Summer Health Tips: ಬೇಸಿಗೆಯಲ್ಲಿ ಮಗುವಿನ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಸರಳ ಸಲಹೆ
ಮಕ್ಕಳ ಚರ್ಮವು ವಯಸ್ಕರಿಗಿಂತ ತುಂಬಾ ಮೃದು ಮತ್ತು ಸೂಕ್ಷ್ಮವಾಗಿರುತ್ತದೆ. ಹೀಗಾಗಿ, ಮಕ್ಕಳು ಸುಲಭವಾಗಿ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಬೇಸಿಗೆಯಲ್ಲಿ ಸ್ವಲ್ಪ ಜಾಸ್ತಿ ಕಾಳಜಿ ವಹಿಸುವುದು ಬಹಳ ಅವಶ್ಯವಾಗಿದೆ. ಮಕ್ಕಳಿಗಾಗಿಯೇ ಮಾರುಕಟ್ಟೆಗಳಲ್ಲಿ ಹಲವಾರು ರೀತಿಯ ಉತ್ಪನ್ನಗಳು ಲಭ್ಯವಿದೆಯಾದರೂ ಅವುಗಳ ಆಯ್ಕೆಯನ್ನು ಕೂಡ ಸರಿಯಾಗಿ ಮಾಡಬೇಕಾಗುತ್ತದೆ. ಹಾಗಾದರೆ ಬೇಸಿಗೆಯಲ್ಲಿ ನಿಮ್ಮ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಹೇಗೆ? ಇಲ್ಲಿವೆ ಸರಳ ಸಲಹೆಗಳು.

ಬೇಸಿಗೆಯ (Summer) ಬಿಸಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಂತಹ ಸಮಯದಲ್ಲಿ ಮಕ್ಕಳ(children) ಆರೋಗ್ಯದ (health) ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಮಕ್ಕಳ ಚರ್ಮ(skin) ವಯಸ್ಕರಿಗಿಂತ ತುಂಬಾ ಮೃದು ಮತ್ತು ಸೂಕ್ಷ್ಮವಾಗಿರುತ್ತದೆ. ಹೀಗಾಗಿ, ಮಕ್ಕಳು ಸುಲಭವಾಗಿ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಬೇಸಿಗೆಯಲ್ಲಿ ಸ್ವಲ್ಪ ಜಾಸ್ತಿ ಕಾಳಜಿ ವಹಿಸುವುದು ಬಹಳ ಅವಶ್ಯವಾಗಿದೆ. ಮಕ್ಕಳಿಗಾಗಿಯೇ ಮಾರುಕಟ್ಟೆಗಳಲ್ಲಿ ಹಲವಾರು ರೀತಿಯ ಉತ್ಪನ್ನಗಳು ಲಭ್ಯವಿದೆಯಾದರೂ ಅವುಗಳ ಆಯ್ಕೆಯನ್ನು ಕೂಡ ಸರಿಯಾಗಿ ಮಾಡಬೇಕಾಗುತ್ತದೆ. ಹಾಗಾದರೆ ಬೇಸಿಗೆಯಲ್ಲಿ ನಿಮ್ಮ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಹೇಗೆ? ಇಲ್ಲಿವೆ ಸರಳ ಸಲಹೆಗಳು.
ನಿಮ್ಮ ಮಗುವಿನ ಚರ್ಮದ ಆರೈಕೆ ಮಾಡುವುದು ಹೇಗೆ?
*ಬೇಸಿಗೆಯಲ್ಲಿ ಮಕ್ಕಳ ಚರ್ಮದ ಮೇಲೆ ಸಣ್ಣ ದದ್ದುಗಳು ಕಂಡುಬರುವುದು ಸಾಮಾನ್ಯವಾಗಿದೆ. ಅಂತಹ ಸಂದರ್ಭಗಳಲ್ಲಿ, ಪೋಷಕರು ಹೆಚ್ಚಾಗಿ ಜಾಹೀರಾತುಗಳಲ್ಲಿ ತೋರಿಸಲಾಗುವ ಉತ್ಪನ್ನಗಳು ಖರೀದಿ ಮಾಡುತ್ತಾರೆ. ಆದರೆ ಸರಿಯಾಗಿ ತಿಳಿದುಕೊಳ್ಳದೆಯೇ ಪುಡಿ ಅಥವಾ ನಾನಾ ರೀತಿಯ ಕ್ರೀಮ್ ಗಳನ್ನು ಮಕ್ಕಳ ಚರ್ಮಕ್ಕೆ ಹಚ್ಚುವುದರಿಂದ ಅದು ಉಪಯೋಗಕ್ಕಿಂತ ಹಾನಿ ಮಾಡಬಹುದು. ಅದಲ್ಲದೆ, ಇಂತಹ ವಸ್ತುಗಳು ಮಕ್ಕಳ ಆರೋಗ್ಯಕ್ಕೂ ಒಳ್ಳೆಯದಲ್ಲ. ಹಾಗಾಗಿ ಮಗು ಇರುವ ಕೋಣೆಯ ತಾಪಮಾನ 24 ಡಿಗ್ರಿಗಳಿಂದ 28 ಡಿಗ್ರಿಗಳ ನಡುವೆ ಇರಿಸಲು ಪ್ರಯತ್ನಿಸಿ. ಅಂತೆಯೇ, ಮಗುವನ್ನು ಬಿಸಿಯಿಂದ ರಕ್ಷಿಸಲು ಎಸಿ ಮತ್ತು ಪ್ಯಾನ್ ಗಳನ್ನು ಬಳಸಬಹುದು ಅದಲ್ಲದೆ ಕೂಲರ್ ಗಳನ್ನು ಮನೆಯಲ್ಲಿ ಬಳಕೆ ಮಾಡಬಹುದು. ಆದರೆ ಯಾವುದೇ ಗಾಳಿ ನೇರವಾಗಿ ಮಗುವಿನ ಮುಖಕ್ಕೆ ಬರದಂತೆ ನೋಡಿಕೊಳ್ಳಿ.
*6 ತಿಂಗಳಿಗಿಂತ ಮೇಲ್ಪಟ್ಟ ಮಗುವಿಗೆ ಅನೇಕ ಬಾರಿ ನೀರು ನೀಡುವುದು ಸೂಕ್ತ. ವೈದ್ಯರ ಪ್ರಕಾರ, ಮಗುವಿಗೆ ಸ್ವಲ್ಪ ಸ್ವಲ್ಪವೇ ನೀರನ್ನು ನೀಡಬಹುದು. ಇದು ಮಗುವಿನ ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ. ಎಳನೀರು, ಮಜ್ಜಿಗೆ ಮತ್ತು ನಿಂಬೆ ರಸವನ್ನು ಕೂಡ ಸ್ವಲ್ಪ ಪ್ರಮಾಣದಲ್ಲಿ ನೀಡಬಹುದು. ಆದರೆ ಮಕ್ಕಳಿಗೆ ಯಾವುದೇ ಕಾರಣಕ್ಕೂ ತಂಪು ಪಾನೀಯಗಳು ನೀಡಬೇಡಿ.
ಇದನ್ನೂ ಓದಿ: ಹೃದಯಾಘಾತ , ಪಾರ್ಶ್ವವಾಯುವಿಗೆ ಹೊಸ ಲಸಿಕೆ ಕಂಡುಹಿಡಿದ ಚೀನಾ
*ಬೇಸಿಗೆಯಲ್ಲಿ ಮಕ್ಕಳು ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸುವಂತೆ ನೋಡಿಕೊಳ್ಳಿ. ಬೇಸಿಗೆಯಲ್ಲಿ, ನಿಮ್ಮ ಮಗು ಕಿರಿಕಿರಿಗೊಂಡರೆ ಮತ್ತು ಅಳಲು ಪ್ರಾರಂಭಿಸಿದರೆ, ಅದು ಬಿಗಿಯಾದ ಬಟ್ಟೆಗಳಿಂದಲೂ ಆಗಿರಬಹುದು. ಏಕೆಂದರೆ ಬಿಗಿ ಬಟ್ಟೆ ಬಿಸಿಗೆ ಮತ್ತಷ್ಟು ಕಿರಿಕಿರಿ ಉಂಟು ಮಾಡುತ್ತದೆ. ಈ ರೀತಿಯ ಸಲಹೆಗಳನ್ನು ಅನುಸರಿಸುವ ಮೂಲಕ, ಬೇಸಿಗೆಯಲ್ಲಿ ನಿಮ್ಮ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬಹುದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ