Snake Gourd: ಕಾಮಾಲೆ ರೋಗಕ್ಕೆ ಈ ತರಕಾರಿಯ ಬೀಜದಲ್ಲಿದೆ ಮದ್ದು
ಪಡವಲಕಾಯಿ ಪ್ರಬಲ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ರೋಗಗಳಿಂದ ರಕ್ಷಣೆ ನೀಡುತ್ತದೆ. ವಿಶೇಷವಾಗಿ ಕಾಲೋಚಿತ ರೋಗಗಳನ್ನು ತಪ್ಪಿಸಲು ಸಹಕಾರಿಯಾಗಿದೆ. ಹಾಗಾದರೆ ಇದರ ಸೇವನೆಯಿಂದ ಯಾವ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಿ.
Updated on: Mar 14, 2025 | 12:39 PM

ತರಕಾರಿಗಳು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಪ್ರಕೃತಿ ನೀಡಿರುವ ಕೊಡುಗೆಯಾಗಿದೆ. ಅವು ನೂರಾರು ರೀತಿಯ ಪೋಷಕಾಂಶಗಳನ್ನು ಹೊಂದಿದ್ದು ದೇಹದ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಮತ್ತು ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಅಂತಹ ಒಂದು ತರಕಾರಿಯಲ್ಲಿ ಪಡವಲಕಾಯಿ (Snake Gourd) ಕೂಡ ಒಂದು. ಇದು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ತಡೆಯಲು ನೆರವಾಗುತ್ತದೆ.

ಪಡವಲಕಾಯಿಯಲ್ಲಿ ಕ್ಯಾನ್ಸರ್ ಬರದಂತೆ ತಡೆಯುವ ಗುಣಗಳಿವೆ. ಇವುಗಳ ನಿಯಮಿತ ಸೇವನೆಯಿಂದ ಕೀಲು ನೋವು ಮತ್ತು ಊತದ ಸಮಸ್ಯೆಗಳು ಬರುವುದಿಲ್ಲ. ಅಲ್ಲದೆ ಸಂಧಿವಾತದಂತಹ ಸಮಸ್ಯೆ ಇರುವವರಿಗೆ ಇದು ಪರಿಹಾರವಾಗಿದೆ. ಜ್ವರ ಮತ್ತು ಕಾಮಾಲೆ ಇರುವವರು ಇದರ ಬೀಜಗಳನ್ನು ಹುರಿದು ಆ ಬಳಿಕ ಸೇವಿಸಿದರೆ ಬೇಗನೆ ಚೇತರಿಸಿಕೊಳ್ಳುತ್ತಾರೆ.

ಹೃದ್ರೋಗ ಇರುವವರಿಗೆ ಈ ಬೀಜಗಳು ತುಂಬಾ ಒಳ್ಳೆಯದು. ಹೃದಯಾಘಾತವನ್ನು ತಡೆಗಟ್ಟಲು ಇದು ಸಹಾಯ ಮಾಡುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುತ್ತದೆ. ಹಾಗಾಗಿ ಇದರ ಸೇವನೆಯಿಂದ ಮೂಳೆ ಬಲಗೊಳ್ಳುತ್ತದೆ. ಜ್ವರ ಇರುವವರು ಈ ಬೀಜಗಳನ್ನು ಸೇವಿಸಿದರೆ, ಜ್ವರವು ಬೇಗನೆ ಕಡಿಮೆಯಾಗುತ್ತದೆ. ಸೋರೆಕಾಯಿ ಎಲೆಗಳನ್ನು ದೇಹದ ಮೇಲೆ ಉಜ್ಜುವುದರಿಂದಲೂ ಕೂಡ ಜ್ವರ ಕಡಿಮೆಯಾಗುತ್ತದೆ.

ಎದೆ ನೋವು, ಅಧಿಕ ರಕ್ತದೊತ್ತಡ ಮತ್ತು ಇತರ ಹೃದಯ ಸಮಸ್ಯೆಗಳಿಂದ ಬಳಲುತ್ತಿರುವವರು ದಿನಕ್ಕೆ 30 ಮಿಲಿ ಡೋಸ್ ನಲ್ಲಿ ಸೋರೆಕಾಯಿ ರಸವನ್ನು ಕುಡಿಯಬೇಕು. ಇದು ಹೃದಯದ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಅಧಿಕ ರಕ್ತದೊತ್ತಡ ಕಡಿಮೆ ಮಾಡುತ್ತದೆ.

ಸೋರೆಕಾಯಿ ಪೇಸ್ಟ್ ಮಾಡಿಕೊಂಡು ಹೇರ್ ಪ್ಯಾಕ್ ಮಾಡಿಕೊಳ್ಳಬಹುದು, ಇದು ಕೂದಲಿನ ಪೋಷಣೆಗೆ ಬಹಳ ಮುಖ್ಯ. ಅಲ್ಲದೆ ಇದರ ಪ್ಯಾಕ್ ಕೂದಲು ಉದುರುವುದನ್ನು ಕಡಿಮೆ ಮಾಡಿ, ತಲೆಹೊಟ್ಟು ಮತ್ತು ಇತರ ಕೂದಲಿನ ಸಮಸ್ಯೆಗಳನ್ನು ಸಹ ನಿವಾರಿಸಬಹುದು. ಜೊತೆಗೆ ನಿದ್ರಾಹೀನತೆಯ ಸಮಸ್ಯೆಯನ್ನು ಕೂಡ ನಿವಾರಿಸುತ್ತದೆ.



















