No Tobacco Day: ನೀವು ತಂಬಾಕು ತ್ಯಜಿಸಲು ಯೋಚಿಸುತ್ತಿದ್ದರೆ ಈ ರೀತಿ ಮಾಡಿ
ತಂಬಾಕು ಸೇವಿಸುವು ಅಥವಾ ಬೀಡಿ, ಸಿಗರೇಟ್ (Cigarette) ಸೇದುವ ಪ್ರತಿಯೊಬ್ಬ ವ್ಯಕ್ತಿಗೂ ಇದು ನಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ ಎನ್ನುವುದು ಗೊತ್ತೇ ಇದೆ, ಹೀಗಿದ್ದರೂ ಅವರು ತಂಬಾಕಿನ ಚಟದಿಂದ ಹೊರಬರುವುದು ಅಸಾಧ್ಯ ಎನಿಸುತ್ತದೆ. ಆದರೆ ವ್ಯಕ್ತಿ ಮನಸ್ಸು ಮಾಡಿದರೆ ಸಾಧ್ಯವಾಗದ್ದು ಯಾವುದು ಇಲ್ಲ. ಹಾಗಾಗಿಯೇ ಈ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ ಎರಡನೇ ಬುಧವಾರವನ್ನು ಧೂಮಪಾನ ನಿಷೇಧ ದಿನ (No Smoking Day) ಎಂದು ಆಚರಿಸಲಾಗುತ್ತದೆ. ಹಾಗಾಗಿ ಈ ಬಾರಿ ಮಾ. 12 ರಂದು ಈ ದಿನವನ್ನು ಆಚರಿಸಲಾಗುತ್ತಿದೆ.

ಯಾವುದೇ ಒಂದು ಅಭ್ಯಾಸವನ್ನು ಬಿಡಲು ಕಷ್ಟವಾದಾಗ ಅದನ್ನು ‘ವ್ಯಸನ’ ಅಥವಾ ‘ಚಟ’ ಎಂದು ಕರೆಯಲಾಗುತ್ತದೆ. ತಂಬಾಕು (Tobacco) ಚಟವು ಪ್ರಪಂಚದಾದ್ಯಂತ ಅನೇಕ ಜನರನ್ನು ಆವರಿಸಿದೆ. ಎಷ್ಟೇ ಪ್ರಯತ್ನಪಟ್ಟರೂ ಆ ಚಟದಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಇದೊಂದು ಕೆಟ್ಟ ಅಭ್ಯಾಸವಾಗಿದ್ದು, ಅದನ್ನು ತೊರೆಯಲು ಅಥವಾ ಕಡಿಮೆ ಮಾಡಲು ಜನರು ತುಂಬಾ ಕಷ್ಟ ಪಡಬೇಕಾಗುತ್ತದೆ. ತಂಬಾಕು ಸೇವಿಸುವು ಅಥವಾ ಬೀಡಿ, ಸಿಗರೇಟ್ (Cigarette) ಸೇದುವ ಪ್ರತಿಯೊಬ್ಬ ವ್ಯಕ್ತಿಗೂ ಇದು ನಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ ಎನ್ನುವುದು ಗೊತ್ತೇ ಇದೆ, ಹೀಗಿದ್ದರೂ ಅವರು ತಂಬಾಕಿನ ಚಟದಿಂದ ಹೊರಬರುವುದು ಅಸಾಧ್ಯ ಎನಿಸುತ್ತದೆ. ಆದರೆ ವ್ಯಕ್ತಿ ಮನಸ್ಸು ಮಾಡಿದರೆ ಸಾಧ್ಯವಾಗದ್ದು ಯಾವುದು ಇಲ್ಲ. ಹಾಗಾಗಿಯೇ ಈ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ ಎರಡನೇ ಬುಧವಾರವನ್ನು ಧೂಮಪಾನ ನಿಷೇಧ ದಿನ (No Smoking Day) ಎಂದು ಆಚರಿಸಲಾಗುತ್ತದೆ. ಹಾಗಾಗಿ ಈ ಬಾರಿ ಮಾ. 12 ರಂದು ಈ ದಿನವನ್ನು ಆಚರಿಸಲಾಗುತ್ತಿದೆ.
ಡಬ್ಲ್ಯುಎಚ್‌ಒ ಪ್ರಕಾರ ತಂಬಾಕು ಸೇವನೆಯಿಂದ ಪ್ರತಿ ವರ್ಷ 7 ಮಿಲಿಯನ್‌ಗಿಂತಲೂ ಹೆಚ್ಚು ಜನರು ಸಾಯುತ್ತಾರೆ. ಜೊತೆಗೆ ಪ್ರತಿ ವರ್ಷ ಸುಮಾರು 1.2 ಮಿಲಿಯನ್ ಜನರು ಸಿಗರೇಟ್ ಸೇದುವುದರಿಂದ ಸಾಯುತ್ತಾರೆ. ಇದಕ್ಕೆ ಮುಖ್ಯ ಕಾರಣ, ಜನರು ತಂಬಾಕು ಆರೋಗ್ಯಕ್ಕೆ ಹಾನಿಕರ ಎಂಬುದು ಗೊತ್ತಿದ್ದೂ ಸಹ ಅದನ್ನು ಬಳಕೆ ಮಾಡುತ್ತಾರೆ. ಆದರೆ ಇದನ್ನು ಒಂದೇ ಸಲ ಬಿಡಲು ಅಥವಾ ಕಡಿಮೆ ಮಾಡಲು ಜನರು ತುಂಬಾ ಕಷ್ಟ ಪಡಬೇಕಾಗುತ್ತದೆ. ಅದಲ್ಲದೆ ತಂಬಾಕಿನಲ್ಲಿರುವ ನಿಕೋಟಿನ್ ಹಾನಿಕಾರಕ ರಾಸಾಯನಿಕವಾಗಿದ್ದು, ಇದು ದೇಹಕ್ಕೆ ಅನೇಕ ರೀತಿಯ ಕಾಯಿಲೆಗಳನ್ನು ಉಂಟುಮಾಡುತ್ತದೆ. ‘ಶ್ವಾಸಕೋಶದ ಕ್ಯಾನ್ಸರ್’ ನಿಂದ ಹಿಡಿದು ರಕ್ತ, ಮೂತ್ರಕೋಶ, ಯಕೃತ್ತು, ಮೂತ್ರಪಿಂಡ, ಮೇದೋಜ್ಜೀರಕ ಗ್ರಂಥಿ, ಕರುಳು ಮತ್ತು ಹೊಟ್ಟೆ ಸೇರಿದಂತೆ ಅನೇಕ ರೀತಿಯ ಕ್ಯಾನ್ಸರ್ ಅಪಾಯದ ಜೊತೆಗೆ ಹೃದ್ರೋಗಗಳು, ಮಧುಮೇಹ, ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಸೇರಿದಂತೆ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಇದರಿಂದ ಒಮ್ಮೆಲೇ ಹೊರಬರಲು ಸಾಧ್ಯವಾಗದಿದ್ದರೂ ಕೂಡ ಹಂತ ಹಂತವಾಗಿ ಅದರ ಬಳಕೆ ಕಡಿಮೆ ಮಾಡಿ.
ಇದನ್ನೂ ಓದಿ: ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಎಚ್ಚರಿಕೆ ಸುದ್ದಿ, ನಿಮಗೆ ಈ ರೋಗ ಬರುವುದು ಖಂಡಿತ
ನೀವು ತಂಬಾಕು ತ್ಯಜಿಸಲು ಯೋಚಿಸುತ್ತಿದ್ದರೆ ಈ ರೀತಿ ಮಾಡಿ;
ಧೂಮಪಾನವನ್ನು ತೊರೆಯಲು 5 ಸುಲಭ ಮಾರ್ಗಗಳು:
-ಸಾಮಾನ್ಯವಾಗಿ ಯಾವುದೇ ನಿರ್ಧಾರವಾಗಲಿ ಅದರ ಬಗ್ಗೆ ನಮಗೆ ನಂಬಿಕೆ ಇರಬೇಕು. ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡಬಾರದು. ಹಾಗಾಗಿ ಧೂಮಪಾನವನ್ನು ತ್ಯಜಿಸುವ ನಿಮ್ಮ ಉದ್ದೇಶವನ್ನು ಮತ್ತೆ ಮತ್ತೆ ಬದಲಿಸಬೇಡಿ ಜೊತೆಗೆ ಆ ಬಗ್ಗೆ ಹೆಚ್ಚು ಚಿಂತಿಸಬೇಡಿ. ನಿಮ್ಮ ಮೆಚ್ಚಿನ ಕೆಲಸ ಮಾಡುವ ಮೂಲಕ ಅಥವಾ ಒಳ್ಳೆಯ ಸಂಗೀತ ಕೇಳುವ ಮೂಲಕ, ಸ್ನೇಹಿತರೊಂದಿಗೆ ಹರಟೆ ಹೊಡೆಯುವ ಮೂಲಕ, ನಿಮ್ಮ ಮನಸ್ಸಿಗೆ ಸಿಗರೇಟ್ ಇಲ್ಲದೆಯೂ ಆರಾಮವಾಗಿರಬಹುದು ಎಂಬ ಸಂದೇಶವನ್ನು ನೀಡುತ್ತಾ ಇರಿ.
-ವೈದ್ಯರ ಸಲಹೆಯ ಮೇರೆಗೆ, ನೀವು ನಿಕೋಟಿನ್ ಅಲ್ಲದ ಔಷಧಿಗಳನ್ನು ತೆಗೆದುಕೊಳ್ಳಬೇಕು, ಇದು ಧೂಮಪಾನದ ಕೆಟ್ಟ ಅಭ್ಯಾಸವನ್ನುತೊರೆಯಲು ಸಹಾಯ ಮಾಡಬಹುದು. ಆದರೆ ತಜ್ಞರ ಸಲಹೆಯಿಲ್ಲದೆ ಔಷಧಿಯನ್ನು ತೆಗೆದುಕೊಳ್ಳುವುದು ಹಾನಿಕಾರಕ ಎಂಬುದನ್ನು ನೆನಪಿನಲ್ಲಿಡಿ.
-ನೀವು ಧೂಮಪಾನವನ್ನು ತ್ಯಜಿಸಿದರೆ, ಅದು ತಲೆನೋವು ಮತ್ತು ಕೆಟ್ಟ ಮೂಡ್ ಅನ್ನು ಉಂಟುಮಾಡಬಹುದು, ಆದರೆ ನಿಕೋಟಿನ್ ರಿಪ್ಲೇಸ್ಮೆಂಟ್ ಥೆರಪಿ ಮೂಲಕ ನೀವು ಪರಿಹಾರವನ್ನು ಪಡೆಯಬಹುದು. ನಿಕೋಟಿನ್ ಗಮ್, ಲೋಜೆಂಜೆಗಳನ್ನು ಹಂತ ಹಂತವಾಗಿ ಬಳಸಬಹುದು.
-ನೀವು ಧೂಮಪಾನವನ್ನು ಬಿಡಲು ಪ್ರಯತ್ನಿಸುತ್ತಿರುವುದನ್ನು ನಿಮ್ಮ ಪ್ರೀತಿ ಪಾತ್ರರೊಂದಿಗೆ ಅಥವಾ ಕುಟುಂಬದವರೊಂದಿಗೆ ಹಂಚಿಕೊಳ್ಳಿ. ಬಳಿಕ ಅವರೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ.
-ಸಿಗರೇಟ್ ಬದಲಿಗೆ ಮೌತ್ ಫ್ರೆಶ್ನರ್ ಬಳಸಿ. ಇದನ್ನು ಸುಲಭವಾಗಿ ಮನೆಯಲ್ಲಿಯೇ ಮಾಡಬಹುದಾಗಿದ್ದು ಯಾವಾಗಲೂ ನಿಮ್ಮೊಂದಿಗೆ ಇಟ್ಟುಕೊಳ್ಳಬಹುದು. ನಿಮಗೆ ತಂಬಾಕಿನ ಹಂಬಲ ಉಂಟಾದಾಗ, ಮೌತ್ ಫ್ರೆಶ್ನರ್ ಅನ್ನು ಬಳಸಿ ಇದು ನಿಮಗೆ ತುಂಬಾ ಸಹಾಯ ಮಾಡುವುದರಲ್ಲಿ ಸಂಶಯವಿಲ್ಲ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




