Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದ ದೇವಾಲಯದ ಉತ್ಸವದಲ್ಲಿ ರೊಚ್ಚಿಗೆದ್ದ ಆನೆಗಳು; ಮೂವರು ಸಾವು, 36 ಜನರಿಗೆ ಗಾಯ

ಕೇರಳದ ದೇವಾಲಯದ ಉತ್ಸವದಲ್ಲಿ ರೊಚ್ಚಿಗೆದ್ದ ಆನೆಗಳು; ಮೂವರು ಸಾವು, 36 ಜನರಿಗೆ ಗಾಯ

ಸುಷ್ಮಾ ಚಕ್ರೆ
|

Updated on: Feb 13, 2025 | 10:53 PM

ಆನೆಗಳು ಕೋಪಗೊಂಡು ಓಡಿಹೋಗಿ ಹತ್ತಿರದ ಸಣ್ಣ ಅಂಗಡಿಯನ್ನು ನಾಶಮಾಡಿ ಜನರ ಮೇಲೆ ದಾಳಿ ಮಾಡಿದಾಗ ದೇವಾಲಯದಲ್ಲಿ ನಡೆದ ಘಟನೆಯನ್ನು ಪ್ರತ್ಯಕ್ಷದರ್ಶಿಗಳು ವಿವರಿಸುತ್ತಾರೆ. ಮೃತರು ಲೀಲಾ (68), ರಾಜನ್ (66), ಮತ್ತು ಅಮ್ಮುಕುಟ್ಟಿ (65). ಲೀಲಾ ಮತ್ತು ಅಮ್ಮುಕುಟ್ಟಿ ಕುರುವಂಗಡ್ ಮೂಲದವರು. ಗಾಯಾಳುಗಳಲ್ಲಿ 21 ಜನರನ್ನು ಕೊಯಿಲಾಂಡಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ 14 ಜನರನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.

ಕೋಝಿಕ್ಕೋಡ್: ಕೇರಳ ರಾಜ್ಯದಲ್ಲಿ ಮನುಷ್ಯರ ಮೇಲೆ ಆನೆಗಳ ದಾಳಿ ಮುಂದುವರೆದಿದ್ದು, ಕೋಝಿಕ್ಕೋಡ್‌ನ ಕೊಯಿಲಾಂಡಿಯಲ್ಲಿ ದೇವಾಲಯದ ಉತ್ಸವಕ್ಕಾಗಿ ತಂದಿದ್ದ ಆನೆಗಳು ಇದ್ದಕ್ಕಿದ್ದಂತೆ ಓಡಲಾರಂಭಿಸಿದ ಹಿನ್ನೆಲೆಯಲ್ಲಿ 3 ಜನರು ಸಾವನ್ನಪ್ಪಿದ್ದಾರೆ. ಕೊಯ್ಲಾಂಡಿಯ ಕುರುವಂಗಾಡ್‌ನಲ್ಲಿರುವ ಮಣಕ್ಕುಳಂಗರ ದೇವಾಲಯದಲ್ಲಿ ನಡೆದ ಉತ್ಸವದ ಸಂದರ್ಭದಲ್ಲಿ ಆನೆಗಳು ಕೋಪಗೊಂಡು ಓಡಿಹೋದ ನಂತರ ಮೂವರು ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 36 ಜನರು ಗಾಯಗೊಂಡಿದ್ದಾರೆ. ಪೀತಾಂಬರನ್ ಮತ್ತು ಗೋಕುಲ್ ಎಂಬ ಎರಡು ಆನೆಗಳು ರೊಚ್ಚಿಗೆದ್ದ ನಂತರ ಈ ಘಟನೆ ನಡೆಯಿತು. ಉತ್ಸವಕ್ಕೆ ತಂದಿದ್ದ ಒಂದು ಆನೆ ಆಕ್ರಮಣಕಾರಿಯಾಗಿ ಮತ್ತೊಂದು ಆನೆಯನ್ನು ಕೆರಳಿಸಿತು. ಇದು ಘರ್ಷಣೆಗೆ ಕಾರಣವಾಯಿತು. ಆನೆಗಳ ಕಾಲಡಿಗೆ ಸಿಲುಕಿ ಅನೇಕರಿಗೆ ಗಾಯಗಳಾಗಿವೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ