AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಹಿತಿಂಡಿ ತಿಂದ ಮೇಲೆ ನೀರು ಕುಡಿಯುತ್ತೀರಾ? ಇದನ್ನು ತಪ್ಪದೆ ಓದಿ

ಸಿಹಿ ತಿಂದ ಬಳಿಕ ನೀರು ಕುಡಿಯುವುದು ಬಹುತೇಕ ನಮ್ಮೆಲ್ಲರ ಅಭ್ಯಾಸವಾಗಿದೆ. ಆದರೆ ಸಿಹಿ ತಿಂಡಿ ಸೇವಿಸಿದ ನಂತರ ನೀರು ಕುಡಿದರೆ ಏನಾಗುತ್ತದೆ ಎಂಬುದು ತಿಳಿದಿದೆಯೇ? ತಜ್ಞರ ಪ್ರಕಾರ. ಸಿಹಿ ತಿಂಡಿಗಳನ್ನು ಸೇವಿಸಿದ ನಂತರ ನೀರು ಕುಡಿಯುವುದು ಒಳ್ಳೆಯ ಅಭ್ಯಾಸ ಎಂದು ತಜ್ಞರು ಹೇಳುತ್ತಾರೆ. ಪರಿಣಾಮವಾಗಿ, ದೇಹಕ್ಕೆ ಹಲವಾರು ರೀತಿಯ ಪ್ರಯೋಜನಗಳು ಸಿಗುತ್ತದೆ. ಹಾಗಾದರೆ ಇದರಿಂದ ಯಾವ ರೀತಿಯ ಲಾಭವಿದೆ? ಆರೋಗ್ಯಕ್ಕೆ ಹೇಗೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.

ಸಿಹಿತಿಂಡಿ ತಿಂದ ಮೇಲೆ ನೀರು ಕುಡಿಯುತ್ತೀರಾ? ಇದನ್ನು ತಪ್ಪದೆ ಓದಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Mar 12, 2025 | 4:55 PM

Share

ರಸಗುಲ್ಲಾ (Rasgulla), ಗುಲಾಬ್ ಜಾಮೂನ್ (Gulab Jamun), ಜಿಲೇಬಿ (Jalebi), ಮೈಸೂರು ಪಾಕ್ ( Mysore Pak) ಹೀಗೆ ಸ್ವೀಟ್ (sweet) ಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸಾಮಾನ್ಯವಾಗಿ ಖಾರ ತಿನ್ನುವುವವರಿಗಿಂತ ಸಿಹಿ ತಿನ್ನುವವರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಅದರಲ್ಲಿಯೂ ಪ್ರತಿನಿತ್ಯ ವಿವಿಧ ಬಗೆಯ ಸಿಹಿ ತಿನಿಸು (sweet) ಗಳನ್ನು ಇಷ್ಟ ಪಟ್ಟು ತಿನ್ನುವವರಿದ್ದಾರೆ. ಕೆಲವರಿಗೆ ಸ್ವೀಟ್ ತಿನ್ನುವುದರಿಂದ ಸಂತೋಷ ಹೆಚ್ಚುತ್ತದೆ. ದಿನವೂ ಸಿಹಿ ತಿಂಡಿಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಅರಿವಿದ್ದರೂ ಸಿಹಿ ತಿನ್ನುವ ಅಭ್ಯಾಸ ಬಿಡುವುದಕ್ಕೆ ಮನಸ್ಸು ಒಪ್ಪುವುದಿಲ್ಲ. ಹಾಗಾಗಿ ಸ್ವೀಟ್ ಗಳನ್ನು ತಿನ್ನದಿರಲು ಸಾಧ್ಯವಾಗುವುದಿಲ್ಲ. ಆದರೆ ನಾವು ಇಷ್ಟ ಪಟ್ಟು ಸಿಹಿ ತಿಂದ ಬಳಿಕ ನಮಗೆ ಬಾಯಾರಿಕೆಯಾಗುತ್ತದೆ. ಈ ರೀತಿಯಾಗುವುದು ಸಹಜ. ಆ ವೇಳೆಯಲ್ಲಿ ನಮ್ಮಲ್ಲಿ ಹೆಚ್ಚಿನವರು ನೀರನ್ನು ಕುಡಿಯುತ್ತಾರೆ. ಆದರೆ ಕೆಲವರು ಆ ಸಮಯದಲ್ಲಿ ನೀರು ಕುಡಿಯುವುದು ಒಳ್ಳೆಯದಲ್ಲ ಎನ್ನತ್ತಾರೆ. ಹಾಗಾದರೆ ಸಿಹಿ ತಿಂದ ಬಳಿಕ ನೀರು (Water) ಕುಡಿಯುವುದು ಒಳ್ಳೆಯದೋ ಅಥವಾ ಕೆಟ್ಟದ್ದೋ ತಿಳಿದುಕೊಳ್ಳಿ.

ಸಿಹಿ ತಿಂದ ಬಳಿಕ ನೀರು ಕುಡಿಯುವುದು ಬಹುತೇಕ ನಮ್ಮೆಲ್ಲರ ಅಭ್ಯಾಸವಾಗಿದೆ. ಆದರೆ ಸಿಹಿ ತಿಂಡಿ ಸೇವಿಸಿದ ನಂತರ ನೀರು ಕುಡಿದರೆ ಏನಾಗುತ್ತದೆ ಎಂಬುದು ತಿಳಿದಿದೆಯೇ? ತಜ್ಞರ ಪ್ರಕಾರ. ಸಿಹಿತಿಂಡಿಗಳನ್ನು ಸೇವಿಸಿದ ನಂತರ ನೀರು ಕುಡಿಯುವುದು ಒಳ್ಳೆಯ ಅಭ್ಯಾಸ ಎಂದು ತಜ್ಞರು ಹೇಳುತ್ತಾರೆ. ಪರಿಣಾಮವಾಗಿ, ದೇಹಕ್ಕೆ ಹಲವಾರು ರೀತಿಯ ಪ್ರಯೋಜನಗಳು ಸಿಗುತ್ತದೆ. ಹಾಗಾದರೆ ಇದರಿಂದ ಯಾವ ರೀತಿಯ ಲಾಭವಿದೆ? ಆರೋಗ್ಯಕ್ಕೆ ಹೇಗೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.

ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಳವಾಗುವುದನ್ನು ತಡೆಯುತ್ತದೆ;

ಸಿಹಿ ತಿಂಡಿಗಳನ್ನು ತ್ವರಿತವಾಗಿ ತಿನ್ನುವುದು ದೇಹದಲ್ಲಿ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದು ದೇಹದಲ್ಲಿ ಸಕ್ಕರೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ಸಮಸ್ಯೆ ಮಧುಮೇಹದಂತಹ ಸಕ್ಕರೆ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಮಾತ್ರವಲ್ಲ, ಎಲ್ಲರಿಗೂ ಅನ್ವಯವಾಗುತ್ತದೆ. ಆದ್ದರಿಂದ ಸಿಹಿ ತಿಂಡಿಗಳನ್ನು ಸೇವಿಸಿದ ನಂತರ ನೀರು ಕುಡಿಯುವುದರಿಂದ ಈ ಸಕ್ಕರೆ ಸ್ಪೈಕ್ ಸಮಸ್ಯೆಯನ್ನು ತಡೆಯಬಹುದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ
Image
ಮಡಕೆಯಲ್ಲಿ ಇಟ್ಟ ಮೊಸರು ಹುಳಿ ಬರದಿರಲು ಕಾರಣವೇನು?
Image
ಎಬಿಸಿ ಜ್ಯೂಸ್ ಕುಡಿಯುವ ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳಿ
Image
ಮಕ್ಕಳಲ್ಲಿ ಅತಿಯಾದ ಬೊಜ್ಜು ನಾನಾ ಸಮಸ್ಯೆಗೆ ಕಾರಣ: ಎಚ್ಚರಿಸಿದ ವರದಿ!
Image
ಬಿಸಿಲಿನಲ್ಲಿ ತಣ್ಣಗಿರುವ ಕಬ್ಬಿನ ರಸ ಕುಡಿಯುವವರು ಈ ವಿಷಯಗಳನ್ನು ಮರೆಯಬೇಡಿ

ಜೀರ್ಣಕ್ರಿಯೆಗೆ ಒಳ್ಳೆಯದು;

ಯಾವುದೇ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ನೀರು ಸಹಕಾರಿ ಆಗಿರುವುದರಿಂದ, ಸಿಹಿ ಆಹಾರಗಳು ಸರಿಯಾಗಿ ಜೀರ್ಣವಾಗಲು ನೀರು ಕುಡಿಯುವುದು ಬಹಳ ಮುಖ್ಯ.

ಇದನ್ನೂ ಓದಿ: ಕಾರಿನಲ್ಲಿ ತುಂಬಾ ಸಮಯದ ವರೆಗೆ ಇಟ್ಟಂತಹ ನೀರನ್ನು ಕುಡಿಯುವುದು ಒಳ್ಳೆಯದಲ್ಲ ಏಕೆ?

ಹಲ್ಲಿನ ಆರೋಗ್ಯ ಚೆನ್ನಾಗಿರುತ್ತದೆ;

ಸಿಹಿ ತಿಂಡಿಗಳನ್ನು ತಿನ್ನುವುದರಿಂದ ಹಲ್ಲುಗಳಲ್ಲಿ ಬ್ಯಾಕ್ಟೀರಿಯಾ ಹೆಚ್ಚು ಸಕ್ರಿಯವಾಗುತ್ತದೆ. ಹಾಗಾಗಿ ಸಿಹಿ ತಿಂದು ನೀರು ಕುಡಿಯುವುದರಿಂದ ಹಲ್ಲುಗಳು ಸ್ವಚ್ಛವಾಗಿರುತ್ತದೆ. ಹಲ್ಲಿನ ಆರೋಗ್ಯವೂ ಉತ್ತಮವಾಗಿರುತ್ತದೆ. ಒಸಡು ನೋವಿನಿಂದ ಬಳಲುತ್ತಿರುವವರು ಸಿಹಿ ತಿನಿಸುಗಳನ್ನು ಸೇವಿಸಿದ ನಂತರ ಖಂಡಿತವಾಗಿಯೂ, ತಪ್ಪದೆ ನೀರನ್ನು ಕುಡಿಯಬೇಕು. ಇಲ್ಲದಿದ್ದರೆ ಈ ನೋವು ಹೆಚ್ಚಾಗಬಹುದು.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ