AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಹಣ್ಣು, ತರಕಾರಿಗಳನ್ನು ಒಟ್ಟಿಗೆ ತಿನ್ನುವುದು ಎಷ್ಟು ಅಪಾಯಕಾರಿ ಎಂಬುದು ತಿಳಿದಿದೆಯೇ?

ಸಾಮಾನ್ಯವಾಗಿ ಎಲ್ಲಾ ಋತುಮಾನಗಳಲ್ಲೂ ಹಣ್ಣು, ತರಕಾರಿಗಳನ್ನು ಯಾವುದೇ ಭಯವಿಲ್ಲದೆ ಸವಿಯಬಹುದು. ಅವು ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ನೀಡುವುದರ ಜೊತೆಗೆ ನಮ್ಮನ್ನು ಆರೋಗ್ಯಕರವಾಗಿ ಇಡುತ್ತವೆ. ಆದರೆ ಅದೇ ಹಣ್ಣು, ತರಕಾರಿಗಳನ್ನು ಅತಿಯಾಗಿ ತಿಂದರೆ ಅಥವಾ ತಪ್ಪಾದ ಸಂಯೋಜನೆ ಮಾಡಿ ತಿನ್ನುವುದರಿಂದ ಅಜೀರ್ಣ, ಭೇದಿ ಮತ್ತು ಇನ್ನಿತರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಹಾಗಾದರೆ ಯಾವ ಹಣ್ಣು ಅಥವಾ ತರಕಾರಿಯ ಜೊತೆ ಯಾವುದು ಬೆರೆಯುವುದಿಲ್ಲ ಎಂದು ತಿಳಿದುಕೊಳ್ಳಿ, ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಹಣ್ಣು, ತರಕಾರಿಗಳನ್ನು ಒಟ್ಟಿಗೆ ತಿನ್ನುವುದು ಎಷ್ಟು ಅಪಾಯಕಾರಿ ಎಂಬುದು ತಿಳಿದಿದೆಯೇ?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Feb 13, 2025 | 5:38 PM

Share

ಹಣ್ಣು, ತರಕಾರಿಗಳ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ನಿಮಗೆ ಗೊತ್ತಾ, ಕೆಲವು ಹಣ್ಣು, ತರಕಾರಿಗಳನ್ನು ಒಟ್ಟಿಗೆ ಸೇವನೆ ಮಾಡಬಾರದು. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದಾಗಿದ್ದರೂ ಕೂಡ ಒಟ್ಟಿಗೆ ಸೇವನೆ ಮಾಡಿದಾಗ ಅವು ವಿಷವಾಗಬಹುದು ಹಾಗಾಗಿ ಹಣ್ಣು, ತರಕಾರಿ ಅಥವಾ ಕೆಲವು ಹಣ್ಣುಗಳ ಸಂಯೋಜನೆ ಒಳ್ಳೆಯದಲ್ಲ. ಇವುಗಳನ್ನು ಒಟ್ಟಿಗೆ ಸೇರಿಸಿ ತಿಂದರೆ ಅವುಗಳಲ್ಲಿರುವ ಗುಣಗಳು ಮಿಶ್ರವಾಗಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗೆ ದಾರಿ ಮಾಡಿ ಕೊಡಬಹುದು ಹಾಗಾಗಿ ಯಾವ ಹಣ್ಣು ತರಕಾರಿಗಳ ಸಂಯೋಜನೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಒಳ್ಳೆಯದು. ಹಾಗಾದರೆ ಯಾವ ಹಣ್ಣು ಅಥವಾ ತರಕಾರಿಯ ಜೊತೆ ಯಾವುದು ಬೆರೆಯುವುದಿಲ್ಲ ಎಂದು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ಎಲ್ಲಾ ಋತುಮಾನಗಳಲ್ಲೂ ಹಣ್ಣು, ತರಕಾರಿಗಳನ್ನು ಯಾವುದೇ ಭಯವಿಲ್ಲದೆ ಸವಿಯಬಹುದು. ಅವು ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ನೀಡುವುದರ ಜೊತೆಗೆ ನಮ್ಮನ್ನು ಆರೋಗ್ಯಕರವಾಗಿ ಇಡುತ್ತವೆ. ಆದರೆ ಅದೇ ಹಣ್ಣು, ತರಕಾರಿಗಳನ್ನು ಅತಿಯಾಗಿ ತಿಂದರೆ ಅಥವಾ ತಪ್ಪಾದ ಸಂಯೋಜನೆ ಮಾಡಿ ತಿನ್ನುವುದರಿಂದ ಅಜೀರ್ಣ, ಭೇದಿ ಮತ್ತು ಇನ್ನಿತರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.

​ಪೇರಳೆ ಮತ್ತು ಬಾಳೆ ಹಣ್ಣು

ಈ ಎರಡು ಹಣ್ಣುಗಳು ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ಜೊತೆಗೆ ವಿಶೇಷ ಪೋಷಣೆಯನ್ನು ಕೂಡ ನೀಡುತ್ತವೆ. ಆದರೆ ಅವುಗಳನ್ನು ಒಟ್ಟಿಗೆ ತಿನ್ನಬಾರದು. ಏಕೆಂದರೆ ಇವುಗಳನ್ನು ಒಟ್ಟಿಗೆ ಸೇವನೆ ಮಾಡುವುದರಿಂದ ಆಮ್ಲವ್ಯಾಧಿ, ವಾಕರಿಕೆ, ಉಬ್ಬರ, ಅನಿಲ, ನಿರಂತರವಾದ ತಲೆನೋವು ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.

ಕಿತ್ತಳೆ ಮತ್ತು ಕ್ಯಾರೆಟ್

ಗಜರಿ ಮತ್ತು ಕಿತ್ತಳೆ ಯ ಸಂಯೋಜನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಕಿತ್ತಳೆ ಮತ್ತು ಗಜರಿಯಲ್ಲಿ ಇರುವ ಪೋಷಕಾಂಶಗಳು ಸಾಮಾನ್ಯವಾಗಿ ಒಂದೇ ಬಗೆಯಲ್ಲಿ ಇರುತ್ತವೆ. ಇವುಗಳನ್ನು ಜೊತೆಯಲ್ಲಿ ಸೇವಿಸಿದಾಗ ಎದೆಯುರಿ, ಮೂತ್ರ ಪಿಂಡದ ಸಮಸ್ಯೆ, ಹೊಟ್ಟೆಯಲ್ಲಿ ಉರಿ ಮತ್ತು ಆಮ್ಲೀಯತೆ ಉಂಟಾಗಬಹುದು. ಹಾಗಾಗಿ ಈ ಸಂಯೋಜನೆ ಯಾವ ಸಮಯದಲ್ಲಿಯೂ ಒಳ್ಳೆಯದಲ್ಲ ಎಂದು ಆಹಾರ ತಜ್ಞರು ಸಲಹೆ ನೀಡುತ್ತಾರೆ.

​ಪಪ್ಪಾಯ ಮತ್ತು ನಿಂಬು

ಪಪ್ಪಾಯ ಮತ್ತು ನಿಂಬು ಎರಡು ಸಹ ಅದ್ಭುತ ಪೋಷಕಾಂಶಗಳನ್ನು ಹೊಂದಿರುವ ಆಹಾರ. ಕೆಲವರು ಪಪ್ಪಾಯ ಹಣ್ಣಿನೊಂದಿಗೆ ನಿಂಬೆ ರಸ ಹಾಕಿಕೊಂಡು ಅದರ ಚಾಟ್ ಮಾಡಿ ಸವಿಯುತ್ತಾರೆ. ಅದರ ರುಚಿ ನಿಮಗೆ ವಿಶೇಷ ಅನಿಸಬಹುದು. ಆದರೆ ಇದರ ಸಂಯೋಜನೆ ರಕ್ತ ಹೀನತೆ, ಹಿಮಗ್ಲೋಬಿನ್‍ನ ಅಸಮತೋಲನಕ್ಕೆ ಕಾರಣವಾಗುವುದು. ಇಂತಹ ಆರೋಗ್ಯ ಸಮಸ್ಯೆಯನ್ನು ತಪ್ಪಿಸಲು ಈ ಸಂಯೋಜನೆಯ ಆಹಾರಗಳನ್ನು ಅಪ್ಪಿತಪ್ಪಿಯೂ ಸೇವಿಸಬಾರದು.

ಬಾಳೆಹಣ್ಣು ಮತ್ತು ಪಪ್ಪಾಯಿ

ವಿಭಿನ್ನ ಸ್ವಭಾವದ ಈ ಎರಡು ಹಣ್ಣುಗಳನ್ನು ಒಟ್ಟಿಗೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವೈದ್ಯರು ಹೇಳುತ್ತಾರೆ. ಇದು ವಾಂತಿ, ಅಲರ್ಜಿ, ಅಜೀರ್ಣದಂತಹ ಸಮಸ್ಯೆಗಳು ಉಂಟು ಮಾಡಬಹುದು. ಬಾಳೆಹಣ್ಣು ಮತ್ತು ಪಪ್ಪಾಯಿಯನ್ನು ಒಟ್ಟಿಗೆ ತಿನ್ನುವುದರಿಂದ ಅಸ್ತಮಾ ಮತ್ತು ಇತರ ಉಸಿರಾಟದ ತೊಂದರೆಗಳು ಉಂಟಾಗಬಹುದು ಎಂದು ಹೇಳಲಾಗುತ್ತದೆ. ಹಾಗಾಗಿ ಈ ಎರಡು ಹಣ್ಣುಗಳ ಸೇವನೆ ಒಳ್ಳೆಯದಲ್ಲ, ಎಂದಿಗೂ ಈ ತಪ್ಪನ್ನು ಮಾಡಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ