AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಕಾರಿನಲ್ಲಿ ತುಂಬಾ ಸಮಯದ ವರೆಗೆ ಇಟ್ಟಂತಹ ನೀರನ್ನು ಕುಡಿಯುವುದು ಒಳ್ಳೆಯದಲ್ಲ ಏಕೆ?

ಕಾರಿರುವವರು ಪ್ರಯಾಣದ ವೇಳೆ ಬಾಯಾರಿಕೆ ಆದಾಗ ಅಲ್ಲಿಯೇ ಇರುವ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಇಟ್ಟ ನೀರನ್ನು ಕುಡಿಯುತ್ತಾರೆ. ಕೆಲವರಿಗೆ ಅದು ಎಷ್ಟು ದಿನದ ಹಿಂದೆ ಇಟ್ಟಿದ್ದೆ ಎಂಬುದು ಕೂಡ ನೆನಪಿರುವುದಿಲ್ಲ. ನೀರಿನಲ್ಲಿ ಏನಿದೆ? ಯಾವುದಾದರೇನು? ಆಹಾರದಂತೆ ನೀರು ಹಳಸುತ್ತದೆಯೇ ಎಂಬ ಪ್ರಶ್ನೆ ಬರಬಹುದು. ಇದು ಅಂತಹ ದೊಡ್ಡ ವಿಷಯವಲ್ಲ ಎಂದೆನಿಸಬಹುದು. ಆದರೆ ನೀವು ಅಸಡ್ಡೆ ಮಾಡಿದ ಈ ಅಭ್ಯಾಸವನ್ನು ಮುಂದುವರೆಸಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ತಪ್ಪಿದ್ದಲ್ಲ. ಹಾಗಾದರೆ ಕಾರಿನಲ್ಲಿ ಇಟ್ಟಂತಹ ಹಳೆಯ ಬಾಟಲಿಗಳಲ್ಲಿನ ನೀರು ಕುಡಿಯಲು ಯೋಗ್ಯವಲ್ಲ ಎನ್ನಲು ಕಾರಣವೇನು? ಇದರಿಂದ ಆರೋಗ್ಯಕ್ಕೆ ಏನು ತೊಂದರೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

Health Tips: ಕಾರಿನಲ್ಲಿ ತುಂಬಾ ಸಮಯದ ವರೆಗೆ ಇಟ್ಟಂತಹ ನೀರನ್ನು ಕುಡಿಯುವುದು ಒಳ್ಳೆಯದಲ್ಲ ಏಕೆ?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on:Mar 12, 2025 | 2:07 PM

Share

ನಮ್ಮ ಆರೋಗ್ಯ (Health) ಕಾಪಾಡಿಕೊಳ್ಳಲು ಆಹಾರ ಎಷ್ಟು ಮುಖ್ಯವೋ, ಅಷ್ಟೇ ಕುಡಿಯುವ ನೀರು ಕೂಡ ಅತ್ಯಗತ್ಯ. ಅದರಲ್ಲಿಯೂ ವಿಶೇಷವಾಗಿ ಈ ಬೇಸಿಗೆಯ (Summer) ಬಿಸಿ ವಾತಾವರಣದಲ್ಲಿ ಎಷ್ಟು ನೀರು (water) ಕುಡಿದರೂ ಸಾಲುವುದಿಲ್ಲ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಸಿಗದಿದ್ದಾಗಲೇ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತದೆ. ಸಾಮಾನ್ಯವಾಗಿ ಹಲವರು, ಪ್ರಯಾಣದ (travel) ಸಮಯದಲ್ಲಿ ಅಥವಾ ಇತರ ಕಾರ್ಯನಿರತ ದಿನಗಳಲ್ಲಿ ನೀರು ಕುಡಿಯುವುದನ್ನು ಆಗಾಗ ಮರೆಯುತ್ತಾರೆ. ಆದರೆ ಅದು ಒಳ್ಳೆಯ ಅಭ್ಯಾಸವಲ್ಲ. ಅದರಲ್ಲಿಯೂ ಕಾರು (car) ಇರುವವರು ಪ್ರಯಾಣದ ವೇಳೆ ಬಾಯಾರಿಕೆ ಆದಾಗ ಅಲ್ಲಿಯೇ ಇರುವ ಪ್ಲಾಸ್ಟಿಕ್ ಬಾಟಲಿ (Plastic bottle) ಗಳಲ್ಲಿ ಇಟ್ಟ ನೀರನ್ನು ಕುಡಿಯುತ್ತಾರೆ. ಕೆಲವರಿಗೆ ಅದು ಎಷ್ಟು ದಿನದ ಹಿಂದೆ ಇಟ್ಟಿದ್ದೆ ಎಂಬುದು ಕೂಡ ನೆನಪಿರುವುದಿಲ್ಲ. ನೀರಿನಲ್ಲಿ ಏನಿದೆ? ಯಾವುದಾದರೇನು? ಆಹಾರದಂತೆ ನೀರು ಹಳಸುತ್ತದೆಯೇ ಎಂಬ ಪ್ರಶ್ನೆ ಬರಬಹುದು. ಇದು ಅಂತಹ ದೊಡ್ಡ ವಿಷಯವಲ್ಲ ಎಂದೆನಿಸಬಹುದು. ಆದರೆ ನೀವು ಅಸಡ್ಡೆ ಮಾಡಿದ ಈ ಅಭ್ಯಾಸವನ್ನು ಮುಂದುವರೆಸಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ತಪ್ಪಿದ್ದಲ್ಲ. ಹಾಗಾದರೆ ಕಾರಿನಲ್ಲಿ ಇಟ್ಟಂತಹ ಹಳೆಯ ಬಾಟಲಿಗಳಲ್ಲಿನ ನೀರು ಕುಡಿಯಲು ಯೋಗ್ಯವಲ್ಲ ಎನ್ನಲು ಕಾರಣವೇನು? ಇದರಿಂದ ಆರೋಗ್ಯಕ್ಕೆ ಏನು ತೊಂದರೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಕಾರಿನಲ್ಲಿ ತುಂಬಾ ಸಮಯದ ವರೆಗೆ ಇಟ್ಟಂತಹ ನೀರು ಕುಡಿಯುವುದು ಒಳ್ಳೆಯದಲ್ಲ ಏಕೆ? ಸಾಮಾನ್ಯವಾಗಿ ಕಾರಿನಲ್ಲಿ ನೀರನ್ನು ಇಟ್ಟಲ್ಲಿ, ಅವುಗಳನ್ನು 24 ಗಂಟೆಗಳ ನಂತರ ಕುಡಿಯಬಾರದು ಎಂದು ತಜ್ಞರು ಹೇಳುತ್ತಾರೆ. ಅದರಲ್ಲಿಯೂ ಬೇಸಿಗೆಯ ಸಮಯದಲ್ಲಿ ಇಂತಹ ತಪ್ಪುಗಳನ್ನು ಮಾಡಲೇಬಾರದು. ವಾತಾವರಣದಲ್ಲಿ ಬಿಸಿ ಹೆಚ್ಚಾಗಿರುವುದರಿಂದ ನೀವು ಕಾರಿನಲ್ಲಿ ಪ್ಲಾಸ್ಟಿಕ್ ಬಾಟಲಿಯನ್ನು ತುಂಬಾ ದಿನಗಳ ವರೆಗೆ ಇಡುವುದರಿಂದ ರಾಸಾಯನಿಕಗಳು ಆ ನೀರಿಗೆ ಸೇರಬಹುದು. ಇದರಿಂದ ಆ ನೀರು ಕಲುಷಿತಗೊಳ್ಳುವುದರಿಂದ ಅದನ್ನು ಬಾಯಾರಿಕೆಯಾದಾಗ ಕುಡಿಯುವುದು ನಮ್ಮ ಆರೋಗ್ಯಕ್ಕೆ ಹಾನಿ ಮಾಡಬಹುದು. ವಿಶೇಷವಾಗಿ ಹಳೆಯ ಪ್ಲಾಸ್ಟಿಕ್ ಬಾಟಲಿಗಳು ಹೆಚ್ಚಿನ ತಾಪಮಾನದಲ್ಲಿ ಥಾಲೇಟ್ ಗಳು ಮತ್ತು ಬಿಸ್ಫೆನಾಲ್-ಎ (ಬಿಪಿಎ) ನಂತಹ ರಾಸಾಯನಿಕಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇರುತ್ತದೆ ಹಾಗಾಗಿ ತಜ್ಞರು, ಕಾರಿನಲ್ಲಿ ತುಂಬಾ ಸಮಯಗಳ ವೆರೆಗೆ, ಪ್ಲಾಸ್ಟಿಕ್ ಬಾಟಲಿಗಳಲ್ಲಿ ಇಟ್ಟಂತಹ ನೀರನ್ನು ಕುಡಿಯಬೇಡಿ ಎನ್ನುತ್ತಾರೆ.

ಅಧ್ಯಯನ ಹೇಳುವುದೇನು?

ಇದನ್ನೂ ಓದಿ
Image
ಮಡಕೆಯಲ್ಲಿ ಇಟ್ಟ ಮೊಸರು ಹುಳಿ ಬರದಿರಲು ಕಾರಣವೇನು?
Image
ಎಬಿಸಿ ಜ್ಯೂಸ್ ಕುಡಿಯುವ ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳಿ
Image
ಮಕ್ಕಳಲ್ಲಿ ಅತಿಯಾದ ಬೊಜ್ಜು ನಾನಾ ಸಮಸ್ಯೆಗೆ ಕಾರಣ: ಎಚ್ಚರಿಸಿದ ವರದಿ!
Image
ಬಿಸಿಲಿನಲ್ಲಿ ತಣ್ಣಗಿರುವ ಕಬ್ಬಿನ ರಸ ಕುಡಿಯುವವರು ಈ ವಿಷಯಗಳನ್ನು ಮರೆಯಬೇಡಿ

ಪ್ಲಾಸ್ಟಿಕ್ ಬಾಟಲಿ ಹಳೆಯದಾಗಲಿ ಅಥವಾ ಹೊಸದಾಗಲಿ, ನೀರನ್ನು ದೀರ್ಘಕಾಲದ ವರೆಗೆ ಸಂಗ್ರಹಿಸುವುದು ಸುರಕ್ಷಿತವಲ್ಲ ಎಂದು ಅಧ್ಯಯನಗಳು ಸಾಬೀತುಪಡಿಸಿದೆ. ಈ ರಾಸಾಯನಿಕಗಳು ದೇಹದಲ್ಲಿನ ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸುತ್ತವೆ. ಫ್ಲೋರಿಡಾ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಫುಡ್ ಅಂಡ್ ಅಗ್ರಿಕಲ್ಚರಲ್ ಸೈನ್ಸಸ್ (ಯುಎಫ್ / ಐಎಫ್ಎಎಸ್) ನಡೆಸಿದ ಅಧ್ಯಯನವು ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಬಿಸಿಯಾಗುವ ಜಾಗದಲ್ಲಿ ಇಡುವುದರಿಂದ ಆಂಟಿಮನಿ ಮತ್ತು ಬಿಸ್ಫೆನಾಲ್ ಎ (ಬಿಪಿಎ) ನಂತಹ ರಾಸಾಯನಿಕಗಳು ನೀರಿಗೆ ಸೇರುತ್ತದೆ ಎಂಬುದನ್ನು ಕಂಡುಹಿಡಿದಿದೆ. ಈ ಅಧ್ಯಯನಕ್ಕಾಗಿ, ಅವರು 158 ° F (70 ° C) ತಾಪಮಾನದಲ್ಲಿ ನಾಲ್ಕು ವಾರಗಳ ವರೆಗೆ ಸಂಗ್ರಹಿಸಿದ 16 ಬ್ರಾಂಡ್ ಗಳ ಬಾಟಲಿಗಳ ನೀರನ್ನು ಬಳಸಿಕೊಂಡಿದ್ದು, ಬಾಟಲಿಯು ಒಂದು ನಿರ್ದಿಷ್ಟ ಮಿತಿಯನ್ನು ಮೀರಿ ಬಿಸಿಯಾದಾಗ ಈ ರಾಸಾಯನಿಕಗಳ ಪ್ರಮಾಣವು ಹೆಚ್ಚಾಗುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ.

ಇದನ್ನೂ ಓದಿ:ರಾತ್ರಿ ಹೊತ್ತು ಮೊಸರು ತಿಂದರೆ ಏನಾಗುತ್ತದೆ?

ಟೆಕ್ಸಾಸ್ ವಿಶ್ವವಿದ್ಯಾಲಯದ ಟೈಲರ್ನಲ್ಲಿ ನಡೆಸಿದ ಮತ್ತೊಂದು ಅಧ್ಯಯನವು, ಬಿಸಿ ವಾತಾವರಣದಲ್ಲಿ ಒಂದು ಅಥವಾ ಎರಡು ದಿನಗಳ ವರೆಗೆ ಕಾರಿನಲ್ಲಿ ಇಟ್ಟಂತಹ ನೀರನ್ನು ಕುಡಿಯುವುದರಿಂದ ಹೆಚ್ಚಿನ ಅಪಾಯವಿದೆ ಎಂದು ದೃಢಪಡಿಸಿದೆ. ಈ ಅಪಾಯಗಳನ್ನು ತಪ್ಪಿಸಲು ಪ್ಲಾಸ್ಟಿಕ್ ಬಾಟಲಿ ನೀರನ್ನು ಬಿಸಿಯಾದ ವಾತಾವರಣದಲ್ಲಿ ದೀರ್ಘಕಾಲದ ವರೆಗೆ ಇಡಬಾರದು ಎಂಬುದನ್ನು ಅಧ್ಯಯನಗಳು ಸ್ಪಷ್ಟಪಡಿಸಿದೆ. ಈ ರೀತಿಯ ಅಭ್ಯಾಸವು ಜೀರ್ಣಕಾರಿ ಸಮಸ್ಯೆಗಳು, ಉಸಿರಾಟದ ತೊಂದರೆಗಳು, ಅಸ್ವಸ್ಥತೆಗಳು ಮತ್ತು ಕ್ಯಾನ್ಸರ್ ಅಪಾಯ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:06 pm, Wed, 12 March 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ