AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಟೆಗೊಮ್ಮೆ ಎದ್ದು 5 ನಿಮಿಷ ನಡೆಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

ಬೆಳಿಗ್ಗೆ ಎದ್ದು ವಾಕಿಂಗ್ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇಂದಿನ ಬ್ಯುಸಿ ಲೈಫ್ ನಲ್ಲಿ ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ, ಇಂತಹ ಕಾರಣಗಳಿಂದ ಎಷ್ಟೋ ಜನ ನಡೆಯುವುದನ್ನೇ ನಿಲ್ಲಿಸುತ್ತಾರೆ. ಆದರೆ ಇದು ದೈಹಿಕ ಆರೋಗ್ಯದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತವೆ. ಬದಲಾಗಿ, ಗಂಟೆಗೆ ಒಮ್ಮೆ ಮಾಡುವ ಸಣ್ಣ ನಡಿಗೆ ಬಹಳ ವ್ಯತ್ಯಾಸವನ್ನುಂಟು ಮಾಡುತ್ತದೆ. ಹೌದು, ಆರೋಗ್ಯ ತಜ್ಞರು ಪ್ರತಿ ಗಂಟೆಗೊಮ್ಮೆ 5 ನಿಮಿಷ ನಡೆಯುವುದರಿಂದ ಹೆಚ್ಚು ಪ್ರಯೋಜನಗಳನ್ನು ಪಡೆಯಬಹುದು ಎನ್ನುತ್ತಾರೆ. ಹಾಗಾದರೆ ಇದರಿಂದ ಸಿಗುವ ಲಾಭಗಳೇನು, ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಗಂಟೆಗೊಮ್ಮೆ ಎದ್ದು 5 ನಿಮಿಷ ನಡೆಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ
ಗಂಟೆಗೊಮ್ಮೆ 5 ನಿಮಿಷ ನಡಿಗೆ ಮಾಡುವುದರಿಂದ ಸಿಗುವ ಪ್ರಯೋಜನ
ಪ್ರೀತಿ ಭಟ್​, ಗುಣವಂತೆ
|

Updated on: Dec 03, 2025 | 6:50 PM

Share

ನಡಿಗೆ (Walk) ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ತಿಳಿದ ವಿಚಾರ. ಆದರೆ ಆರೋಗ್ಯ ತಜ್ಞರು ಪ್ರತಿ ಗಂಟೆಗೊಮ್ಮೆ 5 ನಿಮಿಷ ನಡೆಯುವುದರಿಂದ ಹೆಚ್ಚು ಪ್ರಯೋಜನಗಳನ್ನು ಪಡೆಯಬಹುದು ಎನ್ನುತ್ತಾರೆ. ಸಾಮಾನ್ಯವಾಗಿ ಒಂದು ವ್ಯಕ್ತಿ ಒಂದೇ ಸ್ಥಳದಲ್ಲಿ ಕುಳಿತು ದಿನವಿಡೀ ಕೆಲಸ ಮಾಡುತ್ತಾನೆ ಹಾಗಾದಾಗ, ಕಾಲಿನ ಸ್ನಾಯುಗಳು ಗಟ್ಟಿಯಾಗುತ್ತವೆ ಮತ್ತು ಅವು ನಮ್ಯತೆಯನ್ನು ಕಳೆದುಕೊಳ್ಳುತ್ತವೆ. ಇದು ಇನ್ಸುಲಿನ್ ಪ್ರತಿರೋಧ ಹೊಂದಿರುವವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಹಾಗಾಗಿ ಐದು ನಿಮಿಷಗಳ ನಡಿಗೆ ವ್ಯಕ್ತಿಯನ್ನು ಸಕ್ರಿಯವಾಗಿ ಮತ್ತು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಕೆಲಸದ ಸಮಯದಲ್ಲಿಯೂ ಪ್ರತಿ ಗಂಟೆಗೆ ಒಮ್ಮೆ ಐದು ನಿಮಿಷಗಳ ನಡಿಗೆ (Mini Walks) ಮಾಡಿದರೆ ನೀವು ನಂಬಲು ಅಸಾಧ್ಯವಾದಂತಹ ಪ್ರಯೋಜನಗಳು ನಿಮ್ಮದಾಗುತ್ತದೆ. ಹಾಗಾದರೆ ಇದರಿಂದ ಸಿಗುವ ಲಾಭಗಳೇನು, ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ರಕ್ತ ಪರಿಚಲನೆ ಸುಧಾರಿಸುತ್ತದೆ: ಗಂಟೆಗಟ್ಟಲೆ ಒಂದೇ ಜಾಗದಲ್ಲಿ ಕುಳಿತಾಗ, ಮೊಣಕಾಲುಗಳ ಕೆಳಗೆ ರಕ್ತ ಸಂಗ್ರಹವಾಗುತ್ತದೆ, ಇದು ನಿಮ್ಮ ರಕ್ತದ ಹರಿವನ್ನು ನಿಧಾನಗೊಳಿಸುತ್ತದೆ. ಹಾಗಾಗಿ ಗಂಟೆಗೊಮ್ಮೆ 5 ನಿಮಿಷ ಎದ್ದು ನಡೆಯುವುದರಿಂದ ರಕ್ತದ ಹರಿವು ಹೆಚ್ಚಾಗುತ್ತದೆ, ಇದು ಹೃದಯಕ್ಕೆ ಸಾಗಿಸಲ್ಪಡುವ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ.

ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ: ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವವರು ಸೋಮಾರಿಗಳಾಗಿರುತ್ತಾರೆ. ಅಷ್ಟೇ ಅಲ್ಲ, ಕೆಲಸದ ಮೇಲೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಮನಸ್ಸು ವಿಚಲಿತವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ದೈಹಿಕ ಶಕ್ತಿಯಲ್ಲಿನ ಇಳಿಕೆ. ಹಾಗಾಗಿ ನಡುವೆ ಐದು ನಿಮಿಷಗಳ ಕಾಲ ಎದ್ದು ನಡೆಯುವುದರಿಂದ ಮನಸ್ಸು ನಿರಾಳವಾಗಿ ದೇಹಕ್ಕೆ ತ್ವರಿತ ಶಕ್ತಿ ಸಿಗುತ್ತದೆ.

ಇದನ್ನೂ ಓದಿ: ಊಟ ಮಾಡಿ ಒಂದು ಸಣ್ಣ ವಾಕ್ ಹೋಗುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಈ ಸ್ಟೋರಿ ನಿಮಗಾಗಿ

ಇನ್ಸುಲಿನ್ ಪ್ರತಿರೋಧವನ್ನು ಸರಿಪಡಿಸುತ್ತದೆ: ಮಧುಮೇಹ ಇರುವವರಿಗೆ, ಕಾಲಿನ ಸ್ನಾಯುಗಳ ಚಲನೆಯು ಇನ್ಸುಲಿನ್ ಸ್ರವಿಸುವಿಕೆ ಮತ್ತು ಅದರ ಬಳಕೆಯನ್ನು ನಿಯಂತ್ರಿಸುತ್ತದೆ. ದಿನವಿಡೀ ಒಂದೇ ಕಡೆ ಕುಳಿತಾಗ, ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ. ತೂಕವೂ ಹೆಚ್ಚಾಗುತ್ತದೆ. ಇದನ್ನು ತಡೆಯಲು ತಾಸಿಗೆ ಒಮ್ಮೆ ನಡೆಯುವ ಅಭ್ಯಾಸ ಮಾಡಿಕೊಳ್ಳಿ. ಇದು ಮಧುಮೇಹ ಇರುವವರಿಗೆ ಮಾತ್ರವಲ್ಲ ಇಲ್ಲದವರಿಗೂ ಪ್ರಯೋಜನಕಾರಿ.

ಕೊಬ್ಬನ್ನು ತಡೆಗಟ್ಟಲು ಸಹಕಾರಿ: ಹೊಟ್ಟೆಯ ಕೆಳಭಾಗದಲ್ಲಿ ಉಬ್ಬರವಿರುವ ಜನರು, ಮದ್ಯಪಾನ ಮಾಡುವವರು, ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಮತ್ತು ದಿನವಿಡೀ ಒಂದೇ ಸ್ಥಳದಲ್ಲಿ ಕೆಲಸ ಮಾಡುವವರಲ್ಲಿ ಚಯಾಪಚಯ ಕ್ರಿಯೆ ತುಂಬಾ ನಿಧಾನವಾಗಿರುತ್ತದೆ. ಇದನ್ನು ಹೆಚ್ಚಿಸಿಕೊಳ್ಳಲು ಪ್ರತಿ ಗಂಟೆಗೆ ಒಂದು ಸಣ್ಣ ನಡಿಗೆ ಮಾಡಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ
ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ
ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ
ಟೈರ್ ಬ್ಲಾಸ್ಟ್ ಆಗಿ ಟಿಟಿ ವಾಹನ ಪಲ್ಟಿ, ಮಗು ಸೇರಿ 12 ಜನರಿಗೆ ಗಾಯ
ಟೈರ್ ಬ್ಲಾಸ್ಟ್ ಆಗಿ ಟಿಟಿ ವಾಹನ ಪಲ್ಟಿ, ಮಗು ಸೇರಿ 12 ಜನರಿಗೆ ಗಾಯ
ರಾಯರ ಬಗ್ಗೆ ಆಲ್ಬಂ ಸಾಂಗ್ ಮಾಡಲು ಕಾರಣ ಏನು? ವಿವರಿಸಿದ ಅಜನೀಶ್
ರಾಯರ ಬಗ್ಗೆ ಆಲ್ಬಂ ಸಾಂಗ್ ಮಾಡಲು ಕಾರಣ ಏನು? ವಿವರಿಸಿದ ಅಜನೀಶ್
Video: ಕೋಲ್ಕತ್ತಾಗೆ ಆಗಮಿಸಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ರುಬಿಯೋ
Video: ಕೋಲ್ಕತ್ತಾಗೆ ಆಗಮಿಸಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ರುಬಿಯೋ
ದೆಹಲಿಯ ಫರ್ನಿಚರ್ ಮಾರುಕಟ್ಟೆಯಲ್ಲಿ ಭಾರಿ ಅಗ್ನಿ ಅವಘಡ
ದೆಹಲಿಯ ಫರ್ನಿಚರ್ ಮಾರುಕಟ್ಟೆಯಲ್ಲಿ ಭಾರಿ ಅಗ್ನಿ ಅವಘಡ
ಶನಿವಾರದಂದು ಕಪ್ಪು ಬಣ್ಣದ ಬಟ್ಟೆ ಧರಿಸಿದರೆ ಏನಾಗುತ್ತೆ ಗೊತ್ತಾ?
ಶನಿವಾರದಂದು ಕಪ್ಪು ಬಣ್ಣದ ಬಟ್ಟೆ ಧರಿಸಿದರೆ ಏನಾಗುತ್ತೆ ಗೊತ್ತಾ?
ಇಂದು ಈ ರಾಶಿಯವರಿಗೆ ಜವಾಬ್ದಾರಿ ಹೆಚ್ಚಾಗಲಿದೆ!
ಇಂದು ಈ ರಾಶಿಯವರಿಗೆ ಜವಾಬ್ದಾರಿ ಹೆಚ್ಚಾಗಲಿದೆ!
ಚಂದನವನದಲ್ಲಿ ಹಲವು ಸಮಸ್ಯೆ: ಪರಿಹಾರ ಹುಡುಕಲು ಮುಂದಾದ ವಾಣಿಜ್ಯ ಮಂಡಳಿ
ಚಂದನವನದಲ್ಲಿ ಹಲವು ಸಮಸ್ಯೆ: ಪರಿಹಾರ ಹುಡುಕಲು ಮುಂದಾದ ವಾಣಿಜ್ಯ ಮಂಡಳಿ