‘ವಿಷ್ಣುಪ್ರಿಯಾ’ ಎಂದು ಶೀರ್ಷಿಕೆ ಇಡಲು ಕಾರಣ ಏನು? ವಿವರಿಸಿದ ಕೆ. ಮಂಜು
ಖ್ಯಾತ ನಿರ್ಮಾಪಕ ಕೆ. ಮಂಜು ಅವರು ‘ವಿಷ್ಣುಪ್ರಿಯಾ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರ ಪುತ್ರ ಶ್ರೇಯಸ್ ಹೀರೋ ಆಗಿ ನಟಿಸಿದ್ದಾರೆ. ವಿ.ಕೆ. ಪ್ರಕಾಶ್ ಅವರು ನಿರ್ದೇಶನ ಮಾಡಿದ್ದಾರೆ. ಫೆಬ್ರವರಿ 21ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರದ ಕುರಿತು ನಿರ್ಮಾಪಕ ಕೆ. ಮಂಜು ಅವರು ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ, ನಿರ್ಮಾಪಕ ಕೆ. ಮಂಜು ಅವರು ತಮ್ಮ ಮಗನ ಸಿನಿಮಾಗೆ ‘ವಿಷ್ಣುಪ್ರಿಯಾ’ ಎಂದೇ ಶೀರ್ಷಿಕೆ ಇಟ್ಟಿದ್ದು ವಿಶೇಷ. ಈ ಸಿನಿಮಾ ಹೇಗೆ ಸೆಟ್ಟೇರಿತು? ಈ ಟೈಟಲ್ ಇಟ್ಟಿದು ಯಾಕೆ ಎಂಬುದನ್ನು ಮಂಜು ಅವರು ವಿವರಿಸಿದ್ದಾರೆ. ‘ಈ ಸಿನಿಮಾದ ಕಥೆಯಲ್ಲಿ ಹೆಣ್ಣಿಗೆ ಬಹಳ ಗೌರವ, ಮಹತ್ವ ಇದೆ. ಈ ಮಣ್ಣಿನ ಹೆಣ್ಣಿಗೆ ವಿಷ್ಣುವರ್ಧನ್ ಅವರುತುಂಬ ಗೌರವ ನೀಡುತ್ತಿದ್ದರು. ಹಾಗಾಗಿ ಹೀರೋ ಪಾತ್ರಕ್ಕೆ ವಿಷ್ಣು ಎಂದು ಹೆಸರು ಇಟ್ಟೆವು. ನಾಯಕಿ ಹೆಸರು ಪ್ರಿಯಾ. ಆದ್ದರಿಂದ ವಿಷ್ಣು ಪ್ರಿಯಾ ಎಂದು ಶೀರ್ಷಿಕೆ ಇಟ್ಟೆವು’ ಎಂದಿದ್ದಾರೆ ಕೆ. ಮಂಜು. ಫೆ.21ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಶ್ರೇಯಸ್ ಜೊತೆ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಜೋಡಿಯಾಗಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ

ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್ಕೆ ಪಾಟೀಲ್

Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ

‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?
