SSLC Exams : ವಿದ್ಯಾರ್ಥಿಗಳು ಪರೀಕ್ಷೆಯ ಮೊದಲು ಈ ಆಹಾರಗಳನ್ನು ಸೇವನೆ ಮಾಡಿ
ಇನ್ನೇನು ನಾಳೆ ಎಸ್‌ಎಸ್ಎಲ್‌ಸಿ (SSLC) ಮಕ್ಕಳ ಪರೀಕ್ಷೆ ಆರಂಭವಾಗಲಿದೆ ಹಾಗಾಗಿ ಪೋಷಕರು ಮಕ್ಕಳಿಗೆ ಇಂದಿನಿಂದಲೇ ಒಳ್ಳೆಯ ಆಹಾರಗಳನ್ನು ನೀಡುವ ಮೂಲಕ ಮಕ್ಕಳ ಆರೋಗ್ಯ ಚೆನ್ನಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಹಾಗಾ್ದಾರೆ ಪೋಷಕರು ಮಕ್ಕಳಿಗೆ ಯಾವ ರೀತಿಯ ಆಹಾರಗಳನ್ನು ನೀಡಬೇಕು? ಪರೀಕ್ಷೆಗೆ ಹೋಗುವಾಗ ಯಾವ ರೀತಿಯ ಆಹಾರ ನೀಡುವುದು ದೇಹಕ್ಕೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಪರೀಕ್ಷೆ (Exam) ಎಂಬ ಪದ ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಅವರ ಪೋಷಕರಿಗೂ ಭಯ ಹುಟ್ಟಿಸುತ್ತದೆ. ಸಾಮಾನ್ಯವಾಗಿ ಮಕ್ಕಳಿಗೆ ಪರೀಕ್ಷೆ ಆರಂಭ ಆಗುವಾಗ ತಂದೆ, ತಾಯಿ, ಮನೆಮಂದಿ ಎಲ್ಲರೂ ಮಕ್ಕಳ ಆರೋಗ್ಯ ಸರಿಯಾಗಿ ಇದ್ದು ಪರೀಕ್ಷೆ ಚೆನ್ನಾಗಿ ಮಾಡಿದರೆ ಸಾಕು ಎಂಬ ಹಂಬಲ ಇಟ್ಟುಕೊಂಡಿರುತ್ತಾರೆ. ಹಾಗಾಗಿ ಪರೀಕ್ಷೆ ಸಮಯದಲ್ಲಿ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ಬಹಳ ಮುಖ್ಯವಾಗುವುದರಿಂದ ಅವರ ಆಹಾರ ಕ್ರಮವೂ ಅಷ್ಟೇ ಕಟ್ಟುನಿಟ್ಟಾಗಿ ಇರಬೇಕಾಗುತ್ತದೆ. ಆಹಾರ ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಏಕಾಗ್ರತೆಯನ್ನು ನೀಡಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಮಕ್ಕಳಿಗೆ ಪರೀಕ್ಷೆ ಸಮಯದಲ್ಲಿ ಒಳ್ಳೆಯ ಆಹಾರಗಳನ್ನು ನೀಡಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇನ್ನೇನು ನಾಳೆ ಎಸ್‌ಎಸ್ಎಲ್‌ಸಿ (SSLC) ಮಕ್ಕಳ ಪರೀಕ್ಷೆ ಆರಂಭವಾಗಲಿದೆ ಹಾಗಾಗಿ ಪೋಷಕರು ಮಕ್ಕಳಿಗೆ ಇಂದಿನಿಂದಲೇ ಒಳ್ಳೆಯ ಆಹಾರಗಳನ್ನು ನೀಡುವ ಮೂಲಕ ಮಕ್ಕಳ ಆರೋಗ್ಯ ಚೆನ್ನಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಹಾಗಾ್ದಾರೆ ಪೋಷಕರು ಮಕ್ಕಳಿಗೆ ಯಾವ ರೀತಿಯ ಆಹಾರಗಳನ್ನು ನೀಡಬೇಕು? ಪರೀಕ್ಷೆಗೆ ಹೋಗುವಾಗ ಯಾವ ರೀತಿಯ ಆಹಾರ ನೀಡುವುದು ದೇಹಕ್ಕೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಪರೀಕ್ಷಾ ಅವಧಿಯಲ್ಲಿ ಯಾವ ರೀತಿಯ ಆಹಾರ ಸೇವನೆ ಮಾಡಬೇಕು?
ಪ್ರತಿಯೊಬ್ಬ ವಿದ್ಯಾರ್ಥಿಗೂ ಪರೀಕ್ಷೆ ಎಂಬುದು ಒತ್ತಡದ ದಿನಗಳಾಗಿರುತ್ತದೆ. ಹಾಗಾಗಿ ಪರೀಕ್ಷೆ ಬರೆಯುವಾಗ ಮಾಡಿಕೊಳ್ಳುವ ಯೋಜನೆ, ವೇಳಾಪಟ್ಟಿನ್ನು ಆಹಾರಕ್ಕೂ ಅನ್ವಯಿಸಬೇಕಾಗುತ್ತದೆ. ಇದು ವಿದ್ಯಾರ್ಥಿಯ ಮಾನಸಿಕ ಆರೋಗ್ಯಕ್ಕೆ ಬಹಳ ಅಗತ್ಯವಾಗಿರುತ್ತದೆ. ಉತ್ತಮ ಆಹಾರ ವಿದ್ಯಾರ್ಥಿಗಳಿಗೆ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜೊತೆಗೆ ಆತಂಕ ಕಡಿಮೆ ಮಾಡಿ ಶಕ್ತಿಯನ್ನು ಹಚ್ಚಿಸುತ್ತದೆ. ವ್ಯಕ್ತಿ ಹಸಿವಿನಲ್ಲಿ ಇದ್ದಾಗ ಅಥವಾ ಆಹಾರ ಸೇವನೆ ಸರಿಯಾಗಿ ಆಗದಿದ್ದಾಗ ಏಕಾಗ್ರತೆ ಇರುವುದಿಲ್ಲ ಹಾಗಾಗಿ ಮಕ್ಕಳ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ ಮತ್ತು ಸಾಮಾನ್ಯ ಯೋಗಕ್ಷೇಮವನ್ನು ಹೆಚ್ಚಿಸುವ ಕೆಲವು ರೀತಿಯ ಆಹಾರಗಳಿವೆ. ಅವುಗಳನ್ನು ಪರೀಕ್ಷೆ ಸಮಯದಲ್ಲಿ ಮಕ್ಕಳಿಗೆ ನೀಡುವುದು ಬಹಳ ಒಳ್ಳೆಯದು.
*ಪರೀಕ್ಷೆಯ ದಿನದಂದು ಪ್ರೋಟೀನ್ ಭರಿತ ಆಹಾರಗಳಾದ ಮೊಟ್ಟೆ, ಬೀಜಗಳು, ಕಾಟೇಜ್ ಚೀಸ್ ಮತ್ತು ಮೊಸರು ಈ ರೀತಿಯ ಆಹಾರಗಳನ್ನು ಮಕ್ಕಳಿಗೆ ನೀಡಿ.
*ಉಪಾಹಾರದಲ್ಲಿ ಕಡಿಮೆ ಕೊಬ್ಬಿನ ಹಾಲು, ಗಂಜಿ, ಮೊಟ್ಟೆಗಳೊಂದಿಗೆ ಧಾನ್ಯಗಳನ್ನು ನೀಡಬಹುದು. ಅಥವಾ ತರಕಾರಿ ಸಮೃದ್ಧ ಪೋಹಾ, ಓಟ್ಸ್, ಬಾಳೆಹಣ್ಣು, ಸೇಬು, ಪೇರಳೆ, ಪಪ್ಪಾಯಿ ಮುಂತಾದ ಹಣ್ಣುಗಳನ್ನು ನೀಡಬಹುದು.
*ರಾಗಿ / ಸೂಜಿ ಇಡ್ಲಿ ಅಥವಾ ದೋಸೆಯನ್ನು ಸಹ ನೀಡಬಹುದು. ಒಣ ಹಣ್ಣುಗಳು ಮತ್ತು ಬೀಜಗಳು ಸಹ ಸಾಂದ್ರೀಕೃತ ಶಕ್ತಿಯ ಮೂಲಗಳಾಗಿದ್ದು ಅವುಗಳನ್ನು ಕೂಡ ಮಕ್ಕಳಿಗೆ ನೀಡಬಹುದು.
*ಕಾರ್ಬೋಹೈಡ್ರೇಟ್ ಗಳು ಮತ್ತು ಎಣ್ಣೆಯುಕ್ತ ಆಹಾರಗಳನ್ನು ತಪ್ಪಿಸುವುದು ಉತ್ತಮ ಏಕೆಂದರೆ ಅವು ನಿದ್ರೆಯನ್ನು ಪ್ರಚೋದಿಸುತ್ತವೆ ಮತ್ತು ಜಠರದುರಿತಕ್ಕೆ ಕಾರಣವಾಗುತ್ತವೆ. ಯಾವುದೇ ಕಾರಣಕ್ಕೂ ಪಿಜ್ಜಾ, ಬರ್ಗರ್, ವಡಾ ಪಾವ್, ಸಮೋಸಾದಂತಹ ಆಹಾರಗಳನ್ನು ಪರೀಕ್ಷಾ ಸಮಯದಲ್ಲಿ ಮಕ್ಕಳಿಗೆ ನೀಡಬೇಡಿ.
*ವಿದ್ಯಾರ್ಥಿಗಳ ಒತ್ತಡವನ್ನು ಕಡಿಮೆ ಮಾಡಲು ಕಿತ್ತಳೆ, ಬಾಳೆಹಣ್ಣು, ಸೇಬು ಮತ್ತು ದ್ರಾಕ್ಷಿ ಮತ್ತು ಹಸಿರು ಎಲೆ ತರಕಾರಿಗಳನ್ನು ಸೇವಿಸಲು ಪೌಷ್ಟಿಕ ತಜ್ಞರು ಸೂಚಿಸುತ್ತಾರೆ. ಮಕ್ಕಳಿಗೆ ಹಣ್ಣಿನ ರಸವನ್ನು ನೀಡುವ ಬದಲು ತಾಜಾ ಹಣ್ಣುಗಳನ್ನು ನೀಡುವುದು ಬಹಳ ಒಳ್ಳೆಯದು.
ಇದನ್ನೂ ಓದಿ: ಕರಬೂಜ ಹಣ್ಣನ್ನು ಈ ಆರೋಗ್ಯ ಸಮಸ್ಯೆಗಳಿರುವವರು ಸೇವನೆ ಮಾಡಬೇಡಿ
ವಿದ್ಯಾರ್ಥಿಗಳು ಈ ವಿಷಯವನ್ನು ನೆನಪಿಟ್ಟುಕೊಳ್ಳಿ?
*ಹೈಡ್ರೇಟ್ ಆಗಿರಿ.
*ಪ್ರೋಟೀನ್ ಭರಿತ ಆಹಾರಗಳನ್ನು ಸೇರಿಸಿ.
*ಸಕ್ಕರೆ ಮತ್ತು ಉಪ್ಪನ್ನು ಹೆಚ್ಚು ಸೇವನೆ ಮಾಡಬೇಡಿ.
*ಸಂಸ್ಕರಿಸಿದ ಆಹಾರಗಳು ಮತ್ತು ಪ್ಯಾಕ್ ಮಾಡಿದ ಆಹಾರಗಳನ್ನು ತಪ್ಪಿಸಿ.
*ಕೆಫೀನ್ ನಿಂದ ದೂರವಿರಿ.
*ಏರೇಟೆಡ್ ಪಾನೀಯಗಳು ಮತ್ತು ಹಣ್ಣಿನ ರಸಗಳನ್ನು ತಪ್ಪಿಸಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ