ ನೀರು ಕುಡಿಯಿರಿ. ಹಗಲಿನಲ್ಲಿ ಸಾಕಷ್ಟು ನೀರು ಕುಡಿಯಿರಿ. ತಿನ್ನುವ ಅರ್ಧ ಗಂಟೆ ಮೊದಲು ನೀರು ಕುಡಿಯುವುದು ತೂಕ ಇಳಿಸಿಕೊಳ್ಳಲು ತುಂಬಾ ಪ್ರಯೋಜನಕಾರಿಯಾಗಿದೆ. ಇದು ನೀವು ತಿನ್ನುವ ಆಹಾರದ ಶೇಕಡಾವಾರು ಪ್ರಮಾಣವನ್ನು ಸಹ ಕಡಿಮೆ ಮಾಡುತ್ತದೆ. ಜೊತೆಗೆ ತೂಕ ನಿರ್ವಹಣೆಗೂ ಸಹ ಸಹಾಯ ಮಾಡುತ್ತದೆ. ಆದ್ದರಿಂದ ಏನನ್ನಾದರೂ ತಿನ್ನುವ ಮೊದಲು ಒಂದು ಅಥವಾ ಎರಡು ಲೋಟ ನೀರು ಕುಡಿಯುವುದು ಒಳ್ಳೆಯದು.
ಇದನ್ನೂ ಓದಿ: ಹಸು, ಎಮ್ಮೆಯ ಹಾಲಿಗಿಂತ ಮೂರು ಪಟ್ಟು ಉತ್ತಮವಂತೆ ಜಿರಳೆ ಹಾಲು!
ಎಷ್ಟು ನೀರು ಕುಡಿಯಬೇಕು?
ಆರೋಗ್ಯ ತಜ್ಞರ ಪ್ರಕಾರ, ಪ್ರತಿಯೊಬ್ಬರೂ ಇಷ್ಟೇ ನೀರು ಕುಡಿಯಬೇಕು ಎಂಬ ನಿಯಮವಿಲ್ಲ. ನಿಮಗೆ ಬಾಯಾರಿಕೆಯಾದಾಗಲೆಲ್ಲಾ ನೀರು ಕುಡಿಯಬಹುದು. ದೇಹಕ್ಕೆ ನೀರು ಬೇಕಾದಾಗ ಅದು ಹೇಳುತ್ತದೆ. ಆಗ ತಕ್ಷಣವೇ ನೀರು ಕುಡಿಯುವುದು ಒಳ್ಳೆಯದು. ಅನೇಕ ಬಾರಿ ಜನರು ಹಸಿವು ಮತ್ತು ಬಾಯಾರಿಕೆಯಿಂದಾಗಿ ಮಾನಸಿಕವಾಗಿ ಗೊಂದಲಕ್ಕೊಳಗಾಗುತ್ತಾರೆ. ಈ ಸ್ಥಿತಿಯನ್ನು ತಪ್ಪಿಸಲು ಏನನ್ನಾದರೂ ತಿನ್ನುವ ಮೊದಲು ಅರ್ಧ ಲೋಟ ನೀರು ಕುಡಿಯಲು ಪ್ರಯತ್ನಿಸಿ. ಇದರ ನಂತರವೂ, ನಿಮಗೆ ಏನನ್ನಾದರೂ ತಿನ್ನಬೇಕು ಅನಿಸಿದರೆ ಮಾತ್ರ ತಿನ್ನಿ. ದಿನಕ್ಕೆ ಕನಿಷ್ಠ ಎರಡರಿಂದ ಮೂರು ಲೀಟರ್ ನೀರನ್ನು ಕುಡಿಯಲು ಮರೆಯದಿರಿ.
ನೀರಿನ ಜೊತೆಗೆ, ಶುಂಠಿ, ಮೆಂತ್ಯ ಬೀಜಗಳು, ಸೌತೆಕಾಯಿ, ಕರಿಬೇವಿನ ಎಲೆಗಳು, ಪುದೀನಾ, ನಿಂಬೆ, ಆಮ್ಲಾ, ಜೀರಿಗೆ ಇತ್ಯಾದಿ ಆಹಾರಗಳು ತ್ವರಿತ ತೂಕ ನಷ್ಟಕ್ಕೆ ಬಹಳ ಉಪಯುಕ್ತವಾಗಿವೆ. ಈ ರೀತಿಯ ಆಹಾರಗಳನ್ನು ನೀರಿನ ಜೊತೆಯಲ್ಲಿ ಸೇರಿಸಿ ಕುಡಿಯುವುದರಿಂದ ಅಪಾರ ಪ್ರಯೋಜನ ಪಡೆಯಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ