AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಸು, ಎಮ್ಮೆಯ ಹಾಲಿಗಿಂತ ಮೂರು ಪಟ್ಟು ಉತ್ತಮವಂತೆ ಜಿರಳೆ ಹಾಲು!

Cockroach Milk:ಹಸುವಿನ ಹಾಲು, ಎಮ್ಮೆ ಹಾಲು, ಕುರಿ ಹಾಲು, ಕತ್ತೆ ಹಾಲನ್ನು ಕೇಳಿದ್ದೇವೆ ಆದರೆ ಎಂದಾದರೂ ಜಿರಳೆ ಹಾಲು ಕೇಳಿದ್ದೀರಾ, ಇದರಲ್ಲಿ ಹಸು ಹಾಗೂ ಎಮ್ಮೆಯ ಹಾಲಿಗಿಂತ ಮೂರು ಪಟ್ಟು ಪೋಷಕಾಂಶಗಳಿರುತ್ತವೆ ಎಂದು ಅಧಯಯನವೊಂದು ಹೇಳಿದೆ. ಹಾಲಿನಂತೆ ಹೊರಬರುವ ಈ ಸ್ಫಟಿಕವು ಪ್ರೋಟೀನ್‌ನಿಂದ ತುಂಬಿದೆ. ಇದು ಎಲ್ಲಾ ಅಗತ್ಯ ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಇದಲ್ಲದೆ, ಇದು ಆರೋಗ್ಯಕರ ಕೊಬ್ಬು ಮತ್ತು ಸಕ್ಕರೆಯನ್ನು ಸಹ ಒಳಗೊಂಡಿದೆ.

ಹಸು, ಎಮ್ಮೆಯ ಹಾಲಿಗಿಂತ ಮೂರು ಪಟ್ಟು ಉತ್ತಮವಂತೆ ಜಿರಳೆ ಹಾಲು!
ಜಿರಳೆ ಹಾಲುImage Credit source: Hello India
ನಯನಾ ರಾಜೀವ್
|

Updated on:Feb 14, 2025 | 10:53 AM

Share

ಜಿರಳೆ ಹಾಲು ಹಸು ಹಾಗೂ ಎಮ್ಮೆಯ ಹಾಲಿಗಿಂತ ಮೂರು ಪಟ್ಟು ಹೆಚ್ಚು ಪೋಷಕಾಂಶಗಳನ್ನು ಹೊಂದಿರುತ್ತದೆ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಜಿರಳೆಯು ಹಾಲಿನಂತಹ ಸ್ಫಟಿಕದಂತಹ ಪ್ರೋಟೀನ್ ಉತ್ಪಾದಿಸುತ್ತದೆ ಎಂದು ಹೇಳಿದ್ದಾರೆ, ಇದು ಹಸು ಮತ್ತು ಎಮ್ಮೆಗಿಂತ ಮೂರು ಪಟ್ಟು ಹೆಚ್ಚು ಪೋಷಕಾಂಶಗಳನ್ನು ಹೊಂದಿರುತ್ತದೆ. ಹಾಲಿನಂತೆ ಹೊರಬರುವ ಈ ಸ್ಫಟಿಕವು ಪ್ರೋಟೀನ್‌ನಿಂದ ತುಂಬಿದೆ. ಇದು ಎಲ್ಲಾ ಅಗತ್ಯ ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಇದಲ್ಲದೆ, ಇದು ಆರೋಗ್ಯಕರ ಕೊಬ್ಬು ಮತ್ತು ಸಕ್ಕರೆಯನ್ನು ಸಹ ಒಳಗೊಂಡಿದೆ.

ಅದರ 100 ಗ್ರಾಂ ಹಾಲಿನಿಂದ ಕ್ಯಾಲೊರಿಗಳನ್ನು ಹೊರತೆಗೆದರೆ, ಅದರಿಂದ 232 ಕ್ಯಾಲೊರಿಗಳ ಶಕ್ತಿ ಸಿಗುತ್ತದೆ, ಆದರೆ 100 ಗ್ರಾಂ ಹಸುವಿನ ಹಾಲಿನಿಂದ ಕೇವಲ 66 ಕ್ಯಾಲೊರಿಗಳ ಶಕ್ತಿಯನ್ನು ಮಾತ್ರ ಪಡೆಯಬಹುದು. ಪ್ರಯೋಗಾಲಯ ಪರೀಕ್ಷೆಗಳಲ್ಲಿ ಜಿರಳೆ ಹಾಲಿನಲ್ಲಿ ಶೇಕಡಾ 45 ರಷ್ಟು ಪ್ರೋಟೀನ್, ಶೇಕಡಾ 25 ರಷ್ಟು ಕಾರ್ಬೋಹೈಡ್ರೇಟ್‌ಗಳು, ಶೇಕಡಾ 16 ರಿಂದ 22 ರಷ್ಟು ಕೊಬ್ಬು ಮತ್ತು ಶೇಕಡಾ 5 ರಷ್ಟು ಅಮೈನೋ ಆಮ್ಲಗಳಿವೆ ಎಂದು ಕಂಡುಬಂದಿದೆ. ಈ ಕುರಿತು ಫ್ರೀ ಪ್ರೆಸ್ ಜರ್ನಲ್​ ಸುದ್ದಿ ಮಾಡಿದೆ.

ಇದಲ್ಲದೆ, ಒಲೀಕ್ ಆಮ್ಲ, ಲಿನೋಲಿಕ್ ಆಮ್ಲ, ಒಮೆಗಾ 3 ಕೊಬ್ಬಿನಾಮ್ಲ, ಜೀವಸತ್ವಗಳು, ಖನಿಜಗಳು, ಸಣ್ಣ ಸರಪಳಿ ಮತ್ತು ಮಧ್ಯಮ ಸರಪಳಿ ಕೊಬ್ಬಿನಾಮ್ಲಗಳು ಸಹ ಇದರಲ್ಲಿ ಇರುತ್ತವೆ. ಇದು ಪ್ರೋಟೀನ್‌ನ ಸಂಪೂರ್ಣ ಮೂಲವನ್ನು ಹೊಂದಿದೆ, ಅಂದರೆ ಎಲ್ಲಾ 9 ಅಮೈನೋ ಆಮ್ಲಗಳು ಇವೆ.

ಮತ್ತಷ್ಟು ಓದಿ: Viral: ಮನೆಯಲ್ಲಿ ಹಾಲು ಮಿಕ್ಕರೆ ಅದನ್ನು ವೇಸ್ಟ್‌ ಮಾಡುವ ಬದಲು ಹೀಗೆ ಉಪಯೋಗಿಸಿ

ಇಂದಿನ ಕಾಲದಲ್ಲಿ ಹೆಚ್ಚು ಮಂದಿ ಹಾಲು ಕುಡಿಯುವುದಿಲ್ಲ, ದೇಹಕ್ಕೆ ಹೊಂದಿಕೆಯಾಗುವುದಿಲ್ಲ, ಆದರೆ ಜಿರಳೆಗಳು ಉತ್ತಮ ಆಯ್ಕೆಯಾಗಿ ಸಾಬೀತುಪಡಿಸಬಹುದು. ಇದಕ್ಕೆ ಕಾರಣವೆಂದರೆ ಲ್ಯಾಕ್ಟೋಸ್ ಅನ್ನು ಜೀರ್ಣಿಸುವ ಲ್ಯಾಕ್ಟೇಸ್ ಕಿಣ್ವವು ಪ್ರಪಂಚದ ಶೇಕಡಾ 65 ರಷ್ಟು ಜನರಲ್ಲಿ ಕಡಿಮೆ ಉತ್ಪತ್ತಿಯಾಗುತ್ತದೆ. ಅದಕ್ಕಾಗಿಯೇ ಹಾಲು ಜೀರ್ಣವಾಗುವುದಿಲ್ಲ. ಜಿರಳೆ ಹಾಲಿನಲ್ಲಿ ಹಾಗಲ್ಲ. ಇದರಲ್ಲಿ ಲ್ಯಾಕ್ಟೋಸ್ ಇರುವುದಿಲ್ಲ. ಇದರಿಂದಾಗಿ, ಈ ಹಾಲು ಕುಡಿಯುವುದರಿಂದ ಹೊಟ್ಟೆ ಉಬ್ಬರ, ಅಜೀರ್ಣ, ವಾಕರಿಕೆ, ಅತಿಸಾರದಂತಹ ಸಮಸ್ಯೆಗಳು ಉಂಟಾಗುವುದಿಲ್ಲ. ಆದಾಗ್ಯೂ, ಜಿರಳೆಗಳು ಬಹಳಷ್ಟು ಕ್ಯಾಲೊರಿಗಳನ್ನು ಹೊಂದಿರುತ್ತವೆ, ಇದರಿಂದಾಗಿ ತೂಕ ಹೆಚ್ಚಾಗಬಹುದು.

ಜಿರಳೆಗಳಿಂದ ಹಾಲು ತೆಗೆಯುವುದು ಸುಲಭವಲ್ಲ ಇದು ಸಂಕೀರ್ಣ ಪ್ರಕ್ರಿಯೆ, ಜಿರಳೆಗಳ ಕರುಳಿನಲ್ಲಿ ಹಾಲಿನಂತಹ ವಸ್ತು ಉತ್ಪತ್ತಿಯಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದಕ್ಕಾಗಿ ಜಿರಳೆಗಳನ್ನು ಕೊಲ್ಲಬೇಕಾಗುತ್ತದೆ ಮತ್ತು 100 ಗ್ರಾಂ ಹಾಲು ಹೊರತೆಗೆಯಲು ಸುಮಾರು 1000 ಹೆಣ್ಣು ಜಿರಳೆಗಳನ್ನು ಕೊಲ್ಲಬೇಕಾಗುತ್ತದೆ. ಆದಾಗ್ಯೂ, ಜಿರಳೆಗಳಿಂದ ಹಾಲು ಹೊರತೆಗೆಯುವ ಕಲ್ಪನೆಯು ಖಂಡಿತವಾಗಿಯೂ ಆಸಕ್ತಿದಾಯಕವಾಗಿದೆ. ವಿಜ್ಞಾನದ ಪ್ರಗತಿಯೊಂದಿಗೆ ಮುಂದಿನ ದಿನಗಳಲ್ಲಿ ಇದನ್ನು ಮುಖ್ಯ ಹಾಲಾಗಿ ಬಳಸಲು ಪ್ರಾರಂಭಿಸುವ ಸಾಧ್ಯತೆಯಿದೆ.

ಸೂಚನೆ: ಇದು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಅಧ್ಯಯನ ವರದಿಯನ್ನು ಆಧರಿಸಿರುತ್ತದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:48 am, Fri, 14 February 25