Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವಜಾತ ಶಿಶುಗಳಿಗೆ ಕಾಮಾಲೆ ಏಕೆ ಬರುತ್ತದೆ? ಇಲ್ಲಿದೆ ಕಾರಣ

ನವಜಾತ ಶಿಶುಗಳಲ್ಲಿ ಕಾಮಾಲೆ ಸಾಮಾನ್ಯ. ಇದನ್ನು ವೈದ್ಯರ ಸಲಹೆಯಂತೆ ಸುಲಭವಾಗಿ ನಿಯಂತ್ರಿಸಬಹುದು, ಆದರೆ ಕೆಲವು ಪ್ರಕರಣಗಳು ಗಂಭೀರವಾಗಿರಬಹುದು. ಇದು ಮಕ್ಕಳ ಒಟ್ಟಾರೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನವಜಾತ ಶಿಶುವಿನಲ್ಲಿ ಕಾಮಾಲೆಯ ಲಕ್ಷಣಗಳು ಕಾಣಿಸಿಕೊಂಡರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಕಾಮಾಲೆ ಲಕ್ಷಣಗಳೇನು? ಈ ಬಗ್ಗೆ ಇಲ್ಲಿದೆ ನೋಡಿ.

ನವಜಾತ ಶಿಶುಗಳಿಗೆ ಕಾಮಾಲೆ ಏಕೆ ಬರುತ್ತದೆ? ಇಲ್ಲಿದೆ ಕಾರಣ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 14, 2025 | 4:21 PM

ಚಿಕ್ಕ ಮಕ್ಕಳಲ್ಲಿ ಕಾಮಾಲೆ ಸಾಮಾನ್ಯ ಸಮಸ್ಯೆಯಾಗಿದೆ. ಜನನದ ನಂತರ, ಅನೇಕ ಶಿಶುಗಳ ಕಣ್ಣುಗಳು ಹಳದಿ ಬಣ್ಣದಲ್ಲಿ ಕಾಣಲು ಪ್ರಾರಂಭಿಸುತ್ತವೆ. ಏಕೆಂದರೆ ನವಜಾತ ಶಿಶುಗಳಲ್ಲಿ ಕಾಮಾಲೆ ಉಂಟಾಗಲು ಕಾರಣವಾಗುವ ಹೆಚ್ಚುವರಿ ಬಿಲಿರುಬಿನ್ ಅವರ ದೇಹದಲ್ಲಿ ರೂಪುಗೊಳ್ಳುವ ಕಾರಣ. ಸಾಮಾನ್ಯವಾಗಿ ಈ ಸಮಸ್ಯೆ ಕೆಲವೇ ದಿನಗಳಲ್ಲಿ ಕಡಿಮೆ ಆಗುತ್ತದೆ, ಆದರೆ ಕೆಲವೊಮ್ಮೆ ಇದು ಗಂಭೀರ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ನವಜಾತ ಶಿಶುವಿನ ಆರೈಕೆ ಮಾಡುವುದು ಅಗತ್ಯವಾಗುತ್ತದೆ. ವಿಶೇಷವಾಗಿ ಪೋಷಕರು ಈ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು.

ಗಾಜಿಯಾಬಾದ್‌ನಲ್ಲಿರುವ ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗದ ವೈದ್ಯರಾದ ವಿಪಿನ್ ಚಂದ್ರ ಉಪಾಧ್ಯಾಯ ಹೇಳುವಂತೆ ನವಜಾತ ಶಿಶುಗಳಲ್ಲಿ ಕಾಮಾಲೆ ಬರಲು ಹಲವು ಕಾರಣಗಳಿವೆ. ಗರ್ಭದಲ್ಲಿರುವ ಮಗು ಸಂಪೂರ್ಣವಾಗಿ ಬೆಳವಣಿಗೆಯಾಗುವುದಿಲ್ಲ. ಗರ್ಭಿಣಿಯರು ಸರಿಯಾದ ಪೌಷ್ಟಿಕ ಆಹಾರವನ್ನು ಸೇವಿಸುವುದಿಲ್ಲ. ಇಂತಹ ಹಲವು ಲಕ್ಷಣಗಳು ಇರಬಹುದು. ಜನನದ ನಂತರ, ಮಗುವಿನ ಯಕೃತ್ತು ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರಿಂದಾಗಿ ದೇಹದಲ್ಲಿ ಬಿಲಿರುಬಿನ್ ಸಂಗ್ರಹವಾಗುತ್ತದೆ, ನವಜಾತ ಶಿಶುವಿನಲ್ಲಿ ಕಾಮಾಲೆ ಉಂಟಾಗುತ್ತದೆ.

ಇದನ್ನೂ ಓದಿ: ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಇದಕ್ಕಿಂತ ಸುಲಭ ಉಪಾಯ ಮತ್ತೊಂದಿಲ್ಲ

ಈ ಸಮಯದಲ್ಲಿ ನವಜಾತ ಶಿಶುಗಳಲ್ಲಿ, ಕೆಂಪು ರಕ್ತ ಕಣಗಳು ರೂಪುಗೊಳ್ಳುತ್ತವೆ ಹಾಗೂ ಆ ರಕ್ತದ ಹೆಪ್ಪು ಹೊಡೆಯುವುತ್ತದೆ. ಇದರಿಂದಾಗಿ ಬಿಲಿರುಬಿನ್ ಹೆಚ್ಚಾಗುತ್ತದೆ. ನವಜಾತ ಶಿಶುವಿನಲ್ಲಿ ಬಿಲಿರುಬಿನ್ ಹೆಚ್ಚಾದರೆ, ಕಾಮಾಲೆ ಬರುವ ಅಪಾಯ ಹೆಚ್ಚಾಗುತ್ತದೆ.ಯಾವುದೇ ರೋಗವು ದೇಹಕ್ಕೆ ಅಪಾಯಕಾರಿ, ಆದರೆ ಕಾಮಾಲೆ 1-2 ವಾರಗಳಲ್ಲಿ ತಾನಾಗಿಯೇ ಗುಣವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಇದು ಗಂಭೀರತೆಯನ್ನು ಉಂಟು ಮಾಡಬಹುದು. ಮಗುವಿಗೆ ಆಗಾಗ್ಗೆ ಹಾಲುಣಿಸುವುದರಿಂದ ಕಾಮಾಲೆ ಬೇಗನೆ ಗುಣವಾಗುತ್ತದೆ. ನಿಮ್ಮ ಮಗುವಿಗೆ ಕಾಮಾಲೆಯ ಲಕ್ಷಣಗಳು (ಚರ್ಮ ಅಥವಾ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು) ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಸೂಚನೆ: ಇಲ್ಲಿರುವ ವಿಷಯಗಳು ಮಾಹಿತಿಗಾಗಿ ಮಾತ್ರ, ಯಾವುದೇ ರೀತಿಯ ಸಂದೇಹಗಳಿದ್ದಲ್ಲಿ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸುವುದು ಸೂಕ್ತ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ