AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Black Grapes: ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಇದಕ್ಕಿಂತ ಸುಲಭ ಉಪಾಯ ಮತ್ತೊಂದಿಲ್ಲ

ಕಪ್ಪು ದ್ರಾಕ್ಷಿ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಕೆ, ವಿಟಮಿನ್ ಬಿ, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಉತ್ಕರ್ಷಣ ನಿರೋಧಕಗಳು ಇತ್ಯಾದಿಗಳಿವೆ. ಇವುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು. ಕಪ್ಪು ದ್ರಾಕ್ಷಿ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಅದಲ್ಲದೆ ಇದರಲ್ಲಿ ಉರಿಯೂತ ನಿವಾರಕ ಗುಣಗಳು ಅಧಿಕವಾಗಿದ್ದು ಕೀಲುಗಳನ್ನು ಆರೋಗ್ಯಕರವಾಗಿರಿಸುತ್ತವೆ.

Black Grapes: ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಇದಕ್ಕಿಂತ ಸುಲಭ ಉಪಾಯ ಮತ್ತೊಂದಿಲ್ಲ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Feb 15, 2025 | 10:22 AM

Share

ದ್ರಾಕ್ಷಿಗಳಲ್ಲಿ ಹಲವು ವಿಧ. ಕಪ್ಪು, ಕೆಂಪು, ಹಸಿರು ಹೀಗೆ ಮುಂತಾದ ಅನೇಕ ಬಣ್ಣಗಳಲ್ಲಿ ಇವುಗಳನ್ನು ನೀವು ನೋಡಿರಬಹದು ಅವುಗಳ ರುಚಿಯನ್ನು ಸವಿದಿರಬಹದು. ದ್ರಾಕ್ಷಿಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಅದರಲ್ಲಿಯೂ ಕಪ್ಪು ದ್ರಾಕ್ಷಿ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಕೆ, ವಿಟಮಿನ್ ಬಿ, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಉತ್ಕರ್ಷಣ ನಿರೋಧಕಗಳು ಇತ್ಯಾದಿಗಳಿವೆ. ಇವುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು. ಕಪ್ಪು ದ್ರಾಕ್ಷಿ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಅದಲ್ಲದೆ ಇದರಲ್ಲಿ ಉರಿಯೂತ ನಿವಾರಕ ಗುಣಗಳು ಅಧಿಕವಾಗಿದ್ದು ಕೀಲುಗಳನ್ನು ಆರೋಗ್ಯಕರವಾಗಿರಿಸುತ್ತವೆ. ಇದಷ್ಟೇ ಅಲ್ಲ ಇವುಗಳ ಸೇವನೆಯಿಂದ ಅನೇಕ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹಾಗಾದರೆ ಕಪ್ಪು ದ್ರಾಕ್ಷಿ ಸೇವನೆ ಮಾಡಿದರೆ ಯಾವ ರೀತಿಯ ಲಾಭಗಳಿವೆ ತಿಳಿದುಕೊಳ್ಳಿ.

  1. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ವಿಟಮಿನ್ ಸಿ ಸಮೃದ್ಧವಾಗಿರುವ ಕಪ್ಪು ದ್ರಾಕ್ಷಿಯನ್ನು ನಿಯಮಿತವಾಗಿ ತಿನ್ನುವುದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  2. ಹೃದಯದ ಆರೋಗ್ಯಕ್ಕೆ ಪೂರಕವಾಗಿದೆ: ಪೊಟ್ಯಾಸಿಯಮ್ ಸಮೃದ್ಧವಾಗಿರುವ ಕಪ್ಪು ದ್ರಾಕ್ಷಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಕಪ್ಪು ದ್ರಾಕ್ಷಿಯಲ್ಲಿರುವ ಉತ್ಕರ್ಷಣ ನಿರೋಧಕಗಳು, ವಿಶೇಷವಾಗಿ ರೆಸ್ವೆರಾಟ್ರಾಲ್, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಯೋಜನಕಾರಿಯಾಗಿದೆ.
  3. ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು: ವಿಟಮಿನ್ ಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಕಪ್ಪು ದ್ರಾಕ್ಷಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
  4. ಜೀರ್ಣಕ್ರಿಯೆಗೆ ಸಹಕಾರಿ: ಕಪ್ಪು ದ್ರಾಕ್ಷಿಯಲ್ಲಿ ಫೈಬರ್ ಸಮೃದ್ಧವಾಗಿದ್ದು ಇವುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ ಜೊತೆಗೆ ಮಲಬದ್ಧತೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
  5. ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ: ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ದ್ರಾಕ್ಷಿ ಕೆಲವು ರೀತಿಯ ಕ್ಯಾನ್ಸರ್ಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  6. ತೂಕ ನಷ್ಟಕ್ಕೆ ಸಹಕಾರಿ: ತೂಕ ಕಡಿಮೆ ಮಾಡಿಕೊಳ್ಳಲು ಹರಸಾಹಸ ಪಡುತ್ತಿರುವವರು ಕಪ್ಪು ದ್ರಾಕ್ಷಿಯ ಸೇವನೆ ಮಾಡಬಹುದು. ಏಕೆಂದರೆ ಇವುಗಳಲ್ಲಿ ಕ್ಯಾಲೊರಿ ತುಂಬಾ ಕಡಿಮೆ ಇರುವುದಲ್ಲದೆ ನೀರಿ ಅಂಶ ಹೆಚ್ಚಾಗಿರುತ್ತದೆ, ಆದ್ದರಿಂದ ತೂಕ ಇಳಿಸಿಕೊಳ್ಳಲು ಬಯಸುವವರು ತಮ್ಮ ದಿನನಿತ್ಯದ ಆಹಾರದಲ್ಲಿ ದ್ರಾಕ್ಷಿ ಹಣ್ಣುಗಳ ಸೇವನೆ ಮಾಡಬಹುದು.
  7. ಚರ್ಮದ ಆರೋಗ್ಯಕ್ಕೆ ಒಳ್ಳೆಯದು: ದ್ರಾಕ್ಷಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಮತ್ತು ಇ ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ಇವು ಮುಖದ ಕಾಂತಿಯನ್ನು ಕೂಡ ಹೆಚ್ಚಿಸುತ್ತದೆ.

(ಸೂಚನೆ: ಇಲ್ಲಿರುವ ವಿಷಯಗಳು ಮಾಹಿತಿಗಾಗಿ ಮಾತ್ರ. ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿದ್ದ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ)

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:11 pm, Fri, 14 February 25