ಮಗನ ಮದುವೆಯ ಅರಿಶಿನ ಶಾಸ್ತ್ರದಲ್ಲಿ ಹೆಂಡತಿ ಜೊತೆ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಡ್ಯಾನ್ಸ್
ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಮ್ಮ ಮಗ ಕುನಾಲ್ ಚೌಹಾಣ್ ಅವರ ಅರಿಶಿನ ಶಾಸ್ತ್ರದ ಸಮಾರಂಭದಲ್ಲಿ ತಮ್ಮ ಪತ್ನಿಯೊಂದಿಗೆ ನೃತ್ಯ ಮಾಡಿದ್ದಾರೆ. ಕೇಂದ್ರ ಸಚಿವರ ಕಿರಿಯ ಮಗ ಕುನಾಲ್ ಚೌಹಾಣ್ ಭೋಪಾಲ್‌ನ ಡಾ. ಇಂದೆರ್ಮಲ್ ಜೈನ್ ಅವರ ಮೊಮ್ಮಗಳು ರಿಧಿ ಜೈನ್ ಅವರೊಂದಿಗೆ ವಿವಾಹವಾಗಲಿದ್ದಾರೆ. ಕೇಂದ್ರ ಸಚಿವರು ಮತ್ತು ಅವರ ಪತ್ನಿ ಸಾಂಪ್ರದಾಯಿಕ ಉಡುಪನ್ನು ಧರಿಸಿ ನೃತ್ಯ ವೇದಿಕೆಯಲ್ಲಿ ಹೃದಯಸ್ಪರ್ಶಿ ಕ್ಷಣವನ್ನು ಹಂಚಿಕೊಳ್ಳುತ್ತಿರುವ ಕಾರ್ಯಕ್ರಮದ ವಿಡಿಯೋ ಈಗ ಬಹಿರಂಗವಾಗಿದೆ.
ಭೋಪಾಲ್: ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭೋಪಾಲ್‌ನಲ್ಲಿರುವ ತಮ್ಮ ನಿವಾಸದಲ್ಲಿ ತಮ್ಮ ಮಗನ ಮದುವೆಯ ಅರಿಶಿನ ಶಾಸ್ತ್ರ ಸಮಾರಂಭದಲ್ಲಿ ಪತ್ನಿ ಸಾಧನಾ ಸಿಂಗ್ ಅವರೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿದೆ. ಕೇಂದ್ರ ಸಚಿವರ ಕಿರಿಯ ಮಗ ಕುನಾಲ್ ಚೌಹಾಣ್ ಭೋಪಾಲ್‌ನ ಡಾ. ಇಂದೆರ್ಮಲ್ ಜೈನ್ ಅವರ ಮೊಮ್ಮಗಳು ರಿಧಿ ಜೈನ್ ಅವರೊಂದಿಗೆ ವಿವಾಹವಾಗಲಿದ್ದಾರೆ. ಇವರಿಬ್ಬರೂ 1 ವರ್ಷದ ಹಿಂದೆ 2024ರ ಮೇ 23ರಂದು ತಮ್ಮ ನಿವಾಸದಲ್ಲಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ